ಕ್ರಿಸಿಲ್ ಲಿಮಿಟೆಡ್

ಕ್ರಿಸಿಲ್ ಲಿಮಿಟೆಡ್ ಕ್ರೆಡಿಟ್ ರೇಟಿಂಗ್ ಮಾಹಿತಿ ಸೇವೆಗಳು ಆಫ್ ಇಂಡಿಯಾ ಲಿಮಿಟೆಡ್, ರೇಟಿಂಗ್‌ಗಳು, ಸಂಶೋಧನೆ ಹಾಗೂ ಅಪಾಯ ಮತ್ತು ನೀತಿ ಸಲಹಾ ಸೇವೆಗಳನ್ನು ಒದಗಿಸುವ ಭಾರತೀಯ ವಿಶ್ಲೇಷಣಾತ್ಮಕ ಕಂಪನಿಯಾಗಿದೆ. ಇದು ಅಮೇರಿಕನ್ ಕಂಪನಿ ಎಸ್&ಪಿ ಗ್ಲೋಬಲ್‌ನ ಅಂಗಸಂಸ್ಥೆಯಾಗಿದೆ.[]

ಕ್ರಿಸಿಲ್ ಲೋಗೊ

ಕ್ರಿಸಿಲ್ ಭಾರತದಲ್ಲಿ ಮೊದಲ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾಗಿದ್ದು ೧೯೮೮ ರಲ್ಲಿ ಐಸಿಐಸಿಐ ಮತ್ತು ಯುಟಿಐ ಜಂಟಿಯಾಗಿ ಎಸ್‌ಬಿಐ, ಎಲ್‌ಐಸಿ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯಿಂದ ಬರುವ ಷೇರು ಬಂಡವಾಳದೊಂದಿಗೆ ಪರಿಚಯಿಸಲಾಯಿತು. ಏಪ್ರಿಲ್ ೨೦೦೫ ರಲ್ಲಿ ಯುಎಸ್ ಮೂಲದ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಎಸ್&ಪಿ ಕಂಪನಿಯ ಬಹುಪಾಲು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿತು.[]

ಡಿಸೆಂಬರ್ ೨೦೨೦ ರ ಹೊತ್ತಿಗೆ ಕಂಪನಿಯು ₹೨೦,೭೬೩ ಮಿಲಿಯನ್ ಆದಾಯವನ್ನು ಹಾಗೂ ₹೩,೫೪೭ ಮಿಲಿಯನ್ ನಿವ್ವಳ ಆದಾಯ ಹೊಂದಿದೆ. ಇದು ಭಾರತದ ಅತಿದೊಡ್ಡ ರೇಟಿಂಗ್ ಕಂಪನಿಯಾಗಿದ್ದು ಮಾರ್ಚ್ ೨೦೨೨ ರ ಹೊತ್ತಿಗೆ ಇದು ₹೨೩,೪೨೯ ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.[]

ಏಪ್ರಿಲ್ ೨೦೨೪ ರಲ್ಲಿ ಕ್ರಿಸಿಲ್ ಭಾರತದಲ್ಲಿ ಇಎಸ್‌ಜಿ ಸ್ಕೋರಿಂಗ್‌ಗಾಗಿ ಸೆಬಿ ಅನುಮೋದನೆಯನ್ನು ಪಡೆಯಿತು.[]

ಇತಿಹಾಸ

ಬದಲಾಯಿಸಿ

೧೯೮೭ ರಲ್ಲಿ ಕ್ರಿಸಿಲ್ ಸಂಘಟಿತವಾಯಿತು. ಇದರ ಮುಖ್ಯ ಕಚೇರಿ ಮುಂಬೈನಲ್ಲಿ ಸ್ಥಾಪಿತಗೊಂಡಿವೆ. ಶ್ರೀ ಎನ್ ವಘುಲ್‌ ಅವರು ಕ್ರಿಸಿಲ್‌ನ ಮೊದಲ ಅಧ್ಯಕ್ಷರಾದರು ಮತ್ತು ಶ್ರೀ ಪ್ರದೀಪ್ ಶಾ ಅವರು ವ್ಯವಸ್ಥಾಪಕ ನಿರ್ದೇಶಕರಾದರು.[]

ಕಾರ್ಯಾಚಾರಣೆ

ಬದಲಾಯಿಸಿ

ಕ್ರಿಸಿಲ್‌ನ ವ್ಯಾಪಾರ ೮ ದೇಶಗಳಿಗೆ ಹಬ್ಬಿದೆ. ಆ ದೇಶಗಳು: ಅಮೇರಿಕ, ಅರ್ಜೆಂಟೀನ, ಪೋಲೆಂಡ್, ಬ್ರಿಟನ್, ಭಾರತ, ಚೀನ, ಹಾಂಗ್ ಕಾಂಗ್ ಮತ್ತು ಸಿಂಗಾಪುರ. ಇಂಡಸ್ಟ್ರಿಯಲ್ ಕ್ರೆಡಿಟ್ ಆಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯ(ಐಸಿಐಸಿಐ) ಮತ್ತು ಯೂನಿಟ್ ಟ್ರಸ್ಟ್ ಆಫ್ ಇಂಡಿಯ(ಯುಟಿಐ)- ಇವೆರಡರಿಂದ ಕ್ರಿಸಿಲ್ ಪ್ರಚಾರಗೊಂಡಿವೆ. ೧೯೮೯ ರಲ್ಲಿ ವಾಣಿಜ್ಯ ಪತ್ರವನ್ನು ರೇಟ್ ಮಾಡುವ ಪದ್ದತಿಯನ್ನು ಒಳಗೊಂಡ ಮೊಟ್ಟ ಮೊದಲ ರೇಟಿಂಗ್ ಸಂಸ್ಥೆ ಕ್ರಿಸಿಲ್ ಆಗಿದೆ.

ಕಾರ್ಯಾವಿಧಾನಗಳು

ಬದಲಾಯಿಸಿ

ಇವು ಕ್ರಿಸಿಲ್ ರೇಟಿಂಗಿನ ಕಾರ್ಯವಿಧಾನಗಳಾಗಿವೆ:

  • ಕಂಪನಿಯ ವಿನಂತಿ- ಕ್ರಿಸಿಲ್‌ನ ರೇಟಿಂಗ್ ಕ್ರಿಯೆ ಕಂಪನಿ ಇಚ್ಛಿಸುವ ವಿನಂತಿನ್ನು ಅನುಸರಿಸುತ್ತದೆ.
  • ವಿಶ್ಲೇಷಣಾತ್ಮಕ ತಂಡಕ್ಕೆ ಹುದ್ದೆ- ವಿನಂತಿ ಲಭಿಸಿದ ನಂತರ ವಿಶ್ಲೇಷಣ ತಂಡಕ್ಕೆ ಕೆಲಸಗಳನ್ನು ನಿಯೋಜಿಸುತ್ತದೆ. ಇವು ರೇಟಿಂಗ್ ಕೆಲಸಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ.
  • ಮಾಹಿತಿ ಸಂಸ್ಕರಣೆ- ವಿಶ್ಲೇಷಣಾತ್ಮಕ ತಂಡಗಳು ಬೇಕಾದ ಎಲ್ಲ ವಿವರಗಳನ್ನು ಸಂಸ್ಕರಿಸುತದೆ. ಗ್ರಾಹಕರ ಬಗ್ಗೆ ಸ್ಪಷ್ಟೀಕರಣ ಲಭಿಸಲು ಕ್ರಿಸಿಲ್ ಅವರ ಜೊತೆ ಸಂಪರ್ಕಿಸುತ್ತದೆ.
  • ಸಂಶೋಧನೆಗಳ ಪ್ರಸ್ತುತಿ- ತಂಡದ ಸಂಶೋಧನೆಯನ್ನು ರೇಟಿಂಗ್ ಸಂಸ್ಥೆಯ ಮುಂದೆ ಪ್ರಸ್ತುತಪಡಿಸುತ್ತದೆ, ಆದನಂತರ ಮಾರ್ಗದರ್ಶನ ನೀಡುತ್ತದೆ.
  • ನಿರ್ಧಾರಗಳ ಸಂವಹನ- ರೇಟಿಂಗ್ ಸಂಸ್ಥೆಯು ನಿರ್ಧಾರಗಳನ್ನು ಗ್ರಾಹಕರಿಗೆ ಸಂವಹಿಸುತ್ತದೆ.
  • ರೇಟಿಂಗ್ ಬದಲಾವಣೆಯ ಮೇಲ್ವಿಚಾರಣೆ- ರೇಟಿಂಗನ್ನು ಉಪಯೋಗಿಸಲು ನಿರ್ಧರಿಸಿದ ನಂತರ, ಕ್ರಿಸಿಲ್ ಇದನ್ನು ಮೇಲ್ವಿಚಾರಿಸಬೇಕು. ಅಪಾಯ ಹಾಗೂ ಸಂಶೋಧನೆ ಸಂಭಂದಿತ ವಿಷಯಗಳನ್ನು ಸಹ ಕ್ರೆಡಿಟ್ ರೇಟಿಂಗ್ ಆಂಡ್ ಇನ್ಫೊರ್ಮೇಷನ್ ಸರ್ವಿಸಸ್ ಆಫ್ ಇಂಡಿಯ(ಕ್ರಿಸಿಲ್) ವ್ಯವಹರಿಸುತ್ತದೆ.

ಸುದ್ದಿ

ಬದಲಾಯಿಸಿ

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಕ್ರಿಸಿಲ್ ಮತ್ತು ಎಸ್‌ಐಡಿಬಿಐ ಜಂಟಿಯಾಗಿ ಅಭಿವೃದ್ಧಿಪಡಿಸಿದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ (ಎಂಎಸ್‌ಇ) ಭಾರತದ ಮೊದಲ ಭಾವನೆ ಸೂಚ್ಯಂಕವಾದ ಕ್ರಿಸೈಡ್‌ಎಕ್ಸ್ ಅನ್ನು ಪ್ರಾರಂಭಿಸಿದರು.[]

ಕ್ರಿಸಿಡ್‌ ಇಎಕ್ಸ್ ೮ ನಿಯತಾಂಕಗಳ ಪ್ರಸರಣ ಸೂಚ್ಯಂಕವನ್ನು ಆಧರಿಸಿದ ಒಂದು ಸಂಯೋಜಿತ ಸೂಚ್ಯಂಕವಾಗಿದೆ ಮತ್ತು ೦ (ಅತ್ಯಂತ ಋಣಾತ್ಮಕ)ಯಿಂದ ೨೦೦ (ಅತ್ಯಂತ ಧನಾತ್ಮಕ) ಪ್ರಮಾಣದಲ್ಲಿ ಎಮ್‌ಎಸ್‌ಇ ವ್ಯವಹಾರದ ಭಾವನೆಯನ್ನು ಅಳೆಯುತ್ತದೆ.[] ಕ್ರಿಸಿಡ್‌ ಇಎಕ್ಸ್ ಎರಡು ಸೂಚ್ಯಂಕಗಳನ್ನು ಹೊಂದಿರುತ್ತದೆ. ಒಂದನ್ನು 'ಸರ್ವೇ ತ್ರೈಮಾಸಿಕ' ಮತ್ತು ಇನ್ನೊಂದು 'ಮುಂದಿನ ತ್ರೈಮಾಸಿಕ' ಕ್ಕೆ ಒಮ್ಮೆ ಸಮೀಕ್ಷೆಯ ಕೆಲವು ಸುತ್ತುಗಳ ನಂತರ ಪ್ರವೃತ್ತಿಯು ಹೊರಹೊಮ್ಮುತ್ತದೆ, ಇದು ಸ್ವತಂತ್ರ ಸಮಯ ಸರಣಿ ಡೇಟಾವನ್ನು ಒದಗಿಸುತ್ತದೆ. ನವೆಂಬರ್-ಡಿಸೆಂಬರ್‌ನಲ್ಲಿ ೧೧೦೦ ಎಂಎಸ್‌ಇಗಳ ಸಮೀಕ್ಷೆಯ ಮೂಲಕ ಪ್ಯಾರಾಮೆಟ್ರಿಕ್ ಪ್ರತಿಕ್ರಿಯೆಯನ್ನು ಸೆರೆಹಿಡಿಯಲಾಗಿದೆ.

ಫೆಬ್ರವರಿ ೨೦೨೦ ರಲ್ಲಿ ಕ್ರಿಸಿಲ್ ಗ್ರೀನ್‌ವಿಚ್ ಅಸೋಸಿಯೇಟ್ಸ್ ಎಲ್‌ಎಲ್‌ಸಿ ಯ ಸ್ವಾಧೀನವನ್ನು ಪೂರ್ಣಗೊಳಿಸಿತು. ಇದು ಸ್ವಾಮ್ಯದ ಮಾನದಂಡದ ಡೇಟಾ, ವಿಶ್ಲೇಷಣೆ ಮತ್ತು ಹಣಕಾಸು ಸೇವೆಗಳ ಸಂಸ್ಥೆಗಳಿಗೆ ಗುಣಾತ್ಮಕ ಒಳನೋಟಗಳನ್ನು ಒದಗಿಸುತ್ತದೆ.[]

ಉಲ್ಲೇಖಗಳು

ಬದಲಾಯಿಸಿ