ಕ್ಯಾರೋಲಿನ್ ಆಲಿಸ್ ಎಲ್ಗರ್
ಕ್ಯಾರೋಲಿನ್ ಆಲಿಸ್, ಲೇಡಿ ಎಲ್ಗರ್ (೯ ಅಕ್ಟೋಬರ್ ೧೮೪೮ - ೭ ಏಪ್ರಿಲ್ ೧೯೨೦) ಆಂಗ್ಲ ಭಾಷೆಯ ಪದ್ಯ ಮತ್ತು ಕಾಲ್ಪನಿಕ ಗದ್ಯಗಳ ಲೇಖಕಿಯಾಗಿದ್ದರು.ಅವರು ಸಂಗೀತ ಸಂಯೋಜಕ ಎಡ್ವರ್ಡ್ ಎಲ್ಗರ್ ನನ್ನು ಮದುವೆಯಾದರು.
ಕುಟುಂಬ
ಬದಲಾಯಿಸಿಆಲಿಸ್ ಎಂದು ಕರೆಯಲ್ಪಡುವ ಕ್ಯಾರೋಲಿನ್ ಆಲಿಸ್ ರಾಬರ್ಟ್ಸ್, 1848 ರಲ್ಲಿ ಭಾರತದ ಗುಜರಾತಿನ ಭುಜ್ನಲ್ಲಿ ಜನಿಸಿದರು. ಇವರು ಮೇಜರ್-ಜನರಲ್ ಸರ್ ಹೆನ್ರಿ ಗೀ ರಾಬರ್ಟ್ಸ್ ಕೆಸಿಬಿ (೧೮೦೦-೧೮೬೦), ಮತ್ತು ಜೂಲಿಯಾ ಮಾರಿಯಾ ರೈಕ್ಸ್ (೧೮೧೫-೧೮೮೭) ರವರ ಕಿರಿಯ ಮತ್ತು ಏಕೈಕ ಪುತ್ರಿ. ಆಲ್ಬರ್ಟ್ ಹೆನ್ರಿ ರಾಬರ್ಟ್ಸ್ (ಜನನ-೧೮೩೯), ಫ್ರೆಡೆರಿಕ್ ಬಾಯ್ಡ್ ರಾಬರ್ಟ್ಸ್ (ಜನನ-೧೮೪೧) ಮತ್ತು ಸ್ಟಾನ್ಲಿ ನೇಪಿಯರ್ ರಾಬರ್ಟ್ಸ್ (ಜನನ-೧೮೪೪) ಅವರ ಹಿರಿಯ ಸಹೋದರರು. ಆಲಿಸ್ ಕೇವಲ ೧೨ ವರ್ಷದವರಿದ್ದಾಗ ಅವರ ತಂದೆ ಮರಣಹೊಂದಿದರು.
ಬಾಲ್ಯ ಮತ್ತು ಕಲಿಕೆ
ಬದಲಾಯಿಸಿಹುಡುಗಿಯಾಗಿದ್ದಾಗ ಹವ್ಯಾಸಿ ಭೂವಿಜ್ಞಾನಿ ರೆವ್ ಡಬ್ಲ್ಯು.ಎಸ್. ಸೈಮಂಡ್ಸ್ ಅವರೊಂದಿಗೆ ಅಧ್ಯಯನ ಮಾಡಿದರು. ಅವರು ಮತ್ತು ಅವರ ಸ್ನೇಹಿತರ ಗುಂಪು ಸೆವೆರ್ನ್ ನದಿಯ ದಡದಲ್ಲಿ ಪಳೆಯುಳಿಕೆ-ಬೇಟೆಗೆ ಹೋಗಿತ್ತು. ಅವರು ಪಿಯಾನೋವನ್ನು ಬ್ರಸೆಲ್ಸ್ನಲ್ಲಿ ಫರ್ಡಿನ್ಯಾಂಡ್ ಕುಫರತ್ ಅವರೊಂದಿಗೆ ಅಧ್ಯಯನ ಮಾಡಿದರು ಮತ್ತು ಚಾರ್ಲ್ಸ್ ಹಾರ್ಫೋರ್ಡ್ ಲಾಯ್ಡ್ ಅವರೊಂದಿಗೆ ಹಾರ್ಮೊನಿಯನ್ನು ಅಧ್ಯಯನ ಮಾಡಿದರು. ಅವರು ಜರ್ಮನ್, ಇಟಾಲಿಯನ್, ಫ್ರೆಂಚ್ ಮತ್ತು ಸ್ಪ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು.
ಅವರು ವಿವಾಹವಾಗುವುದಕ್ಕೆ ಮುಂಚಿತವಾಗಿ ಅವರ ಬರವಣಿಗೆಗಳನ್ನು ಸಿ. ಆಲಿಸ್ ರಾಬರ್ಟ್ಸ್ ಎಂಬ ಹೆಸರಿನಲ್ಲಿ ಪ್ರಕಟಿಸಲಾಗುತ್ತಿತ್ತು. ಅವರು ಎಲ್ಗರ್ನನ್ನು ಭೇಟಿಯಾಗುವುದಕ್ಕೆ ನಾಲ್ಕು ವರ್ಷ ಮೊದಲು, ಅಂದರೆ ೧೮೮೨ ರಲ್ಲಿ ಅವರ ಎರಡು ಸಂಪುಟಗಳ ಕಾದಂಬರಿ, ಮಾರ್ಚ್ ಕ್ರಾಫ್ಟ್ ಮ್ಯಾನರ್ ಪ್ರಕಟವಾಯಿತು.
ಮದುವೆ
ಬದಲಾಯಿಸಿಆಲಿಸ್ ರಾಬರ್ಟ್ಸ್ ಮತ್ತು ಎಡ್ವರ್ಡ್ ಎಲ್ಗರ್ ೮ ಮೇ ೧೮೮೯ ರಂದು ಬ್ರೋಪ್ಟನ್ ಓರಾಟೊರಿಯಲ್ಲಿ, ಸಂಕ್ಷಿಪ್ತ ಕ್ಯಾಥೋಲಿಕ್ ಸಮಾರಂಭದಲ್ಲಿ ಮದುವೆಯಾದರು. ಅವರು ಪರಸ್ಪರ ನಿಶ್ಚಿತಾರ್ಥದ ಉಡುಗೊರೆಗಳನ್ನು ನೀಡಿದರು: ಎಡ್ವರ್ಡ್ ಎಲ್ಗರ್ ಆಕೆಗೆ ಸೆಲಟ್ ಡಿ'ಅಮೊರ್ ಎಂಬ ಪಿಟೀಲು ಮತ್ತು ಪಿಯಾನೋವನ್ನು ನೀಡಿದರೆ, ಆಕೆ ಆತನಿಗೆ ಆಕೆಯ ಕವಿತೆಗಳಲ್ಲೊಂದಾದ "ದ ವಿಂಡ್ ಅಟ್ ಡಾನ್" ಅನ್ನು ನೀಡಿದಳು. ಇಬ್ಬರೂ ವಿಂಟ್ನರ್ನನ ಇಸಲ್ ಆಫ್ ವೈಟ್ ಎಂಬಲ್ಲಿ ಮೂರು ವಾರಗಳ ಮಧುಚಂದ್ರವನ್ನು ಕಳೆದರು. ನಂತರ ಲಂಡನ್ನಿಗೆ ಹಿಂತಿರುಗಿ ಬ್ರಿಟಿಷ್ ಸಂಗೀತ ಜೀವನಕ್ಕೆ ಹತ್ತಿರವಾದರು.
ಪ್ರಭಾವ
ಬದಲಾಯಿಸಿಆಲಿಸ್ ಗೆ ಅವರ ಗಂಡನ ಮೇಲಿದ್ದ ನಂಬಿಕೆ ಮತ್ತು ಆತನನ್ನು ಮದುವೆಯಾಗುವಲ್ಲಿ ಅವರು ತೋರಿದ ಧೈರ್ಯ ಅವರ ವೃತ್ತಿಜೀವನಕ್ಕೆ ಬಲವಾದ ಬೆಂಬಲವನ್ನು ನೀಡಿದವು. ಅವರು ಗಂಡನ ಮನಸ್ಥಿತಿಯ ವರ್ಗಾವಣೆಯೊಂದಿಗೆ ವ್ಯವಹರಿಸಿದರು ಮತ್ತು ಉದಾರ ಸಂಗೀತ ವಿಮರ್ಶಕರಾಗಿದ್ದರು. ಅವರು ಆತನ ವ್ಯವಹಾರ ವ್ಯವಸ್ಥಾಪಕಿ, ಸಾಮಾಜಿಕ ಕಾರ್ಯದರ್ಶಿಯಾಗಿದ್ದರು, ಮತ್ತು ಆತನ ಆರ್ಕೆಸ್ಟ್ರಾ ಕೃತಿಗಳಿಗೆ ಸಹಾಯ ಮಾಡುತ್ತಿದ್ದರು. ಪ್ರಭಾವಿ ಸಮಾಜದ ಗಮನವನ್ನು ಆತನೆಡೆಗೆ ತಿರುಗಿಸಲು ಅವರು ಅತ್ಯುತ್ತಮ ಪ್ರಯತ್ನವನ್ನು ಮಾಡಿದರು. ಆತನು ಗೌರವಗಳನ್ನು ತಿರಸ್ಕಾರ ಮನೋಭಾವದಿಂದ ಸ್ವೀಕರಿಸುವುದು ಆಲಿಸ್ ಮತ್ತು ಅವರ ಸಾಮಾಜಿಕ ವರ್ಗಕ್ಕೆ ಪ್ರಾಮುಖ್ಯವಾದವು. ತನ್ನ ಗಂಡನ ವೃತ್ತಿ ಜೀವನಕ್ಕೆ ಬೆಂಬಲವಾಗಿ ನಿಲ್ಲಲು ತಮ್ಮ ಕೆಲವು ವಯಕ್ತಿಕ ಆಕಾಂಕ್ಷೆಗಳನ್ನೂ ಬಿಟ್ಟುಕೊಟ್ಟರು.
ಅವರ ಪತಿ ೧೯೦೪ ರಲ್ಲಿ ತನ್ನ ನೈಟ್ಹುಡ್ ಪಡೆದಾಗ, ಅವರು ಲೇಡಿ ಎಲ್ಗರ್ ಆದರು.
ಯುದ್ಧದ ಆರಂಭದಲ್ಲಿ, ಸ್ವಲ್ಪ ಸಮಯದವರೆಗೆ,ಅವರು ಚೆಲ್ಸಿಯಾ ಬ್ಯಾರಕ್ಸ್ನಲ್ಲಿ ಖಾಸಗಿ ಸೈನಿಕರಿಗೆ ಫ್ರೆಂಚ್ ಕಲಿಸಿದರು.
ಮರಣ
ಬದಲಾಯಿಸಿಅವರು ಮಾರ್ಚ್ ೧೬ ೧೯೨೦ ರಂದು ಎಲ್ಗರ್'ಸ್ ಸೆಕೆಂಡ್ ಸಿಂಫೋನಿ ಪ್ರದರ್ಶನಕ್ಕೆ ಹಾಜರಿದ್ದರು. ಮರುದಿನ ಹಾರ್ಲೆ ಸ್ಟ್ರೀಟ್ ವೈದ್ಯರಲ್ಲಿಗೆ ಹೋದರು. ಅವರ ಗಂಡ ಲೀಡ್ಸ್ನಲ್ಲಿ ಒಂದು ಪ್ರದರ್ಶನಕ್ಕೆ ಹೋದಾಗ ಆಲಿಸ್ ಅವರು ಮನೆಯಲ್ಲೇ ಉಳಿದುಕೊಂಡರು. ಲಂಡನ್ನಲ್ಲಿ ಎಲ್ಗರ್ನ ಚೇಂಬರ್ ಸಂಗೀತದ ಕೆಲವು ಪ್ರದರ್ಶನಗಳು, ಅವರು ಹಾಜರಿದ್ದ ಕೊನೆಯ ಪ್ರದರ್ಶನಗಳಾಗಿದ್ದವು. ಏಪ್ರಿಲ್ 7 ೧೯೨೦ ರಂದು ಹ್ಯಾಂಪ್ಸ್ಟೆಡ್ನ ೪೨ ನೆದರ್ಹಾಲ್ ಗಾರ್ಡನ್ಸ್ನಲ್ಲಿನ ಅವರ ಮನೆ, ಸೆವೆರ್ನ್ ಹೌಸ್ನಲ್ಲಿ ಶ್ವಾಸಕೋಶದ ಕ್ಯಾನ್ಸರ್ನಿಂದ ನಿಧನರಾದರು. ಮೂರು ದಿನಗಳ ನಂತರ ಆಕೆಯ ಅಂತ್ಯಕ್ರಿಯೆಯನ್ನು ಲಿಟ್ಲ್ ಮಾಲ್ವೆರ್ನ್ನಲ್ಲಿರುವ ಸೇಂಟ್ ವುಲ್ಸ್ಟನ್ನ ರೋಮನ್ ಕ್ಯಾಥೋಲಿಕ್ ಚರ್ಚ್ನಲ್ಲಿ ನಡೆಸಲಾಯಿತು.
ಪರಂಪರೆ
ಬದಲಾಯಿಸಿಆಲಿಸ್ನ ಪತ್ರಗಳು ಮತ್ತು ಅವರು ೧೮೮೯ ರಿಂದ ೧೯೨೦ ರ ನಡುವಿನ ಮದುವೆಯ ವರ್ಷಗಳಲ್ಲಿ ಇಟ್ಟುಕೊಂಡಿದ್ದ ದಿನಚರಿಯು ಅವರ ಮತ್ತು ಅವರ ಕುಟುಂಬ ಜೀವನದ ಮೌಲ್ಯಯುತ ದಾಖಲೆಯಾಗಿವೆ.
ಸಾಹಿತ್ಯ
ಬದಲಾಯಿಸಿಎಲ್ಗರ್ ರಿಂದ ಸಂಗೀತಕ್ಕೆ ಸಂಯೋಜಿಸಲ್ಪಟ್ಟ ಆಲಿಸ್ ಬರೆದ ಕವನಗಳು:
- "ದ ವಿಂಡ್ ಅಟ್ ಡಾನ್", ಹಾಡು (೧೮೮೮), ೧೮೮೦ ರಲ್ಲಿ ಬರೆದ ಪದ್ಯ.
- "ಇಮ್ ನೋರ್ಡನ್, ವೋ ಮೆ ಲೀಬ್ ಗೆವೋಹ್ನ್ಟ್" ಜರ್ಮನ್ ಪದಗಳನ್ನು "ಮೈ ಲವ್ ಡ್ವೆಲ್ಟ್ ಇನ್ ನಾರ್ದನ್ ಲ್ಯಾಂಡ್" ಎಂಬ ಆಂಗ್ಲ ಪದಗಳಿಗೆ.
- " ಓ ಹ್ಯಾಪಿ ಐಸ್ ", ಗೀತೆ.
- "ಎ ಸ್ಪಿಯರ್, ಎ ಸ್ವಾರ್ಡ್", ಎಂಬ ಅಪ್ರಕಟಿತ ಹಾಡು.
- "ಮಿಲ್ ವೀಲ್ ಸಾಂಗ್ಸ್", ಎಂಬ ಎರಡು ಅಪ್ರಕಟಿತ ಹಾಡುಗಳು.
- "ದ ಸ್ನೋ", ಎಂಬ ಗೀತೆ.
- "ಫ್ಲೈ, ಸಿಂಗಿಂಗ್ ಬರ್ಡ್", ಎಂಬ ಭಾಗ ಗೀತೆ.
- "ಫ಼್ರಮ್ ದ ಬಾವೇರಿಯನ್ ಐಲ್ಯಾಂಡ್" ಹಾಡುಗಳು.
- "ಲವ್ ಅಲೋನ್ ವಿಲ್ ಸ್ಟೇ"
- "ಎ ಕ್ರಿಸ್ತ್ಮಸ್ ಗ್ರೀಟಿಂಗ್" ಎಂಬ ನಲಿವಿನ ಹಾಡು.
- "ದ ಕಿಂಗ್ಸ್ ವೇ" ಎಂಬ ಹಾಡು.
ಕಾದಂಬರಿ
ಬದಲಾಯಿಸಿ- ಇಸಾಬೆಲ್ ಟ್ರೆವಿಥೋ
- ಮಾರ್ಕ್ ಕ್ರಾಫ್ಟ್ ಮ್ಯಾನರ್
- ಡಿಯರ್ ಲಿಟಲ್ ಶಿಪ್
ಇತರೆ
ಬದಲಾಯಿಸಿ- ಸ್ಯೈಮಂಡ್ಸ್ರ "ರೆಕಾರ್ಡ್ಸ್ ಆಫ್ ದ ರಾಕ್ಸ್"ಗೆ ವಿಷಯಸೂಚಿ ಬರೆದಿದ್ದಾರೆ.
- ಜರ್ಮನ್ ಭಾಷೆಯಲ್ಲಿ ಇದ್ದ ಇ.ಟಿ.ಎ ಹಾಫ್ಮನ್ನ್ ರವರ ಸಣ್ಣ ಕತೆಯಾದ "ರಿಟ್ಟರ್ ಗ್ಲಕ್" ಅನ್ನು ಅನುವಾದಿಸಿದ್ದಾರೆ.
ಬಾಹ್ಯ ಕೊಂಡಿಗಳು
ಬದಲಾಯಿಸಿhttps://www.revolvy.com/main/index.php?s=Caroline%20Alice%20Elgar
http://annisbetweenworlds.blogspot.in/2010/08/lady-alice-elgars-poems.html