ಕೌಶಲ್ಯ ಅಣೆಕಟ್ಟು ಭಾರತದ ಹರಿಯಾಣ ರಾಜ್ಯದ ಪಿಂಜೋರ್‌ನಲ್ಲಿ ಘಗ್ಗರ್-ಹಕ್ರಾ ನದಿಯ [] (ಪ್ರಾಚೀನ ಸರಸ್ವತಿ ನದಿಯ ಆಧುನಿಕ ಅವಶೇಷ ) ಉಪನದಿಯಾಗಿರುವ ಕೌಶಲ್ಯ ನದಿಯ ಮೇಲೆ ಭೂಮಿ ತುಂಬುವ ಒಡ್ಡು ಅಣೆಕಟ್ಟಾಗಿದೆ. ಇದನ್ನು ೨೦೦೮ ಮತ್ತು ೨೦೧೨ ರ ನಡುವೆ ನೀರಿನ ಪೂರೈಕೆಯ ಪ್ರಾಥಮಿಕ ಉದ್ದೇಶದಿಂದ ನಿರ್ಮಿಸಲಾಯಿತು. []

ಕೌಶಲ್ಯ ಅಣೆಕಟ್ಟು
ಸ್ಥಳಪಿಂಜೋರ್, ಹರಿಯಾಣ

ಕೌಶಲ್ಯ ಬ್ಯಾರೇಜ್ ಮತ್ತು ಕೌಶಲ್ಯ ನದಿಯ ಮೇಲಿನ ಅಣೆಕಟ್ಟು ಚಂಡೀಗಢದಿಂದ ೨೧ಕಿ.ಮೀ. , [] ಪಂಚಕುಲ ನಗರದಿಂದ ಹಾಗೂ ಪಂಚಕುಲ ಬಳಿಯ ಖೋಲ್ ಹಿ-ರೈತನ್ ವನ್ಯಜೀವಿ ಅಭಯಾರಣ್ಯದಿಂದ ೧೨ಕಿ.ಮೀ. , []  ಪಿಂಜೋರ್ ನಗರದಿಂದ ೫ಕಿ.ಮೀ. , [] ಮತ್ತು ಪಿಂಜೋರ್ ಬಳಿಯ ಬಿರ್ ಶಿಕರ್ಗಾ ವನ್ಯಜೀವಿ ಅಭಯಾರಣ್ಯದಿಂದ ೧೩ಕಿ.ಮೀ. ದೂರವಿದೆ.

ಇತಿಹಾಸ

ಬದಲಾಯಿಸಿ

ಘಗ್ಗರ್ ನದಿಯ ಮೇಲೆ ಅಣೆಕಟ್ಟು ನಿರ್ಮಿಸುವ ಮೊದಲ ಯೋಜನೆಯು ೧೯ನೇ ಶತಮಾನದ ಮಧ್ಯಭಾಗದಲ್ಲಿ ಅಂಬಾಲಾ ಕಂಟೋನ್ಮೆಂಟ್‌ಗೆ ಕುಡಿಯುವ ನೀರನ್ನು ಒದಗಿಸಲು ಮೊದಲು ಪ್ರಸ್ತಾಪಿಸಿತು. []

ಚಂಡೀಗಢಕ್ಕೆ ನೀರು ಒದಗಿಸಲು ಮತ್ತು ಭಾರತದ ಪಂಜಾಬ್‌ನಲ್ಲಿ ಪ್ರವಾಹವನ್ನು ನಿಯಂತ್ರಿಸಲು ಚಂಡಿಮಂದಿರದ ಬಳಿ ಗುಮ್ತಾಲಾದಲ್ಲಿ ಘಗ್ಗರ್ ನದಿಗೆ ಅಣೆಕಟ್ಟು ನಿರ್ಮಿಸಲು ೧೯೬೦ ರ ದಶಕದಲ್ಲಿ ಪ್ರಸ್ತಾವನೆಯನ್ನು ಮರುಪರಿಶೀಲಿಸಲಾಯಿತು. ಈ ಯೋಜನೆಯನ್ನು ೧೯೯೯ ರಲ್ಲಿ ಕೈಬಿಡಲಾಯಿತು. ಏಕೆಂದರೆ ಇದರಿಂದ ೪೦೦೦ ಎಕರೆ (೧೬೦೦ಹೆಕ್ಟೇರ್) ಯಷ್ಟು ಭೂಮಿ ಮುಳುಗುತ್ತದೆ ಹಾಗೂ ಇದು ಹೆಚ್ಚಿನ ಸಂಖ್ಯೆಯ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ. []

೨೦೦೫ ರಲ್ಲಿ, ಘಗ್ಗರ್ ನದಿಯ ಉಪನದಿಗಳ ಮೇಲೆ ಸಣ್ಣ ಅಣೆಕಟ್ಟುಗಳ ಸರಣಿಯನ್ನು ನಿರ್ಮಿಸುವ ಪರಿಷ್ಕೃತ ಯೋಜನೆಯನ್ನು ಹರಿಯಾಣ ಸರ್ಕಾರವು ಅನುಮೋದಿಸಿತು ಮತ್ತು ಕೌಶಲ್ಯ ಅಣೆಕಟ್ಟಿನ ನಿರ್ಮಾಣವು ೨೦೦೮ ರಲ್ಲಿ ಪ್ರಾರಂಭವಾಗಿ, ೨೦೧೨ ರಲ್ಲಿ ಪೂರ್ಣಗೊಂಡಿತು. [] []

ನಿರ್ಮಾಣ ಮತ್ತು ವೆಚ್ಚ

ಬದಲಾಯಿಸಿ

ಹರಿಯಾಣ ಸರ್ಕಾರವು ನಿರ್ಮಿಸಿದ ಕೌಶಲ್ಯ ಅಣೆಕಟ್ಟು ೭೦೦ ಮೀ (೨೩೦೦ಫೀಟ್) ಉದ್ದ ಮತ್ತು ೩೪ಮೀ (೧೧೨ಫೀಟ್) ಎತ್ತರದ ಮಣ್ಣು ತುಂಬಿದ ಅಣೆಕಟ್ಟಾಗಿದೆ. [] ಡಿಸೆಂಬರ್ ೨೦೦೫ರಲ್ಲಿ ಹರ್ಯಾಣ ಸರ್ಕಾರವು ರೂ ೫೧.೩೭ ಕೋಟಿ ವೆಚ್ಚದಲ್ಲಿ ಯೋಜನೆಗೆ ಅನುಮೋದನೆ ನೀಡಿತು . []

ವನ್ಯಜೀವಿ

ಬದಲಾಯಿಸಿ

ಇದು ಅನೇಕ ಅಳಿವಿನಂಚಿನಲ್ಲಿರುವ ವಲಸೆ ಹಕ್ಕಿಗಳಿಗೆ ನೆಲೆಯಾಗಿರುವ ಪ್ರಮುಖ ಜೌಗು ಪ್ರದೇಶವಾಗಿದೆ. []

ಛಾಯಾಂಕಣ

ಬದಲಾಯಿಸಿ

 

ಉಲ್ಲೇಖಗಳು

ಬದಲಾಯಿಸಿ
  1. Kaushaly river location
  2. ೨.೦ ೨.೧ ೨.೨ "Kaushalya Dam". Hills of Morni. 13 December 2012. Archived from the original on 14 ನವೆಂಬರ್ 2017. Retrieved 14 June 2014.
  3. Directions from Kaushalya dam to Chandigarh
  4. Directions from Kaushalya dam to Panchkula
  5. [ Directions from Kaushalya dam to Pinjore]
  6. ೬.೦ ೬.೧ ೬.೨ "Hillsofmorni.com - Kaushalya dam". Archived from the original on 2017-11-14. Retrieved 2022-07-31.
  7. "CAG raises questions, pours cold water on Kaushalya dam". 15 July 2014.
  8. Times Of India (22 December 2014). "Crows drop dead". Retrieved 26 March 2016.