ಪಿಂಜೋರ್ ಭಾರತದ ಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯಲ್ಲಿನ ಒಂದು ಪಟ್ಟಣ. ಈ ವಸತಿ 'ಪಟ್ಟಣ'ವು ಚಂಡೀಘಢದ ಹತ್ತಿರ ಸ್ಥಿತವಾಗಿದ್ದು ಸಮುದ್ರ ಮಟ್ಟಕ್ಕಿಂತ 1,800 ಅಡಿ ಎತ್ತರದ ಒಂದು ಕಣಿವೆಯಲ್ಲಿ ಇದೆ ಮತ್ತು ಶಿವಾಲಿಕ್ ಪರ್ವತಶ್ರೇಣಿಯನ್ನು ಮೇಲಿನಿಂದ ನೋಡುತ್ತದೆ. ಪಿಂಜೋರ್ ಏಷ್ಯಾದ 17 ನೇ ಶತಮಾನದ ಅತ್ಯುತ್ತಮ ಮೊಘಲ್ ಉದ್ಯಾನವಾದ ಪಿಂಜೋರ್ ಉದ್ಯಾನವನಕ್ಕೆ,[೧] ಮತ್ತು ಹಿಂದೂಸ್ತಾನ್ ಮಷಿನ್ ಟೂಲ್ಸ್ (ಎಚ್‌ಎಂಟಿ) ಕಾರ್ಖಾನೆಗೆ ಹೆಸರುವಾಸಿಯಾಗಿದೆ.

ಐತಿಹಾಸಿಕ ಸ್ಥಳಗಳುಸಂಪಾದಿಸಿ

ಭೀಮಾ ದೇವಿ ದೇವಸ್ಥಾನಸಂಪಾದಿಸಿ

ಪಿಂಜೋರ್ ಉದ್ಯಾನವನದ ಪಕ್ಕದಲ್ಲಿ ಒಂದು ಪುರಾತನ ದೇವಾಲಯವಿದೆ. ಈ ದೇವಾಲಯಕ್ಕೆ ಭೀಮಾ ದೇವಿ ದೇವಾಲಯ ತಾಣದ ವಸ್ತುಸಂಗ್ರಹಾಲಯ ಎಂದು ಹೆಸರಿಡಲಾಗಿದೆ. ಇದು ಪ್ರಾಚೀನ ದೇವತೆಗಳ ವಿವಿಧ ಕಾಮಪ್ರಚೋದಕ ಪ್ರತಿಮೆಗಳನ್ನು ಹೊಂದಿದೆ. ಈ ದೇವಾಲಯದಲ್ಲಿ ಶಿವನ ಕೆಲವು ಪ್ರತಿಮೆಗಳು ಅವನ ನಟರಾಜ ರೂಪದಲ್ಲಿವೆ.

ಪಿಂಜೋರ್ ಉದ್ಯಾನಸಂಪಾದಿಸಿ

ಹರಿಯಾಣದ ಪಿಂಜೋರ್‌ನಲ್ಲಿರುವ ರಾಜಸ್ಥಾನಿ ಮೊಘಲ್ ಗಾರ್ಡನ್ಸ್

ಯಾದವೀಂದ್ರ ಉದ್ಯಾನಗಳು ಎಂದೂ ಕರೆಯಲ್ಪಡುವ ಪಿಂಜೋರ್ ಉದ್ಯಾನಗಳು ಚಂಡೀಗಢದಿಂದ ಅತಿ ಹೆಚ್ಚು ಪ್ರಯಾಣಿಸಲ್ಪಡುವ ವಿಹಾರಗಳಲ್ಲಿ ಒಂದಾಗಿವೆ. ಈ ಉದ್ಯಾನಗಳು ಕೆಳ ಶಿವಾಲಿಕ್ ಶ್ರೇಣಿಗಳ ತಪ್ಪಲಿನಲ್ಲಿವೆ ಮತ್ತು ಮುಘಲ್ ಉದ್ಯಾನ ಶೈಲಿಯ ಸೂಕ್ತ ಉದಾಹರಣೆಯಾಗಿ ನಿಂತಿದೆ. 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಪಿಂಜೋರ್ ಉದ್ಯಾನದಲ್ಲಿ ವಾರ್ಷಿಕ ಮಾವಿನ ಉತ್ಸವ ನಡೆಯುತ್ತದೆ. ಉದ್ಯಾನವು ಕಿರು ಮೃಗಾಲಯ, ಐತಿಹಾಸಿಕ ಸ್ಥಳಗಳು, ಜಾಪಾನೀ ಉದ್ಯಾನ, ಸಸಿಕಟ್ಟುವ ಸ್ಥಳ ಮತ್ತು ಹಲವಾರು ಪಿಕ್ನಿಕ್ ತಾಣಗಳನ್ನು ಹೊಂದಿದೆ. ಹಿಂದೂ ಪುರಾಣದ ಪ್ರಕಾರ, ಪಾಂಡವ ಸಹೋದರರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ವಿಶ್ರಾಂತಿ ಪಡೆದರು.

ಕೌಶಲ್ಯಾ ಅಣೆಕಟ್ಟುಸಂಪಾದಿಸಿ

ಕೌಶಲ್ಯಾ ಅಣೆಕಟ್ಟಿನಲ್ಲಿ ವಲಸೆ ಹಕ್ಕಿಗಳು

ಕೌಶಲ್ಯಾ ಅಣೆಕಟ್ಟು ಪಿಂಜೋರ್‌ನಲ್ಲಿ ಕೌಶಲ್ಯ ನದಿಯ ಮೇಲಿರುವ ಮಣ್ಣು ತುಂಬಿದ ಅಣೆಕಟ್ಟಾಗಿದೆ. ಇದು ಅಳಿವಿನಂಚಿನಲ್ಲಿರುವ ಅನೇಕ ವಲಸೆ ಪಕ್ಷಿಗಳಿಗೆ ನೆಲೆಯಾಗಿರುವ ಒಂದು ಪ್ರಮುಖ ತರೀಭೂಮಿಯಾಗಿದೆ.[೨]

ಉಲ್ಲೇಖಗಳುಸಂಪಾದಿಸಿ

  1. Bajwa, Jagir Singh; Kaur, Ravinder (2007). Tourism Management. ISBN 9788131300473.
  2. "More crows drop dead | Chandigarh News - Times of India". The Times of India.

ಹೊರಗಿನ ಕೊಂಡಿಗಳುಸಂಪಾದಿಸಿ

"https://kn.wikipedia.org/w/index.php?title=ಪಿಂಜೋರ್&oldid=1022027" ಇಂದ ಪಡೆಯಲ್ಪಟ್ಟಿದೆ