ಬೋಯರ್ಹೇವಿಯಾ ಡಿಫುಸಾ ಸಾಮಾನ್ಯವಾಗಿ ಹೊಲ, ಗದ್ದೆ, ಬಯಲು ಪ್ರದೆಶಗಳಲ್ಲಿ ಕಂಡುಬರುವ, ನೆಲದಲ್ಲಿಯೇ ಹರಡುವ ಗಿಡ. ಬಹುವಷಾ೯ಯು ಸಸ್ಯ. ಮಳೆಗಾಲದಲ್ಲಿ ಚಿಗುರಿ ಚೆನ್ನಾಗಿ ಬೆಳೆದು ಬೇಸಿಗೆಯಲ್ಲಿ ಸುರುಟಿ ಹೊಗುವ ಗಿಡ. ಬೀಜ ಹಾಕಿ ಕುಂಡಗಳಲ್ಲೂ ಬೆಳೆಸಬಹುದು. ಬೀಜ ಹಾಕಿದ ಎರಡು-ಮೂರು ತಿಂಗಳ ನಂತರ ಎಲೆಗಳನ್ನು ಬಳಸಬಹುದು. ಒಂದು ವಷ೯ದ ನಂತರ ಬೇರನ್ನು ಬಳಸಬಹುದು. ಈ ಗಿಡಕ್ಕೆ ಸಂಸ್ಕ್ರತದಲ್ಲಿ 'ಪುನನ೯ವ' ಎನ್ನುತ್ತಾರೆ. ರೋಗವನ್ನು ಹೊರಹಾಕಿ, ಶಕ್ತಿ ಪುಷ್ಟಿಗಳನ್ನು ಹೆಚ್ಚಿಸಿ, ಶರೀರವನ್ನು ಪುನಃ ಹೊಸದನ್ನಾಗಿ ಮಾಡುವುದರಿಂದ ಈ ಸಸ್ಯಕ್ಕೆ 'ಪುನನ೯ವ' ಎಂಬ ಹೆಸರಿದೆ.[]

ಕೊಮ್ಮೆ ಗಿಡ

ಕೊಮ್ಮೆಗಿಡದ ಮುಖ್ಯವಾದ ವ್ಯೆದ್ಯಕೀಯ ಗುಣವೆಂದರೆ ಊತವನ್ನು ಕಡಿಮೆಮಾಡುವುದು. ಶರೀರದಲ್ಲಿ ಯಾವುದೇ ಕಾರಣದಿಂದ ನೀರೀನ ಅಂಶ ಹೆಚ್ಚಾಗಿ ಊತ ಬಂದಾಗ ಕೊಮ್ಮೆ ಅದನ್ನು ತಹಬಂದಿಗೆ ತರುತ್ತದೆ.

ಇತರ ಹೆಸರುಗಳು

ಬದಲಾಯಿಸಿ
  • ಗೊಣಚಾಲಿ
  • ಸನಾದಿಕ
  • ಪುನನ೯ವ
  • ಶುಚಿ ಮಾಡಿದ, ಬೆರಳು ಗಾತ್ತದ ಹಸೀ ಬೇರನ್ನು ಜಜ್ಜಿ ರಸ ತೆಗೆಯಬೇಕು. ಎರಡು-ಮೂರು ಚಮಚ ರಸವನ್ನು ದಿನದಲ್ಲಿ ಎರಡು-ಮೂರು ಬಾರಿ ಅಹಾರಕ್ಕೆ ಮೊದಲು ಸೇವಿಸುವುದರಿಂದ ಮೂತ್ರ ಪ್ರವೃತ್ತಿ ಅಧಿಕವಾಗಿ ಊತ ಇಳಿಯುತ್ತದೆ.ಹೀಗಾಗುವಾಗ ಮೂತ್ರಪಿಂಡಗಳ ಮೇಲೆ ಯಾವುದೇ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಹಸಿ ಬೇರು ಸಿಗದಿದ್ದಾಗ ಅಧ೯ದಿಂದ ಒಂದು ಚಮಚ ಒಣಬೇರಿನ ಪುಡಿಯನ್ನೇ ಬಳಸಬಹುದು.ಮೇಧಾಶಕ್ತಿಯನ್ನು ಬೆಳೆಸುತ್ತದೆ. ಹೃದಯಕ್ಕೆ ಹಿತಕಾರಿ ಚಮ೯ರೋಗಗಳಲ್ಲಿ ಬಹು ಪರಿಣಾಮಕಾರಿ. ಅಷ್ಟೇ ಅಲ್ಲ, ಊತ ಅರುಚಿ, ಜ್ವರ, ಕೆಮ್ಮು, ದಮ್ಮು, ರಕ್ತವಿಕಾರಗಳಲ್ಲಿ ಇದರ ಬಳಕೆಗೆ ಬಳಕೆಗೆ ಬಹುಮಹತ್ವ.[]
  • ಕೊಮ್ಮೆ ಬೇರನ್ನು ಚೆನ್ನಾಗಿ ತೇಯ್ದು ಬರುವ ಗಂಧವನ್ನು ತುಸು ಬೆಚ್ಚಗೆ ಮಾಡಿ ಊತವಿರುವ ಜಾಗದಲ್ಲಿ ಹಚ್ಚಿ ಎರಡು ಗಂಟೆಯ ನಂತರ ತೊಳೆಯಬೇಕು. ಇದರಿಂದ ಊತ ಇಳಿಯುತ್ತದೆ.
  • ಕೆಮ್ಮು ದಮ್ಮುಗಳಲ್ಲಿ ಅಧ೯ ಚಮಚ ಬೇರಿನ ಪುಡಿಗೆ ಅಥವಾ ಎರಡು ಚಮಚ ಶುಂಠಿರಸ ಸೇರಿಸಿ ತೆಗೆದುಕೊಳ್ಳುವುದು ಪ್ರಯೋಜನಕಾರಿ.
  • ಕೊಮ್ಮೆ ಬೇರಿನ ಕಾಲು ಚಮಚ ಪುಡಿಗೆ, ಕಾಲು ಚಮಚ ಜೇನು ಸೇರಿಸಿ ದಿನಕ್ಕೆರಡು ಬಾರಿ ಆಹಾರಕ್ಕೆ ಮುಂಚೆ ಸೇವಿಸುವುದರಿಂದ ರಕ್ತವೃದ್ಡಿಯಾಗುತ್ತದೆ. ಶರೀರಕ್ಕೆ ಬಲಪುಷ್ಟಿಗಳು ಬರುತ್ತದೆ.
  • ಇತರ ಸೊಪ್ಪುಗಳ ಜೊತೆಗೆ ಸೇರಿಸಿ ಪಲ್ಯಮಾಡಿ ತಿನ್ನಬಹುದು. ಬಾಣಂತಿಯರಿಗೆ, ದುಬ೯ಲರಿಹೆ ಬಹಳ ಒಳ್ಳೆಯದು. ಗಭಿ೯ಣಿಯರು ಇದನ್ನು ಹೆಚ್ಚಾಗಿ ಸೇವಿಸಬಾರದು.

ಉಲ್ಲೇಖಗಳು

ಬದಲಾಯಿಸಿ
  1. https://www.planetayurveda.com/library/punarnava-boerhavia-diffusa/
  2. ಔಷಧೀಯ ಗುಣವುಳ್ಳ ಹಿತ್ತಲ ಗಿಡ,ಡಾ.ವೈಜಯಂತಿಮಾಲಾ,ಪು.೩೨,೩೩