ಕೇದಾರನಾಥ ಮತ್ತು ಪ್ರಕೃತಿ ವಿಕೋಪ

uttarakhanda disaster

ಕೇದಾರನಾಥ ಮತ್ತು ಪ್ರಕೃತಿ ವಿಕೋಪ

ಮಳೆಗಾಲ ಪಶ್ಚಿಮ ದೇಶಗಳಲ್ಲಿ ವರ್ಷವನ್ನು - ಸ್ಪ್ರಿಂಗ್ ಸಮ್ಮರ್, ಆಟಮ್ ವಿಂಟರ್ , ಎಂದು ನಾಲ್ಕು ವಿಭಾಗ ಮಾಡಿದ್ದಾರೆ ಆದರೆ ಭಾರತದಲ್ಲಿ ಹವಾಮಾನಕ್ಕೆ ಅನುಗುಣವಾಗಿ ಮೂರೇ ಕಾಲವನ್ನು ಹೇಳುವುದು ರೂಢಿ ಅವು - ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ ; ಮಳೆಗಾಲವು ಯಾವಾಗಲೂ ಸುಸ್ವಾಗತ -ಕಾಲ, ಏಕೆಂದರೆ ಅದರಿಂದ ಬೆಳೆ, ಅದು ಸಂಮೃದ್ಧಿ ಗೆ ಕಾರಣ. ಆದರೆ ಪ್ರಾಚೀನರು ಬಾರತz ಕಾಲಗಣನೆಯಲ್ಲಿ ,ವಸಂತ, ಗ್ರೀಷ್ಮ, ವರ್ಷ, ಶರ, ಹೇಮಂತ , ಶಿಶಿರ ಎಂದು ಆರು ಋತು ಅಥವಾ ಕಾಲವನ್ನು ವಿಭಾಗಿಸಿದ್ದಾರೆ. ಆದರೆ ಈಗ ಅವನ್ನು ರೂಢಿಯಲ್ಲಿ ಬಳಸುವುದು ಬಿಟ್ಟುಹೋಗಿದೆ.

೨೦೧೩ ರ ಮಳೆಗಾಲ

ಬದಲಾಯಿಸಿ

ಈ ವರ್ಷದ ಮಳೆಗಾಲದಲ್ಲಿ ಭಾರತದಲ್ಲಿ ಉತ್ತಮ ಮಳೆ ಆಗಿದ್ದರೂ ಅನೇಕ ಕಡೆ ಪ್ರಾಕೃತಿಕ ವಿಕೋಪ ಸಂಭವಿಸಿದೆ ; ಅದೂ ಉತ್ತರಾಖಂಡದಲ್ಲಿ ಭೀಕರ ರೌದ್ರನೃತ್ಯ ನಡೆಸಿದೆ.೨೦೧೩ರ ಜೂನ್ ೧೪ರಿಂದ ೧೭ರ ವರೆಗೆ ಸುರಿದ ಕುಂಭದ್ರೋಣ ಮಳೆಯಲ್ಲಿ ೧೧೦೦೦೦ (೧,೨೫,೦೦೦) ಕ್ಕೂ ಹೆಚ್ಚು ಜನ ಕೇದಾರನಾಥ ಯಾತ್ರಿಕರು ಕೇದಾರದಲ್ಲಿ ಸಿಕ್ಕಿಹಾಕಿಕೊಂಡು ಪ್ರಕೃತಿಯ ವಿಕೋಪಲ್ಲಿ ಜೀವನ್ಮರಣ ಹೋರಾಟ ನಡೆಸಬೇಕಾಯಿತು ನೂರಾರು ಮನೆಗಳು ಕೊಚ್ಚಿಹೋದವು, ಶ್ರೀ ಶಂಕರರ ದೇವಾಲಯ ಮೂರ್ತಿಯೊಡನೆ ಪ್ರವಾಹದಲ್ಲಿ ಕೊಚ್ಚಿ ಹೋಯಿತು. ಕೇದಾರ ದೇವಾಲಯ ಉಳಿದರೂ ಶಿಥಿಲವಾಯಿತು. ಭಾರತ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ೨೦೧೩ ಏಪ್ರಿಲ್ ನಿಂದ ಜುಲೈ ಅಂತ್ಯದ ವರೆಗೆ ೧೧೦೦ ಕ್ಕೂ ಹೆಚ್ಚು ಜನ ಸತ್ತಿದ್ದು ೧,೦೦,೦೦೦ ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಉತ್ತರಾಖಂಡ ಸರ್ಕಾರದ ಹೇಳಿಕೆ ಪ್ರಕಾರ ಅಲ್ಲಿ ೫೮೦ ಜನ ಸತ್ತಿದ್ದು ೫೪೭೪ ಜನ ನಾಪತ್ತೆಯಾಗಿದ್ದಾರೆ ಸತ್ಯ ಸಂಗತಿ ಇದಕ್ಕೂ ಹೆಚ್ಚಿರಬಹುದೆಂದು ಊಹೆ.

 
ಶಿವನ ಎತ್ತರದ ವಿಗ್ರಹ
 
ಕೇದಾರೇಶ್ವರ ದೇವಾಲಯದ ಪೌಳಿಗೋಡೆ ಪ್ರವಾಹದಲ್ಲಿ ಒಡೆದು ಕಲ್ಲು ಬಂಡೆಗಳು ತೇಲಿ ಬಂದಿವೆ
 
ಎಲ್ಲಾ ವಸತಿಗೃಹಗಳು ನಂತರ ಪ್ರವಾಹದಲ್ಲಿ ಕೊಚ್ಚಿಹೋದವು

ಕೇದಾರನಾಥ ಮತ್ತು ಪ್ರಕೃತಿ ವಿಕೋಪ

ಬದಲಾಯಿಸಿ

ಉತ್ಪಾತ ಮಳೆ ಮತ್ತು ಉತ್ತರಾಖಂಡ : ೨೦೧೩ರ ಜೂನ್ ೧೪ರಿಂದ ೧೭ರ ವರೆಗೆ ಸುರಿದ ಮಳೆ ಭಾರತದ ಪ್ರಸಿದ್ಧ ತೀರ್ಥಯಾತ್ರಾ ಕ್ಷೇತ್ರಗಳಲ್ಲಿ ಪ್ರಮುಖವಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ, ಹೇಮಕುಂಡ, ಚಾರ್ ಧಾಮ ಇವುಗಳಿರುವ ರುದ್ರಪ್ರಯಾಗ ಜಿಲ್ಲೆಯಲ್ಲಿ , ಯಾವಾಗಿನ ಸರಾಸರಿಗಿಂತ ಸುಮಾರ ನಾನೂರ ರಷ್ಟು (೩೭೫) ಹೆಚ್ಚು ಮಳೆಯಾಗಿ ಅಲ್ಲಿನ ನದಿಗಳಲ್ಲಿ ಎಂದೂ ಕಾಣದ ಭೀಕರ ಪ್ರವಾಹ ಉಂಟಾಯಿತು ಹೆದ್ದಾರಿಗಳಲ್ಲಿ ಭೂಕುಸಿತ ವುಂಟಾಗಿ ೭೦,೦೦೦ ಜನಕ್ಕೂ ಹೆಚ್ಚು ಜನ ಸಾವಿರಾರು ವಾಹನಗಳು ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡವು. ಮಂದಾಕಿನೀ ನದಿ ಭೋರ್ಗರೆದು , ಉಕ್ಕಿ ಹರಿದು ಅಕ್ಕ ಪಕ್ಕ ದಲ್ಲಿದ್ದ ಎಲ್ಲಾ ಮನೆಗಳನ್ನೂ ಶ್ರೀ ಶಂಕರರ ಸಮಾಧಿಯನ್ನೂ ಕೊಚ್ಚಿ ಹಾಕಿ ನಾಮಾವಶೇಷ ಮಾಡಿತು. ಕೇದಾರ ದೇವಾಲಯದ ಒಳಗೂನೀರು ನುಗ್ಗಿ ೮-೧೦ ಅಡಿಯಯಷ್ಟು ನೀರು ನಿಂತಿತ್ತು , ಒಳಗಿದ್ದವರಲ್ಲಿ ಕರ್ನಾಟಕದ ಒಬ್ಬರು ಪೂಜಾರಿಗಳುಮಾತ್ರಾ ಕಷ್ಟದಿಂದ ಬದುಕಿ ಬಂದು ತಮ್ಮ ಅನುಭವವನ್ನು ಸುದ್ದಿ ಮಾದ್ಯಮಕ್ಕೆ ಕೊಟ್ಟರು. ಅಲ್ಲಿ -ಕೇದಾರದಲ್ಲಿ ಸಿಕ್ಕಿಹಾಕಿಕೊಂಡವರು ಸುಮಾರು ೧,೨೫, ೦೦೦ ಜನಕ್ಕೂ ಹೆಚ್ಚೆಂದು ರಕ್ಷಣಾ ಕಾರ್ಯಕ್ಕೆ ಹೋದ ಭಾರತದ (ಪ್ರಕೃತಿ ವಿಕೋಪ) ರಕ್ಷಣಾ ಪಡೆಯವರ ಹೇಳಿಕೆ. ಅವರಲ್ಲರನ್ನೂ ಆ ಭೀಕರ ಮಳೆಯಲ್ಲಿ ಭಾರತ ರಕ್ಷಣಾ ಪಡೆಯವರು ೧೦-೧೫ ದಿನದಲ್ಲಿ ಹೆಲಿಕಾಪ್ಟರ್ ಮೂಲಕ ಅದ್ಭುತ ಸಾಹಸದಿಂದ ರಕ್ಷಣೆ ಮಾಡಿದರು. ಅದರಲ್ಲಿ ೨೦ ಜನರು- ಯೋಧರು ಪೈಲೆಟ್ಟುಗಳು , ಇತರರು (ಸೇರಿ )ಅಪಘಾತದಲ್ಲಿ ಪ್ರಾಣ ತೆತ್ತರು.

  • ಇತ್ತೀಚಿನ ವರದಿ
  • ಆದರೆ ಇತ್ತೀಚಿನ ವರದಿಯಂತೆ (ಮುಖ್ಯಕಾರ್ಯದರ್ಶಿ ಉತ್ತರಾಖಂಡ ೧೭-೯-೨೦೧೩) ೪೧೨೦ ಜನ ವಿವಿಧ ರಾಜ್ಯಗಳ ವರದಿಯಂತೆ ೪೧೨೦ ಜನ ಕಾಣೆಯಾಗಿದ್ದಾರೆ. ಉತ್ತರಾಖಂಡದಲ್ಲಿ ಬೇರೆ ರಾಜ್ಯಗಳವರೂ ಸೇರಿ ಒಟ್ಟು ೪೨೧ ಮಕ್ಕಳು ಕಾಣೆಯಾಗಿದ್ದಾರೆ. ಆದರೆ ಉತ್ತರಾಖಂಡದ ಮಾನವ ಹಕ್ಕುಗಳ ಆಯೋಗ ೬೮೧೨ ಜನರು ನಾಪತ್ತೆ ಯಾಗಿರುವುದಾಗಿ ವರದಿ ಬಂದಿರುವುದಗಿತಿಳಿಸಿದ್ದಾರೆ.
  • ಕಳೆದ ಹಣ ಸಿಕ್ಕಿದೆ
  • ಮತ್ತೋದು ವಿಶೇಷವೇನೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ೩ ಕೋಟಿ ೩೬ ಲಕ್ಷ ರೂಪಾಯಿಗಳು ಪ್ರವಾಹದಲ್ಲಿ ಕೊಚ್ಚಿ ಕಳೆದು ಹೋಗಿರುವುದಾಗಿ ಭಾವಿಸಲಾಗಿತ್ತು ಆದರೆ ದೇವಾಲಯದ ಸುತ್ತ ಮುತ್ತ ತುಂಬಿದ ಹೂಳನ್ನು ಎಸ್.ಬಿ ಐ ನ ಕಟ್ಟಡದ ಅವಶೇಷ ತೆಗೆದಾಗ ಖಜಾನೆ ಯಲ್ಲಿದ್ದ ೧.೪೬ ಕೋಟಿ ಮತ್ತು ೧.೯೦ಕೋಟಿ ದೊರೆತಿರುವುದಾಗಿ ಪೊಲೀಸ್ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. (೧೭-೯-೨೦೧೩)

ಪರಿಹಾರ ಕಾರ್ಯ

ಬದಲಾಯಿಸಿ

ಭಾರತದ ಸೇನಾ ಪಡೆ ೧೦ ಸಾವಿರ ಯೋಧರನ್ನು ಸಂಕಷ್ಟದಲ್ಲಿ ಸಿಲುಕಿದವರ ರಕ್ಷಣೆಗೆ ನಿಯೋಜಿಸಿತ್ತು. ನೌಕಾಪಡೆಯವರು ೪೫ ಜನ ಮುಳಗುತಜ್ಞ ಯೋಧರನ್ನು ಕಳಿಸಿತ್ತು. ೪೩ ವಿಮಾನ , ೩೬ ಹೆಲಿಕಾಪ್ಟರ್ ಗಳುಭಾಗವಹಿಸಿದ್ದವು . ದಿ ೨೫ -೬ ೨೦೧೩ ರ ಭಾರತ ವಿಮಾನ ಪಡೆಯ ಹಿಲಿಕಾಪ್ಟರ್ ದುರಂತದಲ್ಲಿ ಮಡಿದ ೫ ವಿಮಾನ ಪಡೆಯ ಅಧಿಕಾರಿಗಳು, ೯ ಪ್ರಕೃತಿ ವಿಕೋಪ ಪಡೆಯ ಯೋಧರು ಇತರೆ ೬ಜನ ವಾರ್ತಾವಿಭಾಗದವ ರಿಗೆ ಭಾರತದ ಗೃಹ ಮಂತ್ರಿ ಸುಶೀಲ ಕುಮಾರ ಸಿಂಧೆ ಮತ್ತು ಉತ್ತರಾಖಂಡದ ಮು.ಮ. ಇತರರು ಅವರಿಗೆ ಗಾರ್ಡ ಆಫ್ ಆನರ್ ಮೂಲಕ ಅಂತ್ಯಸಂಸ್ಕಾರದಲ್ಲಿ ಗೌರವ ಸೂಚಿಸಿದರು. ಅಲ್ಲಿ ಸಂಕಷ್ಟದಲ್ಲಿ ಸಿಲುಕಿದವರಿಗಾಗಿ ಕೇಂದ್ರ ಸರ್ಕಾರ ತಕ್ಷಣ ೧೦೦೦ ಕೋಟಿ ರುಪಾಯಿ ಪರಿಹಾರ ನಿಧಿ ಬಿಡುಗಗಡೆ ಮಾಡಿತು. ಬೇರೆ ಬೇರೆ ರಾಜ್ಯಗಳೂ ಪರಿಹಾರ ನಿಧಿಗೆ ಕೊಡಿಗೆ ನೀಡಿದವು . ಅಂತರರಾಷ್ರೀಯ ಮಟ್ಟದಲ್ಲಿ ಯು.ಎಸ್.ಎ.ಯು ೧,೫೦,೦೦೦ + ೭೫೦೦೦ ಡಾಲರ್ ಸಹಾಯ ಘೋಷಿಸಿತು. ಈ ಸಂಕಷ್ಟದಲ್ಲಿ ಸಿಲುಕಿದವರಿಗಾಗಿ ವಿಮಾನದಲ್ಲಿ ೩,೩೬,೯೩೦ ಕೆ.ಜಿ ಯಷ್ಟು ಆಹಾರ ಸಾಮಗ್ರಿಯನ್ನು ವಿಮಾನದಲ್ಲಿ ಸಾಗಿಸಿ ಆ ಸತತ ಧಾರಾಕಾರ ಮಳೆಯಲ್ಲೇ ಯೋಧ ಪಡೆ ಹಂಚಿತು. ಭಾರತದ ಈ ಅದ್ಭುತ ಪರಿಹಾರ ಕಾರ್ಯದ ಸಾಹಸಕ್ಕೆ ಜನರು ಮತ್ತು ಮಾದ್ಯಮದವರು ಮೆಚ್ಚಿ ತಲೆದೂಗಿದರು.

ಇತರ ಪ್ರದೇಶದಲ್ಲಿ

ಬದಲಾಯಿಸಿ

ಇತರ ಪ್ರದೇಶದಲ್ಲಿ : ಕೇರಳದಲ್ಲಿ ೧೪೨ ಜನ ಪಶ್ಚಿಮ ಬಂಗಾಳದಲ್ಲಿ ೧೧೪, ಗುಜರಾತ್ ನಲ್ಲಿ ೮೮, ಕರ್ನಾಟಕದಲ್ಲಿ ೬೨ ಪ್ರಕೃತಿಯ ಕೊಪಕ್ಕೆ ಬಲಿಯಾಗಿದ್ದಾರೆ. ಭಾರತದ ೨೭ ರಾಜ್ಯಗಳಲ್ಲಿ ಭೂಕುಸಿತ ಕಂಪನಗಳಲ್ಲಿ ೫೦೦೦೦ ಕ್ಕೂಹೆಚ್ಚು ಮನೆಗಳು ಹಾನಿಗೀಡಾಗಿವೆ. ಆದರೂ ಶೇ. ೬೮ ರಷ್ಟು ಭೂಮಿ ಬರಗಲ ಕ್ಕೆ ತುತ್ತಾಗಿದೆ ಎಂದು ವರದಿ ! ಸಮುದ್ರ ಕೊರೆತ, ಅಲೆಯಬ್ಬರದಿಂದ, ತೀರ ಪ್ರದೇಶದ ೫೭೦೦ ಕಿ.ಮೀ. ಪ್ರದೇಶ ಹಾನಿಗೀಡಾಗಿದೆ. ೨೦೧೩ ಏಪ್ರಿಲ - ಜುಲೈ ಮಧ್ಯೆ ಒಟ್ಟು ೧,೦೧೫೦೦ ಮನೆಗಳು ಹಾನಿಗೊಂಡಿದೆ ಎಂದು ವರದಿ. ಪ.ಬಂಗಾಳದಲ್ಲಿ ೬೦,೬೪೯; ಆಂಧ್ರದಲ್ಲಿ ೧೨,೮೫೫ ; ಕೇರಳದಲ್ಲಿ ೧೧೦೪೨; ಉತ್ತರಾಖಂಡದಲ್ಲಿ ೪೭೨೦ ; ಕರ್ನಾಟಕದಲ್ಲಿ ೯೦೩; ಮಳೆಯಿಂದ ಹಾನಿಗೀಡಾದವು. ಜಾನುವಾರುಗಳು ಸತ್ತವುಗಳಿಗೆ ಲೆಖ್ಖವಿಲ್ಲ - ಆದರೆ ಸಿಕ್ಕಿರುವ ಅಂಕಿಅಂಶಗಳ ಪ್ರಕಾರ ಸುಮಾರು ೨೩ಸಾವಿರ ಜಾನುವರುಗಳು ಬಲಿಯಾಗಿವೆ : ಹಿಮಾಚಲದಲ್ಲಿ ೧೦,೦೦೦ ; ಉತ್ತರಾಖಂಡದಲ್ಲಿ ೯೫೦೦, ನಾಗಾಲ್ಯಾಂಡಿನಲ್ಲಿ ೨೭೦೦, ಕರ್ನಾಟಕದಲ್ಲಿ ಸುಮಾರು ೨೦೦ ಬಲಿಯಾಗಿವೆ . ಸುಮಾರು ಒಂದು ಲಕ್ಷ ಹೆಕ್ಟೇರು (೨,೫೦,೦೦೦ ಎಕರೆ) ಜಮೀನು ಹಾನಿಗೀಡಾಗಿದೆ. - ಹಿಮಾಚಲ ಪ್ರದೇಶದಲ್ಲಿ ೧ ಲಕ್ಷ ಹೆಕ್ಟೇರು ಮತ್ತು ಕೇರಳದಲ್ಲಿ ೯೩,೭೦೦ ಹೆಕ್ಟೇರು ಕೃಷಿಭೂಮಿ ಹಾಳಾಗಿದೆ.

ಹವಾಮಾನ ಇಲಾಖೆ ವರದಿ

ಬದಲಾಯಿಸಿ
  • ಕರ್ನಾಟಕದಲ್ಲಿ ಅನೇಕ ವರ್ಷಗಳ ಈಚೆಗೆ ಉತ್ತಮ ಮಳೆ ಆಗಿದ್ದು ಜುಲೈ ತಿಂಗಳ ಅಂತ್ಯಕ್ಕೇ ಎಲ್ಲಾ ಅಣೆಕಟ್ಟುಗಳೂ ತುಂಬಿ ತುಳಕುತ್ತಿವೆ.

ಇಷ್ಟಾದರೂ ಕರ್ನಾಟಕದಲ್ಲಿ ಇನ್ನೂ ೫೪ ತಾಲ್ಲೂಕುಗಳಿಗೆ ಸಾಕಷ್ಟು ಮಳೆ ಆಗದೆ ಬರಗಾಲದ ಸಂಕಷ್ಟ ಒದಗಿದೆ.

  • ಭಾರತದ ಹವಾಮಾನ ಇಲಾಖೆಯ ಹೇಳಿಕೆ ಪ್ರಕಾರ (ಶ್ರೀ ಎಸ.ಬಿ. ಗಾಂವಕರ್ ಹಿರಿಯ ವಿಜ್ಞಾನಿ) ಭಾರತವು ಒಟ್ಟಾರೆ ೨೦೧೩ ಆಗಸ್ಟ್ ಅಂತ್ಯಕ್ಕೆ ಶೇ.೧೧ ರಷ್ಟು ಹೆಚ್ಚು ಮಳೆಯನ್ನು ಪಡೆದಿದೆ. ದಿನಾಂಕ ೧ ಜೂನ್ ೨೦೧೩ ರಿಂದ ಆಗಸ್ಟ್ ಅಂತ್ಯಕ್ಕೆ (೩೧-೮-೨೦೧೩) ೭೮೧.೩ ಮಿಮೀ. ಮಳೆ ದಾಖಲಾಗಿದೆ .ಅದು ವಾರ್ಷಿಕ ಸರಾಸರಿ ೭೦೬ ಮಿಮೀ.ಗಿಂತ ೭೪.೬ ಮಿ.ಮೀ. ಹೆಚ್ಚು. ಈಶಾನ್ಯ, ಮದ್ಯ ಮತ್ತು ದಕ್ಷಿಣ ಭಾರತವು ಕ್ರಮವಾಗಿ ೨೧%,೨೯%,೧೬% ರಷ್ಡು ಹೆಚಚು ಮಳೆ ಪಡೆದಿದೆ. ಸುಮಾರು, ದೇಶದ ೮೭% ಭಾಗದಷ್ಟು ಪ್ರದೇಶ ಹೆಚ್ಚು ಅಥವಾ ವಾರ್ಷಿಕ ಸರಾಸರಿಯಷ್ಟು ಮಳೆ ಪಡೆದಿದೆ. ಆದರೆ ೧೩% ಭಾಗದಷ್ಟು ಪ್ರದೇಶ ಕೊರತೆಯನ್ನು ಹೊಂದಿದೆ. ಇದೇ ರೀತಿ ಸಹಜ ಮಳೆ ಮುಂದಿನ ತಿಂಗಳುಗಳಲ್ಲಿ ಆಗುವ ಸಂಭವವಿದೆ ಎಂದು ಭಾರತದ ಹವಾಮಾನ ಇಲಾಖೆಯ ಹೇಳಿಕೆ..(೩೧-೮-೨೦೧೩)

ಪ್ರಕೃತಿ ವಿಕೋಪ

ಬದಲಾಯಿಸಿ
ಕೇದಾರನಾಥ ಮತ್ತು ಪ್ರಕೃತಿ ವಿಕೋಪ- (ಮಂದಾಕಿನೀ ನದಿ ಭೋರ್ಗರೆದು , ಉಕ್ಕಿ ಹರಿದು ಅಕ್ಕ ಪಕ್ಕದಲ್ಲಿದ್ದ ಎಲ್ಲಾ ಮನೆಗಳನ್ನೂ ಶ್ರೀ ಶಂಕರರ ಸಮಾಧಿಯನ್ನೂ ಕೊಚ್ಚಿ ಹಾಕಿ ನಾಮಾವಶೇಷ ಮಾಡಿತು. ಕೇದಾರ ದೇವಾಲಯದ ಒಳಗೂ ನೀರು ನುಗ್ಗಿ ೮-೧೦ ಅಡಿಯಷ್ಟು ನೀರು ನಿಂತಿತ್ತು. []

[][][][]

ಫೋಟೋ ಗ್ಯಾಲರಿ

ಬದಲಾಯಿಸಿ
ಉತ್ತರಾಖಂಡದಲ್ಲಿ ಕೇದಾರ ಪ್ರವಾಹ
 
ದೊಡ್ಡ ಪ್ರವಾಹ
 
ಹಿಂದೆಂದೂ ಕಾಣದ ಅನಾಹುತ
 
ಹಿಂದೆಂದೂ ಕಾಣದ ಅನಾಹುತ
 
ಹಿಂದೆಂದೂ ಕಾಣದ ಅನಾಹುತ
 
ಕೇದಾರ ಮಳೆಗಾಲದ ಉತ್ಪಾತಕ್ಕೆ ೫ ವರ್ಷ ಮುಂಚೆ-ಸಾಗರದ ಗಿರಿಜಮ್ಮ, ಚಿಪ್ಪಳಿ ಅಮೃತವಲ್ಲಿ ಪ್ರವಾಸದಲ್ಲಿ ಇದ್ದಾಗ.

ಉಲ್ಲೇಖಗಳು

ಬದಲಾಯಿಸಿ
  1. "Uttarakhand: Rescue efforts in full swing; 102 dead, 72000 stranded-India News". IBNLive Mobile. 18 June 2013. Retrieved 22 June 2013.
  2. Kedarnath temple in Uttarakhand survives glacier, floods | Down To Earth
  3. "Uttarakhand floods, landslides leave 40 dead; over 60,000 stranded". IBN Live. 18 June 2013. Retrieved 18 June 2013.
  4. "58 dead, over 58,000 trapped as rains batter Uttarakhand, UP". Business Standard. 18 June 2013. Retrieved 18 June 2013.
  5. "Uttarakhand worst hit as rain, floods kill at least 60 in north India". The Indian Express. 18 June 2013. Retrieved 18 June 2013.


  • ವಿಕಿಪೀಡಿಯಾ ಪೈಲುಗಳು
  • ಸುದ್ದಿ ಮಾದ್ಯಮ