ಕೆ. ವಿಜಯ (ನಟಿ)

1980ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಿಂದ ಜನಪ್ರಿಯರಾದ ನಟಿ

ಕೆ. ವಿಜಯ (English:K. Vijaya), 1980ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಿಂದ ಜನಪ್ರಿಯರಾದ ನಟಿ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರ ಜೊತೆಗೆ ತೆಲುಗಿನ ಕೆಲವು ಚಿತ್ರಗಳಲ್ಲೂ ವಿಜಯ ನಟಿಸಿದ್ದಾರೆ. ರೂಪ ಮತ್ತು ಪ್ರತಿಭೆಗಳ ಸಂಗಮದಂತಿದ್ದ ವಿಜಯ ಅವರು ನಾಯಕಿಯಾಗಿ, ಪ್ರತಿನಾಯಕಿಯಾಗಿ, ಪೋಷಕ ನಟಿಯಾಗಿ ಚಿತ್ರರಸಿಕರನ್ನು ರಂಜಿಸಿದವರು. ನಾ ನಿನ್ನ ಬಿಡಲಾರೆ ಚಿತ್ರದ, ದೆವ್ವವಾಗಿ ಕಾಡುವ ’ಕಾಮಿನಿ’ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದಿತು.

ಕೆ. ವಿಜಯ
ಜನನ
ಕೆ. ವಿಜಯ

ರಾಷ್ಟ್ರೀಯತೆಭಾರತೀಯ
ವೃತ್ತಿನಟಿ
ಸಕ್ರಿಯ ವರ್ಷಗಳು1978-1989

ಚಿತ್ರರಂಗದಲ್ಲಿ

ಬದಲಾಯಿಸಿ

ವಿಜಯ ನಟಿಸಿದ ಮೊದಲ ಚಿತ್ರ 1978ರಲ್ಲಿ ಬಂದ ಕೆ. ಜಾನಕಿರಾಮ್ ನಿರ್ದೇಶಿಸಿದ "ಬಲು ಅಪರೂಪ ನಮ್ ಜೋಡಿ". [] ಇದರ ನಂತರ ಅವರಿಗೆ ಮೊದಲ ದೊಡ್ಡ ಗೆಲುವೆಂದರೆ ನಾ ನಿನ್ನ ಬಿಡಲಾರೆ. ಇಡೀ ಚಿತ್ರದ ಉದ್ದಕ್ಕೂ ನಾಯಕನನ್ನು ಕಾಡುವ ಕಾಮಿನಿ ಪಾತ್ರದಲ್ಲಿ ವಿಜಯ ಅವರು ಮಾಸದ ಅಭಿನಯ ನೀಡಿದರು. ಚಿತ್ರದಲ್ಲಿ ವಿಜಯ ಅವರಿಗಾಗಿ ಪಿ. ಸುಶೀಲ ಹಾಡಿದ "ಎಂದೆಂದಿಗೂ ನಾ ನಿನ್ನ ಬಿಡಲಾರೆ ಬಾ ಚಿನ್ನ" ದೊಡ್ಡ ಹಿಟ್ ಆಗಿತ್ತು.

ನಟಿ ಉದಯಚಂದ್ರಿಕಾ ನಿರ್ಮಿಸಿದ ಅಸಾಧ್ಯ ಅಳಿಯ(1979) ಚಿತ್ರದಲ್ಲಿ ವಿಷ್ಣುವರ್ಧನ್, ಪದ್ಮಪ್ರಿಯ ಅವರೊಂದಿಗೆ ನಟಿಸಿದ ವಿಜಯ ಮುಂದೆ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಬಲ್ಲರೆಂದು ನಿರೂಪಿಸಿದರು. ಕವಿರತ್ನ ಕಾಳಿದಾಸ ಚಿತ್ರದಲ್ಲಿ ವಿಜಯ ಮಾಡಿದ ’ರತ್ನಕಲೆ’ ಪಾತ್ರವೂ ಅವರಿಗೆ ಹೆಸರು ತಂದಿತು.

ತಮಿಳಿನ "ನಾ ಅಡಿಮಣಿ ಇಲ್ಲೈ" ಚಿತ್ರದಲ್ಲಿ ಶ್ರೀದೇವಿ ತಾಯಿ ಪಾತ್ರ ಮಾಡಿದ ವಿಜಯ, ಪ್ರೇಮಲೋಕ ಚಿತ್ರದಲ್ಲೂ ರವಿಚಂದ್ರನ್ ತಾಯಿ ಪಾತ್ರ ನಿರ್ವಹಿಸಿದರು.

ವಿಜಯ ನಟಿಸಿದ ಕೊನೆಯ ಚಿತ್ರ 1989ರ ಗಂಡಂದ್ರೆ ಗಂಡು.

ನಟಿಸಿದ ಚಿತ್ರಗಳು

ಬದಲಾಯಿಸಿ

ಕೆ. ವಿಜಯ ನಟಿಸಿರುವ ಚಿತ್ರಗಳು.[]

1980ರ ದಶಕ
  • 1989 ಗಂಡಂದ್ರೆ ಗಂಡು
  • 1989 ಮಾಧುರಿ
  • 1988 ನವ ಭಾರತ
  • 1988 ರಣಧೀರ
  • 1987 ಪ್ರೇಮಲೋಕ
  • 1987 ಸಂಗ್ರಾಮ
  • 1986 ನಾ ನಿನ್ನ ಪ್ರೀತಿಸುವೆ
  • 1986 ರಸ್ತೆ ರಾಜ
  • 1986 ಸೇಡಿನ ಸಂಚು
  • 1985 ತಾಯಿಯ ಹೊಣೆ
  • 1985 ಸ್ನೇಹ ಸಂಬಂಧ
  • 1984 ಬೆಕ್ಕಿನ ಕಣ್ಣು
  • 1984 ಗುರುಭಕ್ತಿ
  • 1984 ಕಾಳಿಂಗ ಸರ್ಪ
  • 1984 ಕಲಿಯುಗ
  • 1984 ಪ್ರೇಮಿಗಳ ಸವಾಲ್
  • 1984 ರಕ್ತ ತಿಲಕ
  • 1983 ಕವಿರತ್ನ ಕಾಳಿದಾಸ
  • 1983 ಮಕ್ಕಳೇ ದೇವರು
  • 1982 ಅದೃಷ್ಟವಂತ
  • 1982 ಚೆಲ್ಲಿದ ರಕ್ತ'
  • 1982 ಗರುಡ ರೇಖೆ
  • 1982 ನನ್ನ ದೇವರು
  • 1982 ಊರಿಗೆ ಉಪಕಾರಿ
  • 1982 ಮುಟ್ಟಿನಂಥ ಅತ್ತಿಗೆ
  • 1982 ಹೆಣ್ಣು ಹುಲಿ
  • 1981 ಮನೆ ಮನೆ ಕಥೆ
  • 1981 ಪ್ರೇಮಾನುಬಂಧ
  • 1981 ಸ್ನೇಹಿತರ ಸವಾಲ್
  • 1980 ಮೂಗನ ಸೇಡು
  • 1980 ವಜ್ರದ ಜಲಪಾತ
  • 1980 ನಡುರಾತ್ರಿ
197೦ರ ದಶಕ
  • 1979 ಅಸಾಧ್ಯ ಅಳಿಯ
  • 1979 ನಾ ನಿನ್ನ ಬಿಡಲಾರೆ
  • 1979 ಅಳಿಯದೇವರು::
  • 1979 ಏನೇ ಬರಲಿ ಪ್ರೀತಿ ಇರಲಿ
  • 1978 ಬಲು ಅಪರೂಪ ನಮ್ ಜೋಡಿ

ಉಲ್ಲೇಖಗಳು

ಬದಲಾಯಿಸಿ
  1. "'ಬಲು ಅಪರೂಪ ನಮ್ ಜೋಡಿ' ಚಿತ್ರತಂಡ". chiloka.com.
  2. "ಕೆ. ವಿಜಯ ಅಭಿನಯಿಸಿದ ಚಿತ್ರಗಳು". chiloka.com.

ಹೊರಗಿನ ಕೊಂಡಿಗಳು

ಬದಲಾಯಿಸಿ

"K. Vijaya". imdb.com.