ಕೆ. ಎಲ್. ಶಂಕರನಾರಾಯಣ ಜೋಯ್ಸ್

ಡಾ. ಶಂಕರನಾರಾಯಣ ಜೋಯ್ಸ್ ಅವರು ಒಬ್ಬ ಸಂಸ್ಕೃತ ಪಂಡಿತರು ಹಾಗೂ ಯೋಗ, ಜ್ಯೋತಿಷ್ಯ ಮತ್ತು ಆಯುರ್ವೇದಗಳನ್ನೊಳಗೊಂಡ ಭಾರತದ ಸಾಂಪ್ರದಾಯಿಕ ವಿಜ್ನಾನಗಳ ಬಗೆಗಿನ ವಾಗ್ಮಿ. ೨೦೦೦ನೇ ಇಸವಿಯಲ್ಲಿ ಅವರು ಪುರಾತನ ಭಾರತೀಯ ಕಲೆ, ವಿಜ್ಞಾನ ಮತ್ತು ಸಂಸ್ಕೃತ ಭಾಷೆಯ ಭೋದನೆ ಮತ್ತು ಜ್ಞಾನವನ್ನು ಸಂರಕ್ಷಿಸಲು ಮುಡಿಪಾಗಿರುವ ಭಾರತೀಯ ಯೋಗಧಾಮ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ, ಮೈಸೂರು' ಇಂದ ಪ್ರಕಟವಾಗುವ ಆರ್ಯ ಸಂಸ್ಕೃತಿ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಜೀವನ ಬದಲಾಯಿಸಿ

ಡಾ. ಜೋಯ್ಸ್ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕೋಣಂದೂರು ಎಂಬಲ್ಲಿ ಜನಿಸಿದರು. ಐದನೇ ವಯಸ್ಸಿಗೆ ಸಂಸ್ಕೃತ ಕಲಿಕೆ ಆರಂಭಿಸಿದರು. ಅನಂತರದಲ್ಲಿ ಅವರು ಭಾರತೀಯ ತರ್ಕಶಾಸ್ತ್ರ ಹಾಗೂ ಸಾಹಿತ್ಯ ವಿಮರ್ಶೆಗಳಲ್ಲಿ 'ವಿದ್ವಾನ್' ಪದವಿ ಗಳಿಸಿದರು. ಮೈಸೂರಿನ ಮಹಾರಾಜ ಸರ್ಕಾರಿ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಅವರು ಸಂಸ್ಕೃತದಲ್ಲಿ ಎಂ. ಎ. ಪದವಿ ಹಾಗೂ 'ಯೋಗ'ದಲ್ಲಿ ಪಿ.ಎಚ್.ಡಿ. ಪಡೆದರು. ಅವರು ಹಿಂದಿಯಲ್ಲೂ ಪದವಿ ಹೊಂದಿದ್ದಾರೆ ಹಾಗೂ ಕನ್ನಡದಲ್ಲಿ ಪಂಡಿತರಾಗಿದ್ದಾರೆ. ಅವರು ವಂಶಪಾರಂಪರ್ಯವಾಗಿ ವೇದ ಜ್ಯೋತಿಷ್ಯದ ಬಗ್ಗೆ ಆಳವಾದ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ಭಾರತದ ಮೂಲ ಕಲೆ ಮತ್ತು ವಿಜ್ಞಾನಗಳಲ್ಲಿರುವ ಸತ್ಯವಾಸ್ತವಗಳ ಬಗ್ಗೆ ಆಳವಾದ ಒಳನೋಟ ಹೊಂದಿದ್ದ ಯೋಗಿ ಶ್ರೀರಂಗ ಮಹಾಗುರುಗಳ (1913-1969) ಭೋದನೆಗಳಿಂದ ಜೋಯ್ಸರು ಬಹಳ ಪ್ರಭಾವಿತರಾಗಿದ್ದಾರೆ.

ಕೃತಿಗಳು ಬದಲಾಯಿಸಿ

  • ಮಾರ್ಕಂಡೇಯ (ಮಕ್ಕಳ ಪುಸ್ತಕ - ಕನ್ನಡ)
  • The Sacred Tradition Of Yoga (English)[೧]
  • ಮಹಾಯೋಗಿ ಶ್ರೀರಂಗ (ಜೀವನ ಚರಿತ್ರೆ - ಕನ್ನಡ)
  • ದೈವ ಮತ್ತು ಪುರುಷಪ್ರಯತ್ನ (ಕನ್ನಡ)
  • ನಮಸ್ಕಾರ (ಕನ್ನಡ)
  • ಮಾನವ ದೇಹ (ಕನ್ನಡ)
  • Yoga Bhumika (English)[೨][೩]

ಉಲ್ಲೇಖಗಳು ಬದಲಾಯಿಸಿ