ಕೆಮಾಲ್ ಅಟಾಟರ್ಕ್
ಅಟಾಟರ್ಕ್, ಕೆಮಾಲ್ (೧೮೮೦-೧೯೩೮).[೧] ಆಧುನಿಕ ತುರ್ಕಿಯ ನಿರ್ಮಾಪಕ, ಮೊದಲನೆಯ ರಾಷ್ಟ್ರಾಧ್ಯಕ್ಷ. ೧೯೩೪ರ ಮೊದಲಿಗೆ ಈತನನ್ನು ಮುಸ್ತಫ ಕೆಮಾಲ್, ಕೆಮಾಲ್ ಪಾಷ ಎಂದು ಕರೆಯುತ್ತಿದ್ದರು. ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ. ಸೈನ್ಯಕ್ಕೆ ಸೇರಿ ೧೯೦೮ರ ತುರ್ಕಿ ಯುವಕ ಕ್ರಾಂತಿಯಲ್ಲಿ ಭಾಗವಹಿಸಿದ. ೧೯೧೪-೧೮ರ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿ ಗ್ಯಾಲಿಪೊಲಿ, ಮೆಸಪೊಟೆಯಾ ಮುಂತಾದ ಕಡೆಗಳಲ್ಲಿ ಹೋರಾಡಿ ಸಮರ್ಥ ಸೇನಾಧಿಪತಿಯೆಂದು ಹೆಸರು ಗಳಿಸಿದ. ತುರ್ಕಿ ಯುದ್ಧದಲ್ಲಿ ಸೋತ ಅನಂತರ ರಾಷ್ಟ್ರೀಯ ಪಕ್ಷವೊಂದನ್ನು ನಿರ್ಮಿಸಿ ತುರ್ಕಿಯ ಸ್ವಾತಂತ್ರ್ಯ ಸಾಧನೆಗಾಗಿ ಪಣತೊಟ್ಟು ನಿಂತು, ೧೯೨೧-೨೨ ರಲ್ಲಿ ಅನಟೋಲಿಯವನ್ನು ಆಕ್ರಮಿಸಿದ್ದ ಗ್ರೀಕರನ್ನು ಹೊಡೆದೋಡಿಸಿ, ಸುಲ್ತಾನನ ಆಳ್ವಿಕೆಯನ್ನೇ ರದ್ದುಮಾಡಿ, ೧೯೨೩ರ ಲಾಸೇನ್ ಸಮ್ಮೇಳನದಲ್ಲಿ ಸ್ವತಂತ್ರ ತುರ್ಕಿ ರಾಜ್ಯಕ್ಕೆ ಮನ್ನಣೆ ಸಂಪಾದಿಸಿದ. ೧೯೨೩ರಲ್ಲಿ ಜನರು ಕೃತಜ್ಞತೆಯಿಂದ ಅವನನ್ನೇ ರಾಷ್ಟ್ರದ ಅಧ್ಯಕ್ಷನನ್ನಾಗಿ ಆರಿಸಿದರು. ತನ್ನ ಮರಣದವರೆಗೂ ಕೆಮಾಲ್ ಅಧ್ಯಕ್ಷನಾಗಿಯೇ ಮುಂದುವರಿದ. ಜೀವನದ ಎಲ್ಲ ರಂಗಗಳಲ್ಲೂ ತುರ್ಕಿಯ ಜನತೆ ಆಧುನಿಕ ಪಾಶ್ಚಾತ್ಯರಂತಾಗಬೇಕೆಂದು ನಿರ್ಣಯಿಸಿ ನಾನಾ ಸುಧಾರಣೆಗಳನ್ನು ಜಾರಿಗೆ ತಂದ. ಸಂಪ್ರದಾಯಬದ್ಧರಾದ ತುರ್ಕಿ ಜನರು ಅಷ್ಟೊಂದು ನವೀನ ರೀತಿ ನೀತಿಗಳನ್ನು ಅಂಗೀಕರಿಸಿದ್ದು ಸೋಜಿಗವಾದ ಸಂಗತಿಯಾದರೂ ಅದರಿಂದ ಅತ್ಯಲ್ಪಕಾಲದಲ್ಲೇ ದೇಶ ಮುಂದುವರಿದಂತಾಯಿತ.
ಅಟಾಟರ್ಕ್, ಕೆಮಾಲ್ | |
---|---|
Born | Ali Rıza oğlu Mustafa ೧೯ ಮೇ ೧೮೮೧ (a posteriori) Salonica (Thessaloniki), Ottoman Empire |
Died | November 10, 1938 Dolmabahçe Palace, ಟರ್ಕಿ, ಇಸ್ತಾಂಬುಲ್ | (aged 57)
Cause of death | Cirrhosis |
Resting place | Anıtkabir, Ankara, Turkey |
Nationality | Turkish |
Alma mater | War College in Istanbul |
Known for | Military commander, revolutionary statesman |
Spouse | Lâtife (1923–25) |
Children | 8 (adopted) |
Parent(s) | Ali Rıza Efendi, Zübeyde Hanım |
Relatives | sister Makbule (Atadan) |
Signature | |
ಹೆಸರು
ಬದಲಾಯಿಸಿಟರ್ಕಿಶ್ ಸಂಪ್ರದಾಯದಲ್ಲಿ, ಹೆಸರುಗಳು ತಮ್ಮ ವ್ಯಾಕರಣ ಗುರುತಿನ ಕಾರ್ಯದ ಜೊತೆಗೆ ಹೆಚ್ಚುವರಿ ಗೌರವ ಅಥವಾ ಸ್ಮಾರಕ ಮೌಲ್ಯಗಳನ್ನು ಹೊಂದಿವೆ.ಇತರ ಭಾಷೆಗಳಿಗೆ ಟರ್ಕಿಷ್ ಹೆಸರಿನ ಭಾಷಾಂತರಿಸಲು ಸಾಧ್ಯ. ಆದರೆ ಹೆಸರುಗಳ 'ರೂಪ ಮತ್ತೊಂದು ಭಾಷೆಯಲ್ಲಿ ಬದಲಾಗುವುದರಿಂದ, ಭಾಷಾಂತರಿಸುವಾಗ ಕಾತರವಾಗಿರಬೇಕು.
ಹೆಸರುಗಳು ಮತ್ತು ಶೀರ್ಷಿಕೆಗಳು ಪಟ್ಟಿ
ಬದಲಾಯಿಸಿಹುಟ್ಟು: ಅಲಿ Rıza oğlu ಮುಸ್ತಫಾ ೧೯೧೧: ಮುಸ್ತಫಾ ಕೆಮಾಲ್ ಬೇಯ್ ೧೯೧೬: ಮುಸ್ತಫಾ ಕೆಮಾಲ್ ಪಾಶಾ ೧೯೨೧: ಗಾಜಿ ಮುಸ್ತಫಾ ಕೆಮಾಲ್ ೧೯೩೪: ಗಾಜಿ ಮುಸ್ತಫಾ ಕೆಮಾಲ್ ಅಟಟುರಕ್ (ಕೆಮಾಲ್ ಅಟಟುರಕ್ ತನ್ನ ದಸ್ತಾವೇಜು ಗುರುತನ್ನಾದರಿಸಿ ) ೧೯೩೫: ಕಮಲ್ ಅಟಟುರಕ್ (ತನ್ನ ದಸ್ತಾವೇಜು ಗುರುತನ್ನಾದರಿಸಿ)
ರಾಷ್ಟ್ರೀಯತೆ
ಬದಲಾಯಿಸಿಒಟ್ಟೋಮನ್ ಸಾಮ್ರಾಜ್ಯ ರಾಷ್ಟ್ರೀಯ ರಾಜ್ಯದ ಅಲ್ಲ ಮತ್ತು ರಾಷ್ಟ್ರೀಯತೆ ಆಧಾರಿವಾಗಿ ದಾಖಲೆಗಳಿಲ್ಲ, ಆದರೆ ಧರ್ಮ ಆಧಾರಿವಾಗೆವೆ. ಯುರೋಪ್ನಲ್ಲಿ ರಾಷ್ಟ್ರೀಯತೆಯ ಉದಯ ೧೯ ನೇ ಶತಮಾನದಲ್ಲಿ ಒಟ್ಟೋಮನ್ ಸಾಮ್ರಾಜ್ಯಕ್ಕೆ ತಲುಪಿತು ಮತ್ತು ಮಿಲ್ಲೆಟ್ ವ್ಯವಸ್ಥೆ ಇದೇ ಸಮಯದಲ್ಲಿ ಕೆಳದರ್ಜೆಗೆ ಇಳಿಯಿತು.[೨]
ಜೀವನ
ಬದಲಾಯಿಸಿಅಟಟುರಕ್ ಯೂರೋಪಿನ ನಾಗರೀಕತೆಯ ಬೆಲ್ ಎಪಾಕ್ ಸಮಯದಲ್ಲಿ ಜನಿಸಿದರು. ಅಟಟುರಕ್ ಮೊದಲ ಸಾಂಪ್ರದಾಯಿಕ ಧಾರ್ಮಿಕ ಶಾಲೆಗೆ ದಾಖಲಾದರು. ಅವರು ನಂತರ ಶಮ್ಸ್ ಎಫೆಂಡಿ (Şemsi Efendi) ಸ್ಕೂಲ್‌ಗೆ ಬದಲಾಯಿಸಿದರು. ಅಟಟುರಕ್ ಮಿಲಿಟರಿ ಶಾಲೆಗೆ ಹೋಗಲು ಬಯಸಿದರು. ಅವರು ಟರ್ಕಿಷ್ ಮಿಲಿಟರಿ ಕಿರಿಯ ಪ್ರೌಢಶಾಲೆಗೆ ಸೇರಿಕೊಂಡರು. ಮಾರ್ಚ್ ೧೩, ೧೮೯೯ ರಂದು ಅವರು ಇಸ್ತಾಂಬುಲ್‌ನ ಒಟ್ಟೋಮನ್ ವಾರ್ ಅಕಾಡೆಮಿ ಸೇರಿಕೊಂಡರು(Turkish: Mekteb-i Harbiye-i Şahane). ಫೆಬ್ರವರಿ 10, ೧೯೦೨ ರಂದು, ಇಸ್ತಾಂಬುಲ್‌ನ ಒಟ್ಟೋಮನ್ ಸ್ಟಾಫ್ ಕಾಲೇಜ್‌ಗೆ ಸೇರಿಕೊಂಡರು, ಅವರು ಜನವರಿಯಲ್ಲಿ ೧೧, ೧೯೦೫ ರಂದು ಪದವಿ ಪಡೆದರು.
ಅಟಟುರಕ್ Latife Uşaklıgil ಮದುವೆಯಾದ,ಇವರು ಒಬ್ಬ ಬಹುಭಾಷಾ, ಮತ್ತು ಆತ್ಮವಿಶ್ವಾಸದಿಂದ ಮಹಿಳೆ, ಯುರೋಪ್ನಲ್ಲಿ ಶಿಕ್ಷಣ ಪಡೆದು ಮತ್ತು ಹಡಗು ಇಟ್ಟುಕೊಳ್ಳುವ ಕುಟುಂಬದಿಂದ ಇಜ್ಮಿರ್‌ಗೆ ಬಂದವರು.
ಮಕ್ಕಳು
ಬದಲಾಯಿಸಿತನ್ನ ಉಲ್ಲೇಖಗಳಲ್ಲಿ ಒಂದು "Children are a new beginning of tomorrow" (ಮಕ್ಕಳೇ ನಾಳೆಯ ಒಂದು ಹೊಸ ಆರಂಭ). ಅವರು ಏಪ್ರಿಲ್ ೨೩ರಂದು "ಮಕ್ಕಳ ದಿನ" ಮತ್ತು ಮೇ ೧೯ರಂದು "ಯುವ ಮತ್ತು ಕ್ರೀಡೆ ದಿನ"ವೆಂದು ಸ್ಥಾಪಿಸಿದರು. ಮಕ್ಕಳ ದಿನ ೧೯೨೦ ರಲ್ಲಿ ಟರ್ಕಿಷ್ ನ್ಯಾಷನಲ್ ಅಸೆಂಬ್ಲಿ ಆರಂಭಿಕ ನೆನಪಿಸುತ್ತದೆ. ಈ ಮದುವೆಯಿಂದ ಯಾವುದೇ ಜೈವಿಕ ಮಕ್ಕಳಿರಳಿಲ್ಲ. ಅವರು ಏಳು ಹೆಣ್ಣು ಮತ್ತು ಒಬ್ಬ ಮಗ ದತ್ತು ಹೊಂದಿದ್ದರು.
ಮರಣ
ಬದಲಾಯಿಸಿಅಟಟುರಕ್ ಇಸ್ತಾಂಬುಲ್‌ನ Dolmabahçe ಅರಮನೆಯಲ್ಲಿ, ನವೆಂಬರ್ 10, 1938, 09:05 ಗಂಟೆಗೆ, 57 ವರ್ಷ ವಯಸ್ಸಿನಲ್ಲಿ, ಯಕೃತ್ತಿನ ಸಿರೋಸಿಸ್ನಿಂದ ಮರಣ ಹೊಂದಿದರೆಂದು ಭಾವಿಸಲಾಗಿದೆ.
ಉಲ್ಲೇಖಗಳು
ಬದಲಾಯಿಸಿ