ಕೃಷ್ಣರಾಜಪುರ ವೀರಗಲ್ಲು

ಇದು ಬೆಂಗಳೂರಿನ ಕೃಷ್ಣರಾಜಪುರ ಪ್ರದೇಶದಲ್ಲಿ ದೊರೆತ ಕಲ್ಬರಹವನ್ನೊಳಗೊಂಡ ಒಂದು ವೀರಗಲ್ಲು. ಈ ವೀರಗಲ್ಲು ಗಂಗ ಸಾಮ್ರಾಜ್ಯದ ’ಶ್ರೀಪುರುಷ’ ಎಂಬ ರಾಜನ ಆಳ್ವಿಕೆಯ ಕಾಲದ್ದಾಗಿದ್ದು, ಕ್ರಿ.ಶ.೭೫೦ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದೆಂದು ಅಂದಾಜಿಸಲಾಗಿದೆ. ಇದರಲ್ಲಿನ ಬರಹವು ಹಳೆಗನ್ನಡದ ಲಿಪಿಯಲ್ಲಿದೆ. ಪ್ರಸ್ತುತ ಇದನ್ನು ಬೆಂಗಳೂರಿನ ಪುರಾತತ್ವ ಇಲಾಖೆಯ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಈ ವೀರಗಲ್ಲಿನ ಕೆಳಭಾಗವು ಒಡೆದುಹೋಗಿದ್ದು ಮೇಲ್ಭಾಗದಲ್ಲಿ ಕೆಲಸಾಲುಗಳ ಬರಹವನ್ನು ಕೆತ್ತಲಾಗಿದೆ. ಕಲ್ಲಿನ ಗಾತ್ರ 6' X 5'6". ’ಮಾರೆಯ’ ಎಂಬ ವ್ಯಕ್ತಿಯು ಪ್ರಾಣತೆತ್ತುದ್ದರ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ.[೧]

ಕೃಷ್ಣರಾಜಪುರ ವೀರಗಲ್ಲಿನ ಬರಹ

ಶಾಸನ ಪಠ್ಯ ಬದಲಾಯಿಸಿ

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN55 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೨]

ಕೃಷ್ಣಾರಾಜಪುರ ಹೋಬಳಿ ಕೃಷ್ಣಾರಾಜಪುರದಲ್ಲಿ ವಾಸುದೇವರಾಯರ ಛತ್ರದ ಮುಂದೆ ಬಿದ್ದಿರುವ ವೀರಕಲ್ಲು
ಹಳಗನ್ನಡಕ್ಷರ ಪ್ರಮಾಣ 6’ x 5’6”

1 ಶ್ರೀಪುರುಷಮಹಾರಾಜರರಸುಗೆಯೆಕನ್ನರ . . . ರಡು.. .
2 ವೊರ್ಬಾಕರುರಾಳವೊಸಊರರಲ್ಗೊಯನುಮಾರೆಯನು
3 ಉರೞಿ . ವಿಱುದುಬಿೞ್ೞ

ಅರ್ಥವಿವರಣೆ ಬದಲಾಯಿಸಿ

When Sripurusha-maharaja was ruling :- ………………………….Mareya ……………pierced and fell.

ವಿಶೇಷತೆ ಬದಲಾಯಿಸಿ

ಕ್ರಿ.ಶ. ೭೫೦ನೇ ಇಸವಿಯ ಕಾಲದಲ್ಲಿ ಸ್ಥಾಪಿತವಾದ ಈ ವೀರಗಲ್ಲು ಬೆಂಗಳೂರು ಪ್ರದೇಶದಲ್ಲಿ ದೊರಕಿರುವ ಅತ್ಯಂತ ಹಳೆಯ ಕಲ್ಬರಹವಾಗಿದೆ.[೩] ಆಗಿನ ಕಾಲದ ಕನ್ನಡ ಲಿಪಿಯನ್ನು ಹೊಂದಿರುವುದರಿಂದ ಭಾಷೆ ಮತ್ತು ಲಿಪಿ ಬೆಳವಣಿಗೆಯ ಅಧ್ಯಯನದಲ್ಲಿ ಮಹತ್ವದ್ದಾಗಿದೆ.

ಆಕರಗಳು/ಉಲ್ಲೇಖಗಳು ಬದಲಾಯಿಸಿ

  1. The land of ancient reservoirs, S. K. Aruni, The Hindu, November 26, 2013
  2. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)
  3. INSCRIPTIONS OF BANGALORE EAST TALUK – A STUDY Archived 2018-06-18 ವೇಬ್ಯಾಕ್ ಮೆಷಿನ್ ನಲ್ಲಿ. November 20, 2014, by itihasaacademy

ಹೊರಸಂಪರ್ಕಕೊಂಡಿಗಳು ಬದಲಾಯಿಸಿ