ಕುಪ್ಪಿಗಿಡ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. indica
Binomial name
Acalypha indica

ಕುಪ್ಪಿಗಿಡ ಉಷ್ಣವಲಯದ ಆಫ್ರಿಕ, ದಕ್ಷಿಣ ಆಫ್ರಿಕ,ಭಾರತ,ಶ್ರೀಲಂಕಾ,ಪಾಕಿಸ್ತಾನ ಮುಂತಾದೆಡೆ ಸಾಮಾನ್ಯವಾಗಿ ಕಂಡು ಬರುವ ಒಂದು ಸಸ್ಯ.

ವೈಜ್ಞಾನಿಕ ವರ್ಗೀಕರಣ ಬದಲಾಯಿಸಿ

ಯೂಪೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಪುಟ್ಟ ಏಕವಾರ್ಷಿಕ ಸಸ್ಯ. ಅಕ್ಯಾಲಿಫ ಇಂಡಿಕ ಎಂಬುದು ಇದರ ವೈಜ್ಞಾನಿಕ ನಾಮ. ಕನ್ನಡದಲ್ಲಿ ತುಪ್ಪಕೀರೆ ಎಂಬ ಹೆಸರೂ ಇದೆ. ಸಂ: ಹರೀತ ಮಂಜಿರಿ

ಹಿಂ: ಕುಷ್ಡಿ, ಖೋಕಲಿ

ಮ: ಹರಿತ ಮಂಜರಿ, ಖೋಖಲಿ

ಗು: ವಂಚಿಕಾಠೋ

ತೆ: ಕುಪ್ಪಿದೆಟ್ಟು

ತ: ಕುಪ್ಪಿವೇಣಿ

ಲಕ್ಷಣಗಳು ಬದಲಾಯಿಸಿ

ಭಾರತದ ಬಯಲುಸೀಮೆಯಲ್ಲೆಲ್ಲ ಇದು ಬಹು ಸಾಮಾನ್ಯವಾಗಿ ಬೆಳೆಯುತ್ತದೆ. ಬೇಸಾಯದ ಭೂಮಿಯಲ್ಲಿ, ರಸ್ತೆಗಳ ಅಕ್ಕಪಕ್ಕದಲ್ಲಿ, ತೋಟಗಳಲ್ಲಿ ಕಳೆಯುವ ಮೂಲಿಕೆ ಸಸ್ಯವಿದು. ಇದರ ಎತ್ತರ ಸುಮಾರು 1'-2'. ಎಲೆಗಳು ಸರಳ, ಪರ್ಯಾಯವಾಗಿ ಜೋಡಣೆಗೊಂಡಿವೆ. ಅವಕ್ಕೆ ಉದ್ದನೆಯ ತೊಟ್ಟಿದೆ. ಎಲೆಗಳ ಅಂಚು ಗರಗಸದಂತೆ, ಹೂಗಳು ಏಕಲಿಂಗಿಗಳು, ಚಿಕ್ಕ ಗಾತ್ರದವು, ಎಲೆಗಳ ಕಂಕುಳಲ್ಲಿ ಹುಟ್ಟುವ ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಗಂಡು ಮತ್ತು ಹೆಣ್ಣು ಹೂಗಳೆರಡಲ್ಲೂ 4 ಪತ್ರಗಳಿಂದಾದ ಪುಷ್ಪಪಾತ್ರೆಯಿದೆ, ದಳಗಳಿಲ್ಲ. ಗಂಡುಹೂವಿನಲ್ಲಿ ಬಿಡಿಬಿಡಿಯಾದ 8 ಕೇಸರಗಳೂ ಹೆಣ್ಣುಹೂವಿನಲ್ಲಿ 3 ಕಾರ್ಪೆಲ್ಗಳಿಂದ ಕೂಡಿದ ಉಚ್ಚಸ್ಧಾನದ ಅಂಡಾಶಯವೂ ಇವೆ. ಕಾಯಿ 3 ಬೀಜಗಳುಳ್ಳ ಸಂಪುಟ ಮಾದರಿಯದು. ಒಣಗಿದಾಗ ಒಡೆಯುತ್ತದೆ. ಇಂದರಿಂದ ಎರಡು ಎತ್ತರ ಬೆಳೆಯುವ ಸಣ್ಣ ಗಿಡ, ಗುಂಡಗಿನ ಪತ್ರೆಗಳು, ಸ್ವಲ್ಪ ಹಳದಿ ಬಣ್ಣದ ಹೂಗಳ ಗೊಂಚಲು ಪೂರ್ತಿ ಇರುತ್ತವೆ. ಇವುಗಳಡಿಯಲ್ಲಿ ಚಿಕ್ಕದಾದ, ರೋಮಗಳಿಂದ ಕೂಡಿದ ಕಾಯಿಗಳಿರುತ್ತವೆ. ಎಲೆಗಳ ತೊಟ್ಟು ಉದ್ದವಾಗಿರುತ್ತದೆ. ಎಲೆ ತೊಟ್ಟು ಕಾಂಡವನ್ನು ಕೂಡುವ ಕಡೆ ಹೂಗೊಂಚಲು ಪ್ರಾರಂಭವಾಗಿ, ಪತ್ರದ ತೊಟ್ಟಿನ ಸಮನಾಗಿ ಸಾಗುತ್ತದೆ. ಹಳ್ಳಿಯ ಅಜ್ಜಿಗೆ ತಿಳಿದಿರುವ, ಪರಿಣಾಮಕಾರಿ ಗುಣ ನೀಡುವ ಗಿಡಮೂಲಿಕೆ

ಔಷಧೀಯ ಗುಣಗಳು ಬದಲಾಯಿಸಿ

 
Acalypha indica from pondichery botanical garden

ಕುಪ್ಪಿಗಿಡಕ್ಕೆ ಔಷಧೀಯ ಮಹತ್ವ್ತ್ತವಿದೆ. ಇದರ ಎಲೆ, ಎಳೆಯ ಕುಡಿಗಳು, ಬೇರು ಮತ್ತು ಹೂವುಗಳನ್ನು ಕಷಾಯ, ಪುಡಿ, ಹೊಸರಸ ಇವುಗಳ ರೂಪದಲ್ಲಿ ಜಂತುಹುಳುನಾಶಕವಾಗಿ, ಅಸ್ತಮ ಕೆಮ್ಮು ಮುಂತಾದ ಶ್ವಾಸಕೋಶಸಂಬಂಧಿ ರೋಗಗಳ ನಿವಾರಕವಾಗಿ, ವಿರೇಚಕವಾಗಿ, ಮನಶ್ಯಾಂತಿಕಾರಕವಾಗಿ, ವಾಂತಿಕಾರಕವಾಗಿ, ಸುಪ್ತ್ಯಾವಾಹಕವಾಗಿ ಬಳಸುತ್ತಾರೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.[೧]

ಸರಳ ಚಿಕಿತ್ಸೆಗಳು ಬದಲಾಯಿಸಿ

ದೇಹ ಕಾಂತಿಗೆ ಬದಲಾಯಿಸಿ

ಶುದ್ಧವಾದ ಎಳ್ಳೆಣ್ಣೆಯಲ್ಲಿ ಒಂದು ಹಿಡಿ ಕುಪ್ಪಿ ಎಲೆಗಳನ್ನು ಹಾಕಿ ಕಾಯಿಸಿ ಶೋಧಿಸಿಟ್ಟುಕೊಳ್ಳುವುದು. ತಣ್ಣಗಾದ ಮೇಲೆ ತೈಲವನ್ನು ಹಚ್ಚಿ ಸ್ನಾನ ಮಾಡುವುದು.

ವಾತನೋವು ಸೆಳೆತಕ್ಕೆ ಬದಲಾಯಿಸಿ

ಹಸೀ ಕುಪ್ಪಿ ಎಲೆಗಳನ್ನು ಜಜ್ಜಿ, ಎಳ್ಳೆಣ್ಣೆಯಲ್ಲಿ ಬೆರೆಸಿ, ತೈಲ ಉಳಿಯುವಂತೆ ಕಾಯಿಸಿ, ಶೋಧಿಸಿಟ್ಟುಕೊಳ್ಳುವುದು. ಬೇಕಾದರೆ ಸುಗಂಧ ವಸ್ತುಗಳ ಚೂರ್ಣವನ್ನು ಸೇರಿಸಿಕೊಳ್ಳಬಹುದು. ನೋವಿರುವ ಕಡೆಗೆ ಹಚ್ಚುವುದು.

ಮಲಬದ್ಧತೆಗೆ ಬದಲಾಯಿಸಿ

ಮಕ್ಕಳು ಮಲಬದ್ಧತೆಯಾಗಿ ಅಳುತ್ತಿದ್ದರೆ ಹಸೀ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಸ್ವಲ್ಪ ಭಾಗವನ್ನು ಮಲದ್ವಾರದಲ್ಲಿ ಸೇರಿಸುವುದು.

ಮಕ್ಕಳ ಶೀತ ವ್ಯಾಧಿಗೆ ಬದಲಾಯಿಸಿ

ಹಸೀ ಎಲೆಗಳ ರಸವನ್ನು ಸ್ವಲ್ಪ ಜೇನು ಸೇರಿಸಿ ನೆಕ್ಕುವುದು. ಮೊದಲು ಸ್ವಲ್ಪ ವಾಂತಿಯಾಗಿ, ನಂತರ ವಾಸಿಯಾಗುವುದು. ಈ ರಸ ಸೇವಿಸುವುದರಿಂದ ದೊಡ್ಡವರಲ್ಲಿ ಕೆಮ್ಮು, ಕಫ, ದಮ್ಮು ಗುಣವಾಗುವುದು.

ಮಕ್ಕಳ ಹೊಟ್ಟೆನೋವಿಗೆ ಬದಲಾಯಿಸಿ

ಬೆಳ್ಳುಳ್ಳಿ ಮೆಣಸು ಇವುಗಳ ಸಮತೂಕದ ಎರಡು ಭಾಗ ಕುಪ್ಪಿ ಸೊಪ್ಪನ್ನು ಸೇರಿಸಿ, ನುಣ್ಣಗೆ ಅರೆದು, ಸ್ವಲ್ಪ ಭಾಗವನ್ನು ಹಾಲಿನಲ್ಲಿ ಕದಡಿ ಕುಡಿಸುವುದು.

ಪೀನಾಸಿ ರೋಗಕ್ಕೆ(ಮೂಗಿಗೆ ವಾಸನೆ ತಿಳಿಯದಿರುವುದು) ಬದಲಾಯಿಸಿ

ಒಂದು ಬೆಳ್ಳುಳ್ಳಿ ಹಿಲಕು, ಒಂದು ಮೆಣಸಿನಕಾಳು ಮತ್ತು ನಾಲ್ಕೈದು ಕುಪ್ಪಿ ಎಲೆಗಳನ್ನು ಸೇರಿಸಿ, ನುಣ್ಣಗೆ ಅರೆದು ಬಟ್ಟೆಯಲ್ಲಿ ಶೋಧಿಸಿ ಮೂಗಿನ ಎರಡೂ ಹೊಳ್ಳೆಗಳಿಗೆ ನಾಲ್ಕೈದು ತೊಟ್ಟು ಬಿಡುವುದು.

ತುರಿಕೆ, ಕಜ್ಜಿಗೆ ಬದಲಾಯಿಸಿ

ಹಸೀ ಎಲೆಗಳನ್ನು ತಂದು, ಸ್ವಲ್ಪ ಅಡಿಗೆ ಉಪ್ಪು ಸೇರಿಸಿ ನುಣ್ಣಗೆ ಕಲ್ಪತ್ತಿನಲ್ಲಿ ಅರೆದು ಪಟ್ಟು ಹಾಕುವುದು. ಸಿಪಲಿಸ್ ಎನ್ನುವ ಮರ್ಮಾಂಗ ಹುಣ್ಣಿಗೆ ಸಹ ಇದೇ ರೀತಿ ಚಿಕಿತ್ಸೆ ಮಾಡುವುದು.

ಮೂರ್ಛೆಗೆ ಬದಲಾಯಿಸಿ

ಹಸೀ ಕುಪ್ಪಿ ಎಲೆಗಳ ರಸವನ್ನು ಮೂಗಿನ ಎರಡೂ ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು.ಬಹು ಬೇಗ ಪ್ರಜ್ಞೆ ಬಂದು ಎಚ್ಚರವಾಗುವುದು. ಒಂದೆರಡು ಬಾರಿ ತಣ್ಣೀರನ್ನು ಮುಖಕ್ಕೆ ತುಂತುರು ರೂಪದಂತೆ ಚಿಮುಕಿಸುವುದು. ಕಿವಿ ನೋವಿನಲ್ಲಿ ಎಲೆಗಳ ರಸವನ್ನು ನೋವಿರುವ ಕಿವಿಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು. ಸ್ವಲ್ಪ ಬಿಸಿ ಮಾಡಿ ಹಾಕುವುದು.

ಉಲ್ಲೇಖಗಳು ಬದಲಾಯಿಸಿ

  1. "acalypha-indica". Archived from the original on 2016-03-04. Retrieved 2016-01-08.

ಬಾಹ್ಯ ಸಂಪರ್ಕಗಳು ಬದಲಾಯಿಸಿ