ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪರ್ವತ ಶ್ರೇಣಿಯಲ್ಲಿ ವಾಸವಾಗಿರುವ ಮಲೆಯನ್, ಕುಡಿಯನ್, ಈಡಿಗ, ಮಲೆಕುಡಿಯ ಮುಂತಾದವುಗಳಿಂದ ಕರೆಯಲ್ಪಡುವ ಜನಾಂಗದವರು ಮಾಡುವ ಕುಣಿತವನ್ನು ಕುಡಿಯರ ಕುಣಿತ ಎಂದು ಗುರಿತಿಸಲಾಗಿದೆ. ಈ ಕುಣಿತವನ್ನು ಮಾಡುವ ಜನಾಂಗದವರು ಕರ್ಣಾಟಕದ ಆಗುಂಬೆಯಿಂದ ಬ್ರಹ್ಮಗಿರಿಯವರೆಗಿರುವ ಪರ್ವತ ಶ್ರೇಣಿಯಲ್ಲಿ ವಾಸಿಸುತ್ತರೆ ಹಾಗು ಅವರು ಆಯಾಯ ಪ್ರದೇಶದ ಭಾಷೆಗಳನ್ನು ತಮ್ಮದೆ ರೀತಿಯಲ್ಲಿ ಮಾತನಾಡುತ್ತಾರೆ.[]

ವಿಧಗಳು

ಬದಲಾಯಿಸಿ

ಕುಡಿಯರನ್ನು ನಾಲ್ಮ‌ಲೆ ಕುಡಿಯರು ಹಾಗೂ ಮೂರುಮಲೆ ಕುಡಿಯರೆಂದು ಗುರಿತಿಸಲಾಗಿದೆ. ದಕ್ಷಿಣ ಕನ್ನಡದ ಕುಡಿಯರು ನಾಲ್ಕು ಮಲೆಯವರಾದರೆ, ಕೊಡಗಿನವರು ಮೂರುಮಲೆಯವರು. ಘಟ್ಟದ ಮೇಲಿನವರನ್ನು ಕುಡಿಯರೆಂದೂ ಹಾಗೂ ಕೆಳಗಿನವರನ್ನು ಮಲೆಕುಡಿಯರೆಂದೂ ಕರೆಯಲಾಗುತ್ತದೆ.[]

ಪ್ರದರ್ಶ‌ನ

ಬದಲಾಯಿಸಿ

ಕಲೆಯನ್ನು ಪ್ರದರ್ಶಿಸುವವರು ಗಂಡಸರು ಮತ್ತು ಹೆಂಗಸರು ಮತ್ತು ಕೆಲವೊಮ್ಮೆ ಪ್ರತೇಕವಾಗಿ ಗಂಡಸರು ಪ್ರತ್ಯೇಕವಾಗಿ ಪ್ರದರ್ಶಿಸುವುದುಂಟು. ಈ ಪ್ರದರ್ಶನವನ್ನು ಗಂಡಸರು ಕೊಡವ ರೀತಿಯಲ್ಲಿ ನಿಲುವಂಗಿ, ಪಾಯಿಜಾಮ, ನಡುವಿಗೆ ವಸ್ತ್ರ, ತಲೆಗೆ ಪೇಟ ತೊಟ್ಟು ಸಿಧ್ಧರಾದರೆ, ಹೆಂಗಸರು ಉಡುವ ಉಡುಪುಗಳು ಕೊಡವ ಮಹಿಳೆಯು ಉಡುವ ದೈನಂದಿಕ ಉಡುಪುಗಳಂತೆ ಕಾಣತೋರುತ್ತವೆ. ಇನ್ನು ಈ ಪ್ರದರ್ಶನವನ್ನು ಮಾಡುವ ಇವರು ಎರಡೂ ತೋಳುಗಳನ್ನು ಎತ್ತಿ, ಕೈಯನ್ನು ಬಾಗಿಸುತ್ತಾ ಬಗ್ಗಿ, ಎದ್ದು, ಹಿಂದೆ-ಮುಂದೆ ತಿರುಗುತ್ತಾ ಆಕರ್ಶಕವಾಗಿ ನರ್ತಿಸುತ್ತರೆ ಹಾಗೂ ಹಿಮ್ಮೇಳವಾಗಿ ಒಂದು ಸದಸ್ಯ ಡೋಲನ್ನು ನುಡಿಸುತ್ತಾನೆ. ಈ ಕುಣಿತವು ಕೊಡವರ ಕೋಬಾಟ್, ಪಿಲಿಯಾಟ್‌ಗಳಂತೆ ಕಂಡುಬರುವುದಾದರೂ ಬಿರುಸಾದ ನರ್ತನ ಇಲ್ಲಿ ವಿಶೇಷ.

ಉಲ್ಲೇಖ

ಬದಲಾಯಿಸಿ
  1. www.kannadauniversity.org
  2. ಕರ್ನಾಟಕ ಜನಪದ ಕಲೆಗಳ ಕೋಶ,ಡಾ||ಹಿ ಚಿ ಬೋರಲಿಂಗಯ್ಯ,೨೦೧೫


೧.ದಸರಾ ಮೆರವನಿಗೆಯಲ್ಲಿ ಕುಡಿಯರ ಕುಣಿತ ಪ್ರದರ್ಶನ[https://www.deccanherald.com/state/srirangapatna-dasara-throwback-698368.html