ಕುಟಿಲ ಲಿಪಿ
ಕುಟಿಲ ಲಿಪಿ ಅಥವಾ ರಂಜನಾ ಲಿಪಿ[೧]ಒಂದು ವಿಶೇಷ ರೀತಿಯ ನಾಗರೀ ಲಿಪಿ.[೧] ಸುಮಾರು 6ನೆಯ ಶತಮಾನದಿಂದ 9ನೆಯ ಶತಮಾನದವರೆಗೆ ಇದು ಉತ್ತರ ಭಾರತದಲ್ಲಿ ಪ್ರಚಲಿತವಾಗಿತ್ತು. ಅಕ್ಷರಗಳ ನೇರ ಗೆರೆಗಳೆಲ್ಲ ಕೆಳಭಾಗದಲ್ಲಿ ಬಲಕ್ಕೆ ಬಾಗಿದಂತಿರುವುದೂ, ಸಂಯುಕ್ತ ಸ್ವರಚಿಹ್ನೆಗಳು ಉದ್ದಕ್ಕೆ ಅಂಕುಡೊಂಕಾಗಿರುವುದೂ ಇದರ ವೈಶಿಷ್ಟ್ಯ. ಈ ರೀತಿಯ ಅಕ್ಷರಗಳ ವಕ್ರರೂಪದಿಂದಲೇ ಈ ಲಿಪಿಗೆ ಕುಟಿಲ ಎಂಬ ಹೆಸರು ರೂಢವಾದಂತೆ ಕಾಣುತ್ತದೆ.
Rañjanā | |
---|---|
![]() | |
ವರ್ಗ | Abugida |
ಭಾಷೆಗಳು | Newar Sanskrit Tibetan |
ಸಮಯಾವದಿ | c. 1100–present |
Parent systems | |
Child systems | Soyombo |
Sister systems | Prachalit Litumol |

ಪ್ರಾರಂಭಿಕ ಕಾಲಸಂಪಾದಿಸಿ
ಕುಟಿಲ ಲಿಪಿಯ ಪ್ರಾರಂಭಿಕ ಘಟ್ಟವನ್ನು ಯಶೋವರ್ಮನ ಮಂಡಸೋರ್ ಶಿಲಾಲೇಖದಲ್ಲೂ ಮಹಾನಾಮನ ಬುದ್ದಗಯೆಯ ಶಾಸನಗಳಲ್ಲೂ ಕಾಣಬಹುದು. ಮೌಖರಿ ಅರಸರ ಶಾಸನಗಳು, ಹರ್ಷವರ್ಧನನ ತಾಮ್ರಪಟಗಳು, ಚಂಬಾದ ಮೇರುವರ್ಮನ ಶಾಸನಗಳು, ಮಾಳವ ಮತ್ತು ರಾಜಾಸ್ಥಾನದಲ್ಲಿ ದೊರಕಿರುವ ಪ್ರತಿಹಾರ ರಾಜರ ಶಾಸನಗಳು, ಜಪಾನಿನಲ್ಲಿ ಹೊರ್ಯುಜೀ ಬೌದ್ಧ ಮಂದಿರದಲ್ಲಿಟ್ಟಿರುವ ಪ್ರಜ್ಞಾಪಾರಮಿತ, ಹೃದಯ ಸೂತ್ರ ಮತ್ತು ಉಷ್ಣೀಪ ವಿಜಯ ಎಂಬ ಹಸ್ತಪತ್ರಿಗಳು- ಇವೆಲ್ಲ ಈ ಲಿಪಿಯಲ್ಲೇ ಇವೆ. ಇಂದಿನ ದೇವನಾಗರೀ ಅಕ್ಷರಗಳ ಮೂಲರೂಪಗಳು ಈ ಲಿಪಿಯಲ್ಲಿ ಕಂಡುಬರುತ್ತವೆ.
ಅಕ್ಷರಗಳುಸಂಪಾದಿಸಿ
ಸ್ವರಾಕ್ಷರಗಳುಸಂಪಾದಿಸಿ
a अ | aḥ अः | ā आ | āḥ आः | i इ | ī ई | u उ | ū ऊ | ṛ ऋ | ṝ ॠ | |
ḷ ऌ | ḹ ॡ | e ए | ai ऐ | o ओ | au औ | å अँ | aṃ अं | aī अय् | a:j आय् | aĪ एय् |
ವ್ಯಂಜನಗಳುಸಂಪಾದಿಸಿ
k क | kh ख | g ग | gh घ | ṅ ङ |
c च | ch छ | j ज | jh झ | ñ ञ |
ṭ ट | ṭh ठ | ḍ ड | ḍh ढ | ṇ ण |
t त | th थ | d द | dh ध | n न |
p प | ph फ | b ब | bh भ | m म |
y य | r र | l ल | v व | |
ś श | ṣ ष | s स | h ह |
kṣ क्ष | tr त्र | jñ ज्ञ |
ಅಂಕೆಗಳುಸಂಪಾದಿಸಿ
0 ० | 1 १ | 2 २ | 3 ३ | 4 ४ | 5 ५ | 6 ६ | 7 ७ | 8 ८ | 9 ९ |
ಉಲ್ಲೇಖಗಳುಸಂಪಾದಿಸಿ
ಬಾಹ್ಯ ಸಂಪರ್ಕಗಳುಸಂಪಾದಿಸಿ
- Ranjana script
- Newari/Ranjana script page on Omniglot
- N3649: Preliminary proposal for encoding the Rañjana script in the SMP of the UCS
- Ranjana script
- Akṣara List of the Manuscript of Aṣṭasāhasrikāprajñāpāramitā, ca. the 11-12th Centuries, Collection of Sanskrit Mss. Formerly Preserved in the China Ethnic Library
- Akṣara List of the Sanskrit Inscriptions of Feilai peak, Hangzhou, China ( 1282-1292 CE)
- Lantsha script