ಕುಂಬಳೆ ಸುಂದರ ರಾವ್

ಯಕ್ಷಗಾನ ಕಲಾವಿದ

  ಕುಂಬಳೆ ಸುಂದರ ರಾವ್ ಅಥವಾ ಕುಂಬ್ಳೆ ಸುಂದರ ರಾವ್ (ಜನನ:೨೦ ಮಾರ್ಚ್, ೧೯೩೪ - ಮರಣ:೩೦ ನವೆಂಬರ್, ೨೦೨೨) [೧] ಒಬ್ಬ ಭಾರತೀಯ ರಾಜಕಾರಣಿ ಮತ್ತು ಯಕ್ಷಗಾನ (ಸಾಂಪ್ರದಾಯಿಕ ನೃತ್ಯ) ಹಾಗೂ ತಾಳ-ಮದ್ದಳೆ ಕಲಾವಿದರಾಗಿದ್ದರು. ಅವರು ಯಕ್ಷಗಾನದ ತೆಂಕುತಿಟ್ಟು ಅಥವಾ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದರು. ಅವರು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯವರು. ೧೯೯೪ ರಿಂದ ೧೯೯೯ ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ

ಜೀವನ ಬದಲಾಯಿಸಿ

ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಜನಿಸಿದರು

ಸಾಧನೆ ಬದಲಾಯಿಸಿ

  • ೧೯೯೪ ರಿಂದ ೧೯೯೯ ರವರೆಗೆ ಸುರತ್ಕಲ್ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.
  • ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ (ಯಕ್ಷಗಾನ ತಂಡಗಳು) ಕಲಾವಿದರಾಗಿ ಕೆಲಸ ಮಾಡಿದವರು.
  • ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. [೨]
  • ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದಾರೆ.

ಗೌರವ/ಪ್ರಶಸ್ತಿ ಪುರಸ್ಕಾರಗಳು ಬದಲಾಯಿಸಿ

  • ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ ೨೦೧೮–೨೦೧೯ ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಮಾಡಲಾಯಿತು. [೩]

ಉಲ್ಲೇಖಗಳು ಬದಲಾಯಿಸಿ

  1. Yakshagana artist Kumble Sundar Rao passes away
  2. "Udupi: Kumble Sundar Rao Frustrated over Neglect of Yakshagana Academy". www.daijiworld.com. Retrieved 9 January 2020.
  3. "Yakshamangala award for renowned artistes". Deccan Herald, English Newspaper. Retrieved 9 January 2020.