ಕುಂಬಳಕಾಯಿ ಆಟ: ಈ ಆಟವು ತುಳುನಾಡಿನ ಜಾನಪದ ಆಟಗಳಲ್ಲಿ ಒಂದು. ಈ ಆಟವನ್ನು ಎಷ್ಟು ಜನ ಬೇಕಾದರೂ ಆಟವಾಡಬಹುದು. ಇದೊಂದು ಹೊರಾಂಗಣ ಆಟವಾಗಿದೆ. []

ಕುಂಬಳಕಾಯಿ ಆಟ
Genre(s)ಹೊರಾಂಗನ ಆಟ
ಆಟಗಾರರುಮಿತಿ ಇಲ್ಲ
ವಯಸ್ಸಿನ ವ್ಯಾಪ್ತಿ3+
ಆಟದ ಸಮಯ< 60 min

ಆಟವಾಡಲು ಎಷ್ಟು ಜನ ಬೇಕು ?

ಬದಲಾಯಿಸಿ

ಈ ಆಟದಲ್ಲಿ ಆಟಗಾರರ ಮಿತಿ ಇಲ್ಲ . ಎಷ್ಟು ಜನ ಬೇಕಾದರೂ ಆಟವಾಡಬಹುದು.

ಆಟ ಆಡುವುದು ಹೇಗೆ?

ಬದಲಾಯಿಸಿ

ಆಟವಾಡಲು ಸೇರಿದ ಆಟಗಾರರಲ್ಲಿ ಒಬ್ಬರನ್ನು ಬಿಟ್ಟು ಉಳಿದ ಎಲ್ಲಾ ಆಟಗಾರರು ವೃತ್ತಾಕಾರದಲ್ಲಿ ಕೈ ಹಿಡಿದು ಸಿ೦ತುಕೊಳ್ಳುಬೇಕು. ಆಗ ಅವರಲ್ಲಿ ಒಬ್ಬನು ವೃತ್ತವನ್ನು ಸೇರದವ್ಯಕ್ತಿ ವೃತದ ಸುತ್ತ ಓಡಾಡುತ್ತಾ "ಕುಂಬಳಕಾಯಿ ಉ೦ಟಾ" ಎಂದು ಕೇಳುತ್ತಾನೆ. ಆಗ ವೃತ್ರದಲ್ಲಿದ್ದದರು. "ಬೀಜ ನೆಟ್ಟದ್ದು ಮಾತ್ರ” ಎನ್ನುತ್ತಾರೆ, ಸುತ್ತುತ್ತಿರುವವನು ಮತ್ತೆ. "ಕುಂಬಳಕಾಯಿ ಉ೦ಟೆ" ಎಂದು ಕೇಳುತ್ತಾನೆ. ವೃತ್ತದಲ್ಲಿದ್ದವರು "ಗಿಡ ಆಗಿದೆ ಅಷ್ಟೆ" ಎನ್ನುತ್ತಾರೆ. ಓಡುವವನು ಮತ್ತೆ ಸುತ್ತುತ್ತಾ "ಕುಂಬಳಕಾಯಿ ಉ೦ಟೆ" ಎಂದು ಮತ್ತೆ ಪ್ರಶ್ನಿಸುತ್ತಾನೆ. ವೃತ್ತದಲ್ಲಿದ್ದವರು "ಗಿಡ ಬೆಳೆದಿದೆ" ಎನ್ನುತ್ತಾರೆ. ಓಡುವವನು ಮತ್ತೆ ಸುತ್ತುತ್ತಾ ಪ್ರಶ್ನಿಸಿದಾಗ "ಗಿಡ ಬೆಳೆದಿದೆ", "ಹೂ ಆಯಿತು", "ಕಾಯಿ ಆಯಿತು", "ಕಾಯಿ ಬೆಳೆಯಿತು" ಹೀಗೆ ಉತ್ತರಿಸುತ್ತಾರೆ... ಕೊನೆಗೆ ವೃತ್ತದಲ್ಲಿದ್ದವರು "ನಿನಗೆ ಬೇಕಾದ್ದನ್ನು ಆರಿಸಿಕೊ" ಎನ್ನುತ್ತಾರೆ. ಆಗ ವೃತ್ತದ ಸುತ್ತ ಓಡುತ್ತಿರುವವನು ವೃತ್ತದಲ್ಲಿರುವವರನ್ನು ಎಳೆದುಕೊಳ್ಳಬೇಕು. ಹೀಗೆ ಎಳೆದುಕೊ೦ಡವನು ಮತ್ತೆ ಓಡಿ ಆಟ ಮು೦ಂದುವರಿಸಬೇಕು.[]

ಬೇರೆ ಬಾಷೆಯಲ್ಲಿ ಆಟದ ಹೆಸರು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಕುಂಬಳಕಾಯಿ ಆಟ". Retrieved 8 July 2024.
  2. Thulunadina Janapada Atagalu (PDF). Shetty, Gananatha. Retrieved 8 July 2024.