ಕೀಲುರೋಗಶಾಸ್ತ್ರ
The examples and perspective in this article may not represent a worldwide view of the subject. |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(August 2008) |
ಕೀಲುರೋಗಶಾಸ್ತ್ರ ವು ಆಂತರಿಕ ವೈದ್ಯಕೀಯದ ಮತ್ತು ಮಕ್ಕಳರೋಗಶಾಸ್ತ್ರದ ಅಧ್ಯಯನವಾಗಿದ್ದು, ಕೀಲುಗಳು, ಮಾಂಸಖಂಡಗಳು ಮತ್ತು ಮೂಳೆಗಳಿಗೆ ಸಂಬಂಧಿಸಿದ ರೋಗಗಳ ಲಕ್ಷಣ ತಿಳಿಯುವಿಕೆ ಮತ್ತು ಚಿಕಿತ್ಸೆಗೆ ಮೀಸಲಾದ ವೈದ್ಯಕೀಯ ಶಾಸ್ತ್ರದ ಒಂದು ಉಪ-ವಿಶೇಷ ವಿಭಾಗವಾಗಿದೆ. ಕೀಲುರೋಗಶಾಸ್ತ್ರದಲ್ಲಿ ವಿಶೇಷ ಪರಿಣತಿ ಪಡೆದವರನ್ನು ಕೀಲುರೋಗತಜ್ಞರು ಎಂದು ಕರೆಯಲಾಗುತ್ತದೆ. ಕೀಲುರೋಗತಜ್ಞರು ಕೀಲುಗಳು, ಮೃದು ಟಿಷ್ಯೂಗಳು, ಕೆಲವು ಸ್ವಯಂ ಆಬಾಧಿತ ಕಾಯಿಲೆಗಳು, ಮತ್ತು ಜೋಡಕ ಟಿಷ್ಯೂಗಳಿಗೆ ಸಂಬಂಧಿತವಾದ ಸ್ಥಿತಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಪ್ರಮುಖವಾಗಿ, ಅವರು ಮಾಂಸಖಂಡಾಸ್ಥಿವ್ಯವಸ್ಥೆಯನ್ನು ಬಾಧಿಸುವ ಕಾಯಿಲೆಗಳು ಮತ್ತು ಅವ್ಯವಸ್ಥೆಗಳಿಗೆ ಚಿಕಿತ್ಸೆ ನೀಡುತ್ತಾರೆ ಇದು ಹಲವಾರು ಸ್ವಯಂನಿರೋಧಕ ಕಾಯಿಲೆಗಳನ್ನು ಒಳಗೊಂಡಿವೆ, ಏಕೆಂದರೆ ಈ ಸ್ಥಿತಿಗಳು ಸಾಮಾನ್ಯವಾಗಿ ಕೀಲುರೋಗಕ್ಕೆ ಸಂಬಂಧಿಸಿದ ಬಾಧೆಗಳನ್ನು ಉಂಟುಮಾಡುತ್ತವೆ.
Occupation | |
---|---|
Names | Doctor, Medical Specialist |
Activity sectors | Medicine |
Description | |
Education required | Doctor of Medicine or Doctor of Osteopathy |
ರೂಮಟಾಲಜಿ ಎಂಬ ಪದವು ಗ್ರೀಕ್ ಪದವಾದ ರೂಮಾ ಮೂಲದ್ದಾಗಿದ್ದು, ಅದರ ಅರ್ಥವು "ನದಿ ಅಥವಾ ಹೊಳೆಯಂತೆ ಹರಿಯುವುದು" ಎಂದಿದೆ ಮತ್ತು ಅಡಿಟಿಪ್ಪಣಿಯು -ಆಲಜಿ , ಎಂದರೆ "ಅದರ ಆಧ್ಯಯನ." ಎಂದಿದೆ.
ರೂಮಟಾಲಜಿಯು ತ್ವರಿತವಾಗಿ ವೃದ್ಧಿಸುತ್ತಿರುವ ವೈದ್ಯಕೀಯ ವಿಶೇಷವಾಗಿದೆ; ಇದರ ವೃದ್ಧಿಗೆ ಕಾರಣಗಳು ಪ್ರಮುಖವಾಗಿ ಈ ಅವಸ್ಥೆಗಳ ಪ್ರತಿರೋಧಕತೆಗೆ ಸಂಬಂಧಿತವಾದ ವೈಜ್ಞಾನಿಕ ಸಂಶೋಧನೆಗಳೇ ಆಗಿವೆ. ಕೆಲವು ರೂಮಟಾಲಜಿ (ಕೀಲುರೋಗಶಾಸ್ತ್ರ)ಯ ಅವ್ಯವಸ್ಥೆಗಳು ಸಾಮಾನ್ಯವಾಗಿ ಪ್ರತಿರೋಧಕತೆಯ ಮೂಲಕವೇ ಉತ್ತಮವಾಗಿ ವಿವರಿಸಲು ಸಾಧ್ಯವಾದುದರಿಂದy, ಹಲವಾರು ಪ್ರಮುಖ ಕೀಲುನೋವಿನ ಅವ್ಯವಸ್ಥೆಗೆ ಸಂಬಂಧಿಸಿದ ರೋಗವೃದ್ಧಿವಿವರಗಳನ್ನು ಈಗ ಸ್ವಯಂ ಪ್ರತಿರೋಧಕ ವ್ಯವಸ್ಥೆಎಂಬ ಪದದಿಂದಲೇ ವಿವರಿಸುತ್ತಾರೆ, ಉದಾಹರಣೆಗೆ, as an ಸ್ವಯಂ ಪ್ರತಿರೋಧಕ ಕಾಯಿಲೆ ಎಂದಂತೆ. ಇದಕ್ಕೆ ಪ್ರತಿಯಾಗಿ ಬಹುತೇಕ ನೂತನ ಚಿಕಿತ್ಸಾ ವಿಧಿವಿಧಾನಗಳು ಪ್ರತಿರೋಧಕ ರೋಗವಿಧ ಸಂಶೋಧನೆಯ ಮೇಲೆ ಮತ್ತು ಕೀಲುರೋಗ ಅವ್ಯವಸ್ಥೆಯ ಉತ್ಪತ್ತಿಶಾಸ್ತ್ರದ ಸುಧಾರಿತ ಅರ್ಥೈಸಿಕೊಳ್ಳುವಿಕೆಯ ಫಲಿತದ ಮೇಲೆ ಆಧಾರಿತವಾಗಿವೆ. ಮುಂದಿನ ದಿನಗಳಲ್ಲಿ ಚಿಕಿತ್ಸಾವಿಧಿಯು ಜೀನ್ ಥೆರಪಿ(ವಂಶಾಣು ಚಿಕಿತ್ಸೆ)ಯನ್ನು ಸಹ ಸೇರಿಕೊಳ್ಳಬಹುದು. ಸಾಕ್ಷ್ಯಾಧಾರಿತ ಕೀಲುರೋಗ ಅವ್ಯವಸ್ಥೆಗಳ ವೈದ್ಯಕೀಯ ಚಿಕಿತ್ಸೆಯು ಕೀಲುರೋಗದಿಂದ ನರಳುತ್ತಿರುವ ರೋಗಿಗಳು ಮಾಮೂಲು ಜೀವನಕ್ಕೆ ಹತ್ತಿರವಾದ ಮಟ್ಟಕ್ಕೆ (ಬಹಳ ಕಡಿಮೆ ಬಾಧೆಗಳೊಡನೆ) ಜೀವಿಸಲು ಸಹಾಯಕವಾಗಿದೆ.
ಕೀಲುರೋಗ
ಬದಲಾಯಿಸಿಕೀಲುರೋಗ ಎಂಬುದು ಯಾವುದೇ ನೋವನ್ನುಂಟುಮಾಡುವ ಮತ್ತು ಚಲನಾ-ವ್ಯವಸ್ಥೆಗೆ ಬಾಧೆ ನೀಡುವ ರೋಗವನ್ನು ವರ್ಣಿಸಲು ಬಳಸುವ ಒಂದು ಅನಿರ್ದಿಷ್ಟ ಪದ. ಈ ಚಲಾಯಿಸುವ ವ್ಯವಸ್ಥೆಯು ಕೀಲುಗಳು, ಮಾಂಸಖಂಡಗಳು, ಜೋಡಕ ಟಿಷ್ಯೂಗಳು, ಮತ್ತು ಕೀಲುಗಳು ಮತ್ತು ಮೂಳೆಗಳ ಸುತ್ತಲಿನ ಮೆದು ಟಿಷ್ಯೂಗಳನ್ನು ಒಳಗೊಂಡಿದೆ. ಹೃದಯದ ಕವಾಟಗಳ ಮೇಲೆ ಪ್ರಭಾವ ಬೀರುವ ರೂಮಾಟಿಕ್ ಜ್ವರವನ್ನು ಸಹ ರೂಮಾಟಿಸಂ ಎಂದು ಕರೆಯಲಾಗುತ್ತದೆ. ಆದರೆ ವೈದ್ಯಕೀಯ ವೃತ್ತಿಯು ಕೀಲುರೋಗದ ಅವ್ಯವಸ್ಥೆಗಳನ್ನು ವರ್ಣಿಸಲು ನಿರ್ದಿಷ್ಟವಾದ ಪದಗಳನ್ನು ಬಳಸುತ್ತದೆ; ರೂಮಟಾಯ್ಡ್ ಆರ್ಥ್ರೈಟಿಸ್, ಆಂಕಿಲೋಸಿಂಗ್ ಸ್ಪಾಂಡಿಲೈಟಿಸ್, ಗೌಟ್ ಮತ್ತುಸಿಸ್ಟೆಮಿಕ್ ಲೂಪಸ್ ಎರಿಥೆಮಾಟೋಸಸ್ ಮುಂತಾದ ರೂಮಾಟಿಸಂ ವರ್ಣಿಸುವ ಪದಗಳು ವೈದ್ಯಕೀಯ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿವೆ.
ಕೀಲುರೋಗಶಾಸ್ತ್ರವು ಈಗ ಒಂದು ಮುಖ್ಯವಾದ ರೋಗಸಂಬಂಧಿತ ತಜ್ಞತೆಯಾಗಿ ಜಗತ್ತಿನಾದ್ಯಂತ ಗುರುತಿಸಲ್ಪಟ್ಟಿದೆ. ಈ ತಜ್ಞತೆಯು ತ್ವರಿತವಾಗಿ ಉತ್ತಮಗೊಳ್ಳುತ್ತಿದೆ ಹಾಗೂ ಸುವ್ಯವಸ್ಥಿತವಾಗುತ್ತಿದೆ;ಸೂಕ್ತವಾಗಿ ಕೈಗೊಳ್ಳುವ ಪದವಿ ಮುಗಿಸಿದವರಿಗೆ ತರಬೇತಿ ಕಾರ್ಯಕ್ರಮಗಳೂ ಈ ನಿಟ್ಟಿನಲ್ಲಿ ಸಹಾಯಕವಾಗಿವೆ. ರೂಮಟಾಲಜಿ ಸಂಬಂಧಿತ ಚಿಕಿತ್ಸಾಕ್ರಿಯೆಯಲ್ಲಿ ನಿರತರಾದವರನ್ನು ರೂಮಟಾಲಜಿಸ್ಟ್ಸ್ ಎಂದು ಕರೆಯುವುದು ಈಗ ಸುಸ್ಥಾಪಿತ ಪದವಾಗಿದೆ ಮತ್ತು ವೈದ್ಯಕೀಯ ಸಮುದಾಯಗಳು ಇದನ್ನು ಸಾಮಾನ್ಯವಾಗಿ ಬಳಸುತ್ತವೆ; ಈ ಪದವನ್ನು ಭಾಷೆಗಳಿಗೆಂದೇ ನಿರ್ಮಿಸಲ್ಪಟ್ಟ ನಿಘಂಟುಗಳಲ್ಲಿ ಸೂಕ್ತವಾಗಿ ವರ್ಣಿಸಿಲ್ಲವಾದರೂ ಈ ಪದವು ಸಾಕಷ್ಟು ಜಾರಿಯಲ್ಲಿದೆ. ವಿಶ್ವದಾದ್ಯಂತ ರೂಮಟಾಲಜಿಸ್ಟ್ (ಕೀಲುರೋಗತಜ್ಞರು)ಗಳು ಈಗ ದೀರ್ಘಕಾಲಿಕ ಕೀಲುರೋಗದ ಬಾಧೆಗಳನ್ನು ರೋಗಿಗಳಿಗೆ ಹೆಚ್ಚಿನ ಪರಿಹಾರವು ಸಿಗುವ ರೀತಿಯಲ್ಲಿ ಚಿಕಿತ್ಸೆ ನೀಡಲು ಸಮರ್ಥರಾಗಿದ್ದಾರೆ. ಇದಕ್ಕೆ ಕಾರಣವೆಂದರೆ ಕಾಯಿಲೆಯನ್ನು ಸುಧಾರಿಸುವ ಬಯಾಲಾಜಿಕ್ಸ್ ಎಂಬ ಹೊಸ ಸುಧಾರಕ ವಸ್ತುವಿನ ಸಂಶೋಧನೆಯಾಗಿದ್ದು, ಅದು ಈಗಾಗಲೇ ದೀರ್ಘಕಾಲಿಕ ಮತ್ತು ದುರ್ಬಲತೆ ಉಂಟುಮಾಡುವ ಕೀಲುಗಳ ಅವ್ಯವಸ್ಥೆಗೆ ಚಿಕಿತ್ಸೆಯ ಒಳ್ಳೆಯ ಕ್ರಮವೆಂದು ಸ್ಥಾಪಿತವಾಗಿದೆ. [ಸಾಕ್ಷ್ಯಾಧಾರ ಬೇಕಾಗಿದೆ].
ಕೀಲುರೋಗತಜ್ಞ
ಬದಲಾಯಿಸಿರೂಮಟಾಲಜಿಸ್ಟ್ (ಕೀಲುರೋಗತಜ್ಞ) ವೈದ್ಯಕೀಯ ಉಪ-ವಿಶೇಷ ವಿಭಾಗವಾದ ರೂಮಟಾಲಜಿ (ಕೀಲುರೋಗ)ದಲ್ಲಿ ಪರಿಣತಿ ಹೊಂದಿದ ವೈದ್ಯಕೀಯ ವ್ಯಕ್ತಿಯಾಗಿದ್ದು ಡಾಕ್ಟರ್ ಆಫ್ ಮೆಡಿಸನ್ (M.D.)ಪದವಿಯನ್ನೋ ಅಥವಾ ಡಾಕ್ಟರ್ ಆಫ್ ಆಸ್ಟಿಯೋಪಥಿಕ್ ಮೆಡಿಸನ್ (D.O. ಪದವಿಯನ್ನೋ ಪಡೆದವರಾಗಿರುತ್ತಾರೆ. ಇದರಲ್ಲಿ ತರಬೇತಿ ಪಡೆಯಲು ನಾಲ್ಕು ವರ್ಷ ಪದವಿಪೂರ್ವ ಶಾಲೆ, ನಾಲ್ಕು ವರ್ಷ ವೈದ್ಯಕೀಯ ಶಾಲೆ, ಮತ್ತು ನಂತರ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಮೂರು ವರ್ಷಗಳ ಕಾಲ ರೆಸಿಡೆನ್ಸಿ ಮತ್ತು ಎರಡರಿಂದ ಮೂರು ವರ್ಷಗಳ ಕಾಲ ಹೆಚ್ಚುವರಿ ಫೆಲೋಶಿಪ್ ತರಬೇತಿಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಪದವಿಯ ನಂತರ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಕೀಲುರೋಗಶಾಸ್ತ್ರದ ವಿಶೇಷ ತರಬೇತಿಗೆಂದು ಮೀಸಲಾಗಿಟ್ಟ ವರ್ಷಗಳ ಸಂಖ್ಯೆಯು (ಕಾಲಾವಧಿಯು), ಆಯಾ ದೇಶಗಳ ಬೇಡಿಕೆಗಳಿಗೆ ಅನುಗುಣವಾಗಿ ಬೇರೆ ಬೇರೆ ಅವಧಿಗಳಾಗಿರಬಹುದು. ಕೀಲುರೋಗತಜ್ಷರು ಆಸ್ಪತ್ರೆಯಲ್ಲೇ ಇರುವ ಸಹವೈದ್ಯರು ಅಥವಾ ಮಕ್ಕಳತಜ್ಞರಾಗಿದ್ದು ಹೆಚ್ಚುವರಿ ಪದವಿಯ ನಂತರದ ತರಬೇತಿಯನ್ನು ಪಡೆದು ಮತ್ತು ಸಂಧಿವಾತ ಮತ್ತು ಇತರ ಕೀಲು, ಮಾಂಸಖಂಡ ಮತ್ತು ಮೂಳೆಗಳ ಸಂಬಂಧಿತ ರೋಗಗಳ ಲಕ್ಷಣದರಿವು ಮತ್ತು ಚಿಕಿತ್ಸಾವಿಧಾನಗಳಲ್ಲಿ ಅನುಭವ ಪಡೆದಿರುತ್ತಾರೆ. ಹಲವಾರು ಕೀಲುರೋಗತಜ್ಞರು ಈ ದುರ್ಬಲಗೊಳಿಸುವ ಮತ್ತು ಕೆಲವೊಮ್ಮೆ ಮಾರಣಾಂತಕವಾದ ರೋಗಗಳ ಕಾರಣಗಳು ಮತ್ತು ಉತ್ತಮ ಚಿಕಿತ್ಸಾವಿಧಾನಗಳನ್ನು ಕಂಡುಕೊಳ್ಳಲು ಸಂಶೋಧನೆಗಳನ್ನು ನಡೆಸುತ್ತಾರೆ. ಚಿಕಿತ್ಸಾ ವಿಧಿವಿಧಾನಗಳು ವೈಜ್ಞಾನಿಕ ಸಂಶೋಧನೆಗಳ ಮೇಲೆ ಆಧಾರಿತವಾಗಿದ್ದು, ಈಗ, ಕೀಲುರೋಗದ ವೈದ್ಯಕೀಯವು ಬಹಳಷ್ಟು ಸಾಕ್ಷ್ಯಾಧಾರಿತವಾಗಿದೆ. ಈ ವಿಶೇಷತೆಯಲ್ಲಿ ವಿಶೇಷತೆಯನ್ನು ಹೊಂದಿದ ವೈದ್ಯವೃತ್ತಿಯವರನ್ನು ಕೀಲುರೋಗತಜ್ಞರು ಎಂದು ಕರೆಯುತ್ತಾರೆ.
ಕೀಲುರೋಗತಜ್ಞರು ಸಂಧಿವಾತ, ಕೆಲವು ಸ್ವಯಂನಿರೋಧಕ ಕಾಯಿಲೆಗಳು, ಮಾಂಸಖಂಡಾಸ್ಥಿ ನೋವಿನ ಅವ್ಯವಸ್ಥೆಗಳು ಮತ್ತು ಆಸ್ಟಿಯೋಪೋರೋಸಿಸ್ (ಮೂಳೆ ಸವೆತ)ಗಳಿಗೆ ಚಿಕಿತ್ಸೆ ನೀಡುತ್ತಾರೆ. ಈ ಕಾಯಿಲೆಯು 200ಕ್ಕೂ ಹೆಚ್ಚು ವಿಧಗಳಲ್ಲಿ ಕಾಣಿಸಿಕೊಳ್ಳುವಂತಹುದಾಗಿದ್ದು ಅವುಗಳಲ್ಲಿ ಕೀಲುರೋಗ ಸಂಧಿವಾತ, ಮೂಳೆಗಳ ಸಂಧಿವಾತ, ಗೌಟ್, ಲೂಪಸ್, ಬೆನ್ನು ನೋವು, ಮೂಳೆಗಳ ಸವೆತ, ಮತ್ತು ಟೆಂಡಿನೈಟಿಸ್ಗಳೂ ಸೇರಿವೆ. ಇವುಗಳಲ್ಲಿ ಕೆಲವು ಬಹಳ ಗಂಭೀರ ಕಾಯಿಲೆಗಳಾಗಿದ್ದು, ರೋಗದ ಲಕ್ಷಣ ಮತ್ತು ಚಿಕಿತ್ಸಾವಿಧಾನಗಳನ್ನು ಅರಿಯುವುದೇ ಕಷ್ಟವಾಗುತ್ತದೆ. ಅವರು ಮಾಂಸಖಂಡಾಸ್ಥಿ ವ್ಯವಸ್ಥೆಗೆ ಸಂಬಂಧಿತವಾದ ಮೃದು ಟಿಷ್ಯೂಗಳ ಸಮಸ್ಯೆಗಳಿಗೆ, ಕ್ರೀಡಾಸಂಬಂಧಿತ ಮೃದು ಟಿಷ್ಯೂ ಅನ್ಯವಸ್ಥೆಗಳಿಗೆ ಚಿಕಿತ್ಸೆ ನೀಡುತ್ತಾರೆ; ಈ ವಿಶೇಷತೆಯು ಫಿಸಿಯೋಥೆರಪಿ (ದೈಹಿಕ ಚಿಕಿತ್ಸೆ), ದೈಹಿಕ ಔಷಧ ಮತ್ತು ದುರ್ಬಲ ರೋಗಿಗಳ ಪುನರ್ವಸತಿಗಳೊಡನೆ ಪರಸ್ಪರ ಹೆಣೆದುಕೊಂಡಿದೆ. ರೋಗಿಗಳಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳು ಮತ್ತು ಉದ್ಯೋಗಸಂಬಂಧಿತ ಚಿಕಿತ್ಸೆಗಳು ಸಹ ಈ ವಿಶೇಷತೆಯೊಡನೆ ಹಾಸುಹೊಕ್ಕಾಗಿವೆ.
ಕೀಲುರೋಗತಜ್ಞರನ್ನು ಪ್ರತಿನಿಧಿಸುವಂತಹ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ವಿಶ್ವದಾದ್ಯಂತ ಇವೆ. ದ ಅಮೆರಿಕನ್ ಕಾಲೇಜ್ ಆಫ್ ರೂಮಟಾಲಜಿ ( ACR), ದ ಅಸೋಸಿಯೇಷನ್ ಆಫ್ ರೂಮಟಾಲಜಿ ಹೆಲ್ತ್ ಪ್ರೊಫೆಷನಲ್ಸ್ (ARHP), ದ ಯೂರೋಪಿಯನ್ ಲೀಗ್ ಎಗೇನೆಸ್ಟ್ ರೂಮಾಟಿಸಂ (EULAR), ಏಷ್ಯಾ ಪೆಸಿಫಿಕ್ ಲೀಗ್ ಆಫ್ ಅಸೋಸಿಯೇಷನ್ಸ್ ಫಾರ್ ರೂಮಟಾಲಜಿ (APLAR), ಇಂಟರ್ನ್ಯಾಷನಲ್ ಲೀಗ್ ಆಫ್ ಅಸೋಸಿಯೇಷನ್ ಫಾರ್ ರೂಮಟಾಲಜಿ (ILAR) ಪ್ರಮುಖ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗಳಾಗಿದ್ದು, ಈ ವಿಶೇಷತೆಗೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆ; ಈ ಸಂಸ್ಥೆಗಳು ಕೀಲುರೋಗಶಾಸ್ತ್ರದ ಯತ್ನಗಳನ್ನು ಪ್ರಚಾರ ಮಾಡಲು ಮತ್ತು ದೃಢಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ದುಡಿಯುತ್ತಿವೆ. ಅಷ್ಟೇ ಅಲ್ಲದೆ, ಇಡೀ ಜಗತ್ತಿನಲ್ಲಿ ಚೆಲ್ಲಾಪಿಲ್ಲಿಯಾದಂತಿರುವ ಪ್ರತಿಯೊಂದು ದೇಶದ ಕೀಲುರೋಗತಜ್ಞರನ್ನು ಪ್ರತಿನಿದಿಸುವ ಕೀಲುರೋಗಶಾಸ್ತ್ರದ ಸಂಸ್ಥೆಗಳು ಮತ್ತು ಕಾಲೇಜುಗಳು ಇದ್ದು, ಅವುಗಳು ಮೇಲೆ ಕಾಣಿಸಿದಂತಹ ಸಂಸ್ಥೆಗಳನ್ನು ಪ್ರತಿ ದೇಶದಿಂದಲೂ ಪ್ರತಿನಿಧಿಸುತ್ತವೆ. ಕೀಲುರೋಜತಜ್ಞರು ಕೀಲುರೋಗದ ವಿವಿಧ ಕಾಯಿಲೆಗಳಲ್ಲಿ ವಿಶೇಷ ಪರಿಣತಿಯನ್ನು ಪಡೆದ ವೈದ್ಯರು.
ಉದಾಹರಣೆಗೆ, UKಯಲ್ಲಿ ಸುಮಾರು 480 ಸಲಹಾಗಾರ ಕೀಲುರೋಗತಜ್ಞರಿದ್ದಾರೆ.ವಯೋವೃದ್ಧರ ಜನಸಂಖ್ಯೆಯು ಹೆಚ್ಚಾಗುತ್ತಿದ್ದು, ಅವರಿಗೆ ವಿಶೇಷವಾದ ಚಿಕಿತ್ಸೆಯ ಅಗತ್ಯವಿರುವುದರಿಂದ ಈ ಕ್ಷೇತ್ರದಲ್ಲಿನ ವಿಶೇಷ ತಜ್ಞರಿಗೆ ಬಹಳವೇ ಬೇಡಿಕೆ ಇದೆ; ಆದ್ದರಿಂದ ಎಲ್ಲಾ ದೇಶಗಳಲ್ಲೂ ಕೀಲುರೋಗತಜ್ಞರ ಸಂಖ್ಯೆ ಹೆಚ್ಚುತ್ತಿದೆ.
ರೋಗಗಳು
ಬದಲಾಯಿಸಿಕೀಲುರೋಗತಜ್ಞರು ಚಿಕಿತ್ಸೆ ನೀಡುವ ಅಥವಾ ನಿಭಾಯಿಸುವ ರೋಗಲಕ್ಷಣಗಳು ಮತ್ತು ರೋಗಗಳು ಯಾವುವೆಂದರೆ:
- ಕೀಲುಗಳ ಸಂಧಿವಾತ
- ಲೂಪಸ್ (ಒಂದು ಬಗೆಯ ಚರ್ಮರೋಗ)
- ಸ್ಜೋಗ್ರೆನ್ ನ ಲಕ್ಷಣಗಳು
- ಸ್ಕ್ಲೆರೋಡರ್ಮಾ (ಸಿಸ್ಟಮಿಕ್ ಸ್ಕ್ಲೆರಾನಿಸ್ - ಚರ್ಮ ದಪ್ಪ ಹಾಗೂ ಗಡುಸಾಗುವ ರೋಗ))
- ಡರ್ಮಟೋಮಯೋಸೈಟಿಸ್ (ಚರ್ಮ ಮತ್ತು ಮಾಂಸಖಂಡಗಳು ಊದುವ ಕೀಲು-ಸ್ನಾಯು ರೋಗ)
- ಪಾಲಿಖಾಂಡ್ರೈಟಿಸ್ (ಮೃದುವಾದ ಎಲುಬುಗಳ ನೋವು)
- ಪಾಲಿಮಯೋಸೈಟಿಸ್ (ಮಾಂಸಖಂಡಗಳ ರೋಗ)
- ಪಾಲಿಮಯಾಲ್ಜಿಯಾ ರೂಮ್ಯಾಟಿಕಾ(ಭುಜ, ಕತ್ತು, ಸೊಂಟಗಳ ಮಾಂಸಖಂಡಗಳ ನೋವು)
- ಮೂಳೆಗಳ ಸಂಧಿವಾತ
- ಕೀತ ಸಂಧಿವಾತ
- ಸಾರ್ಕಾಯ್ಡಸಿಸ್(
- ಗೌಟ್, ಸ್ಯೂಡೋಗೌಟ್
- ಸ್ಪಾಂಡಿಲೋಆರ್ಥ್ರೋಪಥೀಸ್
- ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್
- ಪ್ರತಿಸ್ಪಂದಕ ಸಂಧಿವಾತ (ಉರುಫ್ **ರಿಯಾಕ್ಟಿವ್ ಆರ್ಥ್ರೋಪಥಿ)
- ಸೋರಿಯಾಟಿಕ್ ಆರ್ಥ್ರೋಪಥಿ
- ಎಂಟೆರೋಪಥಿಕ್ ಸ್ಪಾಂಡಿಲೈಟಿಸ್
- ವ್ಯಾಸ್ಕುಲೈಟಿಸ್ (ರಕ್ತನಾಳಗಳಿಗೆ ಸಂಬಂಧಿತ ರೋಗಗಳು)
- ಅನೇಕ ಅಪಧಮನಿಯೂತ ಗಂಟುಗಳ ರೋಗ
- ಹೆನೋಕ್-ಸ್ಕಾನ್ಲೆನ್ ಪುರ್ಪುರಾ
- ರಕ್ತಸಾರದ ಕಾಯಿಲೆ
- ವೆಗೆನರ್ಸ್ ಗ್ರ್ಯಾನ್ಯುಲೋಮಟೋಸಿಸ್
- ಬೃಹತ್ ಕೋಶದ ಅಪಧಮನಿಯೂತ
- ತಾತ್ಕಾಲಿಕ ಸಂಧಿವಾತ
- ಟಕಾಯಾಸೂಸ್ ಅಪಧಮನಿಯೂತ
- ಬೆಹ್ಸೆಟ್ ನ ಲಕ್ಷಣಗಳು
- ಕಾವಾಸಾಕೀಯ ಕಾಯಿಲೆ (ಮ್ಯೂಕೋಕರ್ಟೇನಿಯಸ್ ಲಿಂಫ್ ನೋಡ್ ಸಿಂಡ್ರೋಂ)
- ಬುಎರ್ಗರ್ ನ ಕಾಯಿಲೆ (ಥ್ರಾಂಬೋಆಂಜಿಐಟಿಸ್ ಆಬ್ಲಿಟೆರಾನ್ಸ್)
ಮಕ್ಕಳ ಮಾನಸಿಕ/ದೈಹಿಕ ವಿಲಕ್ಷಣ ಸಂಧಿವಾತ(JIA) ;
( JIA ಮಕ್ಕಳನ್ನು ಬಾಧಿಸುವ ಬಹಳಷ್ಟು ವಿಧದ ಸಂಧಿ ಅವ್ಯವಸ್ಥೆಗಳನ್ನು ಒಳಗೊಂಡಿದೆ)
ಕೀಲುಗಳ ಸಂಧಿವಾತ;
ಮೃದು ಟಿಷ್ಯೂ ಕೀಲುರೋಗ; (ರೋಗಗಳನ್ನು ಮತ್ತು ವ್ರಣಗಳನ್ನು ಸ್ಥಾನಿಕಗೊಳಿಸುವುದರಿಂದ ಕೀಲುಗಳಿಗೆ ಆಗುವ ಬಾಧೆಗಳು ಮತ್ತು ಕೀಲುಗಳ ಸುತ್ತಲಿನ ರಚನೆಗಳು, ಸ್ನಾಯುಗಳು, ನರಗಳು, ಅಸ್ಥಿಬಂಧಕಗಳು, ಕ್ಯಾಪ್ಸ್ಯೂಲ್ ಗಳು, ಬರ್ಸೇ, ಒತ್ತಡದಿಂದಾದ ಮುರಿಯುವಿಕೆಗಳು, ಮಾಂಸಖಂಡಗಳು, ನರಗಳ ತುದಿಗಳು, ರಕ್ತನಾಳಗಳ ವ್ರಣಗಳು, ಗ್ಯಾಂಗ್ಲಿಯಾನ್, ಜೋಡಕ ಟಿಷ್ಯೂ ಅಸಾಮಾನ್ಯತೆಗಳು ಮತ್ತು ಸ್ಥಾನಿಕ ಟಿಷ್ಯೂ ಅವ್ಯವಸ್ಥೆಗಳು, ಮುಂತಾದವು)
ಮೂಳೆಗಳನ್ನು ಬಾಧಿಸುವ ಕಾಯಿಲೆಗಳು;
ಆಸ್ಟಿಯೋಪೋರೋಸಿಸ್, ಆಸ್ಟಿಯೋಮಾಲಾಷಿಯಾ, ರೀನಲ್ ಆಸ್ಟಿಯೋಡಿಸ್ಟ್ರೊಫಿ, ಫ್ಲೋರೋಸಿಸ್, ರಿಕೆಟ್ಸ್, ಮುಂತಾದವು.
ಹುಟ್ಟಿನಿಂದ ಮತ್ತು ಕುಟುಂಬದಿಂದ ಸಂದ ಕೀಲುಗಳ ಮೇಲೆ ಪರಿಣಾಮ ಬೀರುವ ಅವ್ಯವಸ್ಥೆಗಳು;
ಹೈಪರ್ ಎಕ್ಸ್ ಟೆನ್ಸಿಬಲ್ ಕೀಲುಗಳು;
ಎಹ್ಲೆರ್ಸ್-ಡ್ಯಾನಿಯೋಸ್ ಲಕ್ಷಣ,ಅಖಾಂಡ್ರೋಪ್ಲಾಸಿಸಾ, ಮಾರ್ಫನ್ ನ ಲಕ್ಷಣ, ಮುಂತಾದವು.
ರೋಗನಿರ್ಣಯ
ಬದಲಾಯಿಸಿಸಾಕಷ್ಟು ವಿಸ್ತೃತವಾದ ವೈದ್ಯಕೀಯ ಚರಿತ್ರೆಯಲ್ಲದೆ, ರೋಗಲ್ಷಣಗಳನ್ನು ಅರಿಯಲು ಪ್ರಯೋಜನಕಾರಿ ವಿಧಗಳು ಇದ್ದು ಕೆಲವು ದೈಹಿಕ ತಪಾಸಣೆಯಲ್ಲಿ ಸರಳವಾಗಿ ಮಾಡಬಹುದಾದವು ಮತ್ತು ಕೆಲವು ಕೀಲುರೋಗತಜ್ಞರು ಮತ್ತು ಇತರ ಪರಿಣಿತ ದೇಹಶಾಸ್ತ್ರಬಲ್ಲವರ ತಿಳುವಳಿಕೆಯನ್ನು ಒರೆಗೆ ಹಚ್ಚುವಷ್ಟು ಸಂಕೀರ್ಣವಾದಂತಹವು ಆಗಿರುತ್ತವೆ.
ದೈಹಿಕ ತಪಾಸಣೆ
ಬದಲಾಯಿಸಿಮಾಮೂಲು ದೈಹಿಕ ತಪಾಸಣೆಗಳಲ್ಲಿ ರೋಗಲಕ್ಷಣಗಳನ್ನು ಕಂಡುಹಿಡಿಯಲು ಅನುಸರಿಸಲು ಸಾಧ್ಯವಾಗುವ ಕೆಲವು ವಿಧಿಗಳ ಉದಾಹರಣೆಗಳು ಈ ಕೆಳಕಂಡಂತಿವೆ.
- ಸ್ಕೋಬರ್ ನ ತಪಾಸಣೆಯಲ್ಲಿ ಬೆನ್ನಿನ ಕೆಳಭಾಗದ ಬಾಗುವಿಕೆಯನ್ನು ಪರೀಕ್ಷಿಸಲಾಗುತ್ತದೆ..
- ಅನೇಕ ಕೀಲುಗಳ ತಪಾಸಣೆ
- ಮಾಂಸಖಂಡಾಸ್ಥಿ ಪರೀಕ್ಷಣೆ
- ಸ್ಕ್ರೀನಿಂಗ್ ಮಾಂಸಖಂಡಾಸ್ಥಿ ಪರೀಕ್ಷೆ (SMSE) - ರಚನೆ ಮತ್ತು ಕಾರ್ಯಾತ್ಮಕತೆಯ ಒಂದು ತ್ವರಿತ ನಿಷ್ಕರ್ಷೆ
- ಸಾಮಾನ್ಯ ಮಾಂಸಖಂಡಾಸ್ಥಿ ಪರೀಕ್ಷೆ (GMSE) - ಕೀಲು ಊತದ ಸಮಗ್ರ ನಿಷ್ಕರ್ಷೆ
- ಸ್ಥಾನಿ ಮಾಂಸಖಂಡಾಸ್ಥಿ ಪರೀಕ್ಷೆ (RMSE)- ರಚನೆ, ಕಾರ್ಯವಿಧಿ ಮತ್ತು ಊತದ ಕೇಂದ್ರೀಕೃತ ನಿಷ್ಕರ್ಷೆ - ವಿಶೇಷ ತಪಾಸಣೆಗಳೊಂದಿಗೆ.
ವಿಶೇಷವಾದವು
ಬದಲಾಯಿಸಿ- ಪ್ರಯೋಗಾಲಯಗಳ ಪರೀಕ್ಷೆಗಳು (ಉದಾಹರಣೆಗೆ. ಎರಿಥ್ರೋಸೈಟ್ ಮಡ್ಡಿಗೊಳ್ಳುವ ತೀವ್ರತೆ, ಕೀಲುರೋಗದ ಅಂಶ, ಆಂಟಿ-CCP (ಆಂಟಿ-ಸೈಕ್ಲಿಕ್ ಸಿಟ್ರಲ್ಲಿನೇಟೆಡ್ ಪೆಪ್ಟೈಡ್ ಆಂಟಿಬಾಡಿ), ANA (ಆಂಟಿ-ನ್ಯೂಕ್ಲಿಯರ್ ಆಂಟಿಬಾಡಿ) )
- ಬಾಧೆಗೊಳಗಾಗಿರುವ ಕೀಲುಗಳಕ್ಷ-ಕಿರಣಗಳು ಮತ್ತು ಇತರ ಬಿಂಬಿಸುವ ವಿಧಾನಗಳು
- ಬಾಧೆಗೊಳಗಾದ ಕೀಲುಗಳಿಂದ ಹೊರತೆಗೆದ ದ್ರಾವಣದ ಸೈಟೋಪೆಥಾಲಜಿ ಮತ್ತು ರಾಸಾಯನಿಕ ಪೆಥಾಲಜಿ(ಉದಾಹರಣೆಗೆ ಕೀವುಗೊಂಡ ಸಂಧಿವಾತ ಮತ್ತು ಗೌಟ್ ನ ನಡುವಿನ ವ್ಯತ್ಯಾಸವರಿಯಲು)
ಚಿಕಿತ್ಸಾಕ್ರಮ
ಬದಲಾಯಿಸಿಬಹುತೇಕ ಕೀಲುರೋಗದ ಕಾಯಿಲೆಗಳಿಗೆ ಅನಾಲ್ಜೆಸಿಕ್ಗಳನ್ನು ನೀಡಲಾಗುತ್ತದೆ, NSAIDಗಳು (ಸ್ಟೆರಾಯ್ಡ್ ಅಲ್ಲದ ಊತ ತಗ್ಗಿಸುವ ಔಷಧಿಗಳು), ಸ್ಟೆರಾಯ್ಡ್ ಗಳು (ಬಹಳ ತುರ್ತು/ಗಂಬೀರ ಸಂದರ್ಭಗಳಲ್ಲಿ), DMARDಗಳು (ಕಾಯಿಲೆ ಸುಧಾರಿಸುವ ಕೀಲುರೋಗವಿರೋಧಿ ಔಷಧಿಗಳು), ಏಕರೂಪಿ ಪ್ರತಿರೋಧಕಗಳು, ಇವುಗಳೆಂದರೆ ಇಂಪ್ಲಿಕ್ಸಿಮಾಬ್ ಮತ್ತು ಅಡಲಿಮುಮಾಬ್, ಹಾಗೂ ಕರಗುವಂತಹ TNF ರಿಸೆಪ್ಟರ್ ಗಳಾದ ಎಟಾನೆರ್ಸೆಪ್ಟ್ ಮತ್ತು ಮೀಥೋಟ್ರೆಕ್ಸೇಟ್. ಇವುಗಳನ್ನು ಮಧ್ಯಮದಿಂದ ತೀವ್ರವಾದ ಕೀಲುರೋಗ ಸಂಧಿವಾತ [೧]ದಿಂದ ನರಳುತ್ತಿರುವವರಿಗೆ ನೀಡಬಹುದು. ಬಯೋಲಾಜಿಕ್ ವಸ್ತುವಾದ ರಿಟುಕ್ಸಿಮಾಬ್ (ಆಂಟಿ-B-ಸೆಲ್ ಥೆರಪಿ) ಈಗ ರಿಫ್ರ್ಯಾಕ್ಟರಿ ರೂಮಟಾಯ್ಡ್ ಸಂಧಿವಾತಕ್ಕೆ ಔಷಧಿಯಾಗಿ ಬಳಸಲು ಪರವಾನಗಿ ದೊರೆತಿದೆ.[೨] ಫಿಸಿಯೋಥೆರಪಿಯು ಹಲವಾರು ಕೀಲುರೋಗದ ಅವ್ಯವಸ್ಥೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಔದ್ಯೋಗಿಕ ಚಿಕಿತ್ಸೆಯು ರೋಗಿಗಳು ಸಾಮಾನ್ಯ ಚಲನೆಗಳಿಗೆ ಪರ್ಯಾಯವನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ; ಇದರಿಂದ ಕಾಯಿಲೆಯಿಂದಿ ಕುಂಠಿತವಾದ ಅವರ ಚಲನಗಳಿಗೆ ಮತ್ತೆ ಜೀವ ಬಂದಂತಾಗುತ್ತದೆ. ಕೀಲುರೋಗದಿಂದ ನರಳುವ ರೋಗಿಗಳಿಗೆ ಸಾಮಾನ್ಯವಾಗಿ ದೀರ್ಘಕಾಲಿಕ, ಸಹಕಾರಭರಿತ ನತ್ತು ವಿವಿಧ ಶಿಸ್ತುಗಳಲ್ಲಿ ಪರಿಣಿತವಾದ ತಂಡಗಳ ವ್ಯವಸ್ಥೆಯು ವೈಯಕ್ತಿಕವಾಗಿ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಾಗುತ್ತದೆ. ಚಿಕಿತ್ಸೆಯ ಸ್ವರೂಪವು ಎಷ್ಟೋ ಬಾರಿ ಪ್ರತಿ ರೋಗಿಯ ಅವಶ್ಯಕತೆಯ ಮೇಲೆ ಅವಲಂಬಿತವಾಗುತ್ತದೆ; ಆ ಅವಶ್ಯಕತೆಗಳೂ ಸಹ ನೀಡಿದ ಔಷಧಿಗಳಿಗೆ ದೇಹ ಸ್ಪಂದಿಸುವ ರೀತಿ ಮತ್ತು ತಡದುಕೊಳ್ಳುವ ಸಾಮರ್ಥ್ಯದ ಮೇಲೆ ನಿರ್ಧರಿತವಾಗುತ್ತದೆ.
ವೈಜ್ಞಾನಿಕ ಸಂಶೋಧನೆ
ಬದಲಾಯಿಸಿಇತ್ತೀಚೆಗೆ, ವೈಜ್ಞಾನಿಕ ಸಂಶೋಧನೆಯ ಒಂದು ಬೃಹತ್ ಸಂಘವು ಹಲವಾರು ಕೀಲುರೋಗ ಅವ್ಯವಸ್ಥೆಗಳಿಗೆ ಕಾರಣವಾದ ಸ್ವಯಂಪ್ರತಿರೋಧಕ ಕಾಯಿಲೆಗಳ ಹಿನ್ನೆಲೆಯ ಸಂಶೋದನೆಯಲ್ಲಿ ತೊಡಗಿಕೊಂಡಿದೆ. ಅಲ್ಲದೆ ಆಸ್ಟಿಯೋಇಮ್ಯುನಾಲಜಿ ಕ್ಷೇತ್ರವು ಪ್ರತಿರೋಧಕ ವ್ಯವಸ್ಥೆಗಳು, ಕೀಲುಗಳು ಮತ್ತು ಮೂಳೆಗಳ ನಡುವಿನ ಪ್ರತಿಸ್ಪಂದನವನ್ನು ಮತ್ತಷ್ಟು ಪರೀಕ್ಷಿಸಲು ಮುಂದೆ ಬಂದಿದೆ. ಎಪಿಡೆಮಿಯೋಲಾಜಿಕಲ್ (ಕಾಯಿಲೆ-ತರ್ಕಬದ್ಧತೆ) ಅಧ್ಯಯನಗಳು ಮತ್ತು ವೈದ್ಯಕೀಯ ಪ್ರಯೋಗಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಬಯಾಲಾಜಿಕ್ಸ್ ಬಗ್ಗೆ ವೈಜ್ಞಾನಿಕ ಸಂಶೋಧನೆ ಮತ್ತು ಮಾನೋಕ್ಲೋನಲ್ ಆಂಟಿಬಾಡಿ ಥೆರಪಿಗಳ ಚಿಕಿತ್ಸಾತ್ಮಕ ಪ್ರಯೋಗಗಳು ಸಂಧಿವಾತದ ಅವ್ಯವಸ್ಥೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದರಲ್ಲಿ ಹೊಸ ಆಯಾಮಗಳನ್ನೇ ಸೃಷ್ಟಿಸಿದವು.
ಉಲ್ಲೇಖಗಳು
ಬದಲಾಯಿಸಿ- ↑ http://arthritis.about.com/cs/mtx/a/mtx.htm
- ↑ Edwards J, Szczepanski L, Szechinski J, Filipowicz-Sosnowska A, Emery P, Close D, Stevens R, Shaw T (2004). "Efficacy of B-cell-targeted therapy with rituximab in patients with Rheumatoid arthritis". N Engl J Med. 350 (25): 2572–81. doi:10.1056/NEJMoa032534. PMID 15201414.
{{cite journal}}
: CS1 maint: multiple names: authors list (link)
ಬಾಹ್ಯ ಕೊಂಡಿಗಳು
ಬದಲಾಯಿಸಿ- ಅಸೋಸಿಯೇಷನ್ ಡೆಸ್ ಮೆಡಿಸಿನ್ಸ್ ರೂಮಾಟೋಲೋಗಸ್ ಡ್ಯು ಕ್ಯುಬೆಕ್
- ಅಮೆರಿಕನ್ ಕಾಲೇಜ್ ಆಫ್ ರೂಮಟಾಲಜಿ
- ಬ್ರಿಟಿಷ್ ಸೊಸೈಟಿ ಫಾರ್ ರೂಮಟಾಲಜಿ
- ಕೆನಡಿಯನ್ ರೂಮಟಾಲಜಿ ಅಸೋಸಿಯೇಷನ್
- ರೂಮಟಾಲಜಿ ಆರೋಗ್ಯ ವೃತ್ತಿಪರರ ಸಂಘ Archived 2009-03-03 ವೇಬ್ಯಾಕ್ ಮೆಷಿನ್ ನಲ್ಲಿ.
- IFR: ಇಂಸ್ಟಿಟುಟ್ ಫೆರ್ರಾನ್ ಡಿ ರೂಮಟೋಲಾಜಿಯಾ.
- APLAR Archived 2008-10-14 ವೇಬ್ಯಾಕ್ ಮೆಷಿನ್ ನಲ್ಲಿ.
- ಫ್ಯೂಚರ್ ರೂಮಟಾಲಜಿ ಜರ್ನಲ್-ರೂಮಟಾಲಜಿಯ ಕ್ಷೇತ್ರದಲ್ಲಿನ ವಿವರಣೆ ಮತ್ತು ವಿಶ್ಲೇಷಣೆಯ ಅಲಗಿನ ಮೊನೆ
- ಬ್ರೆಝಿಲ್ ನ ಪೋರ್ಟೋ ಅಲೆಗ್ರೆಯ ಅಕಾಡೆಮಿಕ್ ಲೀಗ್ ಆಫ್ ರೂಮಟಾಲಜಿ Archived 2012-11-06 ವೇಬ್ಯಾಕ್ ಮೆಷಿನ್ ನಲ್ಲಿ.