ಕೀಲು (ಸಂಧಿ) ಎಂದರೆ ದೇಹದಲ್ಲಿನ ಮೂಳೆಗಳ ಮಧ್ಯೆ ಆಗಿರುವ ಸೇರಿಕೆ. ಇವು ಅಸ್ಥಿಪಂಜರವನ್ನು ಕಾರ್ಯಾತ್ಮಕ ಸಮಷ್ಟಿಯಾಗಿ ಸೇರಿಸುತ್ತವೆ.[೧] ಇವು ವಿವಿಧ ಪ್ರಮಾಣಗಳ ಮತ್ತು ಪ್ರಕಾರಗಳ ಚಲನೆಗೆ ಅವಕಾಶವಾಗುವಂತೆ ನಿರ್ಮಾಣಗೊಂಡಿರುತ್ತವೆ. ಮಂಡಿ, ಮೊಣಕೈ ಮತ್ತು ಭುಜದಂತಹ ಕೆಲವು ಕೀಲುಗಳು ಸ್ವಯಂ ಜಾರುಗುಣವುಳ್ಳದ್ದಾಗಿದ್ದು, ಬಹುತೇಕ ಘರ್ಷಣಾರಹಿತವಾಗಿರುತ್ತವೆ ಮತ್ತು ನಯವಾದ ಹಾಗೂ ನಿಖರ ಚಲನೆಗಳನ್ನು ನಿರ್ವಹಿಸುತ್ತಲೇ ಸಂಕೋಚನವನ್ನು ತಡೆದುಕೊಳ್ಳಬಲ್ಲವು ಹಾಗೂ ಭಾರಿ ಭಾರಗಳನ್ನು ಸಹಿಸಿಕೊಳ್ಳಬಲ್ಲವು. ತಲೆಬುರುಡೆಯ ಮೂಳೆಗಳ ನಡುವಿನ ಸೂಚರ್‌ಗಳಂತಹ ಇತರ ಕೀಲುಗಳು ಮಿದುಳು ಮತ್ತು ಇಂದ್ರಿಯಗಳನ್ನು ಕಾಪಾಡುವ ಸಲುವಾಗಿ ಬಹಳ ಕಡಿಮೆ ಚಲನೆಗೆ ಅವಕಾಶ ಕೊಡುತ್ತವೆ (ಕೇವಲ ಜನನದ ಸಮಯದಲ್ಲಿ). ಹಲ್ಲು ಮತ್ತು ದವಡೆಮೂಳೆಯ ನಡುವಿನ ಸೇರಿಕೆಯನ್ನು ಕೂಡ ಕೀಲು ಎಂದು ಕರೆಯಲಾಗುತ್ತದೆ, ಮತ್ತು ಇದನ್ನು ದಂತಮೂಲ ಸಂಧಿ ಎಂದು ಕರೆಯಲ್ಪಡುವ ನಾರಿನಂತಿರುವ ಕೀಲು ಎಂದು ವರ್ಣಿಸಲಾಗುತ್ತದೆ. ಕೀಲುಗಳನ್ನು ರಚನೆ ಹಾಗೂ ಕ್ರಿಯೆ ಎರಡರ ಆಧಾರದ ಮೇಲೂ ವರ್ಗೀಕರಿಸಲಾಗುತ್ತದೆ.[೨]

ಸಿನೋವಿಯದ ಕೀಲಿನ ರೇಖಾಚಿತ್ರ

ಉಲ್ಲೇಖಗಳು ಬದಲಾಯಿಸಿ

</references>

  1. "Articulation definition". eMedicine Dictionary. 30 October 2013. Archived from the original on 31 ಜುಲೈ 2012. Retrieved 18 November 2013.
  2. Standring, ed.-in-chief Susan (2006). Gray's anatomy : the anatomical basis of clinical practice (39th ed.). Edinburgh: Elsevier Churchill Livingstone. p. 38. ISBN 0-443-07168-3. {{cite book}}: |first= has generic name (help)
"https://kn.wikipedia.org/w/index.php?title=ಕೀಲು&oldid=1054390" ಇಂದ ಪಡೆಯಲ್ಪಟ್ಟಿದೆ