ಕಾಳಪ್ಪ ಪತ್ತಾರ (ಮಾರ್ಚ್ ೨೮, ೧೯೧೫-ಆಗಸ್ಟ್ ೫, ೧೯೭೧) ಅವರು ವೈವಿಧ್ಯಮಯ ಪ್ರತಿಭೆ. ಚಿತ್ರಕಲೆ, ಶಿಲ್ಪಕಲೆ, ರಂಗಭೂಮಿಯಲ್ಲಿ ನಟನೆ, ತಬಲಾ ವಾದನ ಹೀಗೆ ನಡೆದ ಹಾದಿಯಲ್ಲೆಲ್ಲ ಅಪೂರ್ವ ಪ್ರತಿಭೆಯನ್ನು ಹೊರಸೂಸಿದ ಮಹಾನುಭವರವರು.

ಕಾಳಪ್ಪ ಪತ್ತಾರ
Bornಮಾರ್ಚ್ ೨೮, ೧೯೧೫
ರಾಯಚೂರು ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್ಲಿನಲ್ಲಿ
Diedಆಗಸ್ಟ್ 5, 1971
Occupation(s)ಚಿತ್ರಕಾರರು, ಶಿಲ್ಪಿ, ತಬಲಾ ವಾದಕರು

ಜೀವನ ಬದಲಾಯಿಸಿ

ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ಅವರು ಮಾರ್ಚ್ 28, 1915ರಂದು ರಾಯಚೂರು ಜಿಲ್ಲೆಯ ತಳಕಲ್ಲಿನ ಬಡ ವಿಶ್ವಕರ್ಮ ಕುಟುಂಬವೊಂದರಲ್ಲಿ ಜನಿಸಿದರು. ಪತ್ತಾರರು ಶಾಲಾ ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತದ್ದಕ್ಕಿಂತ ವಿಶಾಲ ಪ್ರಪಂಚದಲ್ಲಿ ತಿರುಗಾಟದ ಅನುಭವದಿಂದ ಕಲಿತದ್ದೇ

ಗಾಂಧೀಜಿಯವರ ಎದುರಿನಲ್ಲೇ ಚಿತ್ರ ರಚನೆ ಬದಲಾಯಿಸಿ

ಅಪಾರ 1934ರಲ್ಲಿ ಗಾಂಧೀಜಿಯವರು ಕರ್ನಾಟಕ ಪ್ರವಾಸ ಕೈಗೊಂಡು ಬಳ್ಳಾರಿಯಿಂದ ರೈಲಿನಲ್ಲಿ ಗದಗಿಗೆ ಪ್ರಯಾಣಿಸುವಾಗ ಭಾನಾಪುರ ರೈಲು ನಿಲ್ದಾಣದಲ್ಲಿ ತಂಗಿದ್ದಾಗ ಗಾಂಧೀಜಿಯವರ ಚಿತ್ರವನ್ನು ಅಲ್ಲೇ ಬರೆದು ಅರ್ಪಿಸಿದರಂತೆ. ಇವರ ಕಲಾಭಿಜ್ಞತೆಗೆ ಮಾರುಹೋದ ಗಾಂಧೀಜಿ ತಮ್ಮ ಭಾವಚಿತ್ರವನ್ನು ಹರಾಜು ಹಾಕಿ ಬಂದ ಹಣವನ್ನು ಹರಿಜನ ನಿಧಿಗೆ ಸೇರಿಸಿದರಂತೆ.

ವಿಶಿಷ್ಟ ಕಲಾಕೃತಿಗಳು ಬದಲಾಯಿಸಿ

ಬಾಲ್ಯದ ನೆನಪಿನಿಂದಲೇ ಆಗಿಹೋಗಿದ್ದ ಸಂತ ಅಜ್ಜಾರಾಮರ ಚಿತ್ರ ಬರೆದು ಮಠಕ್ಕೆ ಕೊಟ್ಟಿದ್ದು; ಶೃಂಗೇರಿ ಮಠಕ್ಕಾಗಿ ಲಕ್ಷ್ಮೀ, ಶಾರದೆ, ಕೃಷ್ಣರ ಬಂಗಾರದ ಮೂರ್ತಿ ಚಿತ್ರಿಸಿದ್ದು; ಹೈದರಾಬಾದ್ ನಿಜಾಮ ಸಂಬಂಧಿ ಪ್ರಸಿದ್ಧ ಕಲಾರಸಿಕರಾದ ಸಾಲಾರಜಂಗರಿಂದಲೂ ಪ್ರಶಂಸೆ ಪಡೆದದ್ದು; ಸಂತ, ಮಹಾತ್ಮ, ಮಹಾರಾಜರೆನ್ನದೆ ಸಾಮಾನ್ಯರ ಚಿತ್ರಗಳನ್ನೂ ಬಿಡದೆ ರಚನೆ.ಮಾಡಿದ್ದು ಇವು ಚಿತ್ರಕಾರರಾಗಿ ಕಾಳಪ್ಪನವರ ವಿಶಿಷ್ಟ ಸಾಧನೆಗಳು. ಮಣ್ಣು, ಹಿತ್ತಾಳೆ, ಬೆಳ್ಳಿ ಮುಂತಾದುವುಗಳಿಂದಲೂ ಅವರು ಕೃತಿ ರಚನೆ ಮಾಡುತ್ತಿದ್ದರು.

ರಂಗಭೂಮಿಯಲ್ಲಿ ನಟನೆ ಬದಲಾಯಿಸಿ

ಕಾಳಪ್ಪ ಪತ್ತಾರರಿಗೆ ರಂಗಭೂಮಿ ಪ್ರೀತಿಯ ಮತ್ತೊಂದು ಕ್ಷೇತ್ರವಾಗಿತ್ತು. ಯಲಬುರ್ಗಿ, ಕೊಪ್ಪಳ, ಗಂಗಾವತಿ ತಂಡಗಳು ಅಭಿನಯಿಸುತ್ತಿ‌ದ್ದ ನಾಟಕಗಳಿಗೆ ಸಂಗೀತ ನೀಡಿದ್ದೇ ಅಲ್ಲದೆ,. ತಳಕಲ್ಲಿನ ಪ್ರಸಿದ್ಧ ರೆಡ್ಡಿ ಕಂಪನಿ, ಹಮ್ಮಿಗಿ ನೀಲಕಂಠಪ್ಪನವರ ಭುವನೇಶ್ವರಿ ನಾಟ್ಯ ಸಂಘ ಮುಂತಾದುವುಗಳಲ್ಲಿ ನಾರದ, ಕೃಷ್ಣನ ಪಾತ್ರ ನಿರ್ವಹಿಸಿ ಅಪಾರ ಜನಪ್ರಿಯತೆ ಪಡೆದಿದ್ದರು. .

ತಬಲಾ ವಾದನದಲ್ಲೂ ಪ್ರಸಿದ್ಧಿ ಬದಲಾಯಿಸಿ

ತಬಲ ವಾದಕರಾಗಿ ಕಾಳಪ್ಪ ಪತ್ತಾರರದು ಮತ್ತೊಂದು ಅಪ್ರತಿಮ ಸಾಧನೆ. ಹಿಂದೂಸ್ತಾನಿ ಗಾಯಕರಾದ ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ ಮೊದಲಾದವರಿಗೆ ನೀಡಿದ ತಬಲ ಸಾಥಿಯ ಕೀರ್ತಿ ಕೂಡಾ ಅವರದಾಗಿತ್ತು..

ವಿದಾಯ ಬದಲಾಯಿಸಿ

ಆಗಸ್ಟ್ 5, 1971ರಲ್ಲಿ ಈ ಲೋಕವನ್ನಗಲಿದ ಕಾಳಪ್ಪ ಪತ್ತಾರರು, ಪ್ರಸಿದ್ಧರ ನಡುವೆ ಇದ್ದರೂ ಪ್ರಚಾರ ಬಯಸದೆ ನೇಪಥ್ಯದಲ್ಲೆ ಸರಿದು ಹೋದ ವ್ಯಕ್ತಿ .

ಮಾಹಿತಿ ಆಧಾರ ಬದಲಾಯಿಸಿ

ಕಣಜ Archived 2013-04-12 ವೇಬ್ಯಾಕ್ ಮೆಷಿನ್ ನಲ್ಲಿ.