ಕಾಲ್ ಭೈರವ್ ದೇವಾಲಯ
ಕಾಲ್ ಭೈರವ್ ದೇವಾಲಯವು ಭಾರತದ ಮಧ್ಯ ಪ್ರದೇಶ ರಾಜ್ಯದ ಉಜ್ಜೆಯನ್ ನಗರದಲ್ಲಿ ಸ್ಥಿತವಾಗಿರುವ ಹಿಂದೂ ದೇವಾಲಯವಾಗಿದೆ. ಇದು ಈ ನಗರದ ಅಧಿದೇವತೆಯಾದ ಕಾಳ ಭೈರವನಿಗೆ ಸಮರ್ಪಿತವಾಗಿದೆ.[೧] ಶಿಪ್ರಾ ನದಿಯ ತಟದಲ್ಲಿ ಸ್ಥಿತವಾಗಿರುವ ಇದು ನಗರದಲ್ಲಿನ ಅತ್ಯಂತ ಸಕ್ರಿಯ ದೇವಸ್ಥಾನಗಳಲ್ಲಿ ಒಂದಾಗಿದೆ. ದಿನವೂ ನೂರಾರು ಭಕ್ತರು ಇದಕ್ಕೆ ಭೇಟಿನೀಡುತ್ತಾರೆ.[೨] ಈ ದೇವಾಲಯದ ದೇವತೆಗೆ ಅರ್ಪಿಸಲಾದ ವಸ್ತುಗಳಲ್ಲಿ ಸಾರಾಯಿ ಕೂಡ ಒಂದು.[೩][೪]
ಇಂದಿನ ದೇವಾಲಯ ರಚನೆಯನ್ನು ಒಂದು ಹಿಂದಿನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಮೂಲ ದೇವಾಲಯವನ್ನು ಭದ್ರಸೇನನೆಂಬ ಒಬ್ಬ ಅಸ್ಪಷ್ಟ ರಾಜನು ಕಟ್ಟಿಸಿದನ್ನು ಎಂದು ನಂಬಲಾಗಿದೆ. ಇದನ್ನು ಸ್ಕಂದ ಪುರಾಣದಅವಂತಿ ಖಂಡದಲ್ಲಿ ಉಲ್ಲೇಖಿಸಲಾಗಿದೆ.[೫][೨] ಪರಮಾರರ ಅವಧಿಗೆ (ಕ್ರಿ.ಶ. ೯ - ೧೩ನೇ ಶತಮಾನ) ಸೇರಿದ ಶಿವ, ಪಾರ್ವತಿ, ವಿಷ್ಣು ಮತ್ತು ಗಣೇಶನ ವಿಗ್ರಹಗಳನ್ನು ಈ ಸ್ಥಳದಿಂದ ಪಡೆಯಲಾಗಿದೆ.[೬]
ಉಲ್ಲೇಖಗಳುಸಂಪಾದಿಸಿ
- ↑ V Guhan (24 February 2013). "Where Lord Shiva is guardian and ruler". Indian Express.
- ↑ ೨.೦ ೨.೧ "Ujjain's Kalbhairav, the god to whom Hindu devotees offer liquor". India TV. 20 February 2013.
- ↑ N.K. Singh (31 July 1994). "One for the lord". India Today.
- ↑ "Temple of Kalbhairava". MP Tourism. Retrieved 28 September 2015.
- ↑ "Temples". District Collector, Ujjain. Archived from the original on 21 September 2015. Retrieved 28 September 2015.
- ↑ "Holy City – Ujjain". Kalidasa Akademi. Archived from the original on 7 ಮಾರ್ಚ್ 2016. Retrieved 28 September 2015.