ಕಾಮಿನಿ ಎ ರಾವ್‌

ಭಾರತೀಯ ಸ್ತ್ರೀರೋಗತಜ್ಞೆ

ಕಾಮಿನಿ ಎ ರಾವ್‌ರವರು ೧೯೫೩ರ ಜುಲೈ ೦೨ರಂದು ಬೆಂಗಳೂರಿನಲ್ಲಿ ಜನಿಸಿದರು.[೧] ಇವರು ಭಾರತದಲ್ಲಿ ಅಸಿಸಡ್ ರಿಪ್ರೊಡಕ್ಷನ್ ಕ್ಷೇತ್ರದಲ್ಲಿ ಪ್ರವತ್ರಕರಾಗಿ ಅವರು ಸಂತಾನೋತ್ವತ್ತಿ ಅಂತ್ಃಸ್ರಾವಶಾಸ್ತ್ರ ಅಂಡಾಶಯದ ಶರೀರಶಾಸ್ತ್ರ ಮತ್ತು ಸಹಾಯಕ ಸಂತಾನೋತ್ವತ್ತಿ ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಿದ್ದಾರೆ[೨].

ಜೀವನ ಬದಲಾಯಿಸಿ

ಕಾಮಿನಿ ಎ ರಾವ್‌ರವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಡಾ.ಕಾಮಿನಿ ಎ ರಾವ್ ಮಿಲನ್ ಸೆಂಟರ್ ಫಾರ್ ರಿಪ್ರೊಡಕ್ವಿವ್ ಮೆಡಿಸಿನ್ ನಲ್ಲಿ ವೈದ್ಯೆಕೀಯ ನಿರ್ದೇಶಕರಾಗಿ (ಬಿಎಸಿಸಿ ಹೆಲ್ತಕೇರ್ ಪ್ರೈವೇಟ್ ಲಿಮಿಟೆಡ್ ನ ಒಂದು ಘಟಕ).

ಶಿಕ್ಷಣ ಬದಲಾಯಿಸಿ

ಇವರು ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಫ್ರೌಡಶಾಲೆಯಲ್ಲಿ ಓದಿದ್ದರು.ನಂತರ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ವನಿವಿಲಾಸ್ ಸಂಸ್ಥೆಗಳಲ್ಲಿ ಔಷಧಗಳ ಬಗ್ಗೆ ಅಧ್ಯಯನ ಮಾಡಿದರು.

ಇವರು ಭಾರತದ ಮೊದಲ ಸಿಫ್ಟ್ ಬೇಬಿ ಜನಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ದಕ್ಷಿಣ ಭಾರತದ ಮೊದಲ ವೀರ್ಯ ಬ್ಯಾಂಕ್ ಅನ್ನು ಸ್ಥಾಪಿಸಿದ ಜೊತೆಗೆ ಐಸಿಎಸ್ ಐ (ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪೆಮ್ಮ್ ಇಂಜೆಕ್ಷನ್)ಮೂಲಕ ಜನಿಸಿದ ದಕ್ಷಿಣ ಭಾರತದ ಮೊದಲ ಶಿಶುಗಳನ್ನು ವಿನ್ಯಾಸಗೊಳಿಸಿದ ಹೆಗಳಿಕೆ ಅವಳಲ್ಲಿದೆ.

ಯುನೈಟೆಡ್ ಕಿಂಗಡ್ಂನಲ್ಲಿ ತರಬೇತಿ ಪಡೆದ ಅವರು ಬಿಎಸಿಸಿ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡನ ರಿಪ್ರೊಡಕ್ಟಿವ್ ಮೆಡಿಸಿನ್ ಕ್ಲಿನಿಕ್ ಸ್ಥಾಪಿಸಿದರು.

ಪ್ರಕಟಣೆಗಳು ಬದಲಾಯಿಸಿ

  • ಹ್ಯಾಂಡಬುಕ್ ಆಫ್ ಅಬ್ಸ್ವೆಟ್ರಿಕ್ ಎಮರ್ಜೆನ್ಸಿಸ್ (೨೦೦೩) ಜಪೀ ಬ್ರದರ್ಸ್ ಮೆಡಿಕಲ್ ಪಬ್ಲಿಷರ್ಸ್ ಐಎಸ್ ಬಿ ಎನ್ (Handbook of Obstetric Emergencies (2003) Japee Brothers Medical Publishers, ISBN 8180610896)
  • ದಿ ಬಂಜೆತನ ಕೈಪಿಡಿ (೨೦೦೫)ಅನ್ಯಾನ್ ಪಬ್ಲಿಷರ್ಸ್ ಪೀಟರ್ ಆರ್. ಬ್ರಿನ್ಸ್ಡೆನ್ ಮತ್ತು ಎ. ಹೆನ್ರಿ ಸಾಥಾನಂತನ್ ಸಹ-ಲೇಖೆಕರು (The Infertility Manual (2005) Anshan Publishers, co-authored by Peter R. Brinsden and A. Henry Sathananthan, ISBN 1904798160)
  • ಎಲ್ಸೆವಿಯರ್ ಇಂಡಿಯಾ ದಾದಿಯರಿಗ್ಗಿ ಮಿಡವೈಫರಿ ಮತ್ತು ಪ್ರಸೂತಿ ಪಠ್ಯ ಪುಸ್ತಕ ಐ ಎಸ್ಬಿ ಎನ್
  • ಎಂಡೋಸ್ಕೋಪಿ ಇನ್ ಬಂಜೆತನ (೨೦೦೭)ಅನ್ಶಾನ್ ಪಬ್ಲಿಷರ್ಸ್ ಕ್ರಿಸ್ಟೋಫರ್ ಚೆನ್ ಸಹ-ಲೇಖಕರು
  • ಮರುಕಳಿಸುವ ಗರ್ಭಧಾರಣೆ ನಷ್ಟ-ಇ ಸಿ ಎ ಬಿ (೨೦೦೯)ಎಲ್ಸೆವಿಯರ್ ಆರೋಗ್ಯ ವಿಜ್ಞಾನ.ಐ ಎಸ್ಬಿ ಎ ನ್

ಪ್ರಶಸ್ತಿಗಳು ಬದಲಾಯಿಸಿ

  • ೨೦೧೪ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.
  • ಇವರು ರತನ್ ಪ್ರಶಸ್ತಿ ಪುರಸ್ಕೃತರು.
  • ಆರ್ಯಭಟ ಪ್ರಶಸ್ತಿಯನ್ನು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಪಡೆದಿದ್ದಾರೆ.
  • ಬೆಂಗಳೂರು ಸೂಸೈಟಿ ಆಫ್ ಪ್ರಸೂತಿ ಮತ್ತು ಸ್ತ್ರಿರೋಗಶಾಸ್ತ್ರದ ಕಡೆಯಿಂದ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ.
  • ಇವರ ವೈದ್ಯಕೀಯ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಉಲ್ಲೇಖಗಳು ಬದಲಾಯಿಸಿ

  1. https://www.drkaminirao.com/
  2. https://www.thehindu.com/news/cities/bangalore/six-from-karnataka-chosen-for-padma-awards/article5618091.ece