ಕಾಡು ಓಮ
ಕಾಡು ಓಮ | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | D. ambrosioides
|
Binomial name | |
Dysphania ambrosioides | |
Synonyms[೧] | |
|
ಕಾಡು ಓಮ ಮಧ್ಯ ಅಮೇರಿಕ,ದಕ್ಷಿಣ ಅಮೇರಿಕ ಮತ್ತು ಮೆಕ್ಸಿಕೊಗಳ ಮೂಲವಾಸಿ ಸಸ್ಯ. ಇದೊಂದು ಮೂಲಿಕೆ ಸಸ್ಯ.ಎಪಝೋಟೆ ಎಂದು ವಾಣಿಜ್ಯ ಹೆಸರು.
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿಕಿನೋಪೋಡಿಯೇಸಿ ಕುಟುಂಬಕ್ಕೆ ಸೇರಿದೆ. ಕಿನೋಪೋಡಿಯಮ್ ಆಂಬ್ರೋಸಾಯ್ಡಿಸ್ ಅಥವಾ ಡಿಸ್ಫೇನಿಯ ಆಂಬ್ರೋಸಾಯ್ಡಿಸ್ ಎಂಬುದು ಸಸ್ಯಶಾಸ್ತ್ರೀಯ ಹೆಸರು.
ಲಕ್ಷಣಗಳು
ಬದಲಾಯಿಸಿಪುಟ್ಟ ಗಾತ್ರದ ಸಸ್ಯ.ಉದ್ದವಾದ ಭರ್ಚಿಯ ಆಕಾರದ ಎಲೆಗಳು. ಸುಮಾರು ೩ ರಿಂದ ೪ ಆಡಿ ಎತ್ತರ ಬೆಳೆಯುತ್ತದೆ.ಸಣ್ಣ ಗಾತ್ರದ ಹಸಿರು ಬಣ್ಣದ ಹೂವುಗಳು ಗೊಂಚಲು ಗೊಂಚಲಾಗಿರುತ್ತವೆ.ಸಸ್ಯದ ಕೂದಲುಗಳಿಂದ ಕರ್ಪೂರ ವಾಸನೆಯ ಒಂದು ರೀತಿಯ ಎಣ್ಣೆ ಒಸರುತ್ತದೆ.
ಬೆಳೆ
ಬದಲಾಯಿಸಿಸಮಶೀತೋಷ್ಣ ವಲಯದಲ್ಲಿ ಹುಲುಸಾಗಿ ಬೆಳೆಯುತ್ತದೆ. ಕೆಲವೋಮ್ಮೆ ಬಹಳ ಆಕ್ರಮಣಶೀಲ ಸಸ್ಯವಾಗಿ ಬೆಳೆಯುತ್ತದೆ.
ಉಪಯೋಗಗಳು
ಬದಲಾಯಿಸಿತರಕಾರಿ ಸಸ್ಯವಾಗಿ,ಮೂಲಿಕೆಯಾಗಿ,ಗಿಡ ಮೂಲಿಕೆಗಳ ಕಷಾಯವಾಗಿ ಬಹುವಾಗಿ ಬಳಕೆಯಲ್ಲಿದೆ.ಇದರ ಸುಂಗಂಧವು ಒಂದು ವಿಶಿಷ್ಟ ಬಗೆಯದ್ದಾಗಿದ್ದು,ಬಹಳ ಗಾಢವಾಗಿದೆ.ಮೆಕ್ಸಿಕೋದ ಅಡುಗೆಗಳಲ್ಲಿ ಸುಂಗಂಧ ದ್ರವ್ಯವಾಗಿ ಉಪಯೊಗಿಸಲ್ಪಡುತ್ತದೆ.ಔಷಧೀಯವಾಗಿ ವಾಯು ನಿವಾರಕ ದ್ರವ್ಯವಾಗಿದೆ.ಹುಳದ ಭಾದೆಗೆ ಉತ್ತಮೆ ಔಷಧವಾಗಿದೆ.ಇದರ ರಾಸಾಯನಿಕ ದ್ರವ್ಯಗಳಲ್ಲಿ ಕ್ಯಾನ್ಸರ್ ನಿವಾರಕ ಗುಣಗಳಿರುವುದು ಪ್ರಯೋಗಾಲಯಗಳ ಪರಿವೀಕ್ಷಣೆಗಳಲ್ಲಿ ಕಂಡುಬಂದಿದೆ[೨] .ಇದರಿಂದ ಪಡೆದ ದ್ರವ್ಯವನ್ನು ಕೃಷಿಯಲ್ಲಿ ಕೀಟನಾಶಕವಾಗಿ ಉಪಯೋಗಿಸುತ್ತಾರೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Tropicos
- ↑ Nascimento, Flávia R.F.; Cruz, Gustavo V.B.; Pereira, Paulo Vitor S.; MacIel, Márcia C.G.; Silva, Lucilene A.; Azevedo, Ana Paula S.; Barroqueiro, Elizabeth S.B.; Guerra, Rosane N.M. (2006). "Ascitic and solid Ehrlich tumor inhibition by Chenopodium ambrosioides L. Treatment". Life Sciences. 78 (22): 2650–3. doi:10.1016/j.lfs.2005.10.006. PMID 16307762.