ಕಾಜು ಕತ್ಲಿ
ಕಾಜು ಬರ್ಫ಼ಿ ಎಂದೂ ಕರೆಯಲ್ಪಡುವ ಕಾಜು ಕತ್ಲಿ (ಅಕ್ಷರಶಃ "ಗೋಡಂಬಿಯ ತುಂಡು") ಬರ್ಫಿಯನ್ನು ಹೋಲುವ ಒಂದು ಭಾರತೀಯ ಸಿಹಿತಿನಿಸಾಗಿದೆ. ಕಾಜು ಎಂದರೆ ಗೋಡಂಬಿ; ಬರ್ಫ಼ಿಯನ್ನು ಹಲವುವೇಳೆ (ಆದರೆ ಯಾವಾಗಲೂ ಅಲ್ಲ) ಸಕ್ಕರೆ ಮತ್ತು (ಒಣಫಲಗಳು ಹಾಗೂ ಸೌಮ್ಯ ಸಂಬಾರ ಪದಾರ್ಥಗಳು) ಇತರ ಘಟಕಾಂಶಗಳನ್ನು ಸೇರಿಸಿ ಹಾಲನ್ನು ಗಟ್ಟಿಯಾಗಿಸಿ ತಯಾರಿಸಲಾಗುತ್ತದೆ. ಕೇಸರ್ ಕಾಜು ಕತ್ಲಿ ಕೇಸರಿಯನ್ನು ಒಳಗೊಳ್ಳುವ ಒಂದು ಕಾಜು ಕತ್ಲಿ ತಿನಿಸಾಗಿದೆ.
ಗೋಡಂಬಿಗಳನ್ನು ನೀರಿನಲ್ಲಿ ಗಣನೀಯ ಸಮಯಾವಧಿಯವರೆಗೆ ನೆನೆಸಿ (ಸಾಮಾನ್ಯವಾಗಿ ರಾತ್ರಿ ಪೂರ್ತಿ) ನಂತರ ಇವನ್ನು ಪೇಸ್ಟಾಗಿ ರುಬ್ಬಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ಎರಡು ಬೆರಳುಗಳನ್ನು ಅದ್ದಿ ಬೇರೆಬೇರೆಯಾಗಿ ಎಳೆದಾಗ ಒಂದೇ ಎಳೆ ರೂಪಗೊಳ್ಳುವವರೆಗೆ ಸಕ್ಕರೆ ಪಾಕವನ್ನು ಕುದಿಸಲಾಗುತ್ತದೆ. ನಂತರ ಅದನ್ನು ರುಬ್ಬಿಕೊಂಡ ಗೋಡಂಬಿಗೆ ಸೇರಿಸಲಾಗುತ್ತದೆ. ತುಪ್ಪ, ಕೇಸರಿ ಮತ್ತು ಒಣಫಲಗಳನ್ನು ಕೂಡ ಸೇರಿಸಬಹುದು.[೧] ನಂತರ ಆ ಪೇಸ್ಟ್‌ನ್ನು ಆಳವಿಲ್ಲದ ಚಪ್ಪಟೆ ತಳದ ಪಾತ್ರೆಯಲ್ಲಿ ಹರಡಿ ಚಪ್ಪಟೆಯಾಗಿಸಲಾಗುತ್ತದೆ. ಆಮೇಲೆ ಬಾಯಿತುತ್ತಿನ ಗಾತ್ರದ ಸಮಬಾಹು ಚತುರ್ಭುಜ ಆಕಾರದ ಚೂರುಗಳಾಗಿ ಕತ್ತರಿಸಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Bladholm, Linda (12 August 2000). The Indian grocery store demystified. p. 175. ISBN 1580631436.