ಕವಿತಾ ಷಾ(ವಿಜ್ಞಾನಿ)
ಭಾರತದ ಜೈವಿಕ ತಂತ್ರಜ್ಞಾನಿ
ಕವಿತಾ ಷಾ (೬ ನವೆಂಬರ್ ೧೯೬೮) ರವರು ಎನ್ವಿರಾನ್ಮೆಂಟಲ್ ಅಂಡ್ ಸಸ್ಟೈನೇಬಲ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ , ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ [೧][೨] ಭಾರತೀಯ ಪರಿಸರ ಜೈವಿಕ ತಂತ್ರಜ್ಞರಾಗಿದ್ದಾರೆ . ಅವರು ಆರು ನಿರ್ದೇಶಕರಲ್ಲಿ ಒಬ್ಬರಾಗಿದ್ದು , ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಮಹಿಳಾ ನಿರ್ದೇಶಕರಾಗಿದ್ದಾರೆ(ಬಿಎಚ್ಯು). ಅವರು ಪರಿಸರೀಯ ಜೈವಿಕ ತಂತ್ರಜ್ಞಾನ , ಆರೋಗ್ಯ ಮತ್ತು ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ ತಮ್ಮ ಪಾತ್ರಕ್ಕೆ ಗಮನಾರ್ಹರಾಗಿದ್ದಾರೆ ಹಾಗೂ ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ ಆಧಾರಿತ ಸಂವೇದಕದ ರಚನೆ ಮತ್ತು ಬಯೋ ಸೆನ್ಸಾರ್ , ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದಕ್ಕಾಗಿ ಪ್ರಸಿದ್ಧಿ ಪಡೆದರು.
ಕವಿತಾ ಷಾ | |
---|---|
ಜನನ | ೬ ನವೆಂಬರ್ ೧೯೬೮ ವಾರಣಾಸಿ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಬಯೊಟೆಕ್ನಾಲಜಿ |
ಪ್ರಸಿದ್ಧಿಗೆ ಕಾರಣ | ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ - ಆಧಾರಿತ ಸಂವೇದಕದ ರಚನೆ , ಬಯೋ ಸೆನ್ಸಾರ್ , ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದ್ದಕ್ಕೆ. |
ಗಮನಾರ್ಹ ಪ್ರಶಸ್ತಿಗಳು | ವಿಮೆನ್ ಸೈಂಟಿಸ್ಟ್ ಅವಾರ್ಡ್ -೨೦೧೧ |
ಸಂಗಾತಿ | ಮುಕುಲ್ ಕುಮಾರ್ ಷಾ |
ಜನನ
ಬದಲಾಯಿಸಿಕವಿತಾರವರು ಭಾರತದ ವಾರಣಾಸಿಯಲ್ಲಿ ನವೆಂಬರ್ ೬, ೧೯೬೮ ರಂದು ಜನಿಸಿದರು.[೩]
ವೈಯಕ್ತಿಕ ಜೀವನ
ಬದಲಾಯಿಸಿಕವಿತಾ ರವರ ತಂದೆ - ರಾಯ್ ಸುಶೀಲ್ ಕುಮಾರ್, ತಾಯಿ - ಶುಭಾ ಅಗರ್ವಾಲ್ . ಕವಿತಾ ರವರು ಮುಕುಲ್ ಕುಮಾರ್ ಷಾ ರವರನ್ನು ಜನವರಿ ೨೫ , ೧೯೯೧ ರಂದು ವಿವಾಹವಾದರು.[೪]
ಶಿಕ್ಷಣ
ಬದಲಾಯಿಸಿ- ಬ್ಯಾಚುಲರ್ ಆಫ್ ಸೈನ್ಸ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೮೯.
- ಮಾಸ್ಟರ್ ಆಫ್ ಸೈನ್ಸ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೯೧.[೫]
- ಬ್ಯಾಚುಲರ್ ಆಫ್ ಎಜುಕೇಷನ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ ,೧೯೯೨.
- ಡಾಕ್ಟರ್ ಆಫ್ ಫಿಲಾಸಫಿ , ಬನಾರಸ್ ಹಿಂದೂ ವಿಶ್ವವಿದ್ಯಾಲಯ , ವಾರಣಾಸಿ, ೧೯೯೫.[೬]
ವೃತ್ತಿಜೀವನ
ಬದಲಾಯಿಸಿ- ಜೂನಿಯರ್ ಸಂಶೋಧನಾ ಸಹವರ್ತಿ ಜೀವರಸಾಯನಶಾಸ್ತ್ರ, ಬನಾರಸ್ ಹಿಂದೂ ಯುನಿವರ್ಸಿಟಿ, ೧೯೯೩-೧೯೯೫.
- ಸೀನಿಯರ್ ರಿಸರ್ಚ್ ಫೆಲೋ , ಬನಾರಸ್ ಹಿಂದೂ ಯುನಿವರ್ಸಿಟಿ, ೧೯೯೫-೧೯೯೬.
- ೧೯೯೬ ರಿಂದ ಸಂಶೋಧನಾ ಸಹಾಯಕಿ , ಬನಾರಸ್ ಹಿಂದೂ ಯುನಿವರ್ಸಿಟಿ.
- ೧೯೯೮ ರಿಂದ ಪೋಸ್ಟ್ ಡಾಕ್ಟೋರಲ್ ಸಂಶೋಧನಾ ಸಹವರ್ತಿ , ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ , ಟೋಕಿಯೋ .
- ಪರಿಸರ ಸಲಹೆಗಾರರ ಸಚಿವಾಲಯ, ಭಾರತ.
ಸದಸ್ಯತ್ವ
ಬದಲಾಯಿಸಿ- ೧೯೮೪-೧೯೮೮ ತನಕ ಭಾರತೀಯ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ ನೊಂದಿಗೆ ಸೇವೆ ಸಲ್ಲಿಸಿದರು.
- ಸದಸ್ಯೆ - ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ (ಜೀವನ).
- ಜೈವಿಕ ರಸಾಯನಶಾಸ್ತ್ರಜ್ಞರ ಸೊಸೈಟಿ.
ಪ್ರಶಸ್ತಿಗಳು
ಬದಲಾಯಿಸಿ- ವಿಮೆನ್ ಸೈಂಟಿಸ್ಟ್ ಅವಾರ್ಡ್ -೨೦೧೧ , ಬಯೋಟೆಕ್ ರಿಸರ್ಚ್ ಸೊಸೈಟಿ . [೭]
ಸಾಧನೆಗಳು
ಬದಲಾಯಿಸಿ- ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ - ಆಧಾರಿತ ಸಂವೇದಕದ ರಚನೆ.[೮]
- ಬಯೋ ಸೆನ್ಸಾರ್ ಮತ್ತು ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದರು.
ಉಲ್ಲೇಖಗಳು
ಬದಲಾಯಿಸಿ- ↑ BHU
- ↑ https://scholar.google.co.in/citations?user=aacPjd4AAAAJ&hl=en
- ↑ https://thelifeofscience.com/2016/04/04/kavita-environmentalbiotech/
- ↑ research gate
- ↑ https://www.revolvy.com/page/Kavita-Shah-%28scientist%29
- ↑ https://prabook.com/web/kavita.shah/117793
- ↑ "ಆರ್ಕೈವ್ ನಕಲು". Archived from the original on 2019-03-29. Retrieved 2019-03-29.
- ↑ "ಆರ್ಕೈವ್ ನಕಲು". Archived from the original on 2019-03-29. Retrieved 2019-03-29.