ಕಲ್ಲುಗೌಜಲು ಹಕ್ಕಿ

ಕಲ್ಲುಗೌಜಲು ಹಕ್ಕಿ
Double-banded sandgrouse
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಕೆಳವರ್ಗ:
ಗಣ:
Pteroclidiformes
ಕುಟುಂಬ:
Pteroclididae

Bonaparte, 1831
Genera

ಕಲ್ಲುಗೌಜಲು ಹಕ್ಕಿಕೊಲಂಬಿಫಾರ್ಮಿಸ್ ಉಪಗಣದ ಟೀರೊಕ್ಲಿಡೀ ಕುಟುಂಬಕ್ಕೆ ಸೇರಿದ ವಿವಿಧ ಪ್ರಭೇದಗಳ ಹಕ್ಕಿಗಳಿಗಿರುವ to ಸಾಮಾನ್ಯ ಹೆಸರು (ಸ್ಯಾಂಡ್ ಗ್ರೌಸ್). ಕೆಲವು ಲಕ್ಷಣಗಳಲ್ಲಿ ಇದು ಗೌಜಲು ಹಕ್ಕಿಗಳನ್ನು (ಗ್ರೌಸ್) ಹೋಲುವುದರಿಂದಲೂ ಹೆಚ್ಚಾಗಿ ಮರುಭೂಮಿಗಳಲ್ಲಿ ವಾಸಿಸುವುದರಿಂದಲೂ ಇದಕ್ಕೆ ಈ ಹೆಸರು. ಆದರೆ ವಾಸ್ತವವಾಗಿ ಇದು ಪಾರಿವಾಳದ ಹತ್ತಿರ ಸಂಬಂಧಿ.

ಪ್ರಬೇಧಗಳು

ಬದಲಾಯಿಸಿ
 
ಗೋಭಿ ಮರುಭೂಮಿಯಲ್ಲಿ ಕಂಡುಬರುವ ಹಕ್ಕಿ

ಇದರಲ್ಲಿ ಸುಮಾರು ೧೬ ಪ್ರಭೇದಗಳಿವೆ. ಇವು ಆಫ್ರಿಕ ಹಾಗೂ ಮಡಗಾಸ್ಕರ್, ದಕ್ಷಿಣ ಯುರೋಪ್, ದಕ್ಷಿಣ ಹಾಗೂ ಮಧ್ಯ ಏಷ್ಯದ ಮರಳುಗಾಡುಗಳಲ್ಲಿ ಕಾಣಬರುತ್ತವೆ. ಇವುಗಳಲ್ಲಿ ಮುಖ್ಯವಾದವು ಮಧ್ಯ ಏಷ್ಯದ ನಿವಾಸಿಯಾದ ಸಿರಾಪ್ಟಿಸ್ ಪ್ಯಾರಡಾಕ್ಸಸ್; ಸ್ಪೇನ್, ಉತ್ತರ ಆಫ್ರಿಕ ಮತ್ತು ಏಷ್ಯ ಮೈನರ್ಗಳ ನಿವಾಸಿಯಾದ ಟೀರೋಕ್ಲಿಸ್ ಆಲ್ಚಾಟ; ಭಾರತದಲ್ಲಿ ಕಾಣಬರುವ ಟೀರೋಕ್ಲಿಸ್ ಎಕ್ಸಸ್ಟ್‌ಸ್ ಮತ್ತು ಟೀರೋಕ್ಲಿಸ್ ಇಂಡಿಕಸ್ ಎಂಬವು.

ಲಕ್ಷಣಗಳು

ಬದಲಾಯಿಸಿ

ಸಾಧಾರಣವಾಗಿ ೯"_೧೬" ಉದ್ದಕ್ಕೆ ಬೆಳೆಯುತ್ತದೆ. ಇದಕ್ಕೆ ಪುಷ್ಟವಾದ ದೇಹವಿದೆ. ದೇಹದ ಬಣ್ಣ ಬೂದು ಅಥವಾ ಕಂದು. ಅಲ್ಲಲ್ಲಿ ಕಿತ್ತಳೆ, ಕೆಂಗಂದು, ಕಪ್ಪು ಅಥವಾ ಬಿಳಿಯ ಬಣ್ಣದ ಮಚ್ಚೆಗಳಿವೆ. ಇದರಿಂದಾಗಿ ಹಕ್ಕಿಯ ಬಣ್ಣ ಪರಿಸರದ ಬಣ್ಣದೊಂದಿಗೆ ಮಿಳಿತವಾಗಿ ಹಕ್ಕಿಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಪಾರಿವಾಳಕ್ಕಿರುವಂಥ ಕತ್ತು ಮತ್ತು ತಲೆ, ಮೋಟಾದ ಕಾಲುಗಳು, ಚಿಕ್ಕದಾದ ಚೂಪಾದ ಕೊಕ್ಕು, ಉದ್ದನೆಯ ಹಾಗೂ ಚೂಪಾದ ರೆಕ್ಕೆ ಮತ್ತು ಬಾಲ_ಇವು ಕಲ್ಲುಗೌಜಲು ಹಕ್ಕಿಯ ಪ್ರಮುಖ ಲಕ್ಷಣಗಳು. ಈ ಹಕ್ಕಿಗಳು ಸಾಮಾನ್ಯವಾಗಿ ಗುಂಪುಗಳಲ್ಲಿಯೇ ಇರುತ್ತವೆ. ಹಾರುವುದು ಕಡಿಮೆ, ನೆಲದ ಮೇಲೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಓಡಾಡುತ್ತವೆ. ಆದರೆ ಮಾನವ ಹಾಗೂ ಇತರ ಶತ್ರುಗಳ ಸುಳಿವು ತಿಳಿದೊಡನೆಯೇ ವೇಗವಾಗಿ ಹಾರಿಹೋಗುತ್ತವೆ. ಇವು ಬಹಳ ಪುಕ್ಕಲು ಸ್ವಭಾವದ ಅಲ್ಲದೆ ಬಹು ಎಚ್ಚರಿಕೆಯ ಹಕ್ಕಿಗಳೆಂದು ಹೆಸರಾಗಿವೆ. ಸಣ್ಣ ಕಾಯಿಗಳು, ಕಾಳುಗಳು, ಮೊಗ್ಗುಗಳು ಹಾಗೂ ಸಣ್ಣಪುಟ್ಟ ಕೀಟಗಳು ಇವುಗಳ ಆಹಾರ.

ಕಲ್ಲುಗೌಜಲು ಹಕ್ಕಿಗಳು ಸಾಮಾನ್ಯವಾಗಿ ಬಂಜರುಪ್ರದೇಶಗಳಲ್ಲಿ ವಾಸಿಸಿದರೂ ದಿನಕ್ಕೆರಡು ಬಾರಿ ನೀರು ಕುಡಿಯಲು ಹತ್ತಿರದ ಯಾವುದಾದರೂ ಕೊಳ, ತೊರೆಗಳಿಗೆ ಭೇಟಿಕೊಡುತ್ತವೆ. ಈ ಭೇಟಿಯ ಉಪಯೋಗವನ್ನು ಬೇಟೆಗಾರರು ಪಡೆದುಕೊಳ್ಳಲು ಯತ್ನಿಸುತ್ತಾರೆ. ಆದರೆ ಹಕ್ಕಿಗಳು ಬಲು ಸೂಕ್ಷ್ಮಮತಿಗಳು. ನೀರಿಗೆ ಬಾಯಿಕ್ಕುವ ಮುನ್ನ ಇವು ಕೊಳದಿಂದ ನೂರಾರು ಗಜಗಳ ದೂರದಲ್ಲೇ ಇಳಿದು ೫_೧೦ ಮಿನಿಟು ಯಾರಾದರೂ ಶತ್ರುಗಳಿದ್ದಾರೋ ಏನೋ ಎಂದು ಕಾಯುತ್ತವೆ. ಯಾರೂ ಇಲ್ಲ ಎಂದು ಮನವರಿಕೆಯಾದ ಮೇಲೆ ನೀರು ಕುಡಿಯಲು ಧಾವಿಸುತ್ತವೆ. ನೀರಿನಲ್ಲಿ ಎದೆಯಾಳದ ವರೆಗೂ ಇಳಿದು ನೀರನ್ನು ಹೀರಿ ಕುಡಿಯುತ್ತವೆ. ಅಲ್ಲಿಂದ ಗೂಡಿಗೆ ವಾಪಸಾದ ಮೇಲೆ ತಮ್ಮ ಒದ್ದೆಯಾದ ಎದೆಯನ್ನು ಮರಿಗಳಿಗೆ ಚೀಪಲು ಕೊಟ್ಟು ಅವಕ್ಕೆ ನೀರುಣಿಸುತ್ತವೆ. ಈ ಹಕ್ಕಿಗಳು ನೆಲದ ಮೇಲೆ ಗೂಡುಕಟ್ಟಿ ೨-೪ ಮೊಟ್ಟೆಗಳನ್ನಿಡುತ್ತವೆ. ಗಂಡು ಹೆಣ್ಣುಗಳೆರಡೂ ಸರದಿಯ ಪ್ರಕಾರ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡುತ್ತವೆ. ಮರಿಗಳಿಗೆ ಎರಡೂ ಗುಟುಕು ಕೊಟ್ಟು ಸಲಹುತ್ತವೆ.

ಕೆಲವು ಬಗೆಯ ಕಲ್ಲುಗೌಜಲು ಹಕ್ಕಿಗಳಲ್ಲಿ ವಲಸೆಹೋಗುವ ಕ್ರಮವೂ ಇದೆ. ಉದಾಹರಣೆಗೆ ಮಧ್ಯ ಏಷ್ಯದ ನಿವಾಸಿಯಾದ ಸಿರಾಪ್ಟಿಸ್ ಪ್ಯಾರಡಾಕ್ಸಸ್ ಎಂಬ ಹಕ್ಕಿ ಪಶ್ಚಿಮ ಯುರೋಪಿಗೆ ಚಳಿಗಾಲದಲ್ಲಿ ವಲಸೆ ಹೋಗುತ್ತದೆ.

ಎಲ್ಲ ಬಗೆಯ ಕಲ್ಲು ಗೌಜಲುಗಳೂ ಮೃಗಯಾಪಕ್ಷಿಗಳೆಂದು (ಗೇಮ್ ಬಡ್ರ್ಸ್‌) ಹೆಸರಾಗಿವೆ.

ಪ್ರಬೇಧಗಳು ಮತ್ತು ಅವುಗಳ ಲಕ್ಷಣಗಳು

ಬದಲಾಯಿಸಿ
ಕಲ್ಲುಗೌಜಲು ಹಕ್ಕಿ
Common and binomial names[] ಚಿತ್ರ ವಿವರಣೆ,ಪ್ರದೇಶ ಮತ್ತು ಸ್ಥಿತಿ ಮೊಟ್ಟೆ
Pin-tailed sandgrouse
Pterocles alchata
(Linnaeus, 1766)
 
Length 31 to 39 centimetres (12 to 15 in)
There are two subspecies:[]
P. a. alchata – Spain, Portugal, France, north west Africa
P. a. caudacutus – Middle East, Turkey and eastward to Kazakhstan

nvfklnk<> Status: Least concern
 
Double-banded sandgrouse
Pterocles bicinctus
Temminck, 1815
 
Length 31 to 39 centimetres (12 to 15 in)
There are three subspecies:[]
P. b. ansorgei – south west Angola
P. b. bicinctus – Namibia, Botswana, north west Cape Province
P. b. multicolor – Zambia, Malawi, Mozambique and Transvaal

Status: Least concern
Burchell's sandgrouse
Pterocles burchelli
Sclater, 1922
 
Length 25 cm (10 in)
Monotypic[]
Angola, Namibia, Botswana, Zambia, Zimbabwe, South Africa

Status: Least concern
Crowned sandgrouse
Pterocles coronatus
Lichtenstein, 1823
 
There are five subspecies:[]
P. c. atratus – Saudi Arabia, Iran, Afghanistan
P. c. coronatus – Sahara, Morocco to Red Sea
P. c. ladas – Pakistan
P. c. saturatus – Oman
P. c. vastitas – Sinai, Israel, Jordan
Status: Least concern
Black-faced sandgrouse
Pterocles decoratus
Cabanis, 1868
 
There are three subspecies:[]
P. d. decoratus – south east Kenya and east Tanzania
P. d. ellenbecki – north east Uganda, north Kenya, Ethiopia, Somalia
P. d. loveridgei – west Kenya, west Tanzania

Status: Least concern
Chestnut-bellied sandgrouse
Pterocles exustus
Temminck, 1825
(Pictured on left)
 
There are six subspecies:[]
P. e. ellioti – Sudan, Eritrea, north Ethiopia, Somalia
P. e. erlangeri – Saudi Arabia, Gulf States, Yemen
P. e. exustus – Mauritania to Sudan
P. e. floweri – Egypt (almost certainly extinct)
P. e. hindustan – south east Iran, Pakistan, India
P. e. olivascens – south Ethiopia, Kenya, north Tanzania
Status: Least concern
Yellow-throated sandgrouse
Pterocles gutturalis
Smith, 1836
 
There are two subspecies:[]
P. g. gutturalis – south Zambia, Zimbabwe, Botswana, South Africa
P. g. saturatior – Ethiopia, Kenya, Tanzania, north Zambia

Status: Least concern
Painted sandgrouse
Pterocles indicus
Cabanis, 1868
 
Monotypic[]
India

Status: Least concern
 
Lichtenstein's sandgrouse
Pterocles lichtensteinii
Temminck, 1825
 
There are five subspecies:[೧೦]
P. l. targius – Sahara, Sahel, south Morocco to Chad
P. l. lichtensteinii – Israel, Sinai, Egypt, Sudan, Ethiopia, Somalia
P. l. sukensis – Sudan, Ethiopia, Kenya
P. l. ingramsi – Yemen
P. l. arabicus – Saudi Arabia, Iran, Afghanistan, Pakistan
Status: Least concern
Namaqua sandgrouse
Pterocles namaqua
(Gmelin, 1789)
 
Length 31 to 39 centimetres (12 to 15 in)
Monotypic[೧೧]
Angola, Namibia, Zimbabwe, Botswana, South Africa

Status: Least concern
Black-bellied sandgrouse
Pterocles orientalis
(Linnaeus, 1758)
 
There are two subspecies:[೧೨]
P. o. arenarius – Kazakhstan, Pakistan and western China
P. o. orientalis – Northwest Africa, Canary Islands, Iberian Peninsula,
Cyprus, Middle East, Turkey and Iran

Status: Least concern
 
Madagascan sandgrouse
Pterocles personatus
Gould, 1843
 

Monotypic[೧೩]
Madagascar

Status: Least concern
Four-banded sandgrouse
Pterocles quadricinctus
(Temminck, 1815)
 
Length 25 to 28 centimetres (9.8 to 11.0 in)
Monotypic[೧೪]
Central Africa

Status: Least concern
 
Spotted sandgrouse
Pterocles senegallus
(Linnaeus, 1771)
 
Length 33 centimetres (13 in)
Monotypic[೧೫]
Northern Africa, Middle East and western Asia

Status: Least concern
 
Tibetan sandgrouse
Syrrhaptes tibetanus
(Gould, 1850)
 
Length 30 to 41 centimetres (12 to 16 in)
Monotypic[೧೬]
Mountains of central Asia, Tibet and central China

Status: Least concern
Pallas's sandgrouse
Syrrhaptes paradoxus
(Pallas, 1773)
 
Length 30 to 41 centimetres (12 to 16 in)
Monotypic[೧೭]
Mountains and steppes of central Asia

Status: Least concern
 

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. del Hoyo, J. (1997). Handbook of the Birds of the World Volume 4: Sandgrouse to Cuckoos. Lynx Editions. ISBN 84-87334-22-9. {{cite book}}: Unknown parameter |coauthors= ignored (|author= suggested) (help)
  2. "Pin-tailed sandgrouse (Pterocles alchata)". The Internet Bird Collection. Archived from the original on 2010-03-10. Retrieved 2012-06-02.
  3. "Double-banded sandgrouse (Pterocles bicinctus)". The Internet Bird Collection. Archived from the original on 2012-02-06. Retrieved 2012-06-02.
  4. "Burchell's sandgrouse (Pterocles burchelli)". The Internet Bird Collection. Archived from the original on 2012-02-07. Retrieved 2012-06-02.
  5. "Crowned sandgrouse (Pterocles coronatus)". The Internet Bird Collection. Archived from the original on 2015-10-05. Retrieved 2012-06-02.
  6. "Black-faced sandgrouse (Pterocles decoratus)". The Internet Bird Collection. Archived from the original on 2015-09-08. Retrieved 2012-06-02.
  7. "Chestnut-bellied sandgrouse (Pterocles exustus)". The Internet Bird Collection. Archived from the original on 2012-02-08. Retrieved 2012-06-02.
  8. "Yellow-throated sandgrouse (Pterocles gutturalis)". The Internet Bird Collection. Archived from the original on 2012-02-06. Retrieved 2012-06-02.
  9. "Painted sandgrouse (Pterocles indicus)". The Internet Bird Collection. Archived from the original on 2012-02-07. Retrieved 2012-06-02.
  10. "Lichtenstein's sandgrouse (Pterocles lichtensteinii)". The Internet Bird Collection. Archived from the original on 2012-05-03. Retrieved 2012-06-02.
  11. "Namaqua sandgrouse (Pterocles namaqua)". The Internet Bird Collection. Archived from the original on 2012-02-07. Retrieved 2012-06-02.
  12. "Black-bellied sandgrouse (Pterocles orientalis)". The Internet Bird Collection. Archived from the original on 2012-05-03. Retrieved 2012-06-02.
  13. "Madagascan sandgrouse (Pterocles personatus)". The Internet Bird Collection. Archived from the original on 2012-02-02. Retrieved 2012-06-02.
  14. "Four-banded sandgrouse (Pterocles quadricinctus)". The Internet Bird Collection. Archived from the original on 2012-02-07. Retrieved 2012-06-02.
  15. "Spotted sandgrouse (Pterocles senegallus)". The Internet Bird Collection. Archived from the original on 2012-05-03. Retrieved 2012-06-02.
  16. "Tibetan sandgrouse (Syrrhaptes tibetanus)". The Internet Bird Collection. Archived from the original on 2012-02-02. Retrieved 2012-06-02.
  17. "Pallas's sandgrouse (Syrrhaptes paradoxus)". The Internet Bird Collection. Archived from the original on 2012-02-07. Retrieved 2012-06-02.