ಕಲಾಕ್ಷೇತ್ರ
ಕಲಾಕ್ಷೇತ್ರ: ಚೆನ್ನೈನಲ್ಲಿರುವ ಸಂಗೀತ, ನಾಟ್ಯ ಬೋಧನಾ ಸಂಸ್ಥೆ. ರುಕ್ಮಿಣಿದೇವಿ ಅರುಂಡೇಲ್ ಅವರಿಂದ ಜನವರಿ ೧೯೩೬ರಲ್ಲಿ ಸ್ಥಾಪಿಸಲ್ಪಟ್ಟಿತು. ಭರತನಾಟ್ಯ, ಸಂಗೀತ ಇವುಗಳ ಬೋಧನೆಗೆ ಮೀಸಲಾದ ಸಂಸ್ಥೆ. ಈ ಸಂಸ್ಥೆಗೆ ದೇಶ ವಿದೇಶಗಳಲ್ಲಿ ಮನ್ನಣೆ ದೊರಕಿ ಪ್ರಸಿದ್ಧಿ ಪಡೆಯಿತು. ರುಕ್ಮಿಣಿದೇವಿಯವರು ೧೯೫೨, ಮತ್ತು ೧೯೫೬ರಲ್ಲಿ ಭಾರತದ ರಾಜ್ಯಸಭಾ ಸದಸ್ಯೆಯಾಗಿ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿಯಂತೆ ವಿದೇಶಗಳಲ್ಲಿ ಸಂಚರಿಸಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಇವರ ನಿಧನಾನಂತರ ಭಾರತ ಸರ್ಕಾರ ‘ಕಲಾಕ್ಷೇತ್ರ ಫೌಂಡೇಷನ್ ಆ್ಯಕ್ಟ್ ನಂ.೬/೧೯೯೪’ ಅನ್ನು ಹೊರಡಿಸಿತು. ಚೆನ್ನೈ ಸರ್ಕಾರ ೨೯ ಸೆಪ್ಟಂಬರ್ ೨೦೦೩ರಲ್ಲಿ ಸಂಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಈಗ ೪ ಮತ್ತು ೫ ವರ್ಷಗಳ- ಗಾಯನ, ವಾದ್ಯಗಳ ನುಡಿಸುವಿಕೆ ಮತ್ತು ನಾಟ್ಯ ಇವುಗಳ ತರಬೇತಿ ತರಗತಿಗಳು ನಡೆಯುತ್ತಿವೆ. ಈ ಸಂಸ್ಥೆಯಲ್ಲಿ ಟೈಗರ್ ವರದಾಚಾರ್, ಮೈಸೂರು ವಾಸುದೇವಾಚಾರ್, ಪಾಪನಾಶಂ ಶಿವನ್, ಮೀನಾಕ್ಷಿ ಸುಂದರಂ ಪಿಳ್ಳೆ ಮೊದಲಾದ ಪ್ರಸಿದ್ಧ ವಿದ್ವಾಂಸರು ಬೋಧಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.
ಕಲಾಕ್ಷೇತ್ರ | |
---|---|
140x | |
Location | |
ಬೆಸೆಂಟ್ ನಗರ, ಚೆನ್ನೈ, ಭಾರತ, | |
Coordinates | 12°59′17″N 80°15′54″E / 12.9881°N 80.26500°E |
Information | |
ಸ್ಥಾಪನೆ | ಜನವರಿ 1936 |
Founder | ರುಕ್ಮಿಣಿ ದೇವಿ ಅರುಂಡೇಲ್ |
ನಿರ್ದೇಶಕರು | ಪ್ರಿಯದರ್ಶಿನಿ ಗೋವಿಂದ್ |
ಅಧ್ಯಕ್ಷರು | ಎನ್.ಗೋಪಾಲಸ್ವಾಮಿ[೧] |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Kalakshetra official website Archived 2008-02-13 ವೇಬ್ಯಾಕ್ ಮೆಷಿನ್ ನಲ್ಲಿ.
- Rukmini Devi's inaugural address, 1936
- The Vision of Rukmini Devi, The hindu, December 26, 2003 Archived May 22, 2009[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.
- Photos of Kalakshetra
- Kalakshetra Foundation's December 2009 Event - Shiv Shakthi
ಉಲ್ಲೇಖಗಳು
ಬದಲಾಯಿಸಿ