ಕರ್ನಾಟಕ ಕಲಾಚರಿತ್ರೆ

ಕರ್ನಾಟಕದ ದೃಶ್ಯಕಲೆಗೆ ಸುದೀರ್ಘವಾದ ಇತಿಹಾಸವಿದೆ. ಆದರೆ ೨೦ನೇ ಶತಮಾನದ ದೃಶ್ಯಕಲೆಗೂ ಅದಕ್ಕೂ ಮುನ್ನವಿದ್ದ ಕಲೆಗೂ ವ್ಯತ್ಯಾಸವಿರುವುದೂ ಅಷ್ಟೇ ನಿಜ. ೨೦ನೇ ಶತಮಾನದ ಕಲೆಯಲ್ಲಿ ಕಲಾವಿದನ ’ಸಹಿ’ ಮುಖ್ಯವಾಗುತ್ತದೆ, ಕಲಾವಿದ ಮುಖ್ಯನಾಗುತ್ತಾನೆ. ಆ ಮುನ್ನ ಕಲೆಯ ಪ್ರೋತ್ಸಾಹಕರು ಮುಖ್ಯರಾಗುತ್ತಿದ್ದರು. ಒಟ್ಟಾರೆಯಾಗಿ ’ಒಡೆತನದ’ ಅಧಿಕಾರವಿಲ್ಲದೆ ಹೇಗೆ ಭೌಗೋಳಿಕವಾಗಿ ಕಲೆಯನ್ನು ಚರ್ಚಿಸಲು ಸಾಧ್ಯವಿಲ್ಲವೋ ಹಾಗೇ ಅದರಿಂದ ಪ್ರಭಾವಿತವಾದ ಕರ್ನಾಟಕದ ಕಲೆಯೂ ಸಹ. ಅಂತೆಯೆ ೨೦ನೇ ಶತಮಾನದಾದ್ಯಂತ ಕಲೆಗೆ ಕಲಾವಿದ, ಕಲಾ ವಿಮರ್ಶಕ, ಕಲಾ ಇತಿಹಾಸಕಾರ, ಕಲಾ ಸಂಸ್ಥೆಗಳು, ಕಲಾ ಶಾಲೆಗಳು, ಸಂಗ್ರಹಾಲಯಗಳು ಮತ್ತು ಕಲಾಸಿಲಬಸ್‍ಗಳು ಮುಖ್ಯವಾದವು. ಅವುಗಳಲ್ಲಿ ಕೆಲವು ಹೀಗಿವೆ:

ಡಿ.ವಿ.ಹಾಲಭಾವಿ, ಪಾವಂಜೆ, ದಂಡಾವತಿಮಠ, ಕೆ.ವೆಂಕಟಪ್ಪ, ಕೆ.ಕೆ. ಹೆಬ್ಬಾರ್, ವೀರಪ್ಪ, ಸೂಫಿ, ಎನ್.ಹನುಮಯ್ಯ, ರುಮಾಲೆ ಚೆನ್ನಬಸಪ್ಪ, ಆರ್.ಎಸ್.ನಾಯ್ಡು, ಶಂಕರಗೊಡ ಬೆಟ್ಟದೂರ[], ಆರ್.ಎಂ.ಹಡಪದ್, ಕೆ.ಟಿ.ಶಿವಪ್ರಸಾದ್[], ಸುರೇಖ[], ಉಮೇಶ್ ಮದ್ದನಹಳ್ಳಿ, ಎನ್.ಎಸ್.ಹರ್ಷ, ರೇಣುಕಾ ಕೆಸರಮಡು ಮುಂತಾದವರು.

ಜಿ.ವೆಂಕಟಾಚಲಂ, ಕೆ.ವಿ.ಸುಬ್ರಹ್ಮಣ್ಯಂ, ಮಾರ್ಥ ಯಾಕಿಮೋವಿಜ್, ಡಾ.ಆ.ಲ.ನರಸಿಂಹನ್, ಎನ್.ಮರಿಶಾಮಾಚಾರ್[], ಡಾ.ಶಿವಾನಂದ ಬಂಟನೂರ, ಎಚ್.ಎ.ಅನಿಲ್ ಕುಮಾರ್ [] ಮುಂತಾದವರು.

ಚಿತ್ರಕಲಾ ಮಹಾವಿದ್ಯಾಲಯ College of Fine Arts, ಕರ್ನಾಟಕ ಚಿತ್ರಕಲಾ ಪರಿಷತ್ತು;ಬೆಂಗಳೂರು; ಕಲಾಮಂದಿರ, ಬೆಂಗಳೂರು; ಕೆನ್ ಕಲಾಶಾಲೆ, ಬೆಂಗಳೂರು; ಚೇತನ ಲಲಿತಕಲಾ ಮಹಾವಿದ್ಯಾಲಯ ಬೆಂಗಳೂರು; ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ, ಗುಲಬರ್ಗ; ಚಾಮರಾಜೇಂದ್ರ ಆಕಾಡೆಮಿ ಆಫ್ ವಿಜ್ಯುಯಲ್ ಆರ್ಟ್ಸ್ CAVA, ಮೈಸೂರು; ದಾವಣಗೆರೆ ಸ್ಕೂಲ್ ಆಫ್ ಫೈನ್ ಆರ್ಟ್ಸ್, ದಾವಣಗೆರೆ; ಹಾಲಭಾವಿ ಸ್ಕೂಲ್ ಆಫ್ ಫೈನ್ ಆರ್ಟ್ಸ್, ಧಾರವಾಡ.

೧೯೬೩ರಲ್ಲಿ ನಾಲ್ವರು ಕಲಾವಿದರು ಸೇರಿ ಆರಂಭಿಸಿದ (("ವಿ ಫೋರ್")) ('ನಾವು ನಾಲ್ವರು' --ಆರ್.ಎಂ.ಹಡಪದ್, ಪೀಟರ್ ಲೂಯಿಸ್, ಮನೋಳಿ, ಜಿ.ವೈ.ಹುಬ್ಳೀಕರ್) ಕರ್ನಾಟಕದ ಮೊದಲ ನಿರ್ದಿಷ್ಟ ಆಧುನಿಕ ಕಲಾಚಳುವಳಿ ಎಂದು ವಿಮರ್ಶಕರು ಗುರ್ತಿಸುತ್ತಾರೆ. ಮುಂದೆ ಆರ್.ಎಂ.ಹಡಪದ್ ೧೯೬೪ರಲ್ಲಿ ಕೆನ್ ಕಲಾಶಾಲೆಯನ್ನು ಶೇಷಾದ್ರಿಪುರದಲ್ಲಿ ಸ್ಥಾಪಿಸಿದರು. ಕೆನ್ ಶಾಲೆಯನ್ನು ಮೊದಲ ಆಧುನಿಕ ಕಲಾಶಾಲೆ ಎಂದೂ ಗುರ್ತಿಸಲಾಗುತ್ತದೆ. ಕಲಾಮಂದಿರವು ಸುಮಾರು ಎಂಟು ದಶಕಗಳಷ್ಟು ಹಳೆಯದಾಗಿದ್ದು, ಅ.ನ.ಸುಬ್ಬರಾವ್ ಎಂಬ ಕಲಾವಿದರು ಸ್ಥಾಪಿಸಿದ ಶಾಲೆಯದು. 'ಕಲಾ' ಎಂಬ ಪತ್ರಿಕೆಯನ್ನು ಕಲಾಮಂದಿರವು ಒಂದೊಮ್ಮೆ ಪ್ರಕಟಿಸುತ್ತಿದ್ದಂತೆ, ಕೆನ್ ಶಾಲೆಯಿಂದ ಡಾ.ಆ.ಲ.ನರಸಿಂಹನ್ ಅವರು 'ಕಲಾ ವಿಕಾಸ' ಎಂಬ ಪತ್ರಿಕೆಯನ್ನು ಸುಮಾರು ನಾಲ್ಕೈದು ವರ್ಷಕಾಲ ಸಂಪಾದಿಸಿ, ಕನ್ನಡದಲ್ಲಿ ಕಲಾ ಸಾಹಿತ್ಯ ರೂಪು ಗೊಳ್ಳುವಲ್ಲಿ ಪ್ರಯತ್ನವನ್ನು ಕೈಗೊಂಡಿದ್ದರು.

ಕರ್ನಾಟಕದ ಸಮಕಾಲೀನ ದೃಶ್ಯಕಲೆಯು ಇಂದು ಸಮಗ್ರ ಭಾರತೀಯ ಕಲೆಯಲ್ಲಿ ಒಂದು ವಿಭಿನ್ನ ಆಯಾಮವನ್ನು ಹೊಂದಿದೆ. ಗ್ಯಾಲರಿಗಳ, ಅಕಾಡೆಮಿಗಳ ಹಾಗೂ ಸಂಗ್ರಹಾಲಯಗಳ ಸಹಾಯವಿಲ್ಲದೆ ಕಲಾವಿದರಿಂದಲೇ ಆರಂಭಗೊಂಡು ಒಕ್ಕೂಟಗಳು, ಸಂಘಟನೆಗಳು ಹೊಸ ಬಗೆಯ, ಹೊಸ ಮಾಧ್ಯಮ ಕಲಾಕೃತಿಗಳನ್ನು ಸೃಷ್ಟಿಸಲು ಕಳೆದ ಒಂದು ದಶಕದಿಂದ ಅನುವು ಮಾಡಿಕೊಟ್ಟಿವೆ. ಬಾರ್ ಒನ್ ರೆಸಿಡೆನ್ಸಿ (Bangalore Art Residency One), ನಂಬರ್ ವನ್ ಶಾಂತಿರಸ್ತೆ (No.1Shanthiroad) ಮುಂತಾದುವು ಶೈಕ್ಷಣಿಕ ಪರಿಧಿಯ ಹೊರಗೂ ಕಲಾಸೃಷ್ಟಿ ಸಾಧ್ಯ ಎಂದು ನಿರೂಪಿಸಿದ್ದು ಕರ್ನಾಟಕ ಸಮಕಾಲೀನ ಕಲೆಯ ಹೆಚ್ಚುಗಾರಿಕೆ.

’ಕಲಾವಸತಿ’ ಅಥವಾ ’ಆರ್ಟ್ ರೆಸಿಡೆನ್ಸಿ’ ಎಂಬುದು ೧೯೯೦ರ ನಂತರ ಭಾರತದಲ್ಲಿ ಅಂತೆಯೇ ಕರ್ನಾಟಕದಲ್ಲಿ ಚಾಲ್ತಿಗೆ ಬಂದ ಒಂದು ಕಲಾವೃತ್ತಿಯ ಅಭ್ಯಾಸವಿದು. ಇದರ ಅರ್ಥ ಇಷ್ಟು: ಮೊದಲೆಲ್ಲ (ಮತ್ತು ಈಗಲೂ) ಕಲಾಕೃತಿಯನ್ನು ಗ್ಯಾಲರಿಯಲ್ಲಿರಿಸುವುದು, ಅದನ್ನು ಪ್ರದರ್ಶಿಸು ವುದು, ಮಾರುವುದು ಮತ್ತು ಅದಕ್ಕೆ ಪ್ರತಿಕ್ರಿಯೆಯನ್ನು ಕಲಾಪತ್ರಿಕೋಧ್ಯಮದಿಂದ ನಿರೀಕ್ಷಿಸುವುದು -- ಇವಿಷ್ಟು ಕರ್ನಾಟಕದ ಆಧುನಿಕ ಕಲೆಯ ಅಭ್ಯಾಸವಾಗಿತ್ತು.

ಬಾಹ್ಯಾ ಕೊಂಡಿಗಳು

ಬದಲಾಯಿಸಿ

೧. http://www.1shanthiroad.com

೨. http://www.bar1.org Archived 2012-04-29 ವೇಬ್ಯಾಕ್ ಮೆಷಿನ್ ನಲ್ಲಿ.

೩. http://www.anilkumarha.com Archived 2016-10-04 ವೇಬ್ಯಾಕ್ ಮೆಷಿನ್ ನಲ್ಲಿ.

೪. http://www.belakindi.com

ಅಡಿಟಿಪ್ಪಣಿ

ಬದಲಾಯಿಸಿ

೧. http://www.anilkumarha.com Archived 2016-10-04 ವೇಬ್ಯಾಕ್ ಮೆಷಿನ್ ನಲ್ಲಿ.

೨. http://www.anilkumarha.com Archived 2016-10-04 ವೇಬ್ಯಾಕ್ ಮೆಷಿನ್ ನಲ್ಲಿ.

೩. http://www.surekha.info Archived 2019-12-03 ವೇಬ್ಯಾಕ್ ಮೆಷಿನ್ ನಲ್ಲಿ.

೪. http://kn.wikipedia.org/wiki/ಎನ್[ಶಾಶ್ವತವಾಗಿ ಮಡಿದ ಕೊಂಡಿ]. ಮರಿಶಾಮಾಚಾರ್

೫. http://www.anilkumarha.com Archived 2016-10-04 ವೇಬ್ಯಾಕ್ ಮೆಷಿನ್ ನಲ್ಲಿ.

  1. ೧.೦ ೧.೧ ೧.೨ "ಆರ್ಕೈವ್ ನಕಲು". Archived from the original on 2016-10-04. Retrieved 2011-02-26.
  2. "ಆರ್ಕೈವ್ ನಕಲು". Archived from the original on 2019-12-03. Retrieved 2021-09-01.
  3. kn.wikipedia.org/ಎನ್.ಮರಿಶಾಮಾಚಾರ್