ಕರ್ನಾಟಕದಲ್ಲಿ ವನ್ಯಜೀವಿಧಾಮಗಳು
ಕರ್ನಾಟಕದಲ್ಲಿ ವನ್ಯಜೀವಿ ರಕ್ಷಿತಾರಣ್ಯಗಳು
ಬದಲಾಯಿಸಿ- 1972ರಲ್ಲಿ ಭಾರತದೇಶದಲ್ಲಿ ತಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಲವು ವನ್ಯಜೀವಿ ಪ್ರಭೇದಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇದೇ ದಶಕದಲ್ಲಿ ಪ್ರಾರಂಭವಾದ ಹಲವು ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳು ಕರ್ನಾಟಕದಲ್ಲೂ ಹಲವಾರು ಸಕಾರಾತ್ಮಕ ಪರಿಣಾಮಗಳನ್ನು ತಂದವು. ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಸ್ಥಾಪಿತಗೊಂಡವು.
- ಇದರ ಪರಿಣಾಮವಾಗಿ ಮಾನವ- ವನ್ಯಜೀವಿ ಸಂಘರ್ಷ ಕೂಡ ಹೆಚ್ಚಾಗಿದೆ. ಕಳೆದ ಏಳು ವರ್ಷಗಳಲ್ಲಿ ಆನೆ, ಹುಲಿ, ಚಿರತೆಗಳ ದಾಳಿಯಿಂದ ರಾಜ್ಯದಲ್ಲಿ 286 ಜನ ಜೀವ ಕಳೆದುಕೊಂಡಿದ್ದಾರೆ. ಈಗ ಸಹಿಷ್ಣುತೆಯಿಂದಿದ್ದ ಅರಣ್ಯದಂಚಿನ ಸಹನೆ ಕಳೆದುಕೊಂಡ ಜನ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಸಮಂಜಸವಾದ ಉತ್ತರವಿಲ್ಲದಿದ್ದರೆ ಇವುಗಳ ಸಂರಕ್ಷಣೆಗೆ ಬೆಂಬಲ ಸಿಗುವುದು ಇನ್ನೂ ಕಠಿಣವಾಗುತ್ತದೆ
ವನ್ಯಜೀವಿ ರಕ್ಷಣಾ ತಾಣಗಳು
ಬದಲಾಯಿಸಿ- ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಳ್ಳುವ ಪ್ರಮುಖವಾದ ಕಾರ್ಯನೀತಿಯೆಂದರೆ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆ. ಮೈಸೂರು ರಾಜ್ಯ ಸ್ಥಾಪನೆಯಾಗುವ ಮುನ್ನವೇ ಘೋಷಣೆಯಾಗಿದ್ದು ರಂಗನತಿಟ್ಟು ವನ್ಯಜೀವಿಧಾಮ. ಇದನ್ನು ಬಿಟ್ಟರೆ ಇನ್ನೆಲ್ಲ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳು ರಾಜ್ಯದಲ್ಲಿ ಸ್ಥಾಪಿತವಾಗಿರುವುದು 70ರ ದಶಕದ ನಂತರ.
- ಭಾಷಾವಾರು ರಾಜ್ಯಗಳ ವಿಂಗಡಣೆಯಾದಾಗ ಕರ್ನಾಟಕಕ್ಕೆ ಮದ್ರಾಸ್ ಮತ್ತು ಮುಂಬಯಿ ಪ್ರಾಂತ್ಯಗಳಿಂದ, ಕೊಡಗು ರಾಜ್ಯ ಹಾಗೂ ಇನ್ನಿತರ ಪ್ರದೇಶಗಳ ಅರಣ್ಯಗಳು ರಾಜ್ಯಕ್ಕೆ ಸೇರಿಕೊಂಡವು.
- ದೇಶದಲ್ಲಿ 1970ರ ನಂತರ ಆದ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ಅತೀ ದೊಡ್ಡ ವಿಸ್ತರಣಾ ಕಾರ್ಯ ನಡೆದ್ದದ್ದು ಸ್ವಾತಂತ್ಯ್ರ ಪೂರ್ವದಲ್ಲಿ ಕೇವಲ ಒಂದೇ ಒಂದು ವನ್ಯಜೀವಿಧಾಮವಿದ್ದ ರಾಜ್ಯದಲ್ಲಿ ಇಂದು 29 ವನ್ಯಜೀವಿಧಾಮಗಳು, 5 ರಾಷ್ಟ್ರೀಯ ಉದ್ಯಾನಗಳು, 8 ಸಂರಕ್ಷಣಾ ಮೀಸಲು ಪ್ರದೇಶಗಳು ಮತ್ತು ಒಂದು ಸಮುದಾಯ ಮೀಸಲು ಪ್ರದೇಶಗಳಿವೆ.[೧]
ಕನಾಟಕದಲ್ಲಿರುವ ವನ್ಯಜೀವಿ ರಕ್ಷಿತಾರಣ್ಯಗಳು
ಬದಲಾಯಿಸಿಕ್ರ.ಸಂ. | ಹೆಸರು : ರಕ್ಷಿತ ಅರಣ್ಯ | ಪ್ರವರ್ಗ | ವಿಸ್ತೀರ್ಣ (ಚ.ಕಿ.ಮೀ.) |
---|---|---|---|
1 | ಅಣಶಿ ರಾಷ್ಟ್ರೀಯ ಉದ್ಯಾನ | ಹುಲಿ ಯೋಜನೆ | 417.34 |
2 | ಬಂಡೀಪುರ ರಾಷ್ಟ್ರೀಯ ಉದ್ಯಾನ | ಹುಲಿ ಯೋಜನೆ | 872.24 |
3 | ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನ | ರಾಷ್ಟ್ರೀಯ ಉದ್ಯಾನ | 260.51 |
4 | ಕುದುರೆಮುಖ ರಾಷ್ಟ್ರೀಯ ಉದ್ಯಾನ | ಹುಲಿ ಯೋಜನೆ | 600.57 |
5 | ನಾಗರಹೊಳೆ ರಾಷ್ಟ್ರೀಯ ಉದ್ಯಾನ | ಹುಲಿ ಯೋಜನೆ | 643.39 |
6 | ಆದಿಚುಂಚನಗಿರಿ ನವಿಲುಧಾಮ | ನವಿಲುಧಾಮ | 0.84 |
7 | ಅರಬಿತಿಟ್ಟು ವನ್ಯಜೀವಿಧಾಮ | ವನ್ಯಜೀವಿಧಾಮ | 13.5 |
8 | ಅತೀವೇರಿ ಪಕ್ಷಿಧಾಮ | ಪಕ್ಷಿಧಾಮ | 2.23 |
9 | ಭದ್ರ ವನ್ಯಜೀವಿಧಾಮ | ಹುಲಿ ಯೋಜನೆ | 500.16 |
10 | ಬ್ರಹ್ಮಗಿರಿ ವನ್ಯಜೀವಿಧಾಮ | ವನ್ಯಜೀವಿಧಾಮ | 181.21 |
11 | ಬಿಳಿಗಿರಿ ರಂಗಸ್ವಾಮಿ ಟೆಂಪಲ್ | ವನ್ಯಜೀವಿಧಾಮ ಮತ್ತು ಹುಲಿ ಯೋಜನೆ | 539.52 |
12 | ಕಾವೇರಿ ವನ್ಯಜೀವಿಧಾಮ | ವನ್ಯಜೀವಿಧಾಮ | 1027.53 |
13 | ದಾಂಡೇಲಿ ವನ್ಯಜೀವಿಧಾಮ | ವನ್ಯಜೀವಿಧಾಮ ಮತ್ತು ಹುಲಿ ಯೋಜನೆ | 886.41 |
14 | ದರೋಜಿ ವನ್ಯಜೀವಿಧಾಮ | ವನ್ಯಜೀವಿಧಾಮ | 82.72 |
15 | ಘಟಪ್ರಭಾ ಪಕ್ಷಿಧಾಮ | ಪಕ್ಷಿಧಾಮ | 29.78 |
16 | ಗುಡವಿ ಪಕ್ಷಿಧಾಮ | ಪಕ್ಷಿಧಾಮ | 0.73 |
17 | ಮೇಲುಕೋಟೆ ವನ್ಯಜೀವಿಧಾಮ | ವನ್ಯಜೀವಿಧಾಮ | 49.72 |
18 | ಮೂಕಾಂಬಿಕಾ ವನ್ಯಜೀವಿಧಾಮ | ವನ್ಯಜೀವಿಧಾಮ | 370.37 |
19 | ನುಗು ವನ್ಯಜೀವಿಧಾಮ | ವನ್ಯಜೀವಿಧಾಮ | 30.32 |
20 | ಪುಷ್ಪಗಿರಿ ವನ್ಯಜೀವಿಧಾಮ | ವನ್ಯಜೀವಿಧಾಮ | 102.59 |
21 | ರಾಣಿಬೆನ್ನೂರು ವನ್ಯಜೀವಿಧಾಮ | ವನ್ಯಜೀವಿಧಾಮ | 119 |
22 | ರಂಗನತಿಟ್ಟು ಪಕ್ಷಿಧಾಮ | ಪಕ್ಷಿಧಾಮ | 0.67 |
23 | ಶರಾವತಿ ವನ್ಯಜೀವಿಧಾಮ | ವನ್ಯಜೀವಿಧಾಮ | 431.23 |
24 | ಶೆಟ್ಟಿಹಳ್ಳಿ ವನ್ಯಜೀವಿಧಾಮ | ವನ್ಯಜೀವಿಧಾಮ | 395.6 |
25 | ಸೋಮೇಶ್ವರ ವನ್ಯಜೀವಿಧಾಮ | ವನ್ಯಜೀವಿಧಾಮ | 314.25 |
26 | ತಲಕಾವೇರಿ ವನ್ಯಜೀವಿಧಾಮ | ವನ್ಯಜೀವಿಧಾಮ | 105.59 |
27 | ಭೀಮಗಡ ವನ್ಯಜೀವಿಧಾಮ | ವನ್ಯಜೀವಿಧಾಮ | 190.42 |
28 | ರಂಗಯ್ಯನದುರ್ಗ ಕೊಂಡುಕುಳಿ | ವನ್ಯಜೀವಿಧಾಮ | 77.23 |
29 | ಚಿಂಚೋಳಿ ವನ್ಯಜೀವಿಧಾಮ | ವನ್ಯಜೀವಿಧಾಮ | 134.88 |
30 | ರಾಮದೇವರಬೆಟ್ಟ | ರಣಹದ್ದುಧಾಮ | 3.46 |
31 | ಮಲೈ ಮಹದೇಶ್ವರ ಬೆಟ್ಟ | ವನ್ಯಜೀವಿಧಾಮ | 906.187 |
32 | ಮಧುಗಿರಿ ವನ್ಯಜೀವಿಧಾಮ | ವನ್ಯಜೀವಿಧಾಮ | 100 |
33 | ಗುಡೇಕೋಟೆ ವನ್ಯಜೀವಿಧಾಮ | ವನ್ಯಜೀವಿಧಾಮ | 38.48 |
34 | ಬಾಗಿಲಕೋಟೆ ಸಣ್ಣಹುಲ್ಲೆ | ವನ್ಯಜೀವಿಧಾಮ | 100 |
ಮಂಡಲಮರಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಡಲಮರಿ ಗುಡ್ಡದಲ್ಲಿ ನರಿ, ತೋಳ, ಕತ್ತೆ ಕಿರುಬ, ಮೊಲ, ನವಿಲು, ಮುಳ್ಳುಹಂದಿ, ಕಾಡು ಮಿಕ ಸೇರಿದಂತೆ ಇನ್ನಿತರ ವನ್ಯಜೀವಿಗಳ ತಾಣ
ಸಂರಕ್ಷಣಾ ಮೀಸಲು ಪ್ರದೇಶಗಳು
ಬದಲಾಯಿಸಿಕ್ರ.ಸಂ. | ಹೆಸರು ರಕ್ಷಿತ ಅರಣ್ಯದ ಪ್ರವರ್ಗ | ವಿಸ್ತೀರ್ಣ (ಚ.ಕಿ.ಮೀ.) |
---|---|---|
1 | ಬಂಕಾಪುರ ನವಿಲು ಸಂರಕ್ಷಣಾ ಮೀಸಲು ಪ್ರದೇಶ | 0.56 |
2 | ಮೈದೇನಹಳ್ಳಿ ಸಂರಕ್ಣಾ ಮೀಸಲು ಪ್ರದೇಶ | 3.23 |
3 | ಬಾಸೂರು ಅಮೃತಮಹಲ್ ಕಾವಲು ಸಂರಕ್ಣಾ ಮೀಸಲು ಪ್ರದೇಶ | 7.36 |
4 | ಹಾರ್ನ್ ಬಿಲ್ ಸಂರಕ್ಣಾ ಮೀಸಲು ಪ್ರದೇಶ | 52.5 |
5 | ಅಘನಾಶಿನಿ ಸಂರಕ್ಣಾ ಮೀಸಲು ಪ್ರದೇಶ | 256.52 |
6 | ಬೇಡ್ತಿ ಸಂರಕ್ಣಾ ಮೀಸಲು ಪ್ರದೇಶ | 57.3 |
7 | ಶಾಲ್ಮಲಿ ಸಂರಕ್ಣಾ ಮೀಸಲು ಪ್ರದೇಶ | 4.89 |
8 | ಮಾಗಡಿಕೆರೆ ಸಂರಕ್ಣಾ ಮೀಸಲು ಪ್ರದೇಶ | 0.54 |
9 | ಕೊಕ್ಕರೆ ಬೆಳ್ಳೂರು ಸಮುದಾಯ ಮೀಸಲು ಪ್ರದೇಶ | 3.12 |
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ "ಪರಿಸರ ಮೌಲ್ಯಮಾಪನ ಬಹು ಅಗತ್ಯ;ಸಂಜಯ್ ಗುಬ್ಬಿ ; 25 Nov, 2016". Archived from the original on 2016-11-25. Retrieved 2016-11-26.