ಕರ್ನಾಟಕದ ಪ್ರಾಣಿಗಳಲ್ಲಿ ಕಪಿವರ್ಗ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪ್ರಾಣಿಗಳಲ್ಲಿ ಕಪಿವರ್ಗ
ಬದಲಾಯಿಸಿ- ಮಾಮೇಲಿಯ ಎಂದರೆ ಸಸ್ತನಿ ವರ್ಗದ ಹಲವಾರು ಗಣಗಳ ಪ್ರತಿನಿಧಿಗಳು ಕರ್ನಾಟಕದಲ್ಲಿವೆ. ಇವುಗಳ ಹಾಗೂ ಇತರ ಪ್ರಾಣಿಗಳ ವಿವರಗಳನ್ನು ಮುಂದೆ ಬರೆದಿದೆ. ಮಾನವನನ್ನೊಳಗೊಂಡ (ಹೋಮೋ ಸೇಪಿಯನ್ಸ್) ಪ್ರೈಮೇಟ್ ಗಣ ಈ ವರ್ಗಕ್ಕೆ ಸಂಬಂಧಿಸಿದ್ದೇ. ಈ ಗಣದ ಆರು ಪ್ರೈಮೇಟುಗಳು ಕರ್ನಾಟಕದಲ್ಲಿವೆ. ಎಲ್ಲರಿಗೂ ಚಿರಪರಿಚಿತವಾಗಿರುವ ಕೋತಿ ಅಥವಾ ಕಪಿ ಇವುಗಳಲ್ಲೊಂದು. ಇದಕ್ಕೆ ಇಂಗ್ಲಿಷಿನಲ್ಲಿ ಬಾನೆಟ್ ಮಕಾಕ್ ಎಂದು ಹೆಸರು. ಇದು ವೈಜ್ಞಾನಿಕ ಹೆಸರು. ಇದರ ವೈಜ್ಞಾನಿಕ ಹೆಸರು ಮೆಕಾಕ ರೇಡಿಯೇಟ.
ಮೆಕಾಕ ರೇಡಿಯೇಟ:ಕಪಿಗಳು
ಬದಲಾಯಿಸಿ- ಮೆಕಾಕ ರೇಡಿಯೇಟಕುಳಿತುಕೊಂಡಾಗ ಇದರ ಎತ್ತರ ಸುಮಾರು ೬೦ ಸೆಂಮೀ. ಬಾಲದ ಉದ್ದ ತಲೆ ಮತ್ತು ದೇಹದ ಉದ್ದಕ್ಕಿಂತಲೂ ಹೆಚ್ಚು. ಗಂಡಿನ ತೂಕ ಸುಮಾರು ೬ ರಿಂದ ೯ ಕೆ.ಜಿ.; ಹೆಣ್ಣಿನ ತೂಕ ೩-೪ ಕೆ.ಜಿ.; ಇವು ಸಾಮಾನ್ಯವಾಗಿ ಮನುಷ್ಯ ವಾಸಿಸುವ ನೆಲೆಗೆ ಹತ್ತಿರವಾಗಿ ಕಂಡುಬಂದರೂ ಕಾಡಿನಲ್ಲೂ ವಾಸಿಸುತ್ತವೆ.
- ಎರಡನೆಯದು ಸಿಂಗಲೀಕ. ಇದರ ಬಾಲ ಸಿಂಹದ ಬಾಲದಂತಿರುವುದರಿಂದ ಇದಕ್ಕೆ ಲಯನ್ ಟೈಲ್ಡ್ ಮಕಾಕ್ ಎಂದು ಹೆಸರು. ಇದರ ವೈಜ್ಞಾನಿಕ ನಾಮ ಮಕಾಕ ಸೈಲ್ನಸ್. ಇದರ ತಲೆ ಮತ್ತು ದೇಹ ಉದ್ದ ಸುಮಾರು ೫೦-೬೦, ಬಾಲ ೧೦-೧೫ ಸೆಂಮೀ. ಹೆಣ್ಣು ಗಂಡಿಗಿಂತ ಚಿಕ್ಕದು. ಇದು ಪಶ್ಚಿಮಘಟ್ಟ ಮತ್ತು ಉತ್ತರ ಕನ್ನಡ ಜಿಲ್ಲೆಗಳ ದಟ್ಟ ಕಾಡಿನಲ್ಲಿ ವಾಸಿಸುತ್ತವೆ. ಗಲ್ಲ ಮತ್ತು ಕೆನ್ನೆಗಳ ಮೇಲೆ ಉದ್ದವಾದ ಕಂದುಬಣ್ಣದ ಕೂದಲುಂಟು. ಇಡೀ ದೇಹದ ಮೇಲಿನ ಕೂದಲು ಮಿರುಗುವ ಕಪ್ಪು ಬಣ್ಣದ್ದು. ನಾಚಿಕೆಪಡುವ ಈ ಜೀವಿಗಳ ವಾಸ ಗುಂಪು ಗುಂಪಾಗಿ, ಒಂದೊಂದು ಗುಂಪಿನಲ್ಲೂ ಸುಮಾರು ೧೨ ರಿಂದ ೨೦ ಪ್ರಾಣಿಗಳಿರುತ್ತವೆ. ಮರಗಳ ಮೇಲೆಯೇ ಇವುಗಳ ಚಲನವಲನ. ಕೆಲವು ಸಂದರ್ಭಗಳಲ್ಲಿ ಇವು ಮರಗಳಿಂದ ಇಳಿದು ಭೂಮಿಯ ಮೇಲೂ ಓಡಾಡುತ್ತವೆ. ಇವನ್ನು ಪಳಗಿಸುವುದು ಕಷ್ಟ.
- ಮೂಸು ಅಥವಾ ಮುಸುವ ಎಂಬ ಮತ್ತೊಂದು ಬಗೆಯ ವೃಕ್ಷವಾಸಿ ಕಾಡುಗಳಲ್ಲಿ ಹಳ್ಳಿಗಳ ಬಳಿ ಕಂಡುಬರುತ್ತದೆ. ಹನುಮಾನ್ ಕೋತಿ ಇದರ ಪರ್ಯಾಯ ನಾಮ. ಕಾಮನ್ ಲಂಗೂರ್ ಎಂಬ ಸಾಮಾನ್ಯ ಇಂಗ್ಲಿಷ್ ಹೆಸರೂ ಪ್ರೆಸ್óಬೈಟಿಸ್ ಎಂಟೆಲಸ್ ಎಂಬ ವೈಜ್ಞಾನಿಕ ಹೆಸರೂ ಇದಕ್ಕಿವೆ. ಇದು ನೀಳಗಾಲಿನ ನೀಳಬಾಲದ ಕಪ್ಪುಮುಖದ ಕೋತಿ. ಇದು ಭಾರತಾದ್ಯಂತ ಹರಡಿದೆ. ಸಾಮಾನ್ಯವಾಗಿ ಕೊಳ ಮತ್ತು ದೇವಾಲಯಗಳ ಬಳಿ ಇರುವುದು ಹೆಚ್ಚು. ಕೆಲವೆಡೆ ಹಿಂದೂಗಳು ಈ ಕೋತಿಯನ್ನು ಪುಜಿಸುವುದೂ ಉಂಟು. ಇದರ ಆಹಾರ ಹೂ ಹಣ್ಣು ಮೊಗ್ಗು ಇತ್ಯಾದಿ.
- ಪ್ರೆಸ್óಬೈಟಿಸ್ ಜಾನಿ (ನೀಲಗಿರಿ ಲಂಗೂರ್) ಎಂಬ ಇನ್ನೊಂದು ಬಗೆಯ ಕೋತಿ ಕೊಡಗು ಮತ್ತು ಕೊಳ್ಳೇಗಾಲ ತಾಲ್ಲೂಕುಗಳ ಕಾಡುಗಳಲ್ಲಿ ಇದೆ. ಇದರ ತಲೆ ಹಳದಿ ಮತ್ತು ಕಂದುಬಣ್ಣದ ಮಿಶ್ರಣ. ಮೈಮೇಲಿನ ಕೂದಲು ಕಪ್ಪು ಮಿಶ್ರಿತ ಬೂದು. ಹಚ್ಚಹಸಿರು ತುಂಬಿದ ಬೆಟ್ಟಗುಡ್ಡ ಕಾಡುಗಳೇ ಇದರ ವಾಸಸ್ಥಾನs; ಕೆಲವು ವೇಳೆ ತೋಟ ಮತ್ತು ಸಾಗುವಳಿ ಪ್ರದೇಶಗಳಿಗೆ ನುಗ್ಗಿ ಹಾವಳಿ ಮಾಡುವುದೂ ಉಂಟು. ಇದರ ಸುಂದರವಾದ ತುಪ್ಪಳಕ್ಕಾಗಿ ಜನರು ಇದನ್ನು ನಾಯಿಗಳ ಸಹಾಯದಿಂದ ಬೇಟೆಯಾಡುವುದುಂಟು.
- ಲೋರಿಸ್ ಟಾರ್ಡಿಗ್ರೇಡಸ್ ಎಂಬ ಶಾಸ್ತ್ರೀಯ ಹೆಸರುಳ್ಳ ಕಾಡುಪಾಪ ಅಥವಾ ಅಡವಿ ಮನುಷ್ಯ ಕರ್ನಾಟಕದಲ್ಲೂ ಕಂಡುಬಂದಿದೆ. ಕೊಡಗುಜಿಲ್ಲೆ ಇದರ ತವರು ಪ್ರದೇಶ. ಇದೂ ಕೂಡ ವೃಕ್ಷವಾಸಿಯೇ. ಒಂದೊಂದೂ ಸುಮಾರು ೨೮೦-೩೪೦ ಗ್ರಾಂ ತೂಗುತ್ತದೆ. ಗಂಡಿಗಿಂತ ಹೆಣ್ಣು ಸ್ವಲ್ಪ ಚಿಕ್ಕದು. ಬಾಹುಗಳು ನೀಳ ಮತ್ತು ತೆಳು, ಬಾಲ ಇಲ್ಲ. ಮೂತಿ ಚೂಪು; ಕಿವಿಗಳು ದೊಡ್ಡವು. ರಾತ್ರಿಯ ವೇಳೆ ಚಟುವಟಿಕೆಯಿಂದಿದ್ದು ಹಗಲಿನಲ್ಲಿ ಎಲೆಯ ಮರೆಯಲ್ಲಿ ವಿಶ್ರಮಿಸಿಕೊಳ್ಳುತ್ತದೆ. ಹಣ್ಣು ಹಂಪಲೇ ಇದರ ಆಹಾರವಾದರೂ ಭೂಮಿಗಿಳಿದಾಗ ಕೀಟ, ಹಲ್ಲಿ, ಕಪ್ಪೆ ಮತ್ತು ಸಣ್ಣ ಸಣ್ಣ ಪಕ್ಷಿಗಳನ್ನು ತಿನ್ನುತ್ತದೆ.
ಕರ್ನಾಟಕದಲ್ಲಿ ವನ್ಯಜೀವಿಧಾಮಗಳು
ಬದಲಾಯಿಸಿ- ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯ ಸಸ್ಯ ಮತ್ತು ಪ್ರಾಣಿಗಳ ಒಂದು ಸಮೃದ್ಧ ವೈವಿಧ್ಯತೆಯನ್ನು ಹೊಂದಿದೆ. ಇದು 38720 ಚದರ ಕಿಮೀ ಒಂದು ದಾಖಲಿತ ಅರಣ್ಯ ಪ್ರದೇಶವನ್ನು ಹೊಂದಿದೆ ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ 20,19% ಒಳಗೊಂಡಿರುವ. ಈ ಕಾಡುಗಳಲ್ಲಿ ಆನೆ ಜನಸಂಖ್ಯೆಯ 25% ಮತ್ತು ಭಾರತದ ಹುಲಿ ಸಂಖ್ಯೆಯು 15% .ಕರ್ನಾಟಕದಲ್ಲಿ ಒಟ್ಟು ೫ ರಾಷ್ಟ್ರೀಯ ಉದ್ಯಾನವನಗಳಿವೆ.
- .ಅಂಶಿ ರಾಷ್ಟ್ರೀಯ ಉದ್ಯಾವನ
- .ಬಂಡಿಪು ರ ರಾಷ್ಟ್ರೀಯ ಉದ್ಯಾವನ
- .ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾವನ
- .ನಾಗರಹೊಳೆ ರಾಷ್ಟ್ರೀಯ ಉದ್ಯಾವನ
- .ಕುದುರೆಮುಖ ರಾಷ್ಟ್ರೀಯ ಉದ್ಯಾವನ
ನೋಡಿ
ಬದಲಾಯಿಸಿ- ಕರ್ನಾಟಕದಲ್ಲಿ ವನ್ಯಜೀವಿಧಾಮಗಳು
- ಭಾರತದ ರಾಷ್ಟ್ರೀಯ ಉದ್ಯಾನಗಳು
- ಕರ್ನಾಟಕದ ಪ್ರಾಣಿಸಂಪತ್ತು ಈ ಲೇಖನದ ಮೂಲಹೆಸರು -ಮೇಲಿನಂತೆ ಬದಲಾಯಿಸಿದೆ; ತಕ್ಕ ವಿಷಯ ತುಂಬಲಿಕ್ಕಿದೆ
ಕಲಿಕೆಯ ಉದ್ದೇಶಗಳು
ಬದಲಾಯಿಸಿ("ಕರ್ನಾಟಕದ ಪ್ರಾಣಿಸಂಪತ್ತು" ಈ ಲೇಖನ ಬಿ.ಎಡ್ ಶಿಕ್ಷಣದ ಅಂಗವಾಗಿ ಬರೆದ ಲೇಖನ -ಇಲ್ಲಿ ಹಾಕಿದ್ದಾರೆ- ಅದನ್ನು ವಿಕಿಗೆ ಹೊಂದಿಸಿ ಸರಿಪಡಿಸಿದೆ.ಲೇಖನಕ್ಕೆ ಅನುಗುಣವಾಗಿ ಹೊಸ ಹೆಸರು ಕೊಟ್ಟಿದೆ-ಉಲ್ಲೇಖವಿಲ್ಲ)
- .ಕರ್ನಾಟಕದಲ್ಲಿಯ ರಾಷ್ಟ್ರೀಯ ಉದ್ಯಾನವನಗಳು, ಬಗ್ಗೆ ಅರಿಯುವರು.
- .ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು ಇರುವ ಜಿಲ್ಲೆಗಳನ್ನು ಗುರುತಿಸುವರು.
ಉಲ್ಲೇಖ
ಬದಲಾಯಿಸಿ???