ಕರ್ನಾಟಕದಲ್ಲಿ ಆರೋಗ್ಯ ಮತ್ತು ಆಸ್ಪತ್ರೆ.
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ
ಬದಲಾಯಿಸಿ- ಕರ್ನಾಟಕ ರಾಜ್ಯದಲ್ಲಿ 50 ವೈದ್ಯಕೀಯ ಕಾಲೇಜುಗಳಿವೆ. ಪ್ರತಿವರ್ಷ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಾರೆ. ಈ ವಿಷಯದಲ್ಲಿ ರಾಜ್ಯ ಭಾರತ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಘಟನೆಯ ಮಾನದಂಡದ ಪ್ರಕಾರ 1,000 ಜನರಿಗೆ ಒಬ್ಬರು ವೈದ್ಯರು ಇರಬೇಕು. ಆದರೆ, ರಾಜ್ಯದ ಕೆಲವು ಕಡೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಒಬ್ಬ ವೈದ್ಯರಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆಸ್ಪತ್ರೆಗಳ ಇತಿಹಾಸ
ಬದಲಾಯಿಸಿ- ರಾಜ್ಯದಲ್ಲಿ ಇಪ್ಪತ್ತನೇ ಶತಮಾನದ ಆರಂಭದಲ್ಲಿಯೇ ಆಧುನಿಕ ಆಸ್ಪತ್ರೆಗಳ ಸ್ಥಾಪನೆ ಮತ್ತು ವೈದ್ಯಕೀಯ ಶಿಕ್ಷಣದ ಆರಂಭ ಆಯಿತು. ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರು, ವಾಣಿ ವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬೆಂಗಳೂರು;ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ (BLCH) ಬೆಂಗಳೂರು; ಕೃಷ್ಣ ರಾಜೇಂದ್ರ ಆಸ್ಪತ್ರೆ (ಕೆ ಆರ್ ಆಸ್ಪತ್ರೆ) ಮೈಸೂರು ಇವುಗಳನ್ನು 70-80 ವರ್ಷಗಳ ಹಿಂದೆಯೇ ಕರ್ನಾಟಕ (ಮೈಸೂರು) ರಾಜ್ಯದಲ್ಲಿ ಆರಂಭಿಸಲಾಗಿತ್ತು.[೧]
ವಿಕ್ಟೋರಿಯಾ ಆಸ್ಪತ್ರೆ
ಬದಲಾಯಿಸಿ- ವಿಕ್ಟೋರಿಯಾ ಆಸ್ಪತ್ರೆ ಒಂದು ಸರ್ಕಾರ ಆಸ್ಪತ್ರೆ. ಅದನ್ನು ಈಗ ಬೆಂಗಳೂರು ಮೆಡಿಕಲ್ ಕಾಲೇಜ್ ಗೆ ಸಂಬಂಧಪಡಿಸಿದೆ. ಈಗ ಅದಕ್ಕೆ ಮರುನಾಮಕರಣ ಮಾಡಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ.ಎಂದು ಹೆಸರಿಡಲಾಗಿದೆ. ಇದು ಭಾರತದಲ್ಲನ ಮತ್ತು ಬೆಂಗಳೂರಿನಲ್ಲಿರುವ ದೊಡ್ಡ ಆಸ್ಪತ್ರೆಯಾಗಿದೆ. ಶ್ರೀ ಕೃಷ್ಣರಾಜ ಒಡೆಯರ್ 1901 ರಲ್ಲಿ ಮಹಾರಾಜ ಮೈಸೂರು ಇವರಿಂದ ಪ್ರಾರಂಭಿಸಲಾಯಿತು, ನಂತರ ಆಸ್ಪತ್ರೆ ಶೀಘ್ರದಲ್ಲೇ ದಕ್ಷಿಣ ಭಾರತದ ಪ್ರಮುಖ ಆಸ್ಪತ್ರೆಗಳು ನಡುವೆ ಗುಲಾಬಿ.
ಶತಮಾನ ಕಾಲದ ವಿಕ್ಟೋರಿಯಾ ಆಸ್ಪತ್ರೆ ಬೆಂಗಳೂರು
ಬದಲಾಯಿಸಿ- ಬೆಂಗಳೂರಿನಲ್ಲಿ ಕಳಾಸಿಪಾಳ್ಯದಲ್ಲಿರುವ ಈ ಆಸ್ಪತ್ರೆಯು ಸುಮಾರು ಒಂದು ಶತಮಾನ ಕಾಲದ್ದು. ರಾಣಿ ಕೆಂಪನಂಜಮ್ಮಣ್ಣಿಯವರು. , ರಾಣಿ ವಿಕ್ಟೋರಿಯಾಳ ಆಳ್ವಿಕೆಯ 60 ವರ್ಷಗಳ ಪೂರ್ಣಗೊಂಡ ನೆನಪಿಗಾಗಿ ಮೈಸೂರು ರಾಜ್ಯಕ್ಕೆ ಮಹಾರಾಣಿ ಯ ರಾಜಪ್ರತಿನಿಧಿಯಾಗಿ 22 ಜೂನ್ 1897 ರಂದು ಆಸ್ಪತ್ರೆಯ ಅಡಿಗಲ್ಲನ್ನು ಹಾಕಿದರು. ನಂತರ ಹಾಕಲಾಯಿತು. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯನ್ನು ಭಾರತದ ಆಗಿನ ವೈಸ್ರಾಯ್ ಲಾರ್ಡ್ ಕರ್ಜನ್ ಅವರು ಔಪಚಾರಿಕವಾಗಿ 8 ನೇ ಡಿಸೆಂಬರ್ 1900 ರಂದು ಉದ್ಘಾಟಿಸಿದರು.
- ಆಸ್ಪತ್ರೆ, ಕೇವಲ 140 ಹಾಸಿಗೆಗಳು ಒಂದು ಸಣ್ಣ ಆರೋಗ್ಯ ಕೇಂದ್ರವಾಗಿ ಪ್ರಾರಂಭಿಸಿದರು. ಆದರೆ ಇಂದು ಅದು ಭಾರತದ ಎರಡನೇ ದೊಡ್ಡ ಆಸ್ಪತ್ರೆಯಾಗಿದೆ ಮತ್ತು ಒಂದು ಸಮಯದಲ್ಲಿ ಒಂದು ಸಾವಿರ ರೋಗಿಗಳ ಮೇಲೆ ಚಿಕಿತ್ಸೆಗಾಗಿ ಮಲಗುವ ಅವಕಾಶ ಮಾಡಬಹುದು. ಆಸ್ಪತ್ರೆ ನಗರದ ಹೃದಯದಲ್ಲಿ ಕಳಾಸಿಪಾಳ್ಯಮ್ ನಲ್ಲಿ ಇದೆ. ಈ ಆಸ್ಪತ್ರೆಯು ಒಂದು ಬೋಧನಾ ಆಸ್ಪತ್ರೆಯಾಗಿದೆ ಮತ್ತು ಬೆಂಗಳೂರು ಮೆಡಿಕಲ್ ಕಾಲೇಜ್ ಗೆ ಲಗತ್ತಿಸಲಾಗಿದೆ. .ಇದು ಪ್ರಧಾನ ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಎನಿಸಿಕೊಂಡಿದೆ; ಇದು ಸಂಶೋಧನಾ ಸಂಸ್ಥೆಯೂ ಆಗಿದೆ,[೨]
ವಾಣಿ ವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬೆಂಗಳೂರು,
ಬದಲಾಯಿಸಿ- Vanivilas Women and Children Hospital
- ಬೆಂಗಳೂರು, ವಾಣಿ ವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯು ಭಾರತದ ಕರ್ನಾಟಕದಲ್ಲಿರುವ, ಸರ್ಕಾರದ ಆಸ್ಪತ್ರೆಯಾಗಿದೆ. ಇದನ್ನು ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಲಗತ್ತಿಸಲಾಗಿದೆ. ಇದನ್ನು ಆಗ ನಾಲ್ಕು ಲಕ್ಷ ರೂಪಾಯಿಗಳ ವೆಚ್ಚದಲ್ಲಿ 1935 ರಲ್ಲಿ ನಿರ್ಮಿಸಲಾಯಿತು. ಇದನ್ನು ರೂ.4.2 ಕೋಟಿ ವೆಚ್ಚದಲ್ಲಿ 2002 ರಲ್ಲಿ ನವೀಕರಿಸಲಾಯಿತು.
- 2000 ದರಲ್ಲಿ ಭಾರತದ 11 ಏಡ್ಸ್ ನಿಯಂತ್ರಣ ಕೇಂದ್ರಗಳಲ್ಲಿ ಒಂದಾಗಿಯೂ ಆಯ್ಕೆಯಾಯಿತು, ಮತ್ತು ಕರ್ನಾಟಕದಲ್ಲಿ ಇದು ಆ ಬಗೆಯ ಏಕೈಕ ಆಸ್ಪತ್ರೆ ಆಗಿದೆ..
- ವಾಣಿ ವಿಲಾಸ್ ಆಸ್ಪತ್ರೆ ಫೋರ್ಟ್ ಚರ್ಚ್ ಮತ್ತು ಒಮ್ಮೆ ಫೋರ್ಟ್ ಸ್ಮಶಾನವಾಗಿದ್ದ ಜಾಗದಲ್ಲಿ ಇದೆ. ಆ ಜಮೀನನ್ನು ಮೈಸೂರು ಸರ್ಕಾರವು ಇಂಗ್ಲೆಂಡ್ ಚರ್ಚನಿಂದ ವಶಪಡಿಸಿಕೊಂಡಿತು. ಅದರ ಬದಲಿಗೆ ಚಾಮರಾಜಪೇಟೆಯಲ್ಲಿ ಹಾರ್ಡಿಂಜ್ ರಸ್ತೆಯ ಬದಿ ಈಗ ಸೇಂಟ್ ಲೂಕ್ ಚರ್ಚ್ ಇರುವಲ್ಲಿ ಪರಿಹಾರವಾಗಿ ಜಮೀನು ಒದಗಿಸಿತು.[೩]
=ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ (BLCH) ಬೆಂಗಳೂರು
ಬದಲಾಯಿಸಿ- Bowring & Lady Curzon Hospitals
- ಭಾರತದ ಕರ್ನಾಟಕದಲ್ಲಿರುವ ಬೆಂಗಳೂರು, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ (BLCH), ಒಂದು ತರಬೇತಿ ಆಸ್ಪತ್ರೆ ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯ. ಇದು ಮೂಲತಃ ಮೈಸೂರು ರಾಜ್ಯಕ್ಕೆ ಸೇರಿದ ವೈದ್ಯಕೀಯ ಸಂಸ್ಥೆಯಾಗಿತ್ತು, ಆದರೆ 1884 ರಲ್ಲಿ ಇದು ಸಿವಿಲ್ ಮತ್ತು ಮಿಲಿಟರಿ ಆಡಳಿತಕ್ಕೆ ವಹಿಸಲಾಯಿತು. ಈ ಆಸ್ಪತ್ರೆ 1890 ತನಕ ಬೆಂಗಳೂರಿನಲ್ಲಿದ್ದ ಏಕ ಮಾತ್ರ ನಾಗರಿಕ ವೈದ್ಯಕೀಯ ಸಂಸ್ಥೆ ಆಗಿತ್ತು. ಇದು 104 ಹಾಸಿಗೆಗಳ ವಸತಿ ಹೊಂದಿತ್ತು ; 80 ಪುರುಷರ ಹಾಸಿಗೆ ಮತ್ತು 24 ಮಹಿಳ ರೋಗಿಗಳಿಗೆ ಮೀಸಲಿದ್ದವು. ಸ್ತ್ರೀ ರೋಗಿಗಳಿಗೆ ಹೆಚ್ಚಿನ ಸೌಕರ್ಯಗಳನ್ನು ಪರೋಪಕಾರಿ ನಾಗರಿಕರ ದೇಣಿಗೆ ಮತ್ತು ಭಾರತ ಸರ್ಕಾರದಿಂದ ಕೊಡುಗೆ ಪಡೆದು ಒದಗಿಸಿತು. ಈ ಹೆಚ್ಚುವರಿ ಆಸ್ಪತ್ರೆಯ ಭಾಗಕ್ಕೆ ಲೇಡಿ ಕರ್ಜನ್ ಹೆಸರನ್ನಿಡಲಾಗಿದೆ
ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಹೃದಯರಕ್ತನಾಳೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ
ಬದಲಾಯಿಸಿ- Jayadeva Institute of Cardiology
- ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಹೃದಯರಕ್ತನಾಳೀಯ ವಿಜ್ಞಾನ ಮತ್ತು ಸಂಶೋಧನಾ ಸ್ವಾಮ್ಯದ ಸ್ವಾಯತ್ತ ಸಂಸ್ಥೆ ಸರ್ಕಾರದ ಮತ್ತು ಎಲ್ಲಾ ಹೃದಯ ರೋಗಿಗಳಿಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಒದಗಿಸುತ್ತಿದೆ. ಇದು 600 ಹಾಸಿಗೆ ಶಕ್ತಿ ಹೊಂದಿದೆ; 5 ಕ್ಯಾತ್ ಲ್ಯಾಬ್ 7 ಆಪರೇಷನ್ ಕೊಠಡಿಗಳು, ಅಲ್ಲದ ಆನಾಕ್ರಮಿತ ಲ್ಯಾಬೋರೇಟರೀಗಳು ಮತ್ತು 24 ಗಂಟೆಗಳ ತುರ್ತುಚಿಕಿತ್ಸಾ ವಿಭಾಗದ ಸೌಲಭ್ಯಗಳನ್ನು ಹೊಂದಿದೆ. ಉಪಕರಣಗಳನ್ನು ಪ್ರಸ್ತುತ ದಿನಕ್ಕೆ ಸರಾಸರಿ 800-1000 ರೋಗಿಗಳ ಮೇಲೆ ಪ್ರತಿದಿನ ಈ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ವಾರ್ಷಿಕವಾಗಿ 25,500 ಒಳ ರೋಗಿಗಳನ್ನು ಉಪಚರಿಸಲಾಗುತ್ತದೆ. ವರ್ಷದಲ್ಲಿ 3000 ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆಯನ್ನೂ, 10500 ಕೊರೊನರಿ ಆಂಜಿಯೊಗ್ರಾಮ್, 4000ಆಂಜಿಯೋಪ್ಲ್ಯಾಸ್ಟಿಗಳನ್ನೂ ಮತ್ತು ವಾಲ್ವುಲೊಪ್ಲಾಸ್ಟೀಸ್ ಸೇರಿದಂತೆ ಹೃದಯ ಸಂಬಂಧ ಚಿಕಿತ್ಸೆಗಳನ್ನು ಈ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. [೫]
ಕೃಷ್ಣ ರಾಜೇಂದ್ರ ಮತ್ತು ಚೆಲುವಾಂಬಾ ಆಸ್ಪತ್ರೆ (ಕೆ ಆರ್ ಆಸ್ಪತ್ರೆ) ಮೈಸೂರು
ಬದಲಾಯಿಸಿ- ಕೆ ಆರ್ ಆಸ್ಪತ್ರೆ ಸುಮಾರು 1330 ಹಾಸಿಗೆಗಳನ್ನು ಒಟ್ಟು ಹಾಸಿಗೆಯ ಸಾಮರ್ಥ್ಯವನ್ನು ಹೊಂದಿದೆ. ಸಾಮಾನ್ಯ ಔಷಧದ ವಿಭಾಗದ 335 ಹಾಸಿಗೆಗಳು, 313 ಸಾಮಾನ್ಯ ಶಸ್ತ್ರಚಿಕಿತ್ಸೆಯವು ಮತ್ತು ಇಎನ್ಟಿ, ನೇತ್ರವಿಜ್ಞಾನ, ಮೂತ್ರಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ಮನೋವೈದ್ಯಶಾಸ್ತ್ರದ ಮತ್ತು ಇತರ ವಿಶೇಷದ ಹಾಸಿಗೆಗಳು ಸುಮಾರು 500 ನ್ನು ಒಳಗೊಂಡಿದೆ.
- ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಹಿಂದೆ ಮೈಸೂರು ಮೆಡಿಕಲ್ ಕಾಲೇಜು ಎಂದು ಹೆಸರಿತ್ತು), ಗವರ್ನ್ಮೆಂಟ್ ಮೆಡಿಕಲ್ ಕಾಲೇಜ್ ಎಂದು ಕರೆಯಲ್ಪಡುವ ಇದು ಭಾರತದ ಹಳೆಯ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. ಇದು ರೈಲು ನಿಲ್ದಾಣದ ಪಕ್ಕದಲ್ಲಿ ಮೈಸೂರು ನಗರದ ಹೃದಯಲ್ಲಿ ಇದೆ. ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಅವರಿಂದ 1924 ರಲ್ಲಿ ಸ್ಥಾಪಿತವಾದದ್ದು. ಇದು ಕರ್ನಾಟಕ ಪ್ರದೇಶದಲ್ಲಿವೆ ಸ್ಥಾಪಿತವಾದ ಮೊದಲ ವೈದ್ಯಕೀಯ ಕಾಲೇಜು ಮತ್ತು ಭಾರತದ ಏಳನೆಯ ಮೆಡಿಕಲ್ ಖಾಲೇಜು ಆಗಿದೆ. ಈ ಕಾಲೇಜು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಜಯನಗರ¨ಬೆಂಗಳೂರು ಇದಕ್ಕೆ ಸಂಯೋಜಿತವಾಗಿದೆ: [೭]
ದೇಶ ಮತ್ತು ಕರ್ನಾಟಕದಲ್ಲಿ ವೈದ್ರರ ಸಂಖ್ಯೆ
ಬದಲಾಯಿಸಿ- 2007ರಿಂದ 2014ರ ಅವಧಿಯಲ್ಲಿ ದೇಶದಲ್ಲಿ 2 ಲಕ್ಷ ವೈದ್ಯ ಪದವಿ ಪಡೆದಿದ್ದಾರೆ. ಇಡೀ ದೇಶಕ್ಕೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ವೈದ್ಯ ಪದವಿ ಪಡೆದವರ ಸಂಖ್ಯೆ ಜಾಸ್ತಿ ಇದೆ. ಈ ಅವಧಿಯಲ್ಲಿ ತಮಿಳುನಾಡಿನಲ್ಲಿ 23,754, ಕರ್ನಾಟಕದಲ್ಲಿ 25,432, ಕೇರಳದಲ್ಲಿ 9,406, ಆಂಧ್ರ ಪ್ರದೇಶದಲ್ಲಿ 15,233 ಮಂದಿ ವೈದ್ಯಕೀಯ ಶಿಕ್ಷಣ ಗಳಿಸಿದ್ದಾರೆ.
- ದೇಶದಲ್ಲಿ 9.5 ಲಕ್ಷ ವೈದ್ಯರು ಇದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರ ಸಂಖ್ಯೆ 1.06 ಲಕ್ಷ ಮಾತ್ರ. ಅಂದರೆ ಪ್ರತಿ 11,528 ಮಂದಿಗೆ ಒಬ್ಬರು ಸರ್ಕಾರಿ ವೈದ್ಯರು ಇದ್ದಾರೆ. ಖಾಸಗಿ ವೈದ್ಯರನ್ನು ಗಣನೆಗೆ ತೆಗೆದುಕೊಂಡರೂ ವೈದ್ಯ– ರೋಗಿ ಅನುಪಾತ 1:1,319 ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ನಾವು ತಲುಪಲು ಇನ್ನೂ ಒಂದು ದಶಕ ಬೇಕು. ಬಿಹಾರ, ಛತ್ತೀಸಗಡ, ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಹೋಲಿಸಿದರೆ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಈ ರಾಜ್ಯದಲ್ಲಿ 25 ಸಾವಿರ ಮಂದಿಗೆ ಒಬ್ಬರು ಸರ್ಕಾರಿ ವೈದ್ಯರು ಇದ್ದಾರೆ. ಬಿಹಾರದಲ್ಲಿ ಕಳೆದ ಏಳು ವರ್ಷಗಳಲ್ಲಿ 3,179 ವೈದ್ಯರು ಮಾತ್ರ ಸೇರ್ಪಡೆಯಾಗಿದ್ದಾರೆ.
- ದೇಶದಲ್ಲಿ 224 ಖಾಸಗಿ ಕಾಲೇಜಗಳು ಸೇರಿದಂತೆ 422 ವೈದ್ಯಕೀಯ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ 57 ಸಾವಿರ ವೈದ್ಯಕೀಯ ಸೀಟುಗಳಿವೆ. ಇದರಲ್ಲಿ ದಕ್ಷಿಣದ ಆರು ರಾಜ್ಯಗಳ ಪಾಲು ಶೇ 60ರಷ್ಟಿದೆ. ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ವೈದ್ಯರಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ನಿರೀಕ್ಷಿಸಲು ಸಾಧ್ಯವೇ? ಇಂತಹ ಮನೋಭಾವ ಹೊಂದಿರುವವರ ಬೆರಳೆಣಿಕೆಯ ಸಂಖ್ಯೆಯಲ್ಲಿರುತ್ತಾರೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ ಶೇ 25ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ.
ದೇಶದಲ್ಲಿ ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ
ಬದಲಾಯಿಸಿ- ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ರಾಜ್ಯದಲ್ಲಿ ಬೆರಳೆಣಿಕೆಯ ಆಸ್ಪತ್ರೆಗಳಿದ್ದವು. ಈ ಆಸ್ಪತ್ರೆಗಳು ನಗರಗಳಿಗೆ ಸೀಮಿತವಾಗಿದ್ದವು. ಆರಂಭದಲ್ಲಿ ಬೆಂಗಳೂರು, ಮೈಸೂರಿನಲ್ಲಿ ವೈದ್ಯಕೀಯ ಆಸ್ಪತ್ರೆಗಳು ತಲೆ ಎತ್ತಿದವು. ಬಳಿಕ ಹುಬ್ಬಳ್ಳಿ, ಬಳ್ಳಾರಿಯಲ್ಲಿ ಆಸ್ಪತ್ರೆಗಳನ್ನು ಆರಂಭಿಸಲಾಯಿತು. ಗ್ರಾಮೀಣ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸುವ ಉದ್ದೇಶದಿಂದ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶುರು ಮಾಡಲಾಯಿತು. ಈಗ ಆಸ್ಪತ್ರೆಗಳ ಸಂಖ್ಯೆ ಜಾಸ್ತಿಯಾಗಿದೆ. ಜೊತೆಗೆ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ.
- ನಮ್ಮಲ್ಲಿ ಶೇ 50ರಷ್ಟು ಸಾವುನೋವು ಸಂಭವಿಸುವುದು ಸಾಂಕ್ರಾಮಿಕ ರೋಗಗಳಿಂದ. ಅಸಾಂಕ್ರಾಮಿಕ ರೋಗಗಳಿಂದಲೂ ಅಷ್ಟೇ ಪ್ರಮಾಣದಲ್ಲಿ ಜನ ಮೃತಪಡುತ್ತಿದ್ದಾರೆ. ಈ ಹಿಂದೆ ಟೈಫಾಯ್ಡ್, ಜಾಂಡೀಸ್, ಪ್ಲೇಗ್ ರೋಗಗಳಿಂದ ಹೆಚ್ಚಿನ ಸಂಖ್ಯೆಯ ಜನರು ಸಾಯುತ್ತಿದ್ದರು. ಆದರೆ ಕಳೆದ 20 ವರ್ಷಗಳಲ್ಲಿ ಹೃದಯ ಸಂಬಂಧಿ, ಮಧುಮೇಹ, ಕ್ಯಾನ್ಸರ್, ಪಾರ್ಶ್ವವಾಯು ಸೇರಿದಂತೆ ಅನೇಕ ಅಸಾಂಕ್ರಾಮಿಕ ರೋಗಗಳು ಜಾಸ್ತಿಯಾಗಿವೆ.
- ದೇಶದ ಅಭಿವೃದ್ಧಿಯನ್ನು ಕೇವಲ ಜಿಡಿಪಿ, ಮೂಲಸೌಕರ್ಯದ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ. ಆರೋಗ್ಯ ಸೂಚ್ಯಂಕವೂ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಇದು 50 ವರ್ಷದಿಂದ 65ರಿಂದ 70 ವರ್ಷಕ್ಕೆ ಏರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಾದ ಸಿಂಗಪುರ, ಅಮೆರಿಕಗಳಲ್ಲಿ ಜೀವಿತಾವಧಿ 85 ವರ್ಷ ಇದೆ. ಜೀವಿತಾವಧಿ ಹೆಚ್ಚಿಸಲು ಇನ್ನಷ್ಟು ಉಪಕ್ರಮಗಳನ್ನು ಕೈಗೊಳ್ಳಬೇಕಿದೆ.
- ನಮ್ಮಲ್ಲಿನ ಪರಿಸರ, ವರ್ಷದಿಂದ ವರ್ಷಕ್ಕೆ ಕಲುಷಿತಗೊಳ್ಳುತ್ತಿದೆ. ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಜಲಮೂಲಗಳೆಲ್ಲ ಮಲಿನವಾಗುತ್ತಿವೆ. ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಗ್ರಾಮೀಣ, ನಗರ ಮಾಲಿನ್ಯ ತಡೆಗಟ್ಟಲು ಯೋಜನೆಗಳನ್ನು ರೂಪಿಸಬೇಕು.
ಕೊಳೆಗೇರಿ ಮತ್ತು ಸೊಳ್ಳೆ ಸಮಸ್ಯೆ
ಬದಲಾಯಿಸಿ- *ರಾಜ್ಯದಲ್ಲಿ 2,796 ಕೊಳೆಗೇರಿಗಳಿವೆ. ಅವುಗಳಲ್ಲಿ 41 ಲಕ್ಷ ಜನರು ನೆಲೆಸಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 862 ಕೊಳೆಗೇರಿಗಳಿವೆ. ಬೆಂಗಳೂರು ನಗರದ ಜನಸಂಖ್ಯೆಯಲ್ಲಿ ಶೇ 20ರಷ್ಟು ಜನ (ಅಂದಾಜು 20 ಲಕ್ಷ) ಕೊಳಚೆ ಪ್ರದೇಶಗಳಲ್ಲೇ ವಾಸವಾಗಿದ್ದಾರೆ. ನಗರದಲ್ಲಿ ವರ್ಷದಿಂದ ವರ್ಷಕ್ಕೆ ಕೊಳೆಗೇರಿಗಳ ಸಂಖ್ಯೆ ಹೆಚ್ಚುತ್ತಿದೆ. ರಾಜಕಾಲುವೆಗಳ ಪಕ್ಕ ಕಿಷ್ಕಿಂದೆಯಂತಹ ಜಾಗಗಳಲ್ಲಿ ಬಡವರು ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ವಾಸಸ್ಥಳ ಹಾಗೂ ಉದ್ಯೋಗ ಸ್ಥಳಗಳಲ್ಲಿ ನೈರ್ಮಲ್ಯದ ಕೊರತೆಯಿಂದ ಈ ಬಡವರು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ತುತ್ತಾಗುವವರು ಅವರೇ. ಅವರಿಗೆ ಗುಣಮಟ್ಟದ ಆರೋಗ್ಯ ಸೇವೆಯೂ ದೊರಕುತ್ತಿಲ್ಲ.
- ರಾಜ್ಯ ಸರ್ಕಾರ ಅನೇಕ ಉಚಿತ ಯೋಜನೆಗಳನ್ನು ಘೋಷಿಸುತ್ತಿದೆ. ಇದಕ್ಕಾಗಿ ಕೋಟಿಗಟ್ಟಲೆ ವ್ಯಯಿಸುತ್ತಿದೆ. ಇದರ ಜತೆಗೆ ಕೊಳೆಗೇರಿಗಳ ನಿವಾಸಿಗಳಿಗೆ ಪ್ರತಿವರ್ಷ ಉಚಿತವಾಗಿ ಸೊಳ್ಳೆ ಪರದೆ ವಿತರಿಸಬೇಕು. ಇದರಿಂದ ಕಾಯಿಲೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.
- ರಾಜ್ಯದಲ್ಲಿ ಪ್ರತಿವರ್ಷ ಸಾವಿರಾರು ಶೌಚಾಲಯ ನಿರ್ಮಾಣವಾಗುತ್ತಿವೆ. ಅವುಗಳ ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಅವುಗಳ ನಿರ್ವಹಣೆ ಹೊಣೆಯನ್ನು ಏಜೆನ್ಸಿಗೆ ನೀಡಬೇಕು. ಜತೆಗೆ ಎಲ್ಲ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಬೇಕು.
ಆರೋಗ್ಯ ವೃದ್ಧಿಗೆ ಕೈಗಳ್ಳಬೇಕಾದ ಕ್ರಮಗಳು
ಬದಲಾಯಿಸಿ- ಕೊಳೆಗೇರಿಗಳ ನಿವಾಸಿಗಳಿಗೆ ಪ್ರತಿವರ್ಷ ಉಚಿತವಾಗಿ ಸೊಳ್ಳೆ ಪರದೆ ವಿತರಿಸಬೇಕು. ಇದರಿಂದ ಕಾಯಿಲೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.
- ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಕೆಲವು ವರ್ಷಗಳಿಂದ ಹಾಲು ವಿತರಣೆ ಮಾಡುತ್ತಿದೆ. ಜೊತೆಗೆ ತಾಯಂದಿರಿಗೂ ಹೆಚ್ಚಿನ ಪೌಷ್ಟಿಕಾಂಶದ ಅಗತ್ಯ ಇದೆ, ಅವರಿಗೂ ಕೊಡಿ.
- ಜಿಲ್ಲಾಸ್ಪತ್ರೆಯಲ್ಲಿ 25 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ ಸ್ಥಾಪಿಸಬೇಕು. ಅದರಲ್ಲಿ ಮಹಿಳೆಯರಿಗೆ 10 ಹಾಸಿಗೆ ಮೀಸಲು ಇಡಬೇಕು. ಈ ವ್ಯವಸ್ಥೆ ಕಲ್ಪಿಸಲು ಪ್ರತಿ ಆಸ್ಪತ್ರೆಗೆ ₹4.5 ಕೋಟಿ ಸಾಕು. ತಾಲ್ಲೂಕು ಆಸ್ಪತ್ರೆಯಲ್ಲಿ ಮೂರು ಹಾಸಿಗೆ ಸಾಮರ್ಥ್ಯದ ತುರ್ತು ನಿಗಾ ಘಟಕ ತೆರೆಯಬೇಕು. ಇದಕ್ಕೆ ₹25 ಲಕ್ಷ ಮೊತ್ತ ಹೂಡಿಕೆ ಮಾಡಬೇಕಾಗುತ್ತದೆ.
- (ವೈದ್ಯರು 364 ದಿನಗಳಲ್ಲೂ ಹಳ್ಳಿಯಲ್ಲಿರಬೇಕು ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ. ಅಮೆರಿಕ, ಯುರೋಪ್ ರಾಷ್ಟ್ರಗಳ ಎಲ್ಲ ಹಳ್ಳಿಗಳಲ್ಲೂ ವೈದ್ಯರು ಇಲ್ಲ. ವೈದ್ಯರು ತಮ್ಮ ಕುಟುಂಬದ ಬಗ್ಗೆಯೂ ಆಲೋಚನೆ ಮಾಡಬೇಕಾಗುವುದು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಬೇಕಾಗುವುದು.)
- 20 ಹಳ್ಳಿಗೊಂದು ಮಿನಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು. ಅಲ್ಲಿ ಸಕಲ ಆರೋಗ್ಯ ಸವಲತ್ತು ಇರಬೇಕು. ಆಂಬುಲೆನ್ಸ್ ಸೌಲಭ್ಯವನ್ನೂ ಒದಗಿಸಬೇಕು. ಟೆಲಿಮೆಡಿಸಿನ್ ಜಾಲದ ವ್ಯವಸ್ಥೆ ಮಾಡಬೇಕು. ಆಗ ವೈದ್ಯರಿಗೂ ಅನುಕೂಲವಾಗುತ್ತದೆ. ರೋಗಿಗಳಿಗೂ ಉಪಕಾರವಾಗುತ್ತದೆ.
- ರಾಜ್ಯದ ಜನಸಂಖ್ಯೆ ಶೇ 20ರಷ್ಟು ಮಂದಿ ರಾಜಧಾನಿಯೊಳಗೇ ಇದ್ದಾರೆ. ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ವೈಟ್‌ಫೀಲ್ಡ್, ಹೆಬ್ಬಾಳ, ಪಶ್ಚಿಮ ಕಾರ್ಡ್ ರಸ್ತೆ, ಕೋಣನಕುಂಟೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಬೇಕು. ಪ್ರತಿ ಆಸ್ಪತ್ರೆಯಲ್ಲಿ ಕನಿಷ್ಠ 300 ಹಾಸಿಗೆ ವ್ಯವಸ್ಥೆ ಇರಬೇಕು. ಸಕಲ ಆರೋಗ್ಯ ಸೇವೆಗಳೂ ಒಂದೇ ಸೂರಿನಡಿ ಸಿಗಬೇಕು.
ಇತರೆ ಅಗತ್ಯಗಳು
ಬದಲಾಯಿಸಿ- ಟೆಲಿಮೆಡಿಸಿನ್ ಜಾಲವನ್ನು ಬಲಪಡಿಸಿ ಗ್ರಾಮಾಂತರ ಭಾಗದಲ್ಲೂ ತಜ್ಞವೈದ್ಯರ ತುರ್ತುಸೇವೆ ಸಿಗುವಂತೆ ನೋಡಿಕೊಳ್ಳಬೇಕು
- ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಶಕ್ತವಾಗುವಂತೆ ಸಮುದಾಯ ಆರೋಗ್ಯ ಕೇಂದ್ರಗಳನ್ನು ಎಲ್ಲ ರೀತಿಯ ಸೌಲಭ್ಯಗಳಿಂದ ಬಲಪಡಿಸಬೇಕು
- ಸರ್ಕಾರಿ ಆಸ್ಪತ್ರೆಗಳ ಲ್ಯಾಬ್‌ಗಳ ನಿರ್ವಹಣೆಗೆ ತಾಂತ್ರಿಕ ತಜ್ಞರನ್ನು ನೇಮಕ ಮಾಡಿಕೊಳ್ಳಬೇಕು
- ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತುರ್ತು ನಿಗಾ ಘಟಕಗಳ ವ್ಯವಸ್ಥೆ ಮಾಡಬೇಕು
- ಗ್ರಾಮೀಣ ಭಾಗದಲ್ಲೂ ರಕ್ತ ನಿಧಿಗಳ ಸ್ಥಾಪನೆ ಮಾಡಬೇಕು
- ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ‘ಹೆಲ್ತ್ ಕಾರ್ಡ್’ ವಿತರಣೆ ಮಾಡಿ, ಎಲ್ಲ ರೀತಿಯ ವೈದ್ಯಕೀಯ ಸೇವೆಗಳು ಯಾವುದೇ ಆಸ್ಪತ್ರೆಯಲ್ಲಿ ಸುಲಭವಾಗಿ ಸಿಗುವ ವ್ಯವಸ್ಥೆ ಮಾಡಬೇಕು
ಆರೋಗ್ಯಕ್ಕೆ ಸಂಬಂಧಪಟ್ಟ ಅಂಕೆ ಅಂಶಗಳು
ಬದಲಾಯಿಸಿ- ಕರ್ನಾಟಕ ರಾಜ್ಯಕ್ಕೆ ಸಂಬಂದಿಸಿದಂತೆ:
ವಿಷಯ | ವಿವರ | ವಿಷಯ | ವಿವರ | |
---|---|---|---|---|
ಸರಾಸರಿ ಆಯುಷ್ಯ ಗಂಡಸರು | 63.6ವರ್ಷ | ಹೆಂಗಸರು | 67.1 ವರ್ಷ | |
ಒಟ್ಟು ಸರಾಸರಿ ಆಯುಷ್ಯ | 65.3 | ವಿಷಯ | ವಿವರ | |
ಜನಸಂಖ್ಯೆ = | 6.11 ಕೋಟಿ | ಲಿಂಗಾನುಪಾತ | 1000 ಗಂ. 973 ಹೆಂ. | |
6 ವರ್ಷದೊಳಗಿನವರ ಅನುಪಾತ | 1000 ಗಂ :948 ಹೆಂ. | ವಿಷಯ | ವಿವರ | |
ಜನನ ಪ್ರಮಾಣ ಗ್ರಾಮೀಣ | ಶೇ. 19.4 | ಜನನ ಪ್ರಮಾಣ | ನಗರ; 16.9 : | |
ಜನನ ಪ್ರಮಾಣ ಒಟ್ಟಾರೆ ಶೇ. | 18.5 | ವಿಷಯ | ವಿವರ | |
ಮರಣ ಪ್ರಮಾಣ ಗ್ರಾಮೀಣ ಶೇ. | 8.1; | ಮರಣ ಪ್ರಮಾಣ ನಗರ | 5.1 | |
ಒಟ್ಟಾರೆ | 7.1 | ವಿಷಯ | ವಿವರ | |
ಶಿಶು ಮರಣ ಗ್ರಾಮ: | 3.6% | ಶಿಶು ಮರಣ ನಗರ | 2.5% | |
ಶಿಶು ಮರಣ ಒಟ್ಟಾರೆ | 3.2% | ಶಿಶು ಮರಣ 1000 ಕ್ಕೆ | 32 | |
ಆರೊಗ್ಯ ಉಪ ಕೇಂದ್ರಗಳು | 8871 | ಪ್ರಾಥಮಿಕ ಆರೋಗ್ಯ ಕೇಂದ್ರಗಳು | 2310 | |
ಸಮಯುದಾಯ ಆರೋಗ್ಯ ಕೇಮದ್ರಗಳು | 180 | ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರು | 2089 | |
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ನರ್ಸು ಸಿಬ್ಬಂದಿ | 4978 | ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗಿಗಳ ಚಿಕಿತ್ಸೆ | 70 ಸಾವಿರ /ವರ್ಷ | |
ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳು | 50 | ಯೋಗ ಶಿಕ್ಷಣ ಶಿಕ್ಷಕರು | 14000 | |
ಕಬ್ಬಿಣಾಂಸ ಮಾತ್ರೆ ವಿತರಣೆ | 1 ಕೋಟಿ ಮಕ್ಕಳಿಗೆ | ಶಸ್ತ್ರ ಚಿಕಿತ್ಸೆ ವಾಜಪೇಯಿ ಆರೋಗ್ಯ ಶ್ರೀ ಅಡಿ | 4.5 ಲಕ್ಷ ಜನರಿಗೆ | |
ಯಶಸ್ವಿ ಯೋಜನೆಯ ಅಡಿ ಶಸ್ತ್ರ ಚಿಕಿತ್ಸೆ ಪ್ರತಿ ವರ್ಷ | 1.8 ಲಕ್ಷ | |||
ಶುಚಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ | ಮಹಿಳೆಯರಿಗೆ | ಸ್ಯಾನಿಟರಿ ನ್ಯಾಪ್ ಕಿನ್ ಗಳು | 54.85 ಲಕ್ಷ | |
ಆರೋಗ್ಯ ಕವಚ ಆಂಬ್ಯುಲೆನ್ಸ್ ಗಳ ಸಂಖ್ಯೆ | 711 | ಮೂರು ವರ್ಷಗಳಲ್ಲಿ ಆಂಬ್ಯುಲೆನ್ಸ್ ಸೇವೆ ಪಡೆದವರು | 20.60ಲಕ್ಷ | |
(ಮಾಹಿತಿ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) |
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ Victoria Hospital is a government[ಶಾಶ್ವತವಾಗಿ ಮಡಿದ ಕೊಂಡಿ]
- ↑ Victoria Hospital
- ↑ Vani Vilas Women and Children Hospital
- ↑ http://bowringandladycurzonhospitals.com Archived 2013-08-04 ವೇಬ್ಯಾಕ್ ಮೆಷಿನ್ ನಲ್ಲಿ. Bowringಯ and Lady Curzon hospitals (BLCH)
- ↑ ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಹೃದಯರಕ್ತನಾಳೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.jayadevacardiology.com/
- ↑ ಕೆ ಆರ್ ಆಸ್ಪತ್ರೆ
- ↑ ಚೆಲುವ ಕನ್ನಡ ನಾಡಿಗೆ ಆಸ್ಪತ್ರೆಗಳೇ ಬುನಾದಿ!;ಡಾ. ಸಿ.ಎನ್. ಮಂಜುನಾಥ್;21 Nov, 2016