ಕರ್ಣಾಟಕ ಭಾಗವತ
ಡಾ.ಎಚ್.ಆರ್.ಚಂದ್ರಶೇಖರ್,[೧] ಅಮೆರಿಕದ ಕೊಲಂಬಿಯ ರಾಜ್ಯದ ಮಿಸ್ಸೂರಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಇಲಾಖೆಯ ಅಧ್ಯಕ್ಷರಾಗಿ ಕೆಲಸಮಾಡುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಭಾಷೆಯಲ್ಲಿ ಕಥೆ, ಕವನ, ಕಾದಂಬರಿ,ಪುರಾಣ,ಮಹಾಕಾವ್ಯಗಳನ್ನು ಅಭ್ಯಯಿಸಿ ಹಲವಾರು ಪತ್ರಿಕೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಕಟಿಸುತ್ತಾ ಬಂದಿದ್ದಾರೆ. ೧೨ ನೇ, ಏಪ್ರಿಲ್ ೨೦೦೮ ರಂದು, ಅಮೆರಿಕದ, ’ಹೂಸ್ಟನ್ ಕನ್ನಡವೃಂದ,’ ದಲ್ಲಿ ತಾವು ಸಂಪಾದಿಸಿ ಪ್ರಕಟಿಸಿದ ಕರ್ಣಾಟಕ ಭಾಗವತ,ದ ಬೃಹತ್ ಕೃತಿಯ ೨ ಸಂಪುಟಗಳನ್ನು ಬಿಡುಗಡೆಮಾಡಿದರು. ಅಮೆರಿಕದ ಗೆಳೆಯರಿಗೆ ಚಂದ್ರ ಎಂದು ಪ್ರಸಿದ್ಧರಾಗಿರುವ ಅವರು, ಹಳೆ ಮೈಸೂರು ಸಂಸ್ಥಾನದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಗ್ರಾಮದಲ್ಲಿ ೧೯೪೬ ರಲ್ಲಿ ಜನಿಸಿದರು. ಚಂದ್ರರವರ ತಂದೆ, ಎಚ್.ವಿ.ರಂಗರಾವ್, ಮತ್ತು ತಾಯಿ, ಸಂಪ್ರದಾಯಗಳ ಹಾಡಿನ ರಾಧಮ್ಮನವರು.
ಶ್ರೀ ರಾಮಣ್ಣಯ್ಯನವರು ೧೭೫೫ ರಲ್ಲಿ'ಭಾಮಿನಿಷಟ್ಪದಿ'ಯಲ್ಲಿ ಲಿಖಿಸಿದ ೨೩೨ ತಾಳೆಗರಿಗಳ ಕಟ್ಟು. ಒಟ್ಟಾರೆ ಪದ್ಯಗಳು : ೧೦ ಸಾವಿರಕ್ಕೂ ಮಿಗಿಲು. 'ನಿತ್ಯಾತ್ಮ ಶುಕಯೋಗಿ'ವಿರಚಿತ,"ಕರ್ಣಾಟಕ ಭಾಗವತ" | |
---|---|
ಚಿತ್ರ:Chandra (recent).jpg | |
ಜನನ | ನವೆಂಬರ್, ೨೯, ೧೯೪೬ ಹೊಳಲ್ಕೆರೆ, ಮೈಸೂರು ಸಂಸ್ಥಾನ, ಬ್ರಿಟಿಷ್ ಭಾರತ |
ವಾಸಸ್ಥಳ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | joined the faculty of the Physics Department at the University of Missouri, Columbia MO in 1978 currently Professor of Physics, Department Chair and Director of Graduate Studies. |
ಅಭ್ಯಸಿಸಿದ ವಿದ್ಯಾಪೀಠ | ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ. ಪದವಿ, ೧೯೬೬ ರಲ್ಲಿ, ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನೋಲಾಜಿಯಿಂದ ಎಮ್.ಎಸ್.ಸಿ.ಪದವಿ, ೧೯೬೮ ರಲ್ಲಿ [[ಅಮೆರಿಕದ ಲಾಫಯೆಟ್ ಪ್ರಾಂತ್ಯದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ.ಪದವಿ, ೧೯೭೩ ರಲ್ಲಿ]], a post-doctoral fellowships at Purdue University and the Max-Planck-Institute für Festkörperforschung, Stuttgart, Germany. |
ಪ್ರಸಿದ್ಧಿಗೆ ಕಾರಣ | ಸಾಲಿಡ್-ಸ್ಟೇಟ್ ಫಿಸಿಕ್ಸ್ |
ಗಮನಾರ್ಹ ಪ್ರಶಸ್ತಿಗಳು | an Alfred P.Sloan Fellow and a past consultant to the United Nations Development Program (UNDP) |
ಟಿಪ್ಪಣಿಗಳು ಡಾ.ಚಂದ್ರರವರಿಗೆ, 'ಕರ್ಣಾಟಕ ಭಾಗವತಗ್ರಂಥ'ವನ್ನುಸಂಪಾದಿಸುವ ಕಾರ್ಯ ಸುಮಾರು ೧೩ವರ್ಷ ಹಿಡಿಯಿತು. ಅದೊಂದು 'ಇಂಡೋ ಅಮೆರಿಕದ'ಒಂದು ಅಭಿಯಾನವಾಗಿದೆ. |
'ಲಿಪಿಕಾರ, ಅನುವಾದಕ, ಹಾಗೂ ಸಂಪಾದಕ
ಬದಲಾಯಿಸಿಚಂದ್ರಾರವರ ಪೂರ್ವಜ, ಶ್ರೀ. ರಾಮಣ್ಣಯ್ಯನವರು, ಕ್ರಿ.ಶ.೧೭೫೫ ರಲ್ಲಿ, ಲಿಖಿಸಿದ ತಾಳೆಗರಿ ಕಟ್ಟು ಚಂದ್ರಶೇಖರ್ ಚಿಕ್ಕಪ್ಪನವರ ಮನೆಯ ದೇವರ ಕೋಣೆಯಲ್ಲಿ ಪೂಜಿಸಲ್ಪಡುತ್ತಿತ್ತು. ಅದನ್ನು ಕಂಡ ಅವರು ಅಮೆರಿಕಕ್ಕೆ ಕೊಂಡೊಯ್ದು ೧೦ ಸಾವಿರ ಪದ್ಯಗಳ ಲಿಪಿಯನ್ನು ಸಂಸ್ಕರಿಸಿ, ಪರಿಶೋಧಿಸಿ, ಸಂಪಾದಿಸಿ ೨ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.
ಬಾಲ್ಯ, ವಿದ್ಯಾಭ್ಯಾಸ,ವೃತ್ತಿಜೀವನ
ಬದಲಾಯಿಸಿಚಂದ್ರಶೇಖರ್ ಗೆ, ಬಾಲ್ಯದ ದಿನಗಳಿಂದಲೂ ತಾಯಿನುಡಿ-ಕನ್ನಡದ ಬಗ್ಗೆ ಅತೀವ ಆಸಕ್ತಿ, ಹಾಗೂ ಒಲವಿತ್ತು. ಅದಕ್ಕೆ ಪೂರಕವಾದ ಸಾಂಸ್ಕೃತಿಕ ಹಿನ್ನೆಲೆಯ ಮನೆಯ ವಾತಾವರಣವಿತ್ತು. ತಂದೆ ’ಎಚ್.ವಿ.ರಂಗರಾಯರು’ ಕನ್ನಡ, ಮರಾಠಿ, ತೆಲುಗು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸ್ವ-ಅಧ್ಯಯನ ನಡೆಸಿದ್ದವರು. ಅತ್ಯಂತ ದೈವಭಕ್ತರು. ಜ್ಯೋತಿಷ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರು. ಮರಾಠಿ ಭಾಷೆಯ 'ದಾಸ್ ಬೋಧ್' ನಿಂದ ಹಾಗೂ ಮರಾಠಿ ಮಹಾಭಾರತಗಳಿಂದ ಆಯ್ದ ಕಥಾ ಪ್ರಸಂಗಗಳನ್ನು ತಮ್ಮವಠಾರದ ಅಂಗಳದಲ್ಲಿ ಆಗಾಗ ಶ್ರವಣ ಮಾಡುತ್ತಿದ್ದರು. ವೇದಾಂತದಲ್ಲಿ ಆಸಕ್ತಿ. ಪ್ರತಿದಿನ ಹೊಸಕೆರೆ ಚಿದಂಬರಯ್ಯನವರ 'ಅನುಭವಾಮೃತ'ದಿಂದ ಆಯ್ದ ಪದ್ಯಗಳನ್ನು ಮಕ್ಕಳಿಗೆ ಓದಿ ಹೇಳುತ್ತಿದ್ದರು. ತಾಯಿಯವರು ಮಹಾಸಾದ್ವಿ, ’ಸಂಪ್ರದಾಯಗಳ ಹಾಡಿನ ರಾಧಮ್ಮನವರು,’ ಮನೆಯಲ್ಲಿ ಸಂಗ್ರಹಿಸಿದ ಪುಸ್ತಕ ಭಂಡಾರದಲ್ಲಿ ಪ್ರೊ.ಎ.ಆರ್.ಕೃಷ್ಣಶಾಸ್ತ್ರಿ, ಪ್ರೊ.ವಿ.ಸೀ, ಪ್ರೊ. ಬಿ.ಎಂ.ಶ್ರೀ, ರವೀಂದ್ರನಾಥ ಠಾಕೂರ್, ಶರಶ್ಚಂದ್ರ ಚಟರ್ಜಿ, ಗಳಗನಾಥ, ಅ.ನ.ಕೃ, ತ.ರಾ.ಸು, ಕೆ.ವಿ.ಅಯ್ಯರ್, ಕೈಲಾಸಂ, ಮುಂತಾದವರು ಬರೆದ, ಪುಸ್ತಕಗಳು ಕಪಾಟಿನಲ್ಲಿ ತುಂಬಿದ್ದವು. ತಮ್ಮ ೮ ನೇ ವಯಸ್ಸಿನಲ್ಲಿಯೇ, ’ಭಗವದ್ಗೀತೆ” ಯ ೧೮ ಅಧ್ಯಾಯಗಳನ್ನು ಕಂಠ-ಪಾಠಮಾಡಿ ನಿರರ್ಗಳವಾಗಿ ವಾಚನಮಾಡುತ್ತಿದ್ದರು. ಚಂದ್ರಶೇಖರ್ ತಮ್ಮ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಶಿಕ್ಷಣಗಳನ್ನು ಹೊಳಲ್ಕೆರೆಯಲ್ಲಿ ಮುಗಿಸಿದರು.
- ೧೯೬೧ ರಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಧಮರಾಗಿ ತೇರ್ಗಡೆಯಾಗಿ ಚಿನ್ನದ ಪದಕಗಳನ್ನು ಗಳಿಸಿದರು.
- ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್ಸಸಿ ಪರೀಕ್ಷೆಯಲ್ಲಿ ಪ್ರಪ್ರಥಮ-ಸ್ಥಾನ, ಹಾಗೂ ಚಿನ್ನದ ಪದಕಗಳನ್ನು ವಿದ್ಯಾರ್ಥಿವೇತನವನ್ನೂ ಗಳಿಸಿದರು.
- ಮುಂದೆ ಕಾನ್ಪುರ್ ಐಐಟಿಯಲ್ಲಿ ಎಮ್.ಎಸ್ಸಿ ಪದವಿಯಲ್ಲೂ ಪ್ರಥಮರಾಗಿ ಉತ್ತೀರ್ಣರಾಗಿ ಬಂಗಾರದ ಪದಕಗಳನ್ನು ಗಳಿಸಿದರು.
- ಅಮೆರಿಕದ ಸಂಯುಕ್ತ ಸಂಸ್ಥಾನದ ಇಂಡಿಯಾನ ಪ್ರಾಂತ್ಯದ 'ಪರ್ಡ್ಯೂ ವಿಶ್ವವಿದ್ಯಾಲಯ'ದಲ್ಲಿ. ಪ್ರೊ.ರಾಮದಾಸ್ ರವರ ಮಾರ್ಗದರ್ಶನದಲ್ಲಿ ೧೯೭೩ ರಲ್ಲಿ ಭೌತಶಾಸ್ತ್ರದ ಪಿ.ಎಚ್.ಡಿ ಪಡೆದರು.
- ಜರ್ಮನಿಯ ಸ್ಟುಟ್ಗಾರ್ಟ್ ನಲ್ಲಿ,"ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್"ನ ಭೌತಶಾಸ್ತ್ರದ ವಿಭಾಗಲ್ಲಿ ’ಪ್ಪೋಸ್ಟ್ ಡಾಕ್ಟೊರಲ್ ಫೆಲೋ,’ ಆಗಿ ಕೆಲಸ ಮಾಡಿದ್ದರು.
- 'ಯೂನಿವರ್ಸಿಟಿ ಆಫ್ ಮಿಸ್ಸೂರಿ,ಕೊಲಂಬಿಯ' ದಲ್ಲಿ ಪ್ರಾಧ್ಯಾಪಕರೂ,'ಭೌತಶಾಸ್ತ್ರ ವಿಭಾಗದ ಅಧ್ಯಕ್ಷರೂ,' ಆಗಿ ದುಡಿಯುತ್ತಿದ್ದಾರೆ (Chair)
'ಶಾಂತಿ ಮಂದಿರ್'
ಬದಲಾಯಿಸಿಮಿಸ್ಸೂರಿರಾಜ್ಯದ ಕೊಲಂಬಿಯ ಊರಿನಲ್ಲಿ 'ಶಾಂತಿಮಂದಿರ್,'[೨] ಎಂಬ ಭಾರತೀಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಸಾರ ಮಾಡಲು ಬದ್ಧವಾಗಿರುವ ಮಂದಿರದ ಸ್ಥಾಪನೆಯಲ್ಲಿ ಮೊದಲಿನಿಂದಲೂ ಶ್ರಮಿಸಿದ ೧೦ ಪರಿವಾರಗಳಲ್ಲಿ ಡಾ.ಚಂದ್ರಾರವರದೂ ಒಂದು ಪರಿವಾರ. ಈ ಪರಿವಾರಗಳು ಪ್ರಮುಖ ಟ್ರಸ್ಟಿಗಳಾಗಿ ಮಂದಿರಕ್ಕೆ ಬೇಕಾಗಿದ್ದ ಸ್ಥಳವನ್ನು ಖರೀದಿಸಿ, ಮಂದಿರದ ಕಾರ್ಯಕಾರಿ ಸಮಿತಿಗೆ ವಹಿಸಿಕೊಟ್ಟಿದ್ದಾರೆ. ನಂತರ ಬಂದ ಹಲವಾರು ಭಾರತೀಯ ಪರಿವಾರಗಳು, ತಮ್ಮ ಯೋಗದಾನ ಮಾಡಿ ಶಾಂತಿಮಂದಿರದ ಪ್ರಗತಿಗೆ ಕಾರಣರಾಗಿದ್ದಾರೆ. 'ಶಾಂತಿಮಂದಿರ' ಹಮ್ಮಿಕೊಂಡ ಕಾರ್ಯಕ್ರಮಗಳು ಹಲವಾರು. ಇದರ ಬಗ್ಗೆ ಹೆಚ್ಚಿನಮಾಹಿತಿಗಳನ್ನು ಕೆಳಗಿನ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು.
ಭಾರತದ ಮಹಾಕಾವ್ಯಗಳಲ್ಲಿನ ಕಥೆಗಳ ಪುಸ್ತಕ ಪ್ರಕಟಣೆ
ಬದಲಾಯಿಸಿವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೋಸ್ಕರವಾಗಿ 'ಭಾರತದ ಮಹಾಕಾವ್ಯಗಳಲ್ಲಿನ ಕಥೆಗಳು' ("Tales from Indian Epics")[೩] ಎಂಬ ಜನಪ್ರಿಯ ಇಂಗ್ಲೀಷ್ ಪುಸ್ತಕವನ್ನು ಏಪ್ರಿಲ್, ೨೦೦೧ ರಲ್ಲಿ, ಪ್ರಕಟಿಸಿದರು. ಈ ಪುಸ್ತಕ ಇಂಗ್ಲೀಷ್ ಭಾಷೆಯಲ್ಲಿದ್ದರೂ, ಅಮೆರಿಕದ ಯುವ-ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ವಿಜ್ಞಾನದಲ್ಲಿ, ಭೌತಶಾಸ್ತ್ರ ಚಂದ್ರರವರ ಹೃದಯಕ್ಕೆ ಹತ್ತಿರ. ಆದರೆ ಭಾರತೀಯ ಸಂಗೀತ, ನೃತ್ಯ, ಸಾಹಿತ್ಯ, ನಾಟಕ, ಇತಿಹಾಸ, ಕ್ರಿಕೆಟ್, ಲಾನ್ ಟೆನ್ನಿಸ್ ಆಟಗಳಲ್ಲಿ ಪರಮಾಸಕ್ತರು. ಪ್ರವೃತ್ತಿಯೆಂದರೆ, ತಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ಕನ್ನಡಪರ ಚಟುವಟಿಕೆಗಳನ್ನು. ಅಂತರ್ಜಾಲದಲ್ಲಿ ಕಾಣಬಹುದು. ಚಂದ್ರಶೇಖರ್ ಮತ್ತು ಪತ್ನಿ, ಮೀರಾ ಚಂದ್ರಶೇಖರ್ ದಂಪತಿಗಳಿಗೆ, ತಾರ ಮ್ಯಾಟ್, ರಜನಿ ಹರ್ಷ, ಮತ್ತು ಇಂದು ಚಂದ್ರಶೇಖರ್, ಎನ್ನುವ ಹೆಸರಿನ ಮೂವರು ಪುತ್ರಿಯರಿದ್ದಾರೆ.
ಕರ್ಣಾಟಕ ಭಾಗವತ ರೂಪುಗೊಂಡ ಬಗೆ
ಬದಲಾಯಿಸಿತಾಳೆಗರಿಯಿಂದ ಬಿಳಿಹಾಳೆಗೆ
ಬದಲಾಯಿಸಿತಾಳೆಗರಿಗಳಲ್ಲಿದ್ದ 'ಕರ್ಣಾಟಕ ಭಾಗವತ'ದ ಬರವಣಿಗೆಯನ್ನು ಗ್ರಂಥರೂಪದಲ್ಲಿ ಹೊರತರುವ 'ಕಲ್ಪನೆ ಹಾಗೂ ಅದರ ಪೂರ್ವ-ವೃತ್ತಾಂತ ಹೀಗಿದೆ. ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ಗ್ರಾಮದ ತಮ್ಮ ಪುರಾತನ ಕಾಲದ ಮನೆಯಲ್ಲಿ 'ನಿತ್ಯಾತ್ಮ ಶುಕಯೋಗಿ', ವಿರಚಿತ ಕನ್ನಡ ಭಾಗವತ ಮಹಾಕಾವ್ಯವನ್ನು ಅವರ ವಂಶದ ಪೂರ್ವಿಕರಾದ 'ಶ್ರೀ ರಾಮಣ್ಣಯ್ಯವರು' ೧೭೫೫ ರಲ್ಲಿ ತಾಳೆಗರಿಯಲ್ಲಿ ಬರೆದ್ದರು. ಈ ಬೃಹತ್ಗ್ರಂಥದ ಇರುವಿಕೆಯ ಬಗ್ಗೆಯೂ, ಚಂದ್ರಶೇಖರ್, ಅವರಿಗೆ ಸರಿಯಾಗಿ ಗೊತ್ತಿರಲಿಲ್ಲ. ೧೯೯೧ ರಲ್ಲಿ ಅಂರ್ತರಾಷ್ಟ್ರೀಯ ಸಮ್ಮೆಳನದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಾಗ, ಇವುಗಳ ಇರುವಿಕೆಯ ಅರಿವಾಯಿತು. ನಮ್ಮ ಭಾರತದೇಶದ ಪುರಾತನ ಸಂಸ್ಕೃತಿಯ ಕುರುಹಾಗಿ ಗ್ರಂಥವನ್ನು ನೋಡಿದೊಡನೆಯೇ, ಅದನ್ನು ಪರಿಷ್ಕರಿಸಿ ನವೀನ ರೀತಿಯ ಮುದ್ರಣದಲ್ಲಿ ತರುವ ಉತ್ಕಟವಾದ ಆಕಾಂಕ್ಷೆಗಳು ಬಂದವು. ೨೩೨ ತಾಳೆಗರಿಗಳ ಚಿಕ್ಕ ಅಕ್ಷರಗಳಲ್ಲಿ ಬರೆದ ಸುಮಾರು ೧೨,೦೦೦, ಭಾಮಿನಿ ಷಟ್ಪದಿಯ ಪದ್ಯಗಳನ್ನು ಪರಿಷರಿಸುವ ಕಾರ್ಯ ೧೯೯೨ ರಲ್ಲಿ ಪ್ರಾರಂಭವಾಗಿ ೨೦೦೮ ಸಂಪನ್ನವಾಯಿತು. ಸುಮಾರು ೫೦೦ ವರ್ಷಗಳ ಹಿಂದೆ ರಚಿಸಿದ ತಾಳೆಗರಿ ಗ್ರಂಥಗಳಿಂದ ಉಳಿದು ಬಂದ ಈ ಮಹಾಕಾವ್ಯವನ್ನು ೨ ಸಂಪುಟಗಳಲ್ಲಿ ಸಂಪಾದಿಸಿ, ಕನ್ನಡದ ಓದುಗರಿಗೆ ಅರ್ಪಿಸಿದ್ದಾರೆ. ಈ ಬೃಹತ್ ಗ್ರಂಥವನ್ನು ಸಂಪಾದಿಸಲು,
'ಪರಿಶೋಧಕ ಮಂಡಲಿಯ ನೇಮಕ
ಬದಲಾಯಿಸಿ'ಕರ್ಣಾಟಕ ಭಾಗವತ ಕೃತಿ'ಯ 'ಪರಿಶೋಧಕ ಮಂಡಲಿ'ಯ ಸದಸ್ಯರು
ಬದಲಾಯಿಸಿಜನವರಿ ೨೦೦೮, ರಲ್ಲಿ 'ಕರ್ಣಾಟಕ ಭಾಗವತ' ಕೃತಿ ಸಂಪಾದನೆಯ ಕಾರ್ಯಕ್ಕೆ ಮಾನಸಗಂಗೋತ್ರಿಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಟಿ. ವಿ. ವೆಂಕಟಾಚಲ ಶಾಸ್ತ್ರಿಯವರ ನೇತೃತ್ವದಲ್ಲಿ ಪರಿಶೋಧಕ ಮಂಡಲಿಯೊಂದನ್ನು ಸಂಘಟಿಸಲಾಯಿತು.[೪] ಈ ಮಂಡಲಿಯ ಸದಸ್ಯರು :
- ಶ್ರೀ.ಜಿ.ಜಿ.ಮಂಜುನಾಥನ್,
- ಪ್ರೊ.ಎಚ್.ಎಸ್.ಹರಿಶಂಕರ್,
- ಡಾ.ಟಿ.ಎನ್.ನಾಗರತ್ನ,
- ಡಾ.ವೈ.ಸಿ.ಭಾನುಮತಿ,
- ಶ್ರೀ.ಶಿಕಾರಿಪುರ ಹರಿಹರೇಶ್ವರ
- ಪ್ರೊ.ಎಚ್. ಆರ್. ರಾಮಕೃಷ್ಣ ರಾವ್
'ಅಂರ್ತರಾಷ್ಟ್ರೀಯ ಅಭಿಯಾನ'
ಬದಲಾಯಿಸಿಅಮೆರಿಕದಲ್ಲಿ ವಾಸ್ತವ್ಯದಲ್ಲಿದ್ದ 'ಚಂದ್ರ',ರವರು [೫] ವಿದ್ವಾಂಸರ ಸಲಹೆಗಳನ್ನು ಕಂಪ್ಯೂಟರಿಕರಿಸುತ್ತಾ ಬಂದರು. ಈ ಮಟ್ಟದ ಅಂತರರಾಷ್ಟ್ರೀಯ ಸಹಕಾರದಿಂದ, ವಿದ್ವತ್ಪೂರ್ಣವಾದ, ಹಾಗೂ ಸುಂದರವಾದ ’ಕರ್ಣಾಟಕ ಭಾಗವತ ’ಗ್ರಂಥವನ್ನು ವಿದ್ವಾಂಸರಿಗೂ, ಸಾಮಾನ್ಯರಿಗೂ, ಸಾಹಿತ್ಯಪ್ರೇಮಿಗಳಿಗೂ, ಸಂಶೋಧಕರಿಗೂ ನೆರವಾಗುವಂತೆ ಪ್ರಕಟಿಸಿರುತ್ತಾರೆ. 'ಶಕಟರೇಫ'ವನ್ನು ಬಳಸದೆ ಆಧುನಿಕ ಕ್ರಮದಲ್ಲಿ ಓದುಗರಿಗೆ ಸುಗಮವಾಗುವಂತೆ ಕನ್ನಡದಲ್ಲಿ ಕಂಪ್ಯೂಟರೀಕರಿಸಲಾಗಿದೆ.
'ಕರ್ಣಾಟಕ ಭಾಗವತ ಕೃತಿ ರಚನೆ'ಯಲ್ಲಿ ಪಾಲ್ಗೊಂಡು ಸಹಕರಿಸಿದ ವ್ಯಕ್ತಿಗಳು
ಬದಲಾಯಿಸಿ- "ಹ್ಯೂಸ್ಟನ್ ಕನ್ನಡ ಫೌಂಡೇಷನ್," ಗ್ರಂಥದ ಪ್ರಕಟಣೆಯಲ್ಲಿ ಕೊಟ್ಟ ಆರ್ಥಿಕ ನೆರವು, ಹಾಗೂ ಪ್ರೋತ್ಸಾಹ.
- ಶ್ರೀಮತಿ.ಕುಸುಮಚಂದ್ರಪಾಲರ, ಆರ್ಥಿಕ ನೆರವು ಹಾಗೂ ಪ್ರೋತ್ಸಾಹ.
- ಕೆ.ವೆಂಕಟರಾಮಯ್ಯನವರ ಕನ್ನಡ ಭಾಗವತದ, 'ದಶಮಸ್ಕಂಧ,'ದ ಪ್ರತಿಯನ್ನು, ಶ್ರೀ ರಾಘವೇಂದ್ರಭಟ್ಟರು, ಒದಗಿಸಿದರು.
- ಪ್ರೊ.ಎಚ್.ಆರ್. ರಾಮಕೃಷ್ಣರಾವ್, ಮತ್ತು 'ಶ್ರೀ. ಶೇಷಗಿರಿರಾವ್' ಸಂಶೋಧನೆಗಳಲ್ಲಿ ನೆರವಾದರು.
- ಶ್ರೀಮತಿ. ಮೀರಾಚಂದ್ರಶೇಖರ್, ಚಿ.ತಾರಾಚಂದ್ರಶೇಖರ್, ಚಿ.ರಜನಿಚಂದ್ರಶೇಖರ್, ಹಾಗೂ ಚಿ.ಇಂದುಚಂದ್ರಶೇಖರ್ ರ ಪ್ರೋತ್ಸಾಹ.
- ಶ್ರೀಯುತರಾದ ವತ್ಸಕುಮಾರ್, ಸುಬ್ಬೀ ಸುಬ್ರಮಣ್ಯಮ್, ಪ್ರೊ.ಸತೀಶ್ ನಾಗರಾಜಯ್ಯ, ಶಿಕಾರಿಪುರ ಹರಿಹರೇಶ್ವರ, ಮತ್ತು ಅನೇಕ ಮಿತ್ರರ ನೆರವು.
- ಶ್ರೀಮತಿಯರಾದ, ನಾಗಮಣಿ ಹರಿಹರೇಶ್ವರ, ಮತ್ತು ನಾಗರತ್ನರಿಗೆ, 'ಪರಿಶೋಧಕ ಮಂಡಾಲಿಯ ಕಾರ್ಯಕ್ರಮಗಳು ಸುಗಮವಾಗಿ ನಡೆಯಲು ಕೈಗೊಂಡ, ಸ್ವಾಗತಾತಿಥ್ಯಗಳ ನೆರವು'.
ಕರ್ಣಾಟಕ ಭಾಗವತದ ಹಲವಾರು ವೈಶಿಷ್ಠ್ಯತೆಗಳು
ಬದಲಾಯಿಸಿಸಹಸ್ರ ಮೈಲಿ ದೂರದಲ್ಲಿರುವ ನಡೆ-ನುಡಿಗಳ ವೈವಿಧ್ಯತೆಗಳ ವಿದೇಶವಾದ ಅಮೆರಿಕದ ಸಂಯುಕ್ತ ಪ್ರಾಂತ್ಯದಲ್ಲಿ, ಪರಿಷ್ಕರಿಸಲ್ಪಟ್ಟು, ಮೈಸೂರಿನಲ್ಲಿ ಪರಿಶೋಧಿಸಲ್ಪಟ್ಟು, ಅವರ ಪ್ರೀತಿಯ ತಾಯಿನಾಡಿನ ಓದುಗರಿಗೆ, ಸಂಶೋಧಕರಿಗೆ, ಈ ಗ್ರಂಥವನ್ನು ೧೨, ಏಪ್ರಿಲ್, ೨೦೦೮ ರಂದು ಆಚರಿಸಿದ "ಹ್ಯೂಸ್ಟನ್ ಕನ್ನಡ ವೃಂದದದ ರಜತ ಮಹೋತ್ಸವ," ದ ಸವಿ-ನೆನಪಿಗೆ ಅರ್ಪಿಸಲಾಯಿತು. ರಾಮಾಯಣ, ಮಹಾಭಾರತ ಕಾವ್ಯ ಗಳಂತೆ ಭಾಗವತ ಸಂಸ್ಕೃತ ಭಾಷೆಯಲ್ಲಿದೆ. ವ್ಯಾಸಕವಿಯ ಪುತ್ರರಾದ ಶುಕನು ಪರೀಕ್ಷಿತರಾಜನ ಅವಸಾನ ಕಾಲದಲ್ಲಿ ಈ ಮೇರುಕೃತಿಯನ್ನು ಆತನಿಗೆ ಬೋಧಿಸಿದರು. ಕರ್ಣಾಟಕ ಭಾಗವತ, ಪ್ರಮುಖವಾಗಿ, ಸಂಪೂರ್ಣವಾದ, ಕನ್ನಡ ಭಾಗವತ ; ಬಹುಶಃ, ಕುಮಾರವ್ಯಾಸನ ಸಮಕಾಲೀನ ರಾದ ಕವಿಗಳು ಭಾಮಿನಿ ಷಟ್ಪದಿ ಯಲ್ಲಿ ರಚಿಸಿದ ಭಾಗವತ ಗ್ರಂಥ ಕನ್ನಡಿಗರಿಗೆ ಉಡುಗೊರೆಯಾಗಿದೆ. ಇದುವರೆಗೆ ಸಮಗ್ರವಾದ ಗ್ರಂಥದ ಪ್ರಕಟಣೆ ಆಗಿರಲಿಲ್ಲ. ಹಲವಾರು ವೈಶಿಷ್ಶ್ಠತೆಗಳಲ್ಲಿ ಇದೂ ಒಂದು.
ಸಂಕ್ಷಿಪ್ತ ಅರ್ಥಕೋಶ
ಬದಲಾಯಿಸಿಭಾಗವತಪುರಾಣದಲ್ಲಿ ೧೨ ಸ್ಕಂಧಗಳು, ನೂರಾರು ಸಂಧಿಗಳು, ೧೧,೦೦೦ ಸಾವಿರಕ್ಕೂ ಮೀರಿದ ಪದ್ಯಗಳಿವೆ. ಮೊದಲನೆಯ ೯ ಸ್ಕಂಧಗಳನ್ನು ಮೊದಲನೆಯ ಸಂಪುಟದಲ್ಲೂ,ದಶಮ,ಏಕಾದಶ, ಮತ್ತು ದ್ವಾದಶಸ್ಕಂಧ ಗಳನ್ನು, ಎರಡನೆಯ ಸಂಪುಟದಲ್ಲೂ ಪ್ರಕಟಿಸಲು ನಿರ್ಧಾರ ಮಾಡಲಾಯಿತು. ಕನ್ನಡ ಭಾಷೆಯಲ್ಲಿ ಮೂಲಗ್ರಂಥವನ್ನು, ಇಂಗ್ಲೀಷ್ ಭಾಷೆಯಲ್ಲಿ ಸಂಕ್ಷಿಪ್ತ ಕಥಾಸಾರವನ್ನೂ, ವಿಸ್ತರಿಸಲಾಗಿದೆ. ಅನುಬಂಧದಲ್ಲಿ ಕೆಲವು ಪ್ರಕಟಿಸಿದ್ದ ಹೆಚ್ಚಿನ ಪದ್ಯಗಳನ್ನು ಸೇರಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ಕ್ಲಿಷ್ಟವಾದ ಪದಗಳ ಒಂದು ಸಂಕ್ಷಿಪ್ತ-ಆರ್ಥಕೋಶವನ್ನು ಹಾಕಲಾಗಿದೆ. ರ್ಣಾಟಕ ಭಾಗವತದ ವಿಶೇಷತೆ[ಬದಲಾಯಿಸಿ] ಕರ್ಣಾಟಕ ಭಾಗವತದ ವಿಶೇಷತೆಯೆಂದರೆ,ಪುರಾಣದ ಕಾಲದ ರಾಜವಂಶೀಯ ಕಥೆಗಳ ಉಲ್ಲೇಖ. ವಿಷ್ಣುವಿನ ಅವತಾರದ ಕಥೆಗಳು, ಸಾಂಖ್ಯ, ಭಕ್ತಿ, ಮುಂತಾದ ಯೋಗಗಳ ವಿಸ್ತಾರ, ಹರಿಗುರುಸ್ತುತಿ ಮುಂತಾದ ಭಾಗಗಳು ಈ ಗ್ರಂಥದಲ್ಲಿ ವರ್ಣಿಸ ಲ್ಪಟ್ಟಿವೆ. ಶುಕ-ಪರೀಕ್ಷಿತರು, ಸೂತ-ಶೌನಕಾದಿಗಳು, ಮೈತ್ರೇಯ-ವಿದುರರು, ಉದ್ಧವ-ಕೃಷ್ಣರು, ಪ್ರಹ್ಲಾದ-ಅವದೂತರು, ಜನಕ-ನವಯೋಗಿಗಳು, ಮುಂತಾದವರ ಸಂಭಾಷಣೆಗಳ ಮೂಲಕ ಕವಿ, ಈ ಗ್ರಂಥವನ್ನು ನಿರೂಪಿಸಿದ್ದಾನೆ. ಸಂಶಯ ವಿಚಾರವಾದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ರೀತಿಯಲ್ಲಿ ಅತಿದೊಡ್ಡ ಕಥಾಸಾರವನ್ನು ನಿರೂಪಿಸಲಾಗಿದೆ
ಪುರಾಣದ ರೋಚಕ ಕಥೆಗಳು
ಬದಲಾಯಿಸಿಭಾಗವತದ ಕೆಲವು ಕಥೆಗಳು, ವಿಷ್ಣು, ಗರುಡ,ಮತ್ಸ್ಯ,ಮಾರ್ಕಂಡೇಯ,ಇತ್ಯಾದಿ ಪುರಾಣಗಳಲ್ಲೂ, ಭಾರತ, ರಾಮಾಯಣಗಳಲ್ಲಿಯೂ ಇರುವ, ಭಗೀರಥನ ಪ್ರಸಂಗ, ಕ್ಷೀರಸಾಗರ ಮಥನ, ಶಕುಂತಲೆ, ಯಯಾತಿ, ಪುರೂರವ, ಹರಿಶ್ಚಂದ್ರ, ಮುಂತಾದವುಗಳು. ಭಾಗವತದ ಮೂಲ ಗ್ರಂಥದಲ್ಲಿ ಇಲ್ಲದ ಕೆಲವು ಕಥಾಪ್ರಸಂಗಗಳನ್ನು,'ಕರ್ಣಾಟಕಭಾಗವತ'ದಲ್ಲಿ ಕವಿ ತನ್ನ ಕೃತಿಯಲ್ಲಿ ಸೇರಿಸಿದ್ದಾನೆ. ಅರ್ಜುನ-ಕೃಷ್ಣರ ಗೀತೋಪದೇಶ ದ ವಿಸ್ತಾರ, ಶಿವ-ಪಾರ್ವತಿಯರ ವಿವಾಹ, ಮದಾಲಸೋಪಾಖ್ಯಾನ, ಹಂಸಡಿಕರೊಡನೆ ಯಾದವರ ಯುದ್ಧ. ಘಂಟಕರ್ಣನ ಪ್ರಸಂಗ, ಮುಂತಾದವು ಸಂಸ್ಕೃತ ಮೂಲಭಾರತದಲ್ಲಿಲ್ಲ. ಆದರೆ ಕನ್ನಡ ಭಾಗವತದಲ್ಲಿವೆ. ಸಂಸ್ಕೃತ ಭಾಗವತದಲ್ಲಿ ದೀರ್ಘವಾಗಿ ವಿಸ್ತರಿಸಿದ ಉದ್ಧವಗೀತೆ, ನವಯೋಗಿಗಳ ಬೋಧೆ, ಕಪಿಲಬೋಧೆ, ಮುಂತಾದ ಭಾಗಗಳನ್ನು ಕನ್ನಡ ಕವಿ ಸಂಕ್ಷಿಪ್ತವಾಗಿ ಹೇಳಿದ್ದಾನೆ.
೧೯೧೧ ರಲ್ಲಿ ಪ್ರಕಟಿತ ಭಾಗವತ
ಬದಲಾಯಿಸಿ೧೯೧೧ ರಲ್ಲಿ ಪ್ರಕಟವಾದ, ಪುಸ್ತಕದ ನಂತರ ಸಮಗ್ರವಾಗಿ ಈ ಕೃತಿಯ ಪ್ರಕಟಣೆಯಾಗಿರಲಿಲ್ಲ. 'ಮೈಸೂರು ವಿಶ್ವವಿದ್ಯಾಲಯ,' ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಶ್ರೀಯುತ, ಕೆ. ವೆಂಕಟರಾಮಪ್ಪ ನವರು, ೩ ತಾಳೆಗರಿಗಳ ಪ್ರತಿಯನ್ನು ಸಂಗ್ರಹಿಸಿ, ಅವರ ಶಿಷ್ಯರು, ಮಾನಸಗಂಗೋತ್ರಿಯ, ಹಾಗೂ ವಿವೃತ್ತ ಪ್ರಿನ್ಸಿಪಾಲರಾದ, ಶ್ರೀ.ಎಚ್.ಎಂ.ಶಂಕರನಾರಾಯಣರಾಯರ ಕೃಪೆಯಿಂದ, ಮೊದಲನೆಯ ೪ ಸ್ಕಂಧಗಳನ್ನು ೧೯೭೩ -೧೯೭೫ ರಲ್ಲಿ ಪ್ರಕಟಿಸಿದರು. ೧೯೬೪ ರಲ್ಲಿ ’ಕೃಷ್ಣಚರಿತೆ’, ಯೆಂಬ ಹೆಸರಿನಲ್ಲಿ, ದಶಮಸ್ಕಂಧವನ್ನು ಪ್ರಕಟಿಸಿದರು. ಕಾರಣಾಂತರಗಳಿಂದ, ಆ ಕೆಲಸ, ಅಲ್ಲಿಗೇ ನಿಂತು ಹೋಯಿತು. ಹೀಗೆ, ಸುಮಾರು ೧೩ ವರ್ಷಗಳ ನಿರಂತರ ಸಾಧನೆಯಿಂದ, ಕರ್ಣಾಟಕ ಭಾಗವತದಂತಹ ಬೃಹತ್ ಕೃತಿಯನ್ನುತರಲು ಡಾ.ಚಂದ್ರ ಪ್ರಯತ್ನಿಸಿ ಸಫಲರಾಗಿದ್ದಾರೆ.
ವಿಶ್ವಾರ್ಪಣಾ ಮಹೋತ್ಸವಗಳು
ಬದಲಾಯಿಸಿ(ಮೈಸೂರು, ಬೆಂಗಳೂರು, ಧಾರವಾಡ, ಹಾಗೂ ಶಿವಮೊಗ್ಗ) ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮಗಳು ನಡೆದು, ಡಾ. ಚಂದ್ರರವರು, ಈ ಅಭಿಯಾನವನ್ನು ಅತ್ಯಂತ ಭಕ್ತಿ, ಶ್ರದ್ಧೆ, ಹಾಗೂ, ಪ್ರೀತ್ಯಾದರಗಳಿಂದ ನಡೆಸಿಕೊಟ್ಟರು. ಅದರ ಬಗ್ಗೆ ಆಸಕ್ತರಿಗೆ ಮಾಹಿತಿಗಳು, 'ಯೂಟ್ಯೂಬ್' ಗಳಲ್ಲೂ ಲಭ್ಯವಿದೆ. ಭಾಗವತ ಪುರಾಣದ ಇತರರ ಕೃತಿಗಳು
- ಶ್ರೀಮತಿ. ಮಂಜುಳಾ ಸುಬ್ಬರಾವ್, ರಚಿಸಿದ, ಭಾಗವತ ಭಾವದೀಪ್ತಿ-(೪೨ನೆಯದು)
- ಶ್ರೀ.ಕೆ. ಅನಂತರಾಮ ರಾವ್,ರಚಿಸಿದ ಕೃತಿ, ಸಂಪೂರ್ಣಭಾರತದ ಗದ್ಯಾನುವಾದ,
ಚಂದ್ರಶೇಖರ್ ಮಾರ್ಗ
ಬದಲಾಯಿಸಿನಮ್ಮ ಪುರಾತನ ಹಸ್ತಲಿಖಿತ ಗ್ರಂಥಗಳನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಚಂದ್ರಶೇಖರ್ ಮಾರ್ಗ ಅನುಸರಿಸುವ ಪಥ ಅತಿಮುಖ್ಯವಾಗಿದೆ. ಶಿಥಿಲವಾದ ಪುರಾತನ ಹಸ್ತಪ್ರತಿಗಳು'ತಾಡಓಲೆಗ್ರಂಥ'ವನ್ನು ಪರಿಷ್ಕರಿಸಿ ಪುಸ್ತಕ ರೂಪದಲ್ಲಿ ತರುವುದು ಕಷ್ಟಸಾಧ್ಯದ ಕೆಲಸ. ಮೂಲಭೂತ ಭೌತಶಾಸ್ತ್ರದ, ಹಿರಿಯ ಸಂಶೋಧಕ ವಿಜ್ಞಾನಿ, 'ಪ್ರೊ. ಚಂದ್ರಶೇಖರ್', ೧೦ ಸಹಸ್ರ ಮೈಲಿಗಳ ದೂರದಲ್ಲಿದ್ದು, ತಮ್ಮ ಅಧ್ಯಯನ, ಅಧ್ಯಾಪನಗಳ ಜೊತೆಗೆ ಸಮಯದ ತಾಳ-ಮೇಳಮಾಡಿಕೊಂಡು, ಕರ್ನಾಟಕದ ವಿದ್ವಾಂಸರಜೊತೆ ದೂರದ್ವನಿಯ ನೇರ ಸಂಪರ್ಕ ಇಟ್ಟುಕೊಂಡು ರಚಿಸಿದ ಉದ್ಘ್ರಂಥದ ಬಗ್ಗೆ,
"ಇದೊಂದು ಆಶ್ಚರ್ಯದ ಪರಮಾವಧಿ," ಎನ್ನುವ ಮಾತನ್ನು ಸ್ಪಷ್ಟ ಪಡಿಸಿರುತ್ತಾರೆ.[೬] ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳು ಮಾಡಬೇಕಾದ ಕಾರ್ಯವನ್ನು ಒಬ್ಬ ವ್ಯಕ್ತಿ ಮಾಡಿರುವುದು ಇಂದಿನ ದಿನಗಳಲ್ಲಿ ಅತಿ ವಿರಳ. ಕನ್ನಡದ ಹಿರಿಯಸಾಹಿತಿಗಳು, ವಿದ್ವಾಂಸರು, ಶಿಕ್ಷಣತಜ್ಞರು, 'ಕರ್ಣಾಟಕ ಭಾಗವತ ಮಹಾಕಾವ್ಯ,' ವನ್ನು ಸ್ವಾಗತಿಸಿದ್ದಾರೆ. ಡಾ.ವೆಂಕಟಾಚಲಶಾಸ್ತ್ರಿ ಹಾಗೂ ಅವರ ಸಂಗಡಿಗರು, ಅಕ್ಷರಿಕೆಯ ತಿದ್ದುಪಡಿ, ಮುಖ್ಯತಃ ಪದಚ್ಛೇದ, ಛಂದಸ್ಸನ್ನು ಮಾತ್ರೆ ಇತ್ಯಾದಿಗಳನ್ನು ತಿದ್ದುವಿಕೆ, ಪಾಠಭೇದವನ್ನು ಗುರುತಿಸುವಿಕೆ, ಮುಂತಾದ ಕೆಲಸದಲ್ಲಿ ಪ್ರೊ.ಚಂದ್ರರವರಿಗೆ ನೆರವಾಗಿದ್ದಾರೆ. ಅಮೆರಿಕದಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ಮಂಚೂಣಿಯಲ್ಲಿದ್ದ, ಶ್ರೀ.ಹರಿಹರೇಶ್ವರರು ’ಅನಸ್ಯೂತದಾರ,'ದಂತೆ ಸ್ಪಂದಿಸಿ, ಕಾರ್ಯದಲ್ಲಿ ಸಹಭಾಗಿಗಳಾಗಿದ್ದಾರೆ
ಶ್ರೀ.ಅ.ರಾ.ಸೇತೂರಾಮರಾವ್ ಅರಾಸೇ ಡಾ. ಎಚ್.ಎನ್ ಮುರುಳೀಧರ್, ಡಾ.ಎಮ್.ಎಸ್.ನಟರಾಜ್. ಮುಕ್ತ ವಿಶ್ವವಿದ್ಯಾಲಯದ ಕುಲಪತಿ, ಡಾ.ವಿವೇಕ್ ರೈ, ಡಾ. ಜಿ.ವೆಂಕಟಸುಬ್ಬಯ್ಯ, ಕರ್ಣಾಟಕ ಭಾಗವತದ ಕಾವ್ಯಸಂಪತ್ತನ್ನು ಅವಲೋಕಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಡಾ. ಶ್ರೀನಿವಾಸ ಹಾವನೂರ, ಕನ್ನಡ ಭಾಗವತ ಇಡಿಯಾಗಿ ಮುದ್ರಣಗೊಂಡು, ಪಿ.ಎಚ್.ಡಿ ಮಟ್ಟದಲ್ಲಿ ಮುಂದೆ ಅಭ್ಯಸಿಸುವರಿಗೆ ಅತಿ ಅನುಕೂಲಕರವಾಗಿರುವ ಅಂಶವನ್ನು ಒತ್ತಿ ಹೇಳಿದರು. ಅಧ್ಯಾಪನ, ಸಂಶೋಧನೆ, ವಿಸ್ತೃತವಾದ ಮುನ್ನುಡಿ, ಇಂಗ್ಲೀಷ್ ನಲ್ಲಿ ಕಥಾಸಾರ, ಕ್ಲಿಷ್ಟಪದಗಳ,ಅರ್ಥಗಳಿಂದ ಕೂಡಿದ ಗ್ರಂಥ, ಭಾಷಾ ವಿದ್ಯಾರ್ಥಿಗಳಿಗೆ ಅತ್ಯಮೂಲ್ಯವಾದದ್ದು ಎನ್ನುವ ವಿಷಯ ತಿಳಿಸಿದರು. ಅಮೆರಿಕದ ಮೇರಿಲ್ಯಾಂಡ್ ನ ನಿವಾಸಿ, ಪ್ರೊ.ಎಮ್.ವೈ.ನಟರಾಜ್ [೭] ತಮ್ಮ ಮೆಚ್ಚುಗೆ ಸೂಚಿಸಿ ಒನ್ ಇಂಡಿಯ,ಇ-ಪತ್ರಿಕೆಯಲ್ಲಿ ಬರೆದಿದ್ದಾರೆ.
ಚಂದ್ರ ಪ್ರಕಟನಾಲಯ(LLC)
ಬದಲಾಯಿಸಿಎಲ್.ಎಲ್.ಸಿ, ಚಂದ್ರಾ ಪರಿವಾರದ ಚಿಕ್ಕ ಪುಸ್ತಕ ಪ್ರಕಟನ ಸಂಸ್ಥೆ; ಮೌಲ್ಯಯುತವಾದ ಪ್ರಕಟಣೆಗೆ ಹೆಸರಾದದ್ದು. ಹಲವು ವಿದ್ಯಾವರ್ಧಕ, ಜ್ಞಾನಬೋಧಕ, ಹಾಗೂ ಮಕ್ಕಳಿಗಾಗಿಯೇ ವಿಶೇಷ ಆಸ್ತೆಯಿಂದ ರಚಿಸಿದ ಪುಸ್ತಕಗಳ ಆವೃತ್ತಿಗಳನ್ನು ಪ್ರಕಾಶಗೊಳಿಸಿದ ಶ್ರೇಯಸ್ಸು ಈ ಸಂಸ್ಥೆಯದು.'ಚಂದ್ರ ಪ್ರಕಟಣಾಲಯ'ದ ಬಗ್ಗೆ, ಬಗ್ಗೆ ಕಿರು ಪರಿಚಯವನ್ನು ಕೆಳಗಿನ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು. ಕರ್ಣಾಟಕ ಭಾಗವತದ ಬಗ್ಗೆಯಾಗಲಿ, ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಬಹುದು
ಉಲ್ಲೇಖಗಳು
ಬದಲಾಯಿಸಿ- ↑ "About Dr. H.R.Chandrasekhar (Chandra)". Archived from the original on 2016-06-12. Retrieved 2016-05-22.
- ↑ "ಶಾಂತಿ ಮಂದಿರ್," Hindu temple, and Community centre of mid missouri; Officers and Committees
- ↑ "Tales from Indian epics-Dr. H.R.Chandrasekhar". Archived from the original on 2016-06-12. Retrieved 2016-05-24.
- ↑ 'ಸಾಹಿತ್ಯ ಕಲ್ಪ' ಪರಿಛ್ಛೇದ ೩೧. ಕರ್ಣಾಟಕ ಭಾಗವತ ಲೋಕಾರ್ಪಣೆ, ಲೇ: ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ ಪು.೨೪೭
- ↑ "Karanataka bhagawatha (2 Vols) Reviews and Press reports, Picturs of Book release, Videos onBhagawatha, Gamakas, Vidushi. Dr. Sukanya prabhakar, M.V.Satyanarayana, M.S.Anantharamaiah and group". Archived from the original on 2016-06-12. Retrieved 2016-05-22.
- ↑ "" ಸಂಶೋಧನೆ, ವಿದ್ವತ್ತು, ಸಂಪಾದನೆ, ಬೃಹತ್ ಅವತಾರವಾಗಿ ಕೃತಿರೂಪು ತಳೆದಿದೆ. ಇದು ಒಂದು ಶ್ಲಾಘನೀಯವಾದ ಸಂಗತಿ,"-ಡಾ.[[ಬಿ.ಎ.ವಿವೇಕ್ ರೈ]]-ವೆಂಕಟೇಶ್, ಸಂಪದ, ಜೂನ್,೨೮, ೨೦೦೮". Archived from the original on 2008-10-12. Retrieved 2016-05-22.
- ↑ one India, July 5, 2012, ಕರ್ಣಾಟಕ ಭಾಗವತ : ತಾಳೆಗರಿಯಿಂದ ಬಿಳಿಹಾಳೆಗೆ ಅಂಕಣಕಾರ : ಡಾ|| ಮೈ.ಶ್ರೀ. ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್
ಇವನ್ನೂ ನೋಡಿ/ಕೇಳಿ
ಬದಲಾಯಿಸಿ- ವಿದುಷಿ. ಡಾ.ಸುಕನ್ಯಾಪ್ರಭಾಕರ್ ಭಾಗವತದ ವಾಚನಮಾಡುತ್ತಿದ್ದಾರೆ.ಭಾಗ.೧
- ವಿದುಷಿ. ಡಾ.ಸುಕನ್ಯಾಪ್ರಭಾಕರ್ ಭಾಗವತದ ವಾಚನಮಾಡುತ್ತಿದ್ದಾರೆ.ಭಾಗ.೨
- ವಿದುಷಿ. ಡಾ.ಸುಕನ್ಯಾಪ್ರಭಾಕರ್ ಭಾಗವತದ ವಾಚನಮಾಡುತ್ತಿದ್ದಾರೆ.ಭಾಗ.3
- ಕರ್ಣಾಟ್ಕ ಭಾಗವತ.ಭಾಗ.೧.ಶ್ರೀ.ಎಮ್.ಆರ್.ಸತ್ಯನಾರಾಯಣ
- ಕರ್ಣಾಟಕ ಭಾಗವತ.ಭಾಗ.೨.ಶ್ರೀ.ಎಮ್.ಆರ್.ಸತ್ಯನಾರಾಯಣ
- 'ಸುವರ್ಣ ವಾಹಿನಿ'
- 'ಕರ್ಣಾಟಕ ಭಾಗವತ ಉದ್ಗ್ರಂಥದ ಲೋಕಾರ್ಪಣಾ ಸಮಾರಂಭ', 'ಕನ್ನಡ ಸಂಘ, ಹೂಸ್ಟನ್', ಟೆಕ್ಸಾಸ್
- '೫ ನೆಯಅಕ್ಕ ಕನ್ನಡ ಸಮ್ಮೇಳನ', ಚಿಕಾಗೋನಗರ-೨೦೦೮,೩೧,ಆಗಸ್ಟ್
- ಕಂಸವಧೆ-ಭಾಗ.೧.ಶ್ರೀ.ಎಮ್.ಎಸ್.ಅನಂತ ನಾರಾಯಣ
- ಕಂಸವಧೆ-ಭಾಗ.೨.ಶ್ರೀ.ಎಮ್.ಎಸ್.ಅನಂತ ನಾರಾಯಣ
- ಕಂಸವಧೆ-ಭಾಗ.೩.ಶ್ರೀ.ಎಮ್.ಎಸ್.ಅನಂತ ನಾರಾಯಣ