ಹಣಕಾಸಿನಲ್ಲಿ, ಕರಾರುಪತ್ರವು (ಮುಚ್ಚಳಿಕೆ) ಅದನ್ನು ಹೊಂದಿರುವವರಿಗೆ ಅದನ್ನು ನೀಡುವವನ ಋಣಿಯಾಗಿರುವಿಕೆಯ ಸಾಧನವಾಗಿದೆ. ಕರಾರುಪತ್ರಗಳ ಅತ್ಯಂತ ಸಾಮಾನ್ಯ ವಿಧಗಳಲ್ಲಿ ಪುರಸಭೆಯ ಕರಾರುಪತ್ರಗಳು ಮತ್ತು ಸಾಂಸ್ಥಿಕ ಕರಾರುಪತ್ರಗಳು ಸೇರಿವೆ.

ಕರಾರುಪತ್ರವು ಋಣದ ಆಧಾರವಾಗಿರುತ್ತದೆ. ಇದರಡಿ ನೀಡುವವನು ಹೊಂದುವವರಿಗೆ ಋಣವನ್ನು ತೀರಿಸಬೇಕಾಗಿರುತ್ತದೆ ಮತ್ತು (ಕರಾರುಪತ್ರದ ಷರತ್ತುಗಳನ್ನು ಅವಲಂಬಿಸಿ) ಅವರಿಗೆ ಬಡ್ಡಿಯನ್ನು ಪಾವತಿಸಲು ಅಥವಾ ವಾಯಿದ ತುಂಬಿದ ದಿನಾಂಕವೆಂದು ಕರೆಯಲ್ಪಡುವ ಮುಂದಿನ ಒಂದು ದಿನಾಂಕದಂದು ಅಸಲನ್ನು ಮರುಪಾವತಿಸುವುದಕ್ಕೆ ಬದ್ಧವಾಗಿರುತ್ತಾನೆ.[೧] ಸಾಮಾನ್ಯವಾಗಿ ಬಡ್ಡಿಯನ್ನು ನಿರ್ದಿಷ್ಟ ಅಂತರಗಳಲ್ಲಿ ಪಾವತಿಸುವುದಿರುತ್ತದೆ (ಅರ್ಧವಾರ್ಷಿಕ, ವಾರ್ಷಿಕ, ಕೆಲವೊಮ್ಮೆ ಮಾಸಿಕ). ಬಹಳ ವೇಳೆ ಕರಾರುಪತ್ರವು ವಿನಿಮಯಸಾಧ್ಯವಾಗಿರುತ್ತದೆ, ಅಂದರೆ ಸಾಧನದ ಸ್ವಾಮ್ಯವನ್ನು ದ್ವಿತೀಯಕ ಮಾರುಕಟ್ಟೆಯಲ್ಲಿ ವರ್ಗಾಯಿಸಬಹುದು.

ಉಲ್ಲೇಖಗಳುಸಂಪಾದಿಸಿ

  1. O'Sullivan, Arthur; Sheffrin, Steven M. (2003). Economics: Principles in action. Upper Saddle River, New Jersey 07458: Pearson Prentice Hall. pp. 197, 507. ISBN 0-13-063085-3.