ಕರದಂಟು ಗೋಕಾಕ್‌ದಲ್ಲಿ ತಯಾರಾಗುವ ವಿಶಿಷ್ಟ ಸಿಹಿ ತಿನಿಸು. ಇದನ್ನು ಮರದ ಅಂಟಿನಿಂದ ಮಾಡಲಾಗುತ್ತದೆ. ಈ ಅಂಟಿನೊಂದಿಗೆ ಒಣ ಕೊಬ್ಬರಿ, ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ, ಖರ್ಜೂರ, ಪಿಸ್ತಾ ಮುಂತಾದ ಪದಾರ್ಥಗಳೊಂದಿಗೆ ಮತ್ತಷ್ಟು ಒಣ ಹಣ್ಣುಗಳನ್ನು ಸೇರಿಸಿ ದೇಸಿ ತುಪ್ಪದಲ್ಲಿ ಹದವಾಗಿ ತಯಾರಿಸಲಾಗುತ್ತದೆ. ಬಿಳಿಯ ಬಣ್ಣದ ಅತಿ ರುಚಿಕರ ಕರದಂಟು, ಉತ್ತರ ಕರ್ನಾಟಕದ ಜಾತ್ರೆಗಳಲ್ಲಿ ಸಿಗುತ್ತದೆ.

ತಯಾರಿಸುವ ವಿಧಾನ

ಬದಲಾಯಿಸಿ

'ಗೋಕಾಕದ ಕರದಂಟ'ನ್ನು ಸಾಮಾನ್ಯವಾಗಿ ಬಾಣಲೆಯಲ್ಲಿ ಪಾಕ ತಯಾರಿಸಿ ಅಚ್ಚಿಗೋ ಅಥವಾ ತಟ್ಟೆಗೋ ಹಾಕಿ ಕರೆದಂಟನ್ನು ತಯಾರಿಸುತ್ತಾರೆ. ಇನ್ನೊಂದು ಬಗೆಯೆಂದರೆ, 'ಅಮೀನಗಡದ ಕರೆದಂಟು'. ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಯಲ್ಲಿ ಬನಶಂಕರಿ ಜಾತ್ರೆ, ಕೊಪ್ಪಳ ಗವಿಮಠ ಜಾತ್ರೆ, ಹುಲಗಿ ಜಾತ್ರೆ,ಯಲ್ಲಿ ತಯಾರಿಸುವ ವಿಶೇಷ ಖಾದ್ಯವೆಂದರೆ ಹಾಸು ಬಂಡೆಯಮೇಲೆ ಪಾಕವನ್ನು ಸುರಿದು ಸಿಹಿ ಖಾದ್ಯ ತಯಾರಿಸಲಾಗುವುದು. ಸಕ್ಕರೆ, ಏಲಕ್ಕಿ, ಲಿಂಬೇರಸ, ತುಪ್ಪ ಅಥವಾ ಡಾಲ್ಡಾ, ಹಾಗೂ ಇನ್ನಿತರ ವಸ್ತುಗಳನ್ನು ಬಾಣಲೆಗೆ ಸುರಿದು ಅಂಟು ದ್ರವವಾಗುವ ಹಾಗೆ ಚೆನ್ನಾಗಿ ಕಾಯಿಸುತ್ತಾರೆ. ಕಾಯಿಸಿದ ಪಾಕವನ್ನು ಹೊರಗಡೆ ತೊಳೆದು ಸಿದ್ಧಗೊಳಿಸಿದ ಹಾಸು ಬಂಡೆಯಮೇಲೆ ಸುರಿಯುತ್ತಾರೆ. ಹೀಗೆ ಸುರಿಯುತ್ತಿದ್ದಂತೆಯೇ ಅದು ಹರಡಿಕೊಂಡು ಬಂಡೆಗೆ ಅಂಟಿಕೊಳ್ಳುತ್ತದೆ. ಹತ್ತಾರು ನಿಮಿಷಗಳ ಬಳಿಕ ಬಂಡೆಯ ಒಂದು ಮೂಲೆಯಿಂದ ಅಂಟಿದ ಭಾಗವನ್ನು ಹಿಡಿದು ಮೇಲೆ ಎತ್ತಿದರೆ, ಪಾಲಿಥಿನ್ ಕಾಗದದ ತರಹ ಚರಚರ ಮೇಲೆಕ್ಕೆ ಬರುತ್ತದೆ. ಹೀಗೆ ಮೇಲೆತ್ತುವಾಗ ಕೊಂಚ ಬಿಸಿಯಾಗಿದ್ದರೆ, ಅದರ ಮೇಲೆ ಸ್ವಲ್ಪ ತಣ್ಣೀರು ಚಿಮುಕಿಸಬೇಕು ಕೆಲಸ ಸುಲಭವಾಗುತ್ತದೆ. ಹೀಗೆ ನೋಡುತ್ತಿದ್ದಂತೆಯೇ ಕಚ್ಚಾ-ಕರೆದಂಟು ಸಿದ್ಧವಾಗುತ್ತದೆ.

ಪಾರದರ್ಶಕ ಬಿಳಿಯ ಬಣ್ಣದ ಕರದಂಟಿನ ರುಚಿ

ಬದಲಾಯಿಸಿ

ಈ ಕರದಂಟು ಗಾಜಿನ ತರಹ ಪಾರದರ್ಶಕವಾದ ಕಾಗದದ ತರಹ ಇರುತ್ತದೆ. ಇದು ಒಂದು ತಿನಸು. ಹಗ್ಗದ ತರಹ ಸುತ್ತಿಒಂದು ಮರದ ಕಂಭಕ್ಕೆ ನೇತುಹಾಕಿ ಸುರಳಿಸುರಳಿಯಾಕಾರದಲ್ಲಿ ತಿರುವುತ್ತಾರೆ. ಸಣ್ಣ ಆಕಾರಕ್ಕೆ ಬಂದ ನಂತರ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಉತ್ತರ ಕರ್ನಾಟಕದವರು ಇಷ್ಟಪಡುವ ಬತ್ತಾಸು ಸಿದ್ಧವಾಗುತ್ತದೆ. ಸುರಳಿ ಅಥವಾ ಮುರಗಿಯಾಕಾರದಲ್ಲಿ ತೆಗೆದರೆ ಬೆಂಡು ಆಗುತ್ತದೆ. ಇದೇ ತರಹ ಒಂದೊಂದೇ ಆಕಾರದಲ್ಲಿ ಕತ್ತರಿಸುತ್ತಾ ಒಂದೇ ರುಚಿ ಹೊಂದಿರುವ ವಿವಿಧ ತರಹದ ಖಾದ್ಯಗಳನ್ನು ಮಾಡಲಾಗುತ್ತದೆ. ಜಾತ್ರೆಗೆ ಬಂದವರೆಲ್ಲಾ ಸಿಹಿಖಾದ್ಯಗಳನ್ನು ಮಕ್ಕಳಿಗೆ ಕೊಂಡೊಯ್ಯುತ್ತಾರೆ. ಬೀಗರು, ಬಿಜ್ಜರಿಗೆ, ನೆರೆಹೊರೆಯ ಗೆಳೆಯರಿಗೆ, ಪ್ರಸಾದದ ರೂಪದಲ್ಲಿ ಕೊಡುವ ಪದ್ಧತಿಯಿರುವುದರಿಂದ ಮಿಠಾಯಿ ಖರೀದಿಸುವ ಸಂಪ್ರದಾಯವಿರುತ್ತದೆ. ಆದರೆ ಜಾತ್ರೆಗಳಲ್ಲಿ ಅಂತಹ ತಿನಸುಗಳನ್ನು ಮುಂಗಡವಾಗಿ ತಯಾರಿಸುವ ಪದ್ಧತಿ ಕಡಿಮೆ. ಮೊದಲೇ ತಯಾರಿಸಿದರೆ, ಜಾತ್ರೆಯಲ್ಲಿ ಧೂಳು ಹಾರಿಬಂದು ಮಿಠಾಯಿಗಳ ಮೇಲೆ ಹರಡುವುದರಿಂದ ಗಿರಾಕಿಗಳು ಬೇಸರಪಟ್ಟುಕೊಳ್ಳುತ್ತಾರೆ. ಹಲವು ಸಮಯದಲ್ಲಿ ಅಂತಹ ಪದಾರ್ಥಗಳು ಮಾರಾಟವಾಗುವುದು ಕಡಿಮೆ. ಬಿಸಿಬಿಸಿಯಾಗಿ ತಯಾರುಮಾಡಿದ ಸಿಹಿಗಳಿಗೆ[ಮಿಠಾಯಿಗಳಿಗೆ] ಹೆಚ್ಚಿನ ಬೇಡಿಕೆ ಇರುತ್ತದೆ. ಅಂಗಡಿಯ ಮುಂದೆ ನೆರೆದ ಯುವಕರು, ಮಕ್ಕಳು ಬಿಸಿಬಿಸಿಯಾದ ಬೆಂಡು ಬತ್ತಾಸುಗಳನ್ನು ಮೆಲ್ಲಲು ಇಷ್ಟಪಡುತ್ತಾರೆ. ಆದುದರಿಂದ ಸಮಯಸಮಯಕ್ಕೆ ಆಗಿಂದಾಗ್ಯೆ ಜನಬಂದಂತೆ ಅವನ್ನು ಅವರ ಮುಂದೆಯೇ ತಯಾರಿಸಿ ಕೊಡುವ ಪದ್ಧತಿ ಪ್ರಚಲಿತವಾಗಿದೆ.

ಹಳೆಯ ಪದ್ದತಿ ಇಂದಿಗೂ ಲಾಗು ಆಗಿದೆ

ಬದಲಾಯಿಸಿ

ಜಾತ್ರೆಗಳು ಸಾಮಾನ್ಯವಾಗಿ ತೆರೆದ ಜಾಗಗಳಲ್ಲಿ ಆಯೋಜಿಸಲಾಗುವುದರಿಂದ ಸ್ವಲ್ಪ ಜನರು ಓಡಾಡಿದರು, ಮಣ್ಣಿನ ನೆಲದ ಧೂಳೆದ್ದು ಪರಿಸರವನ್ನೆಲ್ಲಾ ಆಕ್ರಮಿಸುತ್ತದೆ. ಅವೆಲ್ಲಾ ತಿಂಡಿ ತೀರ್ಥಗಳಮೇಲೆ ಜಮಾ ಅಗುವುದಂತೂ ಖಂಡಿತ. ಅದಕ್ಕಾಗಿ ಸುತ್ತಲೂ ಹೊದಿಕೆ ಹಾಕುವ ಪರಿಕ್ರಮವಿದೆ. ಗುಣಮಟ್ಟವೊಂದು ಕಡೆಯಾದರೆ, ಮತ್ತೊಂದು ಕಡೆ ಪರಿಸರದ ಸ್ವಚ್ಛತೆ ಆದ್ಯಮಟ್ಟದ್ದಾಗಿರುವುದು ಅನಿವಾರ್ಯ.

ಕೆಲವು ತೃಟಿಗಳು

ಬದಲಾಯಿಸಿ

ತಯಾರಿಸುವಾಗ, ಕಾಯಿಸಿದ ಸಕ್ಕರೆ ಪಾಕವನ್ನು ಅಚ್ಚಿಗೆ ಇಲ್ಲವೇ ಸಿದ್ದಪಡಿಸಿದ ಪಾತ್ರೆಗಳಿಗೆ ಸುರಿದರೆ, ಪಾಕ ತಕ್ಷಣ ಆರಿ ತಣ್ಣಗಾಗುವುದಿಲ್ಲ. ಆದರೆ ಕಲ್ಲಿನಬಂಡೆಯ ಮೇಲೆ ಸುರಿದರೆ, ಚೆನ್ನಾಗಿ ಹರಡಿಕೊಳ್ಳುತ್ತದೆ. ಒಂದು ಹಾಸುಬಂಡೆ ಅನೇಕ ಪಾತ್ರೆಗಳಿಗೆ ಸಮ. ಪಾತ್ರೆಯಲ್ಲಿ ಸುರಿದ ಅಂಟು ಮೇಲೆ ಎತ್ತಲು ಕಷ್ಟ ಅಂಟಿಕೊಂಡು ತುಣುಕುಗಳಾಗುತ್ತದೆ. ಆದರೆ ಬಂಡೆಯ ಪದ್ದತಿಯಲ್ಲಿ ತೊಂದರೆಯಿಲ್ಲ. ಗ್ರಾಹಕರು, ಬಂದು ಕೂಡ್ರುತ್ತಿದ್ದಂತೆಯೇ ಬಂಡೆಗಳ ಮೇಲಿನ ಅಂಟನ್ನು ಹೆರೆದು ತಟ್ಟೆಗಳಲ್ಲಿ ಸಜಾಯಿಸಿ ಮುಂದಿಡಬಹುದು.

ಕರೆದಂಟು ತಯಾರಿಸುವ ಪದ್ಧತಿ

ಬದಲಾಯಿಸಿ

ನೀರು ಸಕ್ಕರೆಯ ಜೊತೆಗೆ ಏಲಕ್ಕಿ,ಲಿಂಬೇರಸ, ತುಪ್ಪ ಇಲ್ಲವೇ ಡಾಲ್ಡ ಬೆರೆಸಿ, ಬಾಣಲೆಯ ಮೇಲೆ ಪಾಕವನ್ನು ಸುರಿಯುತ್ತಾರೆ. ಅದು ಪಾರದರ್ಶಕ ಹಾಳೆಯಂತೆ ಹರಡಿಕೊಳ್ಳುತ್ತದೆ. ಇಂತಹ ಕಚ್ಚಾ ಕರೆದಂಟಿನ ಹಾಳೆಗಳನ್ನು ಎಬ್ಬಿ ಮೇಲೆತ್ತಿ, ನಿಧಾನವಾಗಿ ಒಂದರ ಮೇಲೆ ಒಂದರಂತೆ ಜೋಡಿಸಿ ಮಡಿಕೆ ಹಾಗಿ, ಒಂದಕ್ಕೊಂದು ಬೆಸೆಯುವಂತೆ, ಮೇಲಿನಿಂದ ಭಾರ ಹಾಕುತ್ತಾರೆ. ಇನ್ನೊಂದು ಒಬ್ಬೆ ಅದೇ ತರಹದ ಕ್ರಿಯೆ ನಾಲ್ಕಾರು ಬಾರಿ ಆಗುತ್ತದೆ. ಪಾಕ ಆರುತ್ತಿದ್ದಂತೆಯೇ, ಕೋಲಿಗೆ ಹಾಕಿ ಜಗ್ಗುವಾಗ, ಬಣ್ಣವಿಲ್ಲದಂತಿರುವ ಪಾಕ, ನಿಧಾನವಾಗಿ ಆರುತ್ತಾ ಬಂದಂತೆಲ್ಲಾ ಶುಭ್ರವಾದ ಬಿಳಿಬಣ್ಣವನ್ನು ಹೊಂದುತ್ತದೆ. ಇದೇ ತರಹ ಸಕ್ಕರೆ ಪಾಕದ ಮಧ್ಯೆ ಗಾಳಿ ತುಂಬಿಕೊಂಡು ಅದು ಊದಿಕೊಂಡಾಂತೆಲ್ಲಾ ದಪ್ಪಗಾಗಿ ಕಾಣುತ್ತದೆ. ಸಕ್ಕರೆ ಪಾಕದ ಹಾಳೆಗಳು ಗಾಳಿಗೆ ನಿಧಾನವಾಗಿ ಆರಿ ತಣ್ಣಗಾಗುತ್ತವೆ. ಅಂತೆಯೇ ರೂಪ ಮತ್ತು ಆಕಾರ ಬದಲಾಗುವುದು.

ಉಲ್ಲೇಖ

ಬದಲಾಯಿಸಿ
"https://kn.wikipedia.org/w/index.php?title=ಕರದಂಟು&oldid=995531" ಇಂದ ಪಡೆಯಲ್ಪಟ್ಟಿದೆ