ಹೇಮಂತ್ ಎಂ.ರಾವ್

ಹೇಮಂತ್ ಎಂ.ರಾವ್ ಅವರು ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿದ್ದು, ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರ ನಿರ್ದೇಶನದ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಯಶಸ್ಸಿನ ನಂತರ ಅವರು ಖ್ಯಾತಿಗೆ ಏರಿದರು. [೧]

ವೃತ್ತಿಸಂಪಾದಿಸಿ

ರಾವ್ ೨೦೦೫ರಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ಸಂಕ್ಷಿಪ್ತ ಶಿಕ್ಷಣವನ್ನು ಪೂರೈಸಿದ ನಂತರ ಚಲನಚಿತ್ರಗಳಿಗೆ ನಡೆದರು. [೧] [೨] ೨೦೦೮ರ ಚಲನಚಿತ್ರ 'ಗುಲಾಬಿ ಟಾಕೀಸ್‌'ನಲ್ಲಿ ಗಿರೀಶ್ ಕಾಸರವಳ್ಳಿಯವರೊ೦ದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು, ನ೦ತರ ಜೇಕಬ್ ವರ್ಗೀಸ್ ಅವರೊಂದಿಗೆ ಸವಾರಿ (೨೦೦೯) ಮತ್ತು ಪೃಥ್ವಿ (೨೦೧೦) ಚಿತ್ರಗಳಲ್ಲಿ ಕೆಲಸ ಮಾಡಿದರು. [೩]

ಮಾಹಿತಿ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹೇಳಲಾದ ಲವ್ ಚುರುಮುರಿ -ಯುವ ಕೇಂದ್ರಿತ ರೋಮ್ಯಾಂಟಿಕ್ ಕಥೆಯೊಂದಿಗೆ ಅವರು ೨೦೧೩ರಲ್ಲಿ ನಿರ್ದೇಶನದ ಮೊದಲ ಹೆಜ್ಜೆ ತುಣಿದರು. ಆದರೆ, ಚಲನಚಿತ್ರವನ್ನು ಸ್ಥಗಿತಗೊಳಿಸಲಾಯಿತು. [೪]

ಅವರು ೨೦೧೬ರಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶನ ಮಾಡಿದರು. ಈ ಚಿತ್ರ ಕಾಣೆಯಾದ ತನ್ನ ೬೬ ವರ್ಷದ ತಂದೆಯನ್ನು ಹುಡುಕುವ ಮಗನ ಕಥೆಯನ್ನು ಹೇಳುತ್ತದೆ. ಇದರಲ್ಲಿ ಅನಂತ್ ನಾಗ್ ಮತ್ತು ರಕ್ಷಿತ್ ಶೆಟ್ಟಿ ಆಯಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. [೧]

ಲಾಸ್ಟ್ & ಫೌಂಡ್ ಫಿಲ್ಮ್ಸ್ ಎಂಬ ಬ್ಯಾನರ್ ಅಡಿಯಲ್ಲಿ, ಅವರು ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಅನ್ನು ಸಹ-ನಿರ್ಮಿಸಿದರು. ಈ ಚಿತ್ರ ದಿ ಕ್ಯಾಂಪೇನ್ ನಿಂದ ಪ್ರೇರಿತವಾದ ರಾಜಕೀಯ ವಿಡಂಬನೆಯ ಹಾಸ್ಯ ಚಲನಚಿತ್ರವಾಗಿದೆ . [೫]

೨೦೧೮ರ ಹಿಂದಿ ಚಲನಚಿತ್ರ ಅಂಧಾಧುನ್‌ ಗೆ ಚಿತ್ರಕಥೆ ನೀಡಿದ ಕಾರಣಕ್ಕಾಗಿ ಇವರು ಇತರ ಬರಹಗಾರರೊಂದಿಗೆ ಜಂಟಿಯಾಗಿ ೨೦೧೯ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. [೬]

ಅವರ ಎರಡನೇ ನಿರ್ದೇಶನದ ಚಿತ್ರ ಕವಲುದಾರಿ ನಟ ಪುನೀತ್ ರಾಜ್‌ಕುಮಾರ್ ಅವರ ಹೋಮ್ ಬ್ಯಾನರ್ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಮಾಡಿದ ಮೊದಲ ಚಿತ್ರ. [೭]

ಚಿತ್ರಕಥೆಸಂಪಾದಿಸಿ

ವರ್ಷ ಚಲನಚಿತ್ರ
ನಿರ್ದೇಶಕ ಸಹಾಯಕ ನಿರ್ದೇಶಕ ನಿರ್ಮಾಪಕ ಚಿತ್ರಕಥೆಗಾರ ಟಿಪ್ಪಣಿಗಳು
೨೦೦೮ ಗುಲಾಬಿ ಟಾಕೀಸ್  N ಎನ್ಎನ್  Y ವೈವೈ  N ಎನ್ಎನ್  N ಎನ್ಎನ್ [೩]
೨೦೦೯ ಸವಾರಿ  N ಎನ್ಎನ್  Y ವೈವೈ  N ಎನ್ಎನ್  N ಎನ್ಎನ್
೨೦೧೦ ಪೃಥ್ವಿ  N ಎನ್ಎನ್  Y ವೈವೈ  N ಎನ್ಎನ್  N ಎನ್ಎನ್
೨೦೧೬ ಗೋಧಿ ಬಣ್ಣ ಸಾಧಾರಣ ಮೈಕಟ್ಟು  Y ವೈವೈ  N ಎನ್ಎನ್  N ಎನ್ಎನ್  Y ವೈವೈ [೧]
೨೦೧೮ ಹಂಬಲ್ ಪೊಲಿಟಿಷಿಯನ್ ನೊಗ್ರಾಜ್  N ಎನ್ಎನ್  N ಎನ್ಎನ್  Y ವೈವೈ  N ಎನ್ಎನ್
೨೦೧೮ ಅಂಧಾಧುನ್  N ಎನ್ಎನ್  N ಎನ್ಎನ್  N ಎನ್ಎನ್  Y ವೈವೈ [೮]
೨೦೧೯ ಕವಲುದಾರಿ  Y ವೈವೈ  N ಎನ್ಎನ್  N ಎನ್ಎನ್  Y ವೈವೈ [೯]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

 1. ೧.೦ ೧.೧ ೧.೨ ೧.೩ Yerasala, Kyatha (8 June 2016). "Hemanth Rao and the masters of film verse". Retrieved 1 February 2017.
 2. Waseem, Mohammed (24 January 2017). "It's easy to direct intelligent actors". Retrieved 1 February 2017.
 3. ೩.೦ ೩.೧ Nathan, Archana (16 April 2016). "'I tried to keep my ego out of the equation'". Retrieved 1 February 2017.
 4. https://chitraloka.com/news/3167-love-churumuri-launched.html
 5. http://www.newindianexpress.com/entertainment/kannada/2017/apr/15/voices-of-reason-in-humble-politician-nograj-1593712.html
 6. https://www.filmfare.com/news/bollywood/nominations-for-the-64th-vimal-filmfare-awards-2019_-32898-1.html
 7. http://www.newindianexpress.com/entertainment/kannada/2017/jun/14/rishi-as-police-officer-in-thrilling-kavalu-daari-1616752.html
 8. https://indianexpress.com/article/entertainment/bollywood/sriram-raghavan-andhadhun-audience-reaction-5411378/
 9. "Hemanth Rao's next titled as Kavalu Daari". The Times of India. 14 June 2017. Retrieved 24 June 2017.
 10. "Awards for Thithi, Godhi Banna... directors". The Times of India. Retrieved 1 February 2017.
 11. "Awards for Thithi, Godhi Banna... directors". The Times of India. Retrieved 1 February 2017.
 12. "Kannada director Hemanth Rao wins 2017 Gollapudi Srinivas award". The Hindu. 16 March 2017. Retrieved 17 March 2017.

ಬಾಹ್ಯ ಲಿಂಕ್‌ಗಳುಸಂಪಾದಿಸಿ