ಮರಿಯ ರೆಸ್ಸ

(ಕರಡು:ಮರಿಯ ರೆಸ್ಸ ಇಂದ ಪುನರ್ನಿರ್ದೇಶಿತ)

ಮರಿಯಾ ಎ ರೆಸ್ಸ ಅವರು ಫಿಲಿಪಿನೊ ದೇಶಪತ್ರಕರ್ತೆ ಹಾಗು ಬರಹಗಾರ್ತಿ. ಇವರು ರಾಪ್ಲೇರ್[] ಅಂತರಜಾಲ ಮಾಧ್ಯಮದ ಸಹ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಎರಡು ದಶಕದಿಂದ ಆಗ್ನೇಯ ಏಷ್ಯಾ ವಿಭಾಗದಿಂದ ಮುಖ್ಯ ತನಿಖಾ ವರದಿಗಾರರಾಗಿ ಸಿಎನ್ಎನ್ ಅಲ್ಲಿ ಕಾ‍ರ್ಯ ನಿರ್ವಹಿಸಿದ್ದಾರೆ. ಫೆಬ್ರವರಿ ೧೩, ೨೦೧೯ ರಂದು ವಂಚನೆಗೊಳಗಾದ ಸುದ್ದಿ ಮತ್ತು ಸಾಂಸ್ಥಿಕ ತೆರಿಗೆಗಳ ವಿವಿಧ ನಿದರ್ಶನಗಳ ಆರೋಪಗಳ ಮಧ್ಯೆ "ಸೈಬರ್ ಮಾನನಷ್ಟ" ದಕ್ಕಾಗಿ ಅವರನ್ನು ಬಂಧಿಸಲಾಯಿತು.[] ಡಿಮಿಟ್ರಿ ಮುರಾಟೊವ್ ಅವರೊಂದಿಗೆ ಜಂಟಿಯಾಗಿ 2021 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅವರಿಗೆ " ಪ್ರಜಾಪ್ರಭುತ್ವ ಮತ್ತು ಶಾಶ್ವತ ಶಾಂತಿಗೆ ಅಗತ್ಯವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಅವರ ಪ್ರಯತ್ನಗಳಿಗಾಗಿ" ನೀಡಲಾಯಿತು []

ಮರಿಯ ರೆಸ್ಸ

ಆರಂಭಿಕ ಜೀವನ

ಬದಲಾಯಿಸಿ

ಇವರು ೧೯೬೩,ಅಕ್ಟೋಬರ್ ೨ ರಂದು ಫಿಲಿಪಿನೊ ಅಲ್ಲಿ ಜನಿಸಿದರು.ಯುನೈಟೆಡ್ ಸ್ಟೇಟ್ಸ್ ಫಿಲಿಪೈನ್ಸ್ ನ ಪ್ರಜೆಯಾಗಿದ್ದಾರೆ. ಇವರು ನ್ಯೂ ಜೆರ್ಸಿಗೆ ತೆರಳಿದ ಬಳಿಕ ಆಂಗ್ಲ ಭಾಷೆಯನ್ನು ಕಲಿತರು. ಬಳಿಕ ಪಿಯಾನೊ, ಎಂಟು ವಿಭಿನ್ನ ಸಂಗೀತ ವಾದ್ಯಗಳನ್ನು ಕಲಿತರು. ಅವರು ವೈದ್ಯಕೀಯ ಪದವಿಯನ್ನು ಪಡೆಯುವ ಆಸೆಯನ್ನು ತ್ಯಜಿಸಿ ಅಣು ಜೀವಶಾಸ್ತ್ರ ಪದವಿಯನ್ನು ಪಡೆದರು. ಅವರು ಗಾಯಕಿಯಾಗಿ ಒಂದು ತಂಡದಲ್ಲಿ ಹಾಡಿದ್ದಾರೆ. ಇವರು ಬಾಸ್ಕೆಟ್ ಬಾಲ್ ಆಟಗಾರ್ತಿ.[]

ಶಿಕ್ಷಣ

ಬದಲಾಯಿಸಿ

ಮರಿಯಾ ಅವರು ಮನಿಲಾ ಅಲ್ಲಿ ತಮ್ಮ ೯ ನೇ ವಯಸ್ಸಿನವರೆಗೆ ಬೆಳೆದರು ನಂತರ ತಮ್ಮ ತಂದೆ ತಾಯಿಯೊಂದಿಗೆ ಟಾಮ್ಸ್ ನದಿ, ನ್ಯೂ ಜೆರ್ಸಿಗೆ ತೆರಳಿದರು. ಅವರ ಮುಂದಿನ ಜೀವನವನ್ನು ಅಲ್ಲೇ ಮುಂದುವರಿಸಿದರು. ಟಾಮ್ಸ್ ನದಿ ಪ್ರೌಢಶಾಲೆ ಅಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದರು. ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯಾಗಿ ರಸೆಲ್ ಅಣು ಜೀವಶಾಸ್ತ್ರ ಮತ್ತು ರಂಗಮಂದಿರವನ್ನು ಅಧ್ಯಯನ ಮಾಡಿದರು. ಅಲ್ಲಿ ಅವರು ಇಂಗ್ಲೀಷ್ನಲ್ಲಿ ಬಿಎ ಪದವಿಯನ್ನು ಮತ್ತು ಕಮ್ ಲಾಡ್ ಪದವಿಯನ್ನು ಪಡೆದರು. ಅವರಿಗೆ ರಾಜಕೀಯ ರಂಗಭೂಮಿಗಾಗಿ ಫುಲ್ಬ್ರೈಟ್ ಫೆಲೋಷಿಪ್ ನೀಡಲಾಯಿತು. ಫಿಲಿಪೈನ್ಸ್ ಡಿಲಿಮನ್ ವಿಶ್ವವಿದ್ಯಾಲಯ.

ವತ್ತಿ ಜೀವನ

ಬದಲಾಯಿಸಿ

ಮರಿಯಾ ಫಿಲಿಪಿನೊ ದೇಶದ ಅಧ್ಯಕ್ಷ ೩ನೇ ಬೆನಿಗ್ನೋ ಅಕ್ವಿನೊ ಮಲಕಾನಾಂಗ್ ಅರಮನೆಸಂಗೀತ ಕೊಠಡಿಯಲ್ಲಿ ಅವರ ಸಂರ್ದಶನವನ್ನು ಜೂನ್ ೭ ೨೦೧೬ರಂದು ಮಾಡಿದರು. ರೆಸ್ಸಾ ಅವರ ಮೊದಲ ಕೆಲಸ ಸಿಎನ್ಎನ್ ನಲ್ಲಿ ,ಅಲ್ಲಿ ಅವರು ಸುಮಾರು ಎರಡು ದಶಕಗಳ ವರೆಗೆ ಕೆಲಸ ಮಾಡಿದ್ದರು. ೧೯೮೮-೧೯೯೫ ರವರೆಗೆ ಮನಿಲಾ ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ೧೯೯೫-೨೦೦೫ರವರೆಗೆ ಜಕಾರ್ತಾ ಬ್ಯುರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಆಗ್ನೇಯ ಏಷ್ಯಾದ ಸಿಎನ್ಎನ್ ನ ಪ್ರಮುಖ ತನಿಖಾ ವರದಿಗಾರರಾಗಿ ಅವರು ಭಯೋತ್ಪಾದಕ ಜಾಲಗಳ ಬಗ್ಗೆ ತನಿಖೆ ನಡೆಸುತ್ತಿದ್ದರು. ಅವರು ಸಿಂಗಾಪುರದ ಟೆಕ್ನಾಲಜಿಕಲ್ ಯುನಿವರ್ಸಿಟಿಯ ಎಸ್.ರಾಜರತ್ನಮ್ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್, ದಿ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಪೊಲಿಟಿಕಲ್ ವೈಲೆನ್ಸ್ ಅಂಡ್ ಟೆರರಿಸಂ ರಿಸರ್ಚ್ (ಐಸಿಪಿವಿಟಿಆರ್) ನಲ್ಲಿ ಲೇಖಕರಾಗಿದ್ದಾರೆ. ೨೦೦೪ ರಿಂದ ಎಎಫ್ಎಸ್-ಸಿಬಿಎನ್ ನ ಸುದ್ದಿ ವಿಭಾಗಕ್ಕೆ ರೆಸ್ಸಾ ಮುಖ್ಯಸ್ಥರಾಗಿ ಮತ್ತು ಸಿಎನ್ಎನ್ ಮತ್ತು ದಿ ವಾಲ್ ಸ್ಟ್ರೀಟ್ ಜರ್ನಲ್ಗೆ ಸಹ ಬರೆಯುತ್ತಾರೆ. ಅಕ್ಟೋಬರ್ ೧೧,೨೦೧೦ ರಂದು ತೆರೆದ ಪತ್ರವೊಂದರಲ್ಲಿ ಎಬಿಎಸ್-ಸಿಬಿಎನ್ ಜೊತೆಗಿನ ತನ್ನ ಆರು ವರ್ಷಗಳ ಒಪ್ಪಂದವನ್ನು ತಾನು ನವೀಕರಿಸುವುದಿಲ್ಲ ಎಂದು ರೆಸ್ಸಾ ಬರೆದರು. ಅವರು ಆನ್ಲೈನ್ ನ್ಯೂಸ್ ಮಾಧ್ಯಮ ರಾಪ್ಲೇರ್ ಅನ್ನು ೨೦೧೨ರಲ್ಲಿ ಸ್ಥಾಪಿಸಿದರು. ಇದು ಪೇಸ್ಬುಕ್ ನಲ್ಲಿ ಮೂವ್ ಹೆಚ್ ಎಂಬ ಪುಟವನ್ನು ಸಹ ಪ್ರಾರಂಭಿಸಿತು. ಜನವರಿ ೧ ೨೦೧೨ರಿಂದ ಅದು ಸಂರ್ಪೂಣ ವೆಬ್ಸೈಟ್ ಆಗಿ ಆರಂಭವಾಯಿತು. ಆ ವೆಬ್ಸೈಟ್ ಫಿಲಿಪಿನೊ ದೇಶದ ಪ್ರಮುಖ ನ್ಯೂಸ್ ಪೋರ್ಟಲ್ ಆಗಿ ಬಹಳಷ್ಟು ಸ್ಥಳೀಯ ಹಾಗೂ ಅಂತರರಾಷ್ಟೀಯ ಪ್ರಶಸ್ತಿಗಳನ್ನು ಪಡೆದಿದೆ.[]

ಪುಸ್ತಕಗಳು

ಬದಲಾಯಿಸಿ

ಮರಿಯ ರೆಸ್ಸ ಅವರು ೨ ಪುಸ್ತಕಗಳನ್ನು ರಚಿಸಿದ್ದಾರೆ. ಭಯೋತ್ಪಾದನೆಯ ಬೀಜಗಳು: ಅಲ್-ಖೈದಾದ ಹೊಸತಾದ ಕೇಂದ್ರ (೨೦೧೧) ಮತ್ತು ಬಿನ್ ಲಾಡೆನ್ನಿಂದ ೧೦ ವರ್ಷಗಳ ಭಯೋತ್ಪಾದನೆಯ ಕುರಿತಾದ ಪುಸ್ತಕ (೨೦೧೩)[]

ಪ್ರಶಸ್ತಿಗಳು

ಬದಲಾಯಿಸಿ
  1. ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಸಾಗರೋತ್ತರ ಪ್ರೆಸ್ ಕ್ಲಬ್ ಅವಾರ್ಡ್.
  2. ರಾಷ್ಟ್ರೀಯ ತನಿಖಾ ಪತ್ರಿಕೋದ್ಯಮ ಪ್ರಶಸ್ತಿ.
  3. ಅತ್ಯುತ್ತಮ ತನಿಖಾ ಪತ್ರಿಕೋದ್ಯಮ, ಎಮಿಲಿ ನಾಮನಿರ್ದೇಶನ.
  4. ಏಷ್ಯನ್ ಟೆಲಿವಿಷನ್ ಪ್ರಶಸ್ತಿಗಳು.
  5. ೨೦೧೦ ರಲ್ಲಿ ಎಸ್ಕ್ವೈರ್ ಪತ್ರಿಕೆಯು "ಸೆಕ್ಸಿಸ್ಟ್ ಮಹಿಳೆ ಜೀವಂತವಾಗಿ" ರೆಸ್ಸಾ ಎಂದು ಘೋಷಿಸಿತು.
  6. ೨೦೧೫ ರಲ್ಲಿ ಫಿಲಿಪೈನ್ಸ್ ಮೂವಿ ಪ್ರೆಸ್ ಕ್ಲಬ್ ೨೯ನೇ ಪಿಪಿಪಿಸಿ ಸ್ಟಾರ್ ಅವಾರ್ಡ್ಸ್ ನಲ್ಲಿ ಎಕ್ಸಲೆನ್ಸ್ ಇನ್ ಬ್ರಾಡ್ಕಾಸ್ಟಿಂಗ್ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿತು.
  7. ನವೆಂಬರ್ ೨೦೧೭ ರಲ್ಲಿ ಸುದ್ದಿ ಸಂಸ್ಥೆ ರಾಪ್ಪ್ಲರ್ನ ಸಿಇಒ ಆಗಿ ರೆಸ್ಸಾ, ನ್ಯಾಷನಲ್ ಡೆಮಾಕ್ರಟಿಕ್ ಇನ್ಸ್ಟಿಟ್ಯೂಟ್ನಿಂದ ೨೦೧೭ ರ ಡೆಮಾಕ್ರಸಿ ಪ್ರಶಸ್ತಿಯನ್ನು ವಾಷಿಂಗ್ಟನ್ ಡಿ.ಸಿ.ಯಲ್ಲಿ ವಾರ್ಷಿಕ ಡೆಮಾಕ್ರಸಿ ಪ್ರಶಸ್ತಿ.
  8. ಜೂನ್ ೨೦೧೮ ರಲ್ಲಿ, ರಾಪ್ಪ್ಲರ್ ಅವರ ಕೆಲಸಕ್ಕಾಗಿ ವರ್ಲ್ಡ್ ಅಸೋಸಿಯೇಷನ್ ​​ಆಫ್ ನ್ಯೂ ಸ್ಪೇಪರ್ಸ್ನ ಗೋಲ್ಡನ್ ಪೆನ್ ಆಫ್ ಫ್ರೀಡಮ್ ಪ್ರಶಸ್ತಿ.[][]
  9. ಡಿಮಿಟ್ರಿ ಮುರಾಟೊವ್ ಅವರೊಂದಿಗೆ ಜಂಟಿಯಾಗಿ 2021 ರ ನೊಬೆಲ್ ಶಾಂತಿ ಪ್ರಶಸ್ತಿ

ಉಲ್ಲೇಖಗಳು

ಬದಲಾಯಿಸಿ
  1. https://www.rappler.com/
  2. https://www.theguardian.com/world/2019/feb/14/maria-ressa-arrest-everything-you-need-to-know-about-the-rappler-editor
  3. "The Nobel Peace Prize 2021". NobelPrize.org.
  4. https://www.thefamouspeople.com/profiles/maria-ressa-26559.php
  5. https://edition.cnn.com/2019/02/13/asia/maria-ressa-arrest-warrant-intl/index.html
  6. https://www.amazon.com/Maria-A-Ressa/e/B00CJMYDL4
  7. https://cpj.org/awards/2018/maria-ressa.php
  8. https://www.icfj.org/news/icfjs-2018-knight-award-winner-maria-ressa-named-time-person-year