ಕಮಲ ಬಸದಿ
ಕಮಲ ಬಸದಿಯು ಕರ್ನಾಟಕದ ಬೆಳಗಾವಿ ನಗರದ ಬೆಳಗಾವಿ ಕೋಟೆಯ ಒಳಗಿರುವ ಜೈನ ದೇವಾಲಯವಾಗಿದೆ . [೧]
ಇತಿಹಾಸ
ಬದಲಾಯಿಸಿಕಮಲ್ ಬಸದಿಯು ಬಿಚ್ಚಿರಾಜ ಅಥವಾ ಬಿಚಲನಿಂದ ನಿರ್ಮಿಸಲ್ಪಟ್ಟಿತು. [೨] ರಟ್ಟ ರಾಜವಂಶದ ನಾಲ್ಕನೇ ಕಾರ್ತವೀರ್ಯನ [೩] ಆಸ್ಥಾನದಲ್ಲಿದ್ದ ಅಧಿಕಾರಿ ಬಿಚನನು ಜೈನ ಸನ್ಯಾಸಿ ಸುಭಚಂದ್ರಭಟ್ಟಾರಕದೇವರ ಮಾರ್ಗದರ್ಶನದಲ್ಲಿ. [೪] [೫] ಕ್ರಿ.ಶ ೧೨೦೪ರಲ್ಲಿಕಟ್ಟಿಸಿದನು.ವಾಸ್ತುಶಿಲ್ಪಿ ಕಾರ್ತವೀರ್ಯದೇವ ಮತ್ತು ಯುವರಾಜಕುಮಾರ ಮಲ್ಲಿಕಾರ್ಜುನದೇವ ನಿರ್ಮಿಸಿದ್ದಾರೆ. [೬]
ವಾಸ್ತುಶಿಲ್ಪ
ಬದಲಾಯಿಸಿಕಮಲ ಬಸದಿಯ ಮಧ್ಯದ ಛಾವಣಿಯು ಗುಮ್ಮಟದಿಂದ ವಿಸ್ತರಿಸಿರುವ ಕಮಲದ ಕೆತ್ತನೆಗಳನ್ನು ಒಳಗೊಂಡಿದೆ. ಆದ್ದರಿಂದ ಕಮಲ ಬಸದಿ ಎಂದು ಪ್ರಸಿದ್ಧವಾಗಿದೆ. [೭] [೮] [೪] ಕಮಲವು 72 ದಳಗಳನ್ನು ಹೊಂದಿದ್ದು ಭೂತ, ವರ್ತಮಾನ ಮತ್ತು ಭವಿಷ್ಯದ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ. ದೇವಾಲಯದ ಗೋಡೆಗಳಲ್ಲಿ ಸಂಕೀರ್ಣವಾದ ವಿನ್ಯಾಸಗಳು, ಗಡಿಗಳು ಮತ್ತು ಶಿಲ್ಪಗಳನ್ನು ಕೆತ್ತಲಾಗಿದೆ. [೯] ದೇವಾಲಯದ ಗೋಡೆಯು ಕಂಬಗಳಿಂದ ಕೂಡಿದೆ ಮತ್ತು ಪ್ರತಿ ಆವರಣದ ಕೊನೆಯಲ್ಲಿ ನಾಗರ ಕೆತ್ತನೆ ಇದೆ. ಸ್ತಂಭಗಳನ್ನು ಅಲಂಕಾರಯುತವಾಗಿ ಕೆತ್ತಲಾಗಿದೆ ಮತ್ತು ಅಂದವಾಗಿ ಪಾಲಿಶ್ ಮಾಡಲಾಗಿದೆ. ದೇವಾಲಯವು ಶ್ರೀಮಂತ ಕೆತ್ತನೆಯ ದ್ವಾರವನ್ನು ಹೊಂದಿದೆ. [೧] ತೀರ್ಥಂಕರರ ವಿಗ್ರಹಗಳನ್ನು ಹೊಂದಿರುವ ಒಟ್ಟು ಐದು ಸಣ್ಣ ಕಿಂಡಿಗಳಿವೆ; ಈ ಕಿಂಡಿಗಳ ನಡುವೆ ನಾಲ್ಕು ಯಕ್ಷ ಮತ್ತು ಯಕ್ಷಿಯು ಸಣ್ಣ ಮೇಲಾವರಣದ ಕೆಳಗೆ ನಿಂತಿರುವ ಭಂಗಿಯಲ್ಲಿರುತ್ತಾರೆ. ಗರ್ಭಗೃಹದ ಒಳಗಿನ ಕಂಬಗಳು ಚೌಕಾಕಾರ ಮತ್ತು ಬೃಹತ್ ಗಾತ್ರದಲ್ಲಿವೆ. ಬಾಗಿಲಿನ ಪ್ರತಿ ಬದಿಯಲ್ಲಿ, ಜೈನ ದೇವತೆಗಳ ಕೆತ್ತನೆಗಳಿವೆ. [೭] ದೇವಾಲಯದ ಮುಖಮಂಟಪವನ್ನು ವಾಸ್ತುಶಿಲ್ಪದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ದೇವಾಲಯದ ಮೂಲದೇವತೆ ನೇಮಿನಾಥನ ಕಪ್ಪು ಬಣ್ಣದ ವಿಗ್ರಹವಾಗಿದೆ. [೨] ದೇವಾಲಯದಲ್ಲಿ ರಿಷಭನಾಥನ ಪದ್ಮಾಸನ ಭಂಗಿ, ಸುಮತಿನಾಥ ಕಾಯೋತ್ಸರ್ಗ ಭಂಗಿ ಮತ್ತು ಏಳು ಹೆಡೆಯ ಸರ್ಪದ ಮೇಲಿರುವ ಪಾರ್ಶ್ವನಾಥನ ವಿಗ್ರಹಗಳಿವೆ. ಒಂಬತ್ತು ತೀರ್ಥಂಕರರನ್ನು ಪ್ರತಿನಿಧಿಸುವ ನವಗ್ರಹದ ಏಕಶಿಲಾ ವಿಗ್ರಹವನ್ನು ಸಹ ದೇವಾಲಯ ಒಳಗೊಂಡಿದೆ. [೯]
ಚಿಕ್ಕಿ ಬಸದಿ ಹಾಗೂ ಅರ್ಚಕರ ಮನೆ ಕಮಲ ಬಸದಿಯ ಸಮೀಪದಲ್ಲಿದೆ. [೧೦]
ಜನಪ್ರಿಯ ಸಂಸ್ಕೃತಿಯಲ್ಲಿ
ಬದಲಾಯಿಸಿಕಮಲ ಬಸದಿಯ 816 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 23ನೇ ಡಿಸೆಂಬರ್ 2020 [೩] ವಿಶೇಷ ಅಂಚೆ ಕವರ್ ಅನ್ನು ಬಿಡುಗಡೆ ಮಾಡಲಾಗಿದೆ.
ಚಿತ್ರಗಳು
ಬದಲಾಯಿಸಿ-
೧೮೫೫ ರಲ್ಲಿ ಕಮಲ ಬಸದಿ
-
ಬಸದಿಯ ಗೋಡೆಯ ಮೇಲೆ ಕೆತ್ತನೆಗಳು
-
ಚಿಕ್ಕಿ ಬಸದಿ
ಉಲ್ಲೇಖಗಳು
ಬದಲಾಯಿಸಿಬಾಹ್ಯ ಕೊಂಡಿಗಳು
ಬದಲಾಯಿಸಿ- Asiatic Society of Bombay (1875). Journal of the Bombay Branch of the Royal Asiatic Society. Vol. 10. Maharashtra: The Asiatic Society of Mumbai.
- Burgess, James (1875). Indian Antiquary. Vol. 4. Royal Anthropological Institute of Great Britain and Ireland.
- Campbell, James Macnabb (August 1884). Gazetteer of the Bombay Presidency: Belgaum. Gazetteer of the Bombay Presidency. Vol. 21. Bombay: Government Central Press.
- Campbell, James Macnabb (1884). Gazetteer of the Bombay Presidency. Gazetteer of the Bombay Presidency. Vol. 17. Bombay: Government Central Press.
- Van Kooij, Karel R. (2018). Abia South & Southeast Asian Art. Vol. 1. USA and Canada: Routledge. ISBN 978-1136176418.
- Subburaj, V. V. K. (2009). Tourist Guide to Karnataka. Chennai: Sura Books. ISBN 9788174780621.
- Michell, George (2013). Southern India: A Guide to Monuments Sites & Museums. New Delhi: Roli Books. ISBN 9788174369031.
- Patil, Vijyakumar (11 April 2015). "Belgaum Fort declared heritage monument". The Hindu. Retrieved 18 January 2021.
- Perumal, G. Nataraja (7 April 2013). "Kamal Basti: A Jain wonder in stone". The New Indian Express. Retrieved 20 January 2021.
- "Belagavi's ancient Kamal Basadi temple turns 816, special postal cover released". The New Indian Express. 27 December 2020. Retrieved 20 January 2021.
- Media related to Old Jain Temple, Belgaum at Wikimedia Commons