ಕಪ್ಪತಗುಡ್ಡ
ಕಪ್ಪತಗುಡ್ಡ (ದ್ರೋಣ ಗಿರಿ) ಪಾರ್ವತಿ ದೇವಿಯ ವಿಹಾರ ಸ್ಥಳ
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಖ್ಯಾತವಾಗಿರುವ ಕಪ್ಪತಗುಡ್ಡ , ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ಖನಿಜ , ನೈಸರ್ಗಿಕ ಸಂಪತ್ತು ಹೊಂದಿದೆ.ಈ ಪ್ರದೇಶವನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿದೆ.ಒಟ್ಟಾಗಿ 17,872 ಹೆಕ್ಟೇರ್ ಇರುವ ಕಪ್ಪತಗುಡ್ಡ ಅರಣ್ಯ ಪ್ರದೇಶವು ಗದಗ ತಾಲೂಕಿನಲ್ಲಿ 401.811 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 15,433.673 ಹೆಕ್ಟೇರ್, ಮತ್ತು ಶಿರಹಟ್ಟಿ ತಾಲೂಕಿನಲ್ಲಿ 2016 ಹೆಕ್ಟೇರ್ಗಳಷ್ಟು ಪ್ರದೇಶವನ್ನು ಹಂಚಿಕೊಂಡಿದೆ.ಇದರಲ್ಲಿ 89.92 ಹೆಕ್ಟೇರ್ ಔಷಧೀಯ ಸಸ್ಯಗಳ ಸಂಗ್ರಹಣೆಗೆ ಮಾತ್ರ ಮೀಸಲಿಡಲಾಗಿದೆ. ಈ ಪ್ರದೇಶವನ್ನು ನೂರಾರು ವರ್ಷಗಳಿಂದ ಔಷಧೀಯ ಸಸ್ಯಗಳ ವಾಸಸ್ಥಾನ ಎಂದು ಕರೆಯಲಾಗಿದೆ.
ಶ್ರೀ ಗೆಜ್ಜಿ ಸಿದ್ದಾವಧೂತರ ಮಠ , ಬಹುಶಃ ಈ ಮಠವನ್ನ " ಶಕ್ತಿ ಪೀಠ "ವೆಂದರೆ ಅತಿಶಯೋಕ್ತಿ ಅಲ್ಲ.
- ಈ ತಾಣ ಹಸಿರ ಸೊಬಗು ತುಂಬಿರುವ ದಟ್ಟ ಕಾನನ, ಈ ಕಾಡಿನಲ್ಲಿ ಬೆಟ್ಟದ ತುದಿಯಲ್ಲಿ ಸುಮಾರು 250 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅನ್ನ ಜ್ಞಾನ ದಾಸೋಹ ಮಠ ಅಥವಾ ಆಶ್ರಮ, ಈ ಮಠವು ದಕ್ಷಿಣ ಸಸ್ಯಕಾಶಿಯೆಂದು ಪ್ರಖ್ಯಾತವಾಗಿರುವ ಕಪ್ಪತ್ತಗುಡ್ಡ,ದಲ್ಲಿರುವ ಹತ್ತಿರದ ಡೋಣಿ ನಗರದಿಂದ 3 ಕೀ ಮೀ ಗಳಷ್ಟು ದೂರದಲ್ಲಿ ಇದೆ, ಕಡಕೋಳದಿಂದ 5 ಕೀ ಮೀ ಗಳಷ್ಟು ದೂರದಲ್ಲಿ ಇದೆ,
- ವೈಶಿಷ್ಟ್ಯವೆಂದರೆ ಸಿದ್ಧ ಪರ್ವತದ ಬಗಳಾಂಬಿಕೆ ಶಾಖಾ ದೇವತೆ ಜಗಜ್ಜನನಿಯು ಇದೇ ಮಠದಲ್ಲಿ ನೆಲೆ ನಿಂತಿದ್ದಾಳೆ, ಮತ್ತು ಮಠದ ಮೂಲ ಕರ್ತೃತ್ವದ ಮೂಲ ಪುರುಷ ಲಚ್ಛ್ಯಾಣ ಸಿದ್ಧಲಿಂಗ ಮಹರಾಜರ ಮತ್ತೋರ್ವ ಪ್ರಸಿದ್ಧ ಶಿಷ್ಯ ಶ್ರೇಷ್ಠ ಶ್ರೀ ಗೆಜ್ಜಿ ಸಿದ್ಧಲಿಂಗಾವಧೂತರ ಧಿವ್ಯ ಜಾಗೃತ ಗದ್ದುಗೆಯು ಅಲ್ಲೇ ಶ್ರೀ ವೀರಾಂಜನೇಯ ದೇಗುಲ ಇವರ ತರುವಾಯ ಶಿಷ್ಯರು ಶ್ರೀ ಗೆಜ್ಜಿಸಿದ್ದಾವಧೂತರ ಕರ್ತೃ ಗದ್ದುಗೆಯು ಲಕ್ಷ್ಮಿ ದೇಗುಲ , 63 ಪುರಾತನರು ನಿರ್ಮಿಸಿರುವ ನೂರೊಂದು ಶಿವಲಿಂಗಗಳ ಮಂಟಪ, ಕಬ್ಬಲಗಿತ್ತಿ ದುರ್ಗಾ ದೇವಿಯ ದೇವಾಲಯ, ಅಂಭಾಮಠ ಕೇಳ ಗವಿಗಳಲ್ಲಿರುವ ಸಿಂಹವಾಹನ ಗಣಪತಿ, ಬೇಡರ ಕಣ್ಣಪ್ಪ. ದೇವಾಲಯಗಳು ಇವೆ, ಇಲ್ಲಿಗೆ ಭಕ್ತರು ಭೇಟಿ ಕೊಟ್ಟು ಕಷ್ಟ ನಷ್ಟಗಳ ಪರಿಹಾರಕ್ಕೆ ಇಲ್ಲಿಯ ದೈವಗಳಲ್ಲಿ ಬೇಡಿಕೊಂಡು ಜೀವನದಲ್ಲಿ ಉನ್ನತಿಯನ್ನು ಉನ್ನತೋನ್ನತ ಸ್ಥಾನ ಗಳಿಸುವರು,
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Uttar Karnatakad sahyadri