ಕನ್ನಡದಲ್ಲಿನ ವಿದೇಶಿ ಮೂಲದ ಶಬ್ದಗಳು
ವ್ಯವಹಾರಿಕ ಕನ್ನಡ ಭಾಷೆಯಲ್ಲಿರುವ ವಿದೇಶೀಯ ಮೂಲದ ಶಬ್ದಗಳ ಪಟ್ಟಿ ಇದು. ಈ ಪಟ್ಟಿಯಲ್ಲಿ ಆಡು ಭಾಷೆಯಲ್ಲಿ ಉಪಯೋಗಿಸಲ್ಪಡುವ ಇತ್ತೀಚಿನ ಆಮದು ಪದಗಳನ್ನು ಉಲ್ಲೇಖಿಸಿಲ್ಲ.
ಪಟ್ಟಿ
ಬದಲಾಯಿಸಿಕನ್ನಡಲ್ಲಿನ ಶಬ್ದ | ವಿದೇಶಿ ಮೂಲ ಹಾಗು ಶಬ್ದವ್ಯುತ್ಪತ್ತಿ | ವಕ್ಕಣೆ |
ಸಾಬೂನು | ಪೋರ್ಚುಗೀಸ್ ಭಾಷೆಯ "sapon" or "sabao" (ಸಪೋನ್) ನಿಂದ ಬಂದದ್ದು | . |
ಇಗರ್ಜಿ | ಪೋರ್ಚುಗೀಸ್ ಭಾಷೆಯ "igreja" (ಇಗ್ರೇಜ) | . |
ಮೇಜು | ಪೋರ್ಚುಗೀಸ್ ಭಾಷೆಯ "mesa" (ಮೇಸ) ನಿಂದ, ದಕ್ಖಿನಿಯ (ದಕ್ಷಿಣಾತ್ಯದ ಉರ್ದು) "ಮೇಜ್" | . |
ಅಲಮಾರಿ | ಪೋರ್ಚುಗೀಸ್ ಭಾಷೆಯ "armário" (ಅರಮಾರಿಯೊ) ನಿಂದ, ದಖಿನಿಯ "ಅಲಮರಹ್" | . |
ಚಹ | ಚೀನಿಯ ಖ್ವನ್-ತೋಙ್ಘು-ಅ ಅಥವಾ ಕಾಂತೊನೀಸ್ ಭಾಷೆಯ "茶/ch-ai" (ಛ್ಹಾ) | . |
ಶರಬತ್ತು | ಅರಬ್ಬಿ ಭಾಷೆಯ "ಸರ್ಬಾ" (ಅಂದರೆ ಪಾನೀಯ) ದಿಂದ, ಪರ್ಶಿಯನ್ (ಪಾರ್ಸಿ) ಭಾಷೆಯ "ಶರ್ಬತ್" ನಿಂದ, ದಕ್ಖಿನಿಯ "ಶರ್ಬತ್" | . |
ಮಸಾಲೆ | ಅರಬ್ಬಿ ಭಾಷೆಯ "ಮಸ್ಲಿಹ್" ನಿಂದ, ಪರ್ಶಿಯನ್ (ಪಾರ್ಸಿ) ಭಾಶೆಯ "ಮಸಾಲಾ" ನಿಂದ, ದಕ್ಖಿನಿಯ "ಮಸಾಲಾ" | . |
ತೋಪು (ಅತಿ ದೊಡ್ಡ ಬಂದೂಕು) | ಪರ್ಶಿಯನ್ ಭಾಷೆಯ "ತೋಪ್" | . |
ನಕಲು | ಪರ್ಶಿಯನ್ ಭಾಷೆಯ "ನಕಲ್" | . |
ಖಾಲಿ | ಅರಬ್ಬಿ ಭಾಷೆಯ "ಖಾಲಿ" ಇಂದ, ಪರ್ಶಿಯನ್ ಭಾಷೆಯ "ಖಾಲಿ" | |
ಖಜಾನೆ | ಪರ್ಶಿಯನ್ ಭಾಷೆಯ "ಖಜಾನ" | . |
ಬಟಾಟೆ (ಆಲು ಗೆಡ್ಡೆ) | ದಕ್ಷಿಣ ಅಮೇರಿಕದ ನ'ಉಅತ್ಲ್ ಭಾಷೆಯ "ಪತಾತ್ಲ್" ಇಂದ, ಪೋರ್ಚುಗೀಸ್ ಭಾಷೆಯ "batata" | |
ಅನಾನಸ್ | ಫ್ರೆಂಚ್ ಭಾಷೆಯ "ananas" (ಅನಾನಸ್) | |
ಸೇಬು | ಪಹ್ಲವಿ (ಮಧ್ಯ ಪರ್ಶಿಯನ್) ಭಾಷೆಯ "ಸೇಬ್" ನಿಂದ, ಪರ್ಶಿಯನ್ ಭಾಷೆಯ "ಸೇಬ್" | |
ಬೆಂಡೆ (ಕಾಯಿ) | ಆಫ್ರಿಕಾ ಖಂಡದಿಂದ, ಅರಬ್ಬಿ ಭಾಷೆಯ "ಬಾಮಿಯ" ದಿಂದ | |
ಗುಲಾಬಿ | ಪರ್ಶಿಯನ್ ಭಾಷೆಯ "ಗುಲ್+ಅಬ್" (ಹೂವು + ನೀರು) | |
ಹಿಂದು | ಪರ್ಶಿಯನ್ ಭಾಷೆಯಲ್ಲಿ ಭಾರತೀಯ ಅಥವ ಹಿಂದ್ ಪ್ರದೇಶದವನು ಎಂದರ್ಥ. | |
ಪೈಜಾಮ | ಪರ್ಶಿಯನ್ ಭಾಷೆಯ "ಪಾಯ್"+"ಜಾಮ" (ಕಾಲು + ಬಟ್ಟೆ) | |
ಪಲಾವು | ಪರ್ಶಿಯನ್ ಭಾಷೆಯ "ಪಿಲ್ಲಾವ್" ನಿಂದ | |
ದಿವಾನ | ಪರ್ಶಿಯನ್ ಭಾಷೆಯ "ದೆವಾನ್" (ಲೆಕ್ಖ ಪುಸ್ತಕಗಳು) ಇಂದ, ಅರಬ್ಬಿ ಭಾಷೆಯ "ದಿವಾನ್" (ಮಂತ್ರಿ) | |
ಬಜಾರಿ | ಮಾರುಕಟ್ಟೆ ಎಂಬ ಅರ್ಥವುಳ್ಳ ಪಹ್ಲವಿ (ಮಧ್ಯ ಪರ್ಶಿಯನ್) ಭಾಷೆಯ "ಬಹ ಚಾರ್" ನಿಂದ, ಪರ್ಶಿಯನ್ ಭಾಷೆಯ "ಬಜಾರ್" | . |
ಟೊಮೇಟೊ | ಮಧ್ಯ ಅಮೇರಿಕದ ನಓತ್ಲ್ ಭಾಷೆಯ "ತೊಮಾತ್ಲ್" ನಿಂದ | . |
ಗಿಲೀಟು | ಆಂಗ್ಲ ಭಾಷೆಯ "gilt" (ಗಿಲ್ಟ್) ನಿಂದ | |
ಇನಾಮು | ಪರ್ಶಿಯನ್ ಭಾಷೆಯ "ಇನಾಮ್"ನಿಂದ | |
ಪಿಟೀಲು | ಆಂಗ್ಲ ಭಾಷೆಯ "fiddle" ನಿಂದ, ತಮಿಳಿನ "ಪಿಟ್ಟಿಲ್" ನಿಂದ. | |
ಲಗಾಮು | ||
ಸಲಾಮು | ||
ಚಾಕು | ||
ಮಾಮೂಲು | ||
ಕಛೇರಿ | ||
ಕಾರಖಾನೆ | ||
ಕುಸ್ತಿ | ||
ಬಿಕ್ಕಲಂ | ||
ಜಾಹಿರ್ | ||
ಖಾವಂದರು | ||
ಬಂದೂಕು ಉರ್ದು | ||
ಲುಕ್ಸಾನು | ||
ಇಲಾಖೆ | ||
ಗುಲಾಮ | ||
ರಸ್ತೆ |