ಭಾರತದ ಅನೇಕ ರಾಜ್ಯಗಳಲ್ಲಿ ಗಣೇಶ ಚತುರ್ಥಿ ಹಬ್ಬದ ದಿನದಂದು ಮಾಡುವ ಸಿಹಿ ತಿಂಡಿ.


ಹೂರಣದ ಕಡುಬು


ಬೇಕಾಗುವ ಪದಾರ್ಥಗಳುಸಂಪಾದಿಸಿ

ಮಾಡುವ ವಿಧಾನಸಂಪಾದಿಸಿ

ಮಾಡುವ ವಿಧಾನ : ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿನಂತೆ ತಯಾರಿಸಿಕೊಳ್ಳಬೇಕು. ಇನ್ನೊಂದೆಡೆ ಕಡಲೆ ಬೇಳೆಯನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಂಡು, ನೀರನ್ನು ಬಸಿಯಬೇಕು. ಅನಂತರ ಅದಕ್ಕೆ ಬೆಲ್ಲವನ್ನು ಹಾಕಿ ೫ ನಿಮಿಷಗಳವರೆಗೂ ಒಲೆಯ ಮೇಲಿಟ್ಟು ಬೆರೆಸಿಕೊಳ್ಳಬೇಕು. ಬೇಳೆ- ಬೆಲ್ಲದ ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಹೂರಣ ಮಾಡಿಕೊಳ್ಳಬೇಕು.

ನಾದಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು, ಚಿಕ್ಕ ಚಿಕ್ಕ ಹಪ್ಪಳದ ಗಾತ್ರದಲ್ಲಿ ಲಟ್ಟಿಸಿ ಅದರೊಳಗೆ ಈ ಹೂರಣವನ್ನು ತುಂಬಿ ಮುಚ್ಚಬೇಕು. ನಂತರ ಕಾಯ್ದ ಎಣ್ಣೆಯಲ್ಲಿ ಒಂದೊಂದೇ ಕರಿದು, ಅವು ಕೆಂಪು ಬಣ್ಣಕ್ಕೆ ತಿರುಗಿದ ನಂತರ ಕೆಳಗಿಳಿಸಬೇಕು.

ಕೊಬ್ಬರಿ ಕಡುಬು (ಕರ್ಜಿಕಾಯಿ)ಸಂಪಾದಿಸಿ

ಕಡುಬು

ಇದನ್ನು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಕೂಡ ಮೇಲೆ ಹೇಳಿದ ರೀತಿಯಲ್ಲೇ ಮಾಡಬೇಕು. ಆದರೆ ಇದರಲ್ಲಿ ಬೇಳೆ ಹೂರಣದ ಬದಲು, ತುರಿದ ಕೊಬ್ಬರಿಯನ್ನು, ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ, ಕಡುಬಿನ ಒಳಗೆ ತುಂಬಿಲಾಗಿರುತ್ತದೆ.

ಇವನ್ನೂ ನೋಡಿಸಂಪಾದಿಸಿ

"https://kn.wikipedia.org/w/index.php?title=ಕಡುಬು&oldid=816944" ಇಂದ ಪಡೆಯಲ್ಪಟ್ಟಿದೆ