ಕಡಲ ಆನೆ
ಕಡಲ ಆನೆ
ಬದಲಾಯಿಸಿಪಿನ್ನಿಪೀಡಿಯ ಗಣದ ಫೋಸಿಡೀ ಕುಟುಂಬದ ಒಂದು ಜಾತಿಯ ಸೀಲ್ ಪ್ರಾಣಿ (ಸೀ ಎಲಿಫೆಂಟ್). ವೈಜ್ಞಾನಿಕ ನಾಮ ಮಿರೂಂಗ. ಕಡಲ ಕರಡಿ, ಕಡಲ ಚಿರತೆ, ಕಡಲ ಸಿಂಹ ಮುಂತಾದುವುಗಳಿಗೆ ಇದು ಹತ್ತಿರ ಸಂಬಂಧಿ. ಅವುಗಳೆಲ್ಲಕ್ಕಿಂತ ಇದು ದೊಡ್ಡದೂ ಬಲಿಷ್ಠವಾದುದೂ ಆಗಿದೆ. ಮೂತಿ ಆನೆಯ ಸೊಂಡಿಲಿನಂತೆ ಕೊಂಚ ಮುಂದಕ್ಕೆ ಚಾಚಿರುವುದರಿಂದಲೂ ದೇಹ ದಪ್ಪನಾಗಿರುವುದರಿಂದಲೂ ಇದನ್ನು ಕಡಲ ಆನೆ ಎನ್ನಲಾಗಿದೆ. ಇದರಲ್ಲಿ ಮೆಕ್ಸಿಕೋ ಬಳಿಯ ಗಾಡಲೂಪೆ ದ್ವೀಪಗಳಲ್ಲಿ ಅಲ್ಲಲ್ಲಿ ಕಾಣಬರುವ ಮಿ. ಆಂಗಸ್ಟ್ರಿರಾಸ್ಟ್ರಿಸ್ ಎಂಬ ಪ್ರಭೇದವೂ ಫಾಕ್ಲೆಂಡ್, ಕೆರ್ಗುಯೆಲೆನ್ ಮತ್ತು ಮಕೇರಿ ದ್ವೀಪಗಳಲ್ಲಿ ಹಾಗೂ ನ್ಯೂಜಿಲೆಂಡಿಗೆ ಮುನ್ನೂರು ಮೈಲಿ ದಕ್ಷಿಣಕ್ಕಿರುವ ಕ್ಯಾಂಬೆಲ್ ದ್ವೀಪಗಳಲ್ಲಿ ವಾಸಿಸುವ ಮಿ. ಲಿಯೋನಿಯ ಎಂಬ ಪ್ರಭೇದವೂ ಇವೆ.[೧][೨]
ಕಡಲ ಆನೆಯ ಲಕ್ಷಣಗಳು
ಬದಲಾಯಿಸಿಕಡಲ ಆನೆಗಳಲ್ಲಿ ಗಂಡು ಸುಮಾರು 20' ಉದ್ದವಿದ್ದು ಸುಮಾರು 5,000 ಪೌಂ. ತೂಗುತ್ತದೆ. ಹೆಣ್ಣು ಸುಮಾರು 10' ಉದ್ದವಿರುತ್ತದೆ. ಚರ್ಮ ಒರಟಾಗಿ ಸುಕ್ಕು ಸುಕ್ಕಾಗಿದೆ. ಮೂತಿ ಒಂದು ಅಡಿ ಉದ್ದದ ಸೊಂಡಿಲಿನಂತೆ ಬಾಯ ಮೇಲೆ ಇಳಿ ಬಿದ್ದಿದೆ. ಉಸಿರೆಳೆದುಕೊಂಡಾಗ ಸೊಂಡಿಲು ಕುಣಿದೇಳುವುದೂ ದೊಡ್ಡ ಗೊರಕೆಯಂತೆ ಶಬ್ದವಾಗುವುದೂ ಕಡಲಾನೆಯ ವಿಚಿತ್ರ ಲಕ್ಷಣಗಳು. ಇದು ಸ್ವಭಾವತಃ ಮಂದ. ಕಡಲ ತೀರ ಅಥವಾ ಬಂಡೆಗಳ ಮೇಲೆ ಮಲಗಿಯೇ ಇರುತ್ತದೆ. ಬೇಟೆಯಾಡಲು ಮಾತ್ರ ನೀರಿಗಿಳಿಯುತ್ತದೆ. ನೀರಿನಲ್ಲಿ ವೇಗವಾಗಿ ಮತ್ತು ಗಂಭೀರ ಗತಿಯಲ್ಲಿ ಈಜಬಲ್ಲುದು. ಮೀನುಗಳು ಮತ್ತು ಸ್ಕ್ವಿಡ್ಡುಗಳು ಇದರ ಪ್ರಧಾನ ಆಹಾರ, ಹಕ್ಕಿಗಳಂತೆ ಕಲ್ಲುಗಳನ್ನು ನುಂಗಿ ಜಠರದಲ್ಲಿ ಶೇಖರಿಸಿಕೊಳ್ಳುತ್ತದೆ. ಆಹಾರವನ್ನು ಅರೆಯಲು ಇವನ್ನು ಉಪಯೋಗಿಸಿಕೊಳ್ಳುವುದೆಂದು ತೋರುತ್ತದೆ. ಋತುಕಾಲ ಬಂದಾಗ ಇತರ ಸೀಲ್ ಪ್ರಾಣಿಗಳಂತೆ ಸಮುದ್ರದಂಡೆಯ ಮೇಲೆ ಬೀಡು ಬಿಡುತ್ತದೆ. ಆನೆಯ ಇನ್ನೊಂದು ಸ್ವಭಾವವೂ ಕಡಲ ಆನೆಗುಂಟು. ಒಂದು ಗಂಡು ತನ್ನ ಹತ್ತಿರ ಹಲವು ಹೆಣ್ಣುಗಳನ್ನು ಇರಿಸಿಕೊಂಡು ಇತರ ಗಂಡುಗಳಿಂದ ರಕ್ಷಿಸುತ್ತದೆ. ಹೆಣ್ಣುಗಳಿಗಾಗಿ ಕೆಲವೊಮ್ಮೆ ಭಯಂಕರ ಹೋರಾಟವೂ ನಡೆಯುವುದುಂಟು. ಹೆಣ್ಣು ಫೆಬ್ರವರಿ ಮತ್ತು ಜೂನ್ ತಿಂಗಳುಗಳ ನಡುವಣ ಕಾಲದಲ್ಲಿ ಮರಿ ಹಾಕುತ್ತದೆ. ಸಾಮಾನ್ಯವಾಗಿ ಒಂದು ಸಲಕ್ಕೆ ಒಂದು ಮರಿಯನ್ನು ಈಯುತ್ತದೆ.[೩][೪][೫]
ಕಡಲ ಆನೆ ಇಂದ ಆಗುವ ಉಪಯೋಗಗಳು
ಬದಲಾಯಿಸಿಹಿಂದೆ ಕೊಬ್ಬು ಮತ್ತು ಎಣ್ಣೆಗಳಿಗಾಗಿ ಜನ ಇವನ್ನು ಬೇಟೆಯಾಡಿದರಾಗಿ ಹೇರಳವಾಗಿದ್ದ ಕಡಲಾನೆಗಳು ಕಡಿಮೆಯಾಗುತ್ತ ಬಂದುವು. ಈಚೆಗೆ ಇವುಗಳ ಬೇಟೆಯನ್ನು ಸರ್ಕಾರಗಳು ಪ್ರತಿಬಂಧಿಸಿ ಇವುಗಳ ಪೀಳಿಗೆ ನಾಶವಾಗುವುದನ್ನು ತಪ್ಪಿಸಿವೆ.[೬][೭]
ಉಲ್ಲೇಖಗಳು
ಬದಲಾಯಿಸಿ- ↑ http://www.oceanlight.com/sea_elephant_photo.html
- ↑ "ಆರ್ಕೈವ್ ನಕಲು". Archived from the original on 2017-02-09. Retrieved 2016-10-20.
- ↑ http://www.oceanlight.com/sea_elephant_photo.html
- ↑ "ಆರ್ಕೈವ್ ನಕಲು". Archived from the original on 2017-02-09. Retrieved 2016-10-20.
- ↑ http://www.dictionary.com/browse/sea-elephant
- ↑ "ಆರ್ಕೈವ್ ನಕಲು". Archived from the original on 2017-02-09. Retrieved 2016-10-20.
- ↑ http://www.dictionary.com/browse/sea-elephant