ಕಡತೋಕ ಮಂಜುನಾಥ ಭಾಗವತರು
ಕಡತೋಕ ಮಂಜುನಾಥ ಭಾಗವತರು ಕಡತೋಕ ಎಂಬುದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಅತಿ ಪ್ರಸಿದ್ಧ ಗ್ರಾಮ. ಅಲ್ಲಿ ಜನಿಸಿದವರು ಶ್ರೀ ಮಂಜುನಾಥ ಭಾಗವತರು.ಇವರು ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ಪ್ರಸಿದ್ಧರು.
ಬಾಲ್ಯ
ಬದಲಾಯಿಸಿಮಂಜುನಾಥ ಭಾಗವತರು ೧೯೨೬ರಲ್ಲಿ ಕಡತೊಕದಲ್ಲಿ ಜನಿಸಿದರು.[೧] ಆರಂಭದಲ್ಲಿ ಶಂಭು ಭಾಗವತರಲ್ಲಿ ಭಾಗವತಿಕೆಯನ್ನು ಕಲಿತರು.[೨]
ವೃತ್ತಿ ಜೀವನ
ಬದಲಾಯಿಸಿಧರ್ಮಸ್ಥಳ ಮೇಳದಲ್ಲಿ ಸುಮಾರು ೩೫ ವರ್ಷ ದುಡಿದ ಇವರು ಕರ್ಕಿ,ಕೊಳಗಿ,ಮೂರೂರು ಮತ್ತು ಮುಲ್ಕಿ ಮೇಳಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ..[೨] ಹಲವಾರು ಪ್ರಸಂಗಗಳನ್ನು ಬರೆದ ಇವರು,ತೆಂಕು ಮತ್ತು ಬಡಗು ಎರಡೂ ತಿಟ್ಟು(ಪರಂಪರೆ)ಗಳಲ್ಲಿ ಸಮಾನ ಪ್ರಾವಿಣ್ಯತೆ ಪಡೆದಿದ್ದರು.ಇವರ ಶೈಲಿಯ ಭಾಗವತಿಕೆಗೆ "ಕಡತೊಕ ಶೈಲಿ"ಎಂದೇ ಹೆಸರಿದೆ.ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ಹಲವಾರು ಪ್ರಸಂಗಗಳ ಭಾಗವತಿಕೆಯಲ್ಲಿ ನಿಪುಣರಾಗಿದ್ದರು.
ಪ್ರಶಸ್ತಿಗಳು
ಬದಲಾಯಿಸಿಇವರಿಗೆ ಹಲವಾರು ಪ್ರಶಸ್ತಿಗಳು ಸಂದಿದ್ದು,ಅದರಲ್ಲಿ ಪ್ರಮುಖವಾದವುಗಳು
ನಿಧನ
ಬದಲಾಯಿಸಿಇವರು ಅಕ್ಟೋಬರ್ ೩೧,೨೦೧೧ರಂದು ಹಳದೀಪುರದ ಕುಂಬಾರಮಕ್ಕಿ ಎಂಬಲ್ಲಿ ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನರಾದರು.[೧]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "Beltangady: Yakshagana Stalwart Kadatoka Manjunath Bhagawat No More". Retrieved 15 ಜನವರಿ 2016.
- ↑ ೨.೦ ೨.೧ ೨.೨ ೨.೩ "ಕಡತೋಕ-ಶೈಲಿ-ಯ-ರೂವಾರಿ-ಮಂಜುನಾಥ-ಭಾಗವತರು-ಇನ್ನಿಲ್ಲ". Retrieved 15 ಜನವರಿ 2016.
- ↑ "Yakshagana artist Manjunath Bhagavath to be conferred Sheni Award". 2 September 2009. Archived from the original on 1 ಫೆಬ್ರವರಿ 2014. Retrieved 19 January 2014.