ಕಡತೋಕ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಒಂದು ಧಾರ್ಮಿಕ ಸ್ಥಳ. ಹೊನ್ನಾವರದಿಂದ 14ಕಿಮೀ ದೂರದಲ್ಲಿದೆ.

ದೇವಾಲಯಗಳು

ಬದಲಾಯಿಸಿ

ಇಲ್ಲಿರುವ ಕೇಶವನಾರಾಯಣ, ನರಸಿಂಹ, ಏಳುಕೊಪ್ಪರಿಗೆಗುಡಿ ಪ್ರಮುಖವಾದವುಗಳು. ಕೇಶವನಾರಾಯಣ ಪುರಾತನ ದೇವಾಲಯ. ಮರದ ಚಾವಣಿ ಇದ್ದ ಈ ದೇವಾಲಯ ಇತ್ತೀಚಿಗೆ ಜೀರ್ಣೋದ್ಧಾರಗೊಂಡಿದೆ. ಇದನ್ನು ಆಳುತ್ತಿದ್ದ ಮಹಾಮಾತ್ಯ ಪ್ರಭು ಸರಬತಿಥ್ಯ ಎಂಬವನ ಪ್ರತಿಕೃತಿ ಇದೆ. ಭೋಗವೆಗ್ಗಡೆಯಿಂದ ಸ್ಥಾಪಿಸಲ್ಪಟ್ಟ ಸ್ವಯಂಭುವಿನ ದೇವಾಲಯವÆ ಇದೆ. ಇದಲ್ಲದೆ ಹವ್ಯಕ ಸಮುದಾಯದ ಪ್ರಾಚೀನ ಮಠಮೊಂದಿದೆ. ಇದನ್ನು ಲಕ್ಷ್ಮೀನರಸಿಂಹ ಮಠ ಎಂದೂ ಕರೆಯಲಾಗುತ್ತದೆ. ಇಲ್ಲಿನ ಶಂಭುಲಿಂಗ ಮಂದಿರವನ್ನು ಗ್ರಾಮದೇವತೆ ಎಂದು ಪರಿಗಣಿಸಿ ಪುಜಿಸಲಾಗುತ್ತದೆ. ಚೋಳ-ಗಂಗ ಮಾದರಿಯಲ್ಲಿ ಈ ಕಟ್ಟಡವಿದೆ. ಕನ್ನಡ ಶಾಸನಮೊಂದು ಇಲ್ಲಿದೆ. ತ್ರ್ಯಂಬಕೇಶ್ವರ ವಿಷ್ಣುಮೂರ್ತಿ, ಮಕ್ಕಿನಾರಾಯಣ ಹಾಗೂ ವಿಷ್ಣು ಮೊದಲಾದ ದೇವಸ್ಥಾನಗಳೂ ಇಲ್ಲಿವೆ. ಇಲ್ಲಿಯ ಹಳೇಮಠದ ಹತ್ತಿರ ಉತ್ಕೃಷ್ಟವಾದ ವಿಷ್ಣುವಿನ ಮೂರ್ತಿಯೊಂದಿದೆ. ಕಡತೋಕದ ಭಾಗವಾಗಿರುವ ಮಾಡಗೇರಿಯಲ್ಲಿ ನಾರಾಯಣನ ಮಂದಿರ ಇದೆ. ಇಲ್ಲಿ ಏಪ್ರಿಲ್‍ನಲ್ಲಿ ಜಾತ್ರೆ ಜರುಗವುದು. ಆ ಸಂದರ್ಭದಲ್ಲಿ ಕೆಂಡ ಹಾಯುವ ಸಂಪ್ರದಾಯವಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಡತೋಕ&oldid=654132" ಇಂದ ಪಡೆಯಲ್ಪಟ್ಟಿದೆ