ಕಕ್ಷೀಯ ಪಾತ
ಯಾವುದೇ ಗ್ರಹದ ಓರೆಯಾದ ಕಕ್ಷೆಯು ಒಂದು ನಿರ್ದೇಶಕ ಸಮತಳವನ್ನು (ಉದಾ: ಸಾಮಾನ್ಯವಾಗಿ ಭೂಕೇಂದ್ರೀಯ ಕಕ್ಷೆಗಳಿಗೆ ಸಮಭಾಜಕದ ಸಮತಳವು ಮತ್ತು ಸೌರಕೇಂದ್ರೀಯ ಕಕ್ಷೆಗಳಿಗೆ ಕ್ರಾಂತಿವೃತ್ತದ ಸಮತಳವು ನಿರ್ದೇಶಕ ಸಮತಳವಾಗಿರುತ್ತದೆ) ಛೇದಿಸುವ ಎರಡು ಬಿಂದುಗಳನ್ನು ಕಕ್ಷೀಯ ಪಾತಗಳೆಂದು ಕರೆಯಲಾಗುತ್ತದೆ.
ಆರೋಹಣ (ಅಥವಾ ಉತ್ತರ) ಸಂಪಾತದಲ್ಲಿ (ರಾಹುಬಿಂದು) ಖಗೋಳಕಾಯವು ದಕ್ಷಿಣಾರ್ಧಗೋಳದಿಂದ ಉತ್ತರಕ್ಕೆ ಚಲಿಸಿದರೆ, ಅವರೋಹಣ (ಅಥವಾ ದಕ್ಷಿಣ) ಸಂಪಾತದಲ್ಲಿ (ಕೇತುಬಿಂದು) ಕಾಯವು ಪುನಃ ದಕ್ಷಿಣಕ್ಕೆ ಚಲಿಸುತ್ತದೆ. ಪಾತ ರೇಖೆಯು ಕಕ್ಷೆಯ ಸಮತಳ ಮತ್ತು ನಿರ್ದೇಶಕ ಸಮತಳಗಳ ಛೇದನವಾಗಿದ್ದು, ಆರೋಹಣ ಮತ್ತು ಅವರೋಹಣ ಸಂಪಾತಗಳನ್ನು ಸೇರಿಸುತ್ತದೆ.
- "ಉತ್ತರ" ದಿಕ್ಕಿನ ನಿರ್ಧಾರವು ಭೂಮಿಯ ಅಕ್ಷದ ಮೇಲೆ ಅವಲಂಬಿತವಾಗಿದ್ದು, ಇವೆರಡೂ ಸಮಭಾಜಕ ಅಥವಾ ಕ್ರಾಂತಿವೃತ್ತವನ್ನು ಸೂಚಿಸುತ್ತವೆ. ಬೇರೆ ಸಮತಳಗಳನ್ನು ನಿರ್ಧರಿಸಲು ಬೇರೆಯೇ ವ್ಯಾಖ್ಯಾನಗಳು ಬೇಕು.
ಚಂದ್ರನ ಅಯನವು ಚಂದ್ರನ ಪಾತಗಳ ಮೇಲೆ ಪ್ರಭಾವ ಬೀರುತ್ತದೆ. ಚಂದ್ರನ ಮೇಲೆ ಸೂರ್ಯನ ಗುರುತ್ವಾಕರ್ಷಣೆಯ ಕಾರಣದಿಂದ ಚಂದ್ರನು ನಿಧಾನವಾಗಿ ಪಶ್ಚಿಮಕ್ಕೆ ಚಲಿಸುವುದನ್ನು ಅಯನವೆನ್ನಲಾಗುತ್ತದೆ. (ಗ್ರಹಣ ಲೇಖನವನ್ನೂ ನೋಡಿ)
ಇವನ್ನೂ ನೋಡಿ
ಬದಲಾಯಿಸಿ- ಚಂದ್ರನ ಪಾತಗಳು – ಚಂದ್ರನ ಕಕ್ಷೀಯ ಪಾತಗಳು.