ಕಲೆ (ವಿವರ್ಣನ)

(ಕಂದು (ಕಲೆ) ಇಂದ ಪುನರ್ನಿರ್ದೇಶಿತ)

ಕಲೆ ಎಂದರೆ ಅದು ಯಾವ ಮೇಲ್ಮೈ, ವಸ್ತು, ಅಥವಾ ಸಾಧನದ ಮೇಲೆ ಕಾಣಿಸಿಕೊಳ್ಳುತ್ತದೆಯೋ ಅದರಿಂದ ಸ್ಪಷ್ಟವಾಗಿ ವ್ಯತ್ಯಾಸ ಮಾಡಬಹುದಾದ ವಿವರ್ಣನ. ಕಲೆಗಳು ಎರಡು ಹೋಲಿಕೆಯಿಲ್ಲದ ವಸ್ತುಗಳ ಪರಸ್ಪರ ರಾಸಯನಿಕ ಅಥವಾ ಭೌತಿಕ ಕ್ರಿಯೆಗಳಿಂದ ಉಂಟಾಗುತ್ತವೆ. ಬಣ್ಣ ಗುರುತಿಸುವಿಕೆಯನ್ನು ಜೀವರಾಸಾಯನಿಕ ಸಂಶೋಧನೆ, ಲೋಹದ ಬಣ್ಣವೂರಿಸುವಿಕೆ, ಮತ್ತು ಕಲೆಗೆ (ಉದಾ. ದಾರುವಿನ ಬಣ್ಣವೂರಿಸುವಿಕೆ, ವರ್ಣರಂಜಿತ ಗಾಜು) ಬಳಸಲಾಗುತ್ತದೆ. ಕಲೆಗಳು ಉದ್ದೇಶಪೂರ್ವಕವಾಗಿರಬಹುದು (ಉದಾಹರಣೆಗೆ ದಾರುವಿನ ಕಲೆಗಳು ಅಥವಾ ವರ್ಣ)[], ಸೂಚಕ ಕಲೆಗಳು (ಉದಾಹರಣೆಗೆ ಆಹಾರ ಬಣ್ಣಗಾರಿಕೆ ಅಥವಾ ಸೂಕ್ಷ್ಮದರ್ಶಕದ ಕೆಳಗೆ ಬ್ಯಾಕ್ಟೀರಿಯಾವನ್ನು ಕಾಣಿಸುವಂತೆ ಮಾಡಲು ವಸ್ತುವನ್ನು ಸೇರಿಸುವುದು), ಪ್ರಾಕೃತಿಕ ಕಲೆಗಳು (ಉದಾಹರಣೆಗೆ ಕಬ್ಬಿಣದ ತುಕ್ಕು ಅಥವಾ ಕಂಚಿನ ಮೇಲಿನ ಕಿಲುಬು), ಮತ್ತು ಆಕಸ್ಮಿಕ ಕಲೆಗಳು (ಉದಾಹರಣೆಗೆ ಅಂಗಿಯ ಮೇಲಿನ ಕೆಚಪ್‍ನ ಕಲೆ). ವಿಭಿನ್ನ ಪ್ರಕಾರಗಳ ವಸ್ತುಗಳ ಮೇಲೆ ವಿವಿಧ ವಸ್ತುಗಳಿಂದ ಬಣ್ಣದ ಗುರುತನ್ನು ಮಾಡಬಹುದು, ಮತ್ತು ಕಲೆ ಪ್ರತಿರೋಧವು ಆಧುನಿಕ ಉಡುಪು ತಯಾರಿಕೆಯಲ್ಲಿ ಒಂದು ಪ್ರಮುಖ ಗುಣಲಕ್ಷಣವಾಗಿದೆ.

ಕಾಫಿ ಕಲೆಗಳು

ಮೇಲ್ಮೈ ಕಲೆಗಳು ಕಲೆ ರಚಿಸುವಿಕೆಯ ಪ್ರಾಥಮಿಕ ವಿಧಾನವಾಗಿವೆ. ಇದರಲ್ಲಿ ಕಲೆ ವಸ್ತುವನ್ನು ಮೇಲ್ಮೈ ಅಥವಾ ವಸ್ತುವಿನ ಮೇಲೆ ಸುರಿಯಲಾಗುತ್ತದೆ ಮತ್ತು ಅದು ಎಳೆಗಳಲ್ಲಿ, ರಂಧ್ರಗಳಲ್ಲಿ, ಕಚ್ಚುಗಳಲ್ಲಿ, ಅಥವಾ ಮೇಲ್ಮೈ ಮೇಲಿನ ಇತರ ಲೋಮನಾಳಾಕರ್ಷಣ ರಚನೆಗಳಲ್ಲಿ ಸಿಕ್ಕಿಬೀಳುತ್ತದೆ. ಸಿಕ್ಕಿಬಿದ್ದ ವಸ್ತುವು ಅಡಿಯಲ್ಲಿರುವ ವಸ್ತುವನ್ನು ಲೇಪಿಸುತ್ತದೆ, ಮತ್ತು ಕಲೆಯು ಅದರ ಸ್ವಂತ ಬಣ್ಣದ ಪ್ರಕಾರ ಬೆಳಕನ್ನು ಹಿಂದಕ್ಕೆ ಪ್ರತಿಫಲಿಸುತ್ತದೆ. ಬಣ್ಣ ಲೇಪಿಸುವುದು, ಚೆಲ್ಲಿದ ಆಹಾರ, ಮತ್ತು ದಾರುವಿನ ಕಲೆಗಳು ಈ ಸ್ವರೂಪದ್ದಾಗಿವೆ.

ಕಲೆಯ ಎರಡನೆಯ ವಿಧಾನವು ವಸ್ತು ಮತ್ತು ಕಲೆ ವಸ್ತುವಿನ ನಡುವಿನ ರಾಸಾಯನಿಕ ಅಥವಾ ಆಣ್ವಿಕ ಕ್ರಿಯೆಯನ್ನು ಒಳಗೊಳ್ಳುತ್ತದೆ. ಅನೇಕ ಪ್ರಕಾರಗಳ ನೈಸರ್ಗಿಕ ಕಲೆಗಳು ಈ ವರ್ಗದಲ್ಲಿ ಬರುತ್ತವೆ. ಅಂತಿಮವಾಗಿ, ವಸ್ತು ಮತ್ತು ಕಲೆ ವಸ್ತು ನಡುವೆ ಆಣ್ವಿಕ ಆಕರ್ಷಣೆ ಕೂಡ ಆಗಬಹುದು. ಇದು ಕೋವೇಲನ್ಸಿ ಬಂಧದಲ್ಲಿ ಹಿಡಿಯಲ್ಪಟ್ಟು ಹಿಡಿಯಲ್ಪಟ್ಟ ವಸ್ತುವಿನ ಬಣ್ಣವನ್ನು ತೋರಿಸುವುದನ್ನು ಒಳಗೊಳ್ಳುತ್ತದೆ.

ಅನೇಕ ಸಂದರ್ಭಗಳಲ್ಲಿ, ಕಲೆಗಳು ಶಾಖದಿಂದ ಪ್ರಭಾವಿತವಾಗುತ್ತವೆ ಮತ್ತು ಅಡಿಯಲ್ಲಿನ ವಸ್ತುವಿನೊಂದಿಗೆ ಬಂಧವನ್ನು ರಚಿಸುವಷ್ಟು ಪ್ರತಿಕ್ರಿಯಾತ್ಮಕವಾಗಬಹುದು. ಇಸ್ತ್ರಿ ಮಾಡುವುದು ಅಥವಾ ಅಜಲಧಾವನದಂತಹ ಅತಿಹೆಚ್ಚು ಶಾಖವು ತೆಗೆಯಬಲ್ಲ ಕಲೆಯ ಮೇಲೆ ರಾಸಾಯನಿಕ ಕ್ರಿಯೆಯನ್ನು ಉಂಟುಮಾಡಬಹುದು, ಮತ್ತು ಇದರಿಂದ ಅದನ್ನು ತೆಗೆಯಲು ಅಸಾಧ್ಯವಾದ ರಾಸಾಯನಿಕ ಸಂಯುಕ್ತವಾಗಿ ಪರಿವರ್ತಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Bob Flexner (1999). "Understanding Wood Finishing: How to Select and Apply the Right Finish". Reader's Digest: 121. ISBN 978-0-7621-0191-7.