ಅಜಲಧಾವನ
ಅಜಲಧಾವನನೀರನ್ನು ಬಳಸದೆ ಶುಚಿ ಮಾಡುವ ವಿಧಾನ (ಒಣಚಲುವೆ; ಡ್ರೈಕ್ಲೀನಿಂಗ್). ಜಿಡ್ಡು ಮತ್ತು ಜಿಡ್ಡಿನ ಕರೆಗಳು ನೀರಿನಿಂದ ತೊಳೆದರೆ ಹೋಗಲಾರವು. ಅಲ್ಲದೆ ಬೆಲೆಬಾಳುವ ರೇಷ್ಮೆ ಮತ್ತು ಉಣ್ಣೆಯ ಬಟ್ಟೆಗಳನ್ನು ನೀರಿನಿಂದ ತೊಳೆದರೆ ಅವುಗಳ ಹೊಳಪು ಮತ್ತು ಮೃದುತ್ವ ನಾಶವಾಗಬಹುದು. ಇಂಥ ಸಂದರ್ಭಗಳಲ್ಲಿ ಪೆಟ್ರೋಲಿಯಂ ಈಥರ್ ಅಥವಾ ಬೆಂಜೀನ್ ದ್ರವ್ಯಗಳನ್ನು ಉಪಯೋಗಿಸಿ ಜಿಡ್ಡನ್ನೂ, ಕೊಳೆಯನ್ನೂ ತೆಗೆಯಬಹುದು.
ಇತ್ತೀಚೆಗೆ, ಹೊಸದಾಗಿ ತಯಾರಿಸಿದ ಯಂತ್ರದ ಬಿಡಿ ಭಾಗಗಳಲ್ಲಿರುವ ಜಿಡ್ಡನ್ನು ಮತ್ತು ಲೋಹದ ಕಣಗಳನ್ನು (ಮೆಟ್ಯಾಲಿಕ್ ಡಸ್ಟ್) ತೆಗೆಯಲು, ಶ್ರವಣಾತೀತ ಶಬ್ದದ (ಅಲ್ಟ್ರಾಸೊನಿಕ್) ಅಲೆಗಳನ್ನು ಉಪಯೋಗಿಸುವ ಪದ್ಧತಿ ಜಾರಿಗೆ ಬಂದಿದೆ. ಇವನ್ನು ಬಟ್ಟೆ ಶುಚಿ ಮಾಡಲೂ ಉಪಯೋಗಿಸಬಹುದು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Hazard Summary provided by the United States Environmental Protection Agency.
- How stuff works article on how dry cleaning works.
- How stuff works article on how home dry cleaning works.
- NIOSH Safety and Health Topic: Drycleaning
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: