ಕಂದಾರಿಯಾ ಮಹಾದೇವ ದೇವಾಲಯ
ಕಂದಾರಿಯಾ ಮಹಾದೇವ ದೇವಾಲಯವು (ದೇವನಾಗರಿ: कंदारिया महादेव मंदिर, ಇದರರ್ಥ "ಗುಹೆಯ ಮಹಾದೇವ") ಭಾರತದ ಮಧ್ಯ ಪ್ರದೇಶ ರಾಜ್ಯದ ಖಜುರಾಹೊದಲ್ಲಿ ಕಂಡುಬರುವ ಮಧ್ಯಕಾಲೀನ ದೇವಾಲಯ ಗುಂಪಿನಲ್ಲಿನ ಅತಿ ದೊಡ್ಡ ಮತ್ತು ಅತ್ಯಂತ ಅಲಂಕೃತ ಹಿಂದೂ ದೇವಸ್ಥಾನವಾಗಿದೆ. ಇದು ಭಾರತದ ಮಧ್ಯಯುಗದಿಂದ ಸಂರಕ್ಷಿತವಾದ ದೇವಾಲಯಗಳ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಈ ದೇವಾಲಯವು ಚಂದೇಲ ಕುಟುಂಬದ ಕುಲದೇವರಾದ ಶಿವನಿಗೆ ಸಮರ್ಪಿತವಾಗಿದೆ.
ಕಂದಾರಿಯಾ ಮಹಾದೇವ ದೇವಾಲಯವು ಪಶ್ಚಿಮ ಸಂಕೀರ್ಣದಲ್ಲಿದ್ದು ೩೧ ಮೀಟರ್ (೧೦೨ ಅಡಿ) ಎತ್ತರವಿದೆ. ಇದು ಖಜುರಾಹೊ ದೇವಾಲಯಗಳ ಸಂಕೀರ್ಣದ ಮೂರು ಗುಂಪುಗಳ ಪೈಕಿ ಅತಿ ದೊಡ್ಡದಾಗಿದೆ.[೧] ದೇವಾಲಯಗಳ ಈ ಪಶ್ಚಿಮ ಗುಂಪನ್ನು "ಷಟ್ಕೋನದ ವಿಶ್ವ ವಿನ್ಯಾಸಕ್ಕೆ" ಹೋಲಿಸಲಾಗಿದೆ ಮತ್ತು ಶಿವನ ಮೂರು ರೂಪಗಳನ್ನು ಪ್ರತಿನಿಧಿಸುತ್ತದೆ.[೨] ದೇವಾಲಯದ ವಾಸ್ತುಕಲೆಯು ದ್ವಾರಮಂಟಪಗಳು ಹಾಗೂ ಗೋಪುರಗಳ ಒಟ್ಟುಗೂಡಿಕೆಯಾಗಿದೆ ಮತ್ತು ಶಿಖರದಲ್ಲಿ ಅಂತ್ಯಗೊಳ್ಳುತ್ತದೆ. ಈ ವೈಶಿಷ್ಟ್ಯವು ಮಧ್ಯ ಭಾರತದ ದೇವಾಲಯಗಳಲ್ಲಿ ೧೦ನೇ ಶತಮಾನದಿಂದ ಮುಂದಕ್ಕೆ ಸಾಮಾನ್ಯವಾಗಿತ್ತು.
ಉಲ್ಲೇಖಗಳು
ಬದಲಾಯಿಸಿ- ↑ "Kandarya Mahadeva". Encyclopædia Britannica.
- ↑ "Physical and Regional Setting of Khajuraho" (pdf). Shodhganga – INFLIBNET Centre.
ಗ್ರಂಥಸೂಚಿ
ಬದಲಾಯಿಸಿ- Abram, David (2003). Rough Guide to India. Rough Guides. ISBN 978-1-84353-089-3.
{{cite book}}
: Invalid|ref=harv
(help) - Allen, Margaret Prosser (1 January 1991). Ornament in Indian Architecture. University of Delaware Press. ISBN 978-0-87413-399-8.
{{cite book}}
: Invalid|ref=harv
(help) - Asher, Catherine B.; Talbot, Cynthia (16 March 2006). India Before Europe. Cambridge University Press. ISBN 978-0-521-80904-7.
{{cite book}}
: Invalid|ref=harv
(help) - Kramrisch, Stella (1988). The Presence of Siva. Motilal Banarsidass. ISBN 978-81-208-0491-3.
- Leuthold, Steven (16 December 2010). Cross-Cultural Issues in Art: Frames for Understanding. Routledge. ISBN 978-1-136-85455-2.
- Ring, Trudy; Salkin, Robert M.; Boda, Sharon La (1994). International Dictionary of Historic Places: Asia and Oceania. Taylor & Francis. ISBN 978-1-884964-04-6.
{{cite book}}
: Invalid|ref=harv
(help) - Ross, Leslie D. (4 June 2009). Art and Architecture of the World's Religions. ABC-CLIO. ISBN 978-0-313-34287-5.
{{cite book}}
: Invalid|ref=harv
(help) - Sushil Kumar Sullerey (2004). Chandella Art. Aakar. ISBN 978-81-87879-32-9.
{{cite book}}
: Invalid|ref=harv
(help)
ಹೆಚ್ಚಿನ ಓದಿಗೆ
ಬದಲಾಯಿಸಿ- Michell, George; Singh, Snehal. Hindu temples of India (PDF)
- Surface, Space and Intention: The Parthenon and the Kandariya Mahadeva. Gregory D. Alles. History of Religions, Vol. 28, No.1, August 1988, pp. 1–36.