ಕಂಚುಕ

ಸೀರೆಗೆ ಧರಿಸಲಾಗುತ್ತದೆ

ಕಂಚುಕ (ರವಿಕೆ, ಕುಪ್ಪಸ) ಸಾಮಾನ್ಯವಾಗಿ ಸೀರೆಯ ಜೊತೆ ಧರಿಸಲಾದ ಒಂದು ವಪೆ ಕಾಣಿಸುವಂಥ ಬ್ಲೌಸ್ ಅಥವಾ ಮೇಲ್ವಸ್ತ್ರ (ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ನೇಪಾಳ ಮತ್ತು ಇತರ ಸುತ್ತುವರಿದ ದೇಶಗಳಲ್ಲಿ ಧರಿಸಲಾಗುತ್ತದೆ). ಕಂಚುಕವು ಕುರ್ಪ್ಸಿಕಾ ಅಥವಾ ಕಂಚುಕಿ ಎಂದೂ ಕರೆಯಲಾದ ಪ್ರಾಚೀನ ಸ್ತನಪಟ್ಟದಿಂದ ವಿಕಸನಗೊಂಡಿತು. ಸ್ತನಪಟ್ಟ ಪ್ರಾಚೀನ ಕಾಲದಲ್ಲಿ ಮಹಿಳೆಯರಿಂದ ಧರಿಸಲಾದ ಮೂರು ತುಂಡಿನ ಉಡುಪಿನ ಭಾಗವಾಗಿತ್ತು. ಸಾಂಪ್ರದಾಯಿಕವಾಗಿ, ಕಂಚುಕವನ್ನು ಸೀರೆಯದ್ದೇ ಬಟ್ಟೆಯಿಂದ ತಯಾರಿಸಲಾಗುತ್ತದೆ, ಮಹಿಳೆಯರು ಸೀರೆಯ ಕೊನೆಯಲ್ಲಿನ ಹೆಚ್ಚಿನ ವಸ್ತ್ರವನ್ನು ಕತ್ತರಿಸಿಕೊಂಡು ಸರಿಹೊಂದುವ ಕಂಚುಕದ ಹೊಲಿಗೆಗೆ ಬಳಸಲು ಅನೇಕ ಸೀರೆ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಹೆಚ್ಚುವರಿ ಉದ್ದವನ್ನು ಸೇರಿಸುತ್ತಾರೆ.


"https://kn.wikipedia.org/w/index.php?title=ಕಂಚುಕ&oldid=781461" ಇಂದ ಪಡೆಯಲ್ಪಟ್ಟಿದೆ