ಒ.ವಿ.ಉಷಾ (ಜನನ ೪ ನವೆಂಬರ್ ೧೯೪೮) [] ಅವರು ಮಲಯಾಳಂ ಭಾಷೆಯ ಕವಿ ಮತ್ತು ಕಾದಂಬರಿಕಾರರು. ''ಕೆ ಎಂ ಜಾರ್ಜ್'', ಉಷಾ ಅವರನ್ನು "ಆಳವಾದ ನೈತಿಕ ಕಾಳಜಿ ಮತ್ತು ತಾಂತ್ರಿಕ ಕೌಶಲ್ಯ" ಹೊಂದಿರುವ ಕವಿಯತ್ರಿ ಎಂದು ವರ್ಣಿಸಿದ್ದಾರೆ. [] ಉಷಾ ಅವರು ನಾಲ್ಕು ಕವನಗಳ ಸಂಪುಟಗಳನ್ನು ಮತ್ತು ಕೆಲವು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಹಾಗು ಕಾದಂಬರಿಗಳನ್ನು ಸಹ ರಚಿಸಿದರೆ. ಅವರು ವಿವಿಧ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಉಷಾ ಅವರು ''ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯ ಕೊಟ್ಟಾಯಂನಲ್ಲಿ'' ಪ್ರಕಟಣೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರ, ೨೦೦೦ ರ೦ದು ಬಿಡುಗಡೆಯಾದ, ಮಜಾ ಎ೦ಬ ಮಲಯಾಳಂ ಚಲನಚಿತ್ರದ ಅತ್ಯುತ್ತಮ ಸಾಹಿತ್ಯಕ್ಕಾಗಿ ''ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು'' ಗೆದ್ದಿದ್ದಾರೆ .

ಒ.ವಿ.ಉಷಾ
ಒ.ವಿ.ಉಷಾ ೨೦೧೬ ರರಲ್ಲಿ
ಜನನ೪ ಡಿಸೆಂಬರ್ ೧೯೪೮ [ವಯಸ್ಸು ೭೩]
ವೃತ್ತಿಕವಿ, ಕಾದಂಬರಿಕಾರರು
ಸಂಬಂಧಿಗಳುಒ. ವಿ. ವಿಜಯನ್ (ಸಹೋದರ)

ಜೀವನಚರಿತ್ರೆ

ಬದಲಾಯಿಸಿ
 

ಉಷಾ ಅವರು ಕೇರಳದ ಪಾಲಕ್ಕಾಡ್ ಬಳಿಯ ಸಣ್ಣ ಹಳ್ಳಿಯಲ್ಲಿ ತಮ್ಮ ಕುಟುಂಬದ ಕಿರಿಯ ಮಗಳಾಗಿ ಜನಿಸಿದರು. [] ಅವರು ತಮ್ಮ ಬಾಲ್ಯವನ್ನು ಹೆಚ್ಚಾಗಿ ಅವರ ಸ್ಥಳೀಯ ಹಳ್ಳಿಯಲ್ಲಿ ಕಳೆದರು. ಅವರ ತಂದೆ "ಮಲಬಾರ್ ಸ್ಪೆಷಲ್ ಪೋಲಿಸ್" ನಲ್ಲಿ ಉದ್ಯೋಗದಲ್ಲಿದ್ದರು. ಅವರ ಹಿರಿಯ ಸಹೋದರರಾದ ಒ. ವಿ. ವಿಜಯನ್ ರವರು ಕಾದಂಬರಿಕಾರ ಮತ್ತು ಕಾರ್ಟೂನಿಸ್ಟ್ ಆಗಿದ್ದರು. [] ಉಷಾ ಅವರು ತಮ್ಮ ತಾಯಿ ಇ೦ದ ಮಲಯಾಳಂ ಸಾಹಿತ್ಯದತ್ತ ಸೆಳೆಯಲ್ಪಟ್ಟರು, ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಅದರ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. [] ಉಷಾ ಅವರು ತಮ್ಮ ೧೩ ನೇ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ''ಮಾತೃಭೂಮಿಯ೦ಬ'' ಮಲಯಾಳಂ ವಾರಪತ್ರಿಕೆಯಲ್ಲಿ , "ಮಕ್ಕಳ ಕಾರ್ನರ್" ಗೆ ಆಗಾಗ್ಗೆ ಕೊಡುಗೆ ನೀಡುತ್ತಿದ್ದರು. [] ಅವರ ಕವಿತೆಗಳು ೧೯೭೩ ರವರೆಗೆ, ಅವರ ೨೫ ನೇ ವಯಸ್ಸಿನಲ್ಲಿ ಸಾಪ್ತಾಹಿಕದಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಅವರ ಶಾಲಾ ಶಿಕ್ಷಣದ ನಂತರ, ಅವರು ದೆಹಲಿಗೆ ತೆರಳಿ ಅವರ ಸಹೋದರಜೊತೆ ನೆಲೆಸಿದರು. ದೆಹಲಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. [] ಪದವಿಯನ್ನು ಪೂರ್ಣಗೊಳಿಸಿದ ನಂತರ, ಉಷಾ ಅವರು ಸಂಪಾದಕೀಯ ತರಬೇತಿದಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಪ್ರಕಾಶನ ಸಂಸ್ಥೆಯೊಂದರ ಮುಖ್ಯ ಸಂಪಾದಕರಾದರು. [] ೧೯೭೧ ರಲ್ಲಿ, "ಇಂಕ್ವಿಲಾಬ್ ಜಿಂದಾಬಾದ್" ಶೀರ್ಷಿಕೆಯ ಅವರ ಸಣ್ಣ ಕಥೆಗಳಲ್ಲಿ ಒಂದನ್ನು ಅದೇ ಹೆಸರಿನ ಚಲನಚಿತ್ರವಾಗಿ ಮಾಡಲಾಯಿತು. [] ಅದೇ ಚಿತ್ರದಲ್ಲಿ ಅವರು ಹಾಡನ್ನು ಸಹ ಬರೆದಿದ್ದಾರೆ ('ಆರುಡೆ ಮನಸಿಲೆ ಗಾನಮಯಿ ನಂ', ಸಂಗೀತ ಜಿ. ದೇವರಾಜನ್, ಗಾಯಕಿ ಪಿ.ಲೀಲಾ). ಬಹುಶಃ ಆಧುನಿಕ ಮಲಯಾಳಂ ಚಲನಚಿತ್ರದ ಮೊದಲ ಮಹಿಳಾ ಗೀತರಚನೆಕಾರಾರಗಿದ್ದರೆ . ೧೯೭೩ ರಿಂದ, ಅವರು ಹತ್ತು ವರ್ಷಗಳ ಕಾಲ ಹೆಚ್ಚಿನ ಕೊಡುಗೆ ನೀಡಲಿಲ್ಲ. ೧೯೮೨ ರಲ್ಲಿ, ಅವರು ಬರವಣಿಗೆಯನ್ನು ಪುನರಾರಂಭಿಸಿದರು ಮತ್ತು ಅಂದಿನಿಂದ ಆಗಾಗ್ಗೆ ಕೊಡುಗೆ ನೀಡುತ್ತಿದ್ದಾರೆ. ಅವರ ಹೆಚ್ಚಿನ ಕವನಗಳು "ಪುಸ್ತಕ ರೂಪದಲ್ಲಿ" ಪ್ರಕಟವಾಗದಿದ್ದರೂ, ಅವರ ಏಕೈಕ ಕಾದಂಬರಿ ಶಾಹಿದ್ ನಾಮ ೨೦೦೧ ರಲ್ಲಿ ಪ್ರಕಟವಾಯಿತು. [] ಅವರು ೨೦೦೮ ರಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರ ಸದಸ್ಯರಲ್ಲಿ ಒಬ್ಬರಾಗಿದ್ದರು ಮತ್ತು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯಕ್ಕೆ ಸೇವೆ ಸಲ್ಲಿಸಿದರು. ಕೊಟ್ಟಾಯಂನ ಪ್ರಕಟಣೆಗಳ ನಿರ್ದೇಶಕಾರಗಿದ್ದರು. [] []

ಕೆಲಸ ಮಾಡುತ್ತದೆ

ಬದಲಾಯಿಸಿ
  • ಸ್ನೇಹಗೀತೆಗಳು (ಕವನ)
  • ಧ್ಯಾನಂ (ಕವನ)
  • ಅಗ್ನಿಮಿತ್ರನ್ನೋರು ಕುರಿಪ್ಪು (ಕವನ)
  • ಶಾಹಿದ್ ನಾಮಾ (ಕಾದಂಬರಿ, ೨೦೦೧)
  • ನಿಲಂ ತೋಟ ಮಣ್ಣು (ಸಣ್ಣ ಕಥೆ)

ಪ್ರಶಸ್ತಿಗಳು

ಬದಲಾಯಿಸಿ
  • ೨೦೦೦ - ಮಜಾಗಾಗಿ ಅತ್ಯುತ್ತಮ ಸಾಹಿತ್ಯಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ

ಟಿಪ್ಪಣಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Archived copy". Archived from the original on 13 November 2018. Retrieved 13 November 2018.{{cite web}}: CS1 maint: archived copy as title (link)
  2. George 1992.
  3. ೩.೦ ೩.೧ ೩.೨ Ajith Kumar, J. (24 November 2002). "A passion for the unknown". The Hindu. Archived from the original on 19 February 2014. Retrieved 2 February 2014.
  4. ೪.೦ ೪.೧ ೪.೨ ೪.೩ Tharu & Lalita 1993.
  5. "Some Lady Bards". The Hindu. 3 February 2011. Retrieved 2 February 2014.
  6. "Film award jury formed". The Hindu. 19 May 2009. Retrieved 2 February 2014.
  7. "Bibliography of new books released". The Hindu. 22 March 2010. Archived from the original on 27 March 2010. Retrieved 2 February 2014.