ಐ.ಎನ್.ಎಸ್ ವಿಕ್ರಮಾದಿತ್ಯ
ಐ.ಎನ್.ಎಸ್ ವಿಕ್ರಮಾದಿತ್ಯ (ಸಂಸ್ಕೃತ: विक्रमादित्य, Vikramāditya) ಎನ್ನುವುದು ಸೋವಿಯೆಟ್ ರಷ್ಯಾದ ಹಳೆಯ ವಿಮಾನ ಧಾರಕ ನೌಕೆಯಾದ ಅಡ್ಮಿರಲ್ ಗೋರ್ಶ್'ಕೋವ್ನ ಹೊಸ ನಾಮಧೇಯವಾಗಿದೆ. ಇದನ್ನು ಭಾರತವು ರಷ್ಯಾದಿಂದ ಖರೀದಿಸಿದ್ದು ೨೦೧೨ ರ ವೇಳೆಗೆ ಇದು ಭಾರತೀಯ ನೌಕಾಸೇನೆಯಲ್ಲಿ ಸೇವಾನಿರತವಾಗುವ ಅಪೇಕ್ಷೆಯಿದೆ.[೨]
ವಿಕ್ರಮಾದಿತ್ಯ ನೌಕೆಯು ಅಡ್ಮಿರಲ್ ಗೋರ್ಶ್'ಕೋವ್ ಆಗಿದ್ದಾಗ | |
ವೃತ್ತಿಜೀವನ (india) | |
---|---|
ನಿರ್ವಾಹಕ: | INDIAN NAVY |
ನಿರ್ಮಾತೃ: | ಚೆರ್ನೊಮೊರ್ಸ್ಕಿಯ್ ನೌಕಾನಿಲ್ದಾಣ, ನಿಕೊಲಾಯೆವ್ |
Yard number: | KARWAR |
ನಿರ್ಮಾಣಾರಂಭ: |
ಡಿಸಂಬರ್ ೧೯೭೮ (ಅಡ್ಮಿರಲ್ ಗೋರ್ಶ್'ಕೋವ್ ಆಗಿ) |
ಬಿಡುಗಡೆ: |
ಎಪ್ರಿಲ್ ೧೭, ೧೯೮೨ (ಅಡ್ಮಿರಲ್ ಗೋರ್ಶ್'ಕೋವ್ ಆಗಿ) ಡಿಸಂಬರ್ ೪ ,೨೦೦೮ (ವಿಕ್ರಮಾದಿತ್ಯ ಆಗಿ) |
ಕಾರ್ಯಾರಂಭ: | ೨೦೧೨ (೨೦೧೧ರಲ್ಲಿ ಸಾಗರ ಪರೀಕ್ಷಣೆ ಹಾಗೂ ಪ್ರಯೋಗಗಳು)[೧] |
In service: | 2014 |
ವಿಧಿ: | ಮರೂಜೋಡಣೆಗೆ ಒಳಪಟ್ಟಿದೆ |
ಸಾಮಾನ್ಯ ವಿವರಗಳು | |
ಉದ್ದ: | 273.1 m overall |
ಬೀಮ್: | 31.0 m |
ನೋದನ: | 4 shaft geared steam turbines, 140,000 hp |
ಹಿಡಿತ: | 13500 miles at 18 knots |
ಹೊತ್ತೊಯ್ಯುವ ವಿಮಾನಗಳು: |
೧೬ ಮಿಕೊಯಾನ್ ಮಿಗ್-೨೯ಕೆ ಅಥವಾ ಹೆಚ್.ಎ.ಎಲ್ ತೇಜಸ್ ಅಥವಾ ಸೀ ಹ್ಯಾರಿಯರ್ ೬ ಕೆ.ಎ-೩೧ ಹೆಲಿಕ್ಸ್ ಹೆಚ್.ಎ.ಎಲ್ ಧ್ರುವ್ |
ವಿಕ್ರಮಾದಿತ್ಯ ನೌಕೆಯು ೧೯೭೮-೧೯೮೨ರಲ್ಲಿ ನಿರ್ಮಿತ ಕೀವ್ ವರ್ಗದ ನಮೂನೆ ೧೧೪೩ ವಿಮಾನ ಧಾರಕ ನೌಕೆಯ ಬದಲಿತ ಆವೃತ್ತಿಯಾಗಿದೆ. ಪ್ರಸ್ತುತವಾಗಿ ಇದು ರಷ್ಯಾದ ಸೆವ್ಮಾಶ್ ನೌಕಾ ನಿರ್ಮಾಣ ಕೇಂದ್ರದಲ್ಲಿ ವಿಸ್ತೃತವಾದ ಮರುಜೋಡಣೆಗೆ ಒಳಪಡುತ್ತಿದೆ.
ರಿಪೇರಿ ನಂತರದ ವಿವರ
ಬದಲಾಯಿಸಿ- ನೌಕೆಯ ತಾಂತ್ರಿಕ ವಿವರ
- 44,500 ಟನ್ ತೂಕ
- 284 ಮೀಟರ್ ಉದ್ದ
- 60 ಮೀಟರ್ ಎತ್ತರ
- 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊರುವ ಸಾಮರ್ಥ್ಯ
- 1,600 ಸಿಬ್ಬಂದಿ ಸಂಖ್ಯೆ
- 22 ನೌಕೆಯ ಅಂತಸ್ತುಗಳು
- 13,000 ಕಿ.ಮೀ.ಒಮ್ಮೆ ಇಂಧನ ಭರ್ತಿಯಾದರೆ ನೌಕೆ ಕ್ರಮಿಸುವ ದೂರ
- 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ
- ಐಎನ್‌ಎಸ್ ವಿಕ್ರಮಾದಿತ್ಯ ಎಂದು ಮರುನಾಮಕರಣ.
ಒಪ್ಪಂದದ ವಿವರ
ಬದಲಾಯಿಸಿ- ಗೋರ್ಶಕೋವ್ ವಿಕ್ರಮಾದಿತ್ಯವಾಗಿ ಬದಲಾವಣೆಯಾದ ನಂತರದ ವಿವರ.
- ಗೋರ್ಶಕೋವ್ ರಷ್ಯಾ ನೌಕಾಪಡೆಗೆ ಸೇರ್ಪಡೆ : 1987
- ರಷ್ಯಾಪಡೆಯಿಂದ ನಿವೃತ್ತಿ :1996
- ಅಟಲ್ ಬಿಹಾರಿ ವಾಜಪೇಯ್ ಸರ್ಕಾರದಿಂದ ಅದರ ಖರೀದಿಗೆ ಒಪ್ಪಿಗೆ (ಜಾರ್ರ್ಜ ಫರ್ನಾಂಡಿಸ್) : 2004
- ಆರಂಭದ ಒಪ್ಪಂದದ ಮೊತ್ತ : ರೂ.97.4 ಕೋಟಿ ಡಾಲರ್, (ರೂ. 4,285 ಕೋ.)
- ರಷ್ಯಾದ ಹೆಚ್ಚುವರಿ ಬೇಡಿಕೆ 2014ರಲ್ಲಿ ಯು.ಪಿಯೆ ಒಪ್ಪಿದ ಮೊತ್ತ. :235 ಕೋ.ಡಾಲರ್, (10,575 ಕೋ.ರೂಪಾಯಿ 2010ರ ದರದಲ್ಲಿ)