ಐವತ್ತೊಕ್ಲು (ಪಂಜ) ಗ್ರಾಮ ಸುಳ್ಯ ತಾಲೂಕಿನ ಉತ್ತರದ ಗಡಿ ಪ್ರದೇಶದಲ್ಲಿರುವ ಗ್ರಾಮಗಳಲ್ಲೊಂದು. ಗ್ರಾಮದ ಗಡಿಯಾಚೆ ಕುಮಾರಧಾರ ನದಿ ಇದೆ. ಅದರ ಪಕ್ಕದಲ್ಲಿ ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮವಿದೆ. ವಾಯುವ್ಯ ದಿಕ್ಕಿನಲ್ಲಿ ಎಣ್ಮೂರು ಗ್ರಾಮವಿದೆ. ದಕ್ಷಿಣದ ಗಡಿಯುದ್ದಕ್ಕೂ ನಿಂತಿಕಲ್ಲು-ಸುಬ್ರಹ್ಮಣ್ಯ ಮುಖ್ಯ ರಸ್ತೆಯಿದೆ. ಅದರಿಂದ ದಕ್ಷಿಣಭಾಗದಲ್ಲಿ ಪಂಬೆತ್ತಾಡ ಮತ್ತು ಕೂತ್ಕುಂಜ ಗ್ರಾಮಗಳಿವೆ. ಪೂರ್ವದ ಗಡಿಯೊಂದಿಗೆ ಪಂಜದ ಹೊಳೆ ಹರಿಯುತ್ತಿದ್ದು ಅದರಾಚೆಗೆ ಕೇನ್ಯ ಗ್ರಾಮವಿದೆ.

ಅರಣ್ಯಸಂಪಾದಿಸಿ

ಐವತ್ತೊಕ್ಲು ಗ್ರಾಮದ ಉತ್ತರ ಭಾಗದಲ್ಲಿ ಹೇಮಳ ಮತ್ತು ಉರುಂಬಿ ಎಂಬ ದಟ್ಟವಾದ ಅರಣ್ಯವಿದೆ. ಉಳಿದೆಡೆ ಏರು ಗುಡ್ಡಗಳಿದ್ದು ತೆಳುವಾದ ಅರಣ್ಯದ ಹೊದಿಕೆ ಇದೆ. ಪುಳಿಕುಕ್ಕು ಹೊಳೆಯ ದಂಡೆಯಿಂದ ಎಣ್ಮೂರು, ಪಕ್ಕದಎಡಮಂಗಲದ ಹೇಮಳ ಕಾಡಿದೆ. ಅಲ್ಲಲ್ಲಿ ನೆಡುತೋಪುಗಳಿವೆ.

ಸಂಪರ್ಕಸಂಪಾದಿಸಿ

ಪಂಜ[೧]ದಿಂದ ಎಡಮಂಗಲ, ಕಡಬಕ್ಕೆ ಪುಳಿಕುಕ್ಕು ಮೇಲೆ ಹೋಗುವ ರಸ್ತೆ ಮುಖ್ಯವಾದದ್ದು. ಪಡ್ಪಿನಂಗಡಿಯಿಂದ ನೆಲ್ಲಿಕಟ್ಟೆ ವರೆಗೆ ಸುಬ್ರಹ್ಮಣ್ಯ ಮುಖ್ಯ ರಸ್ತೆ ಹೆಚ್ಚು ಕಡಿಮೆ ಗ್ರಾಮದೊಳಗೆ ಹಾದು ಹೋಗುತ್ತದೆ. ಕರಿಕ್ಕಳದಿಂದ ಪೊಳೆಂಜಕ್ಕೆ ನೇರ ಸಂಪರ್ಕ ರಸ್ತೆ ಇದ್ದು ಗ್ರಾಮಾಂತರ ರಸ್ತೆಯಾಗಿದೆ. ಮುಖ್ಯ ರಸ್ತೆ ಇದ್ದು ಗ್ರಾಮಾಂತರ ರಸ್ತೆಯಾಗಿದೆ. ಮುಖ್ಯ ರಸ್ತೆಗಳಿಗೆ ಡಾಮಾರು ಹೊದಿಕೆ ಇದೆ.

ಜನ ವಸತಿ ಪ್ರದೇಶಗಳುಸಂಪಾದಿಸಿ

ಈ ಗ್ರಾಮದ ಐವತ್ತೊಕ್ಲು, ಅತ್ಯಡ್ಕ, ತೋಟ, ಅಳ್ಪೆ, ಕಂಬಳ, ಕಾಣಿಕೆ, ಮೇಲ್ಪಾಡಿ, ಕಮಿಲ, ಕಂರ್ಬುನೆಕ್ಕಿಲ , ಕೆಮ್ಮೂರು, ಸಂಕಡ್ಕ, ಪಲ್ಲೋಡಿ, ಕಂಡೂರು, ನೇರಳ, ಕೆರೆಮೂಲೆ, ಕೊಟ್ರಂಜ ಮುಖ್ಯ ಜನವಸತಿ ಪ್ರದೇಶಗಳು.

ಕೃಷಿಸಂಪಾದಿಸಿ

ಭತ್ತವೇ ಪ್ರದಾನವಾಗಿದ್ದ ಐವತ್ತೊಕ್ಲು ಪಂಜ ಸೀಮೆಯ ಕೇಂದ್ರದಲ್ಲಿರುವ ಗ್ರಾಮ ಇದೀಗ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ರಬ್ಬರ್,ಬಾಳೆ, ಕರಿಮೆಣಸು, ಕೊಕ್ಕೊ ಬೆಳೆಗಳಿಂದ ತುಂಬಿ ತುಳುಕುತ್ತಿದೆ.

ಸಂಚಾರ,ಸಾಗಟಸಂಪಾದಿಸಿ

ಗ್ರಾಮದೊಳಗಿನ ಕರಿಕ್ಕಳ - ಪಲ್ಲೋಡಿ ಮುಖ್ಯ ರಸ್ತೆ, ಪಂಜ - ಪುಳಿಕುಕ್ಕು ಮುಖ್ಯ ರಸ್ತೆಗಳಲ್ಲಿ ಸರಕಾರಿ ಬಸ್ ಸೌಕರ್ಯ . ಒಳ ರಸ್ತೆಗಳಲ್ಲಿ ಖಾಸಗಿ ವಾಹನಗಳು ಜನರಿಗೆ ಸೌಕರ್ಯ ಒದಗಿಸುತ್ತಿವೆ. ರಿಕ್ಷಾ, ಜೀಪು,ವ್ಯಾನುಗಳು ಜನರ ಸಂಚಾರಕ್ಕೆ ಸರಕು ಸಾಗಟಕ್ಕೆ ನೆರವಾಗುತ್ತಿವೆ.[೨]

ಸೌಲಭ್ಯಗಳುಸಂಪಾದಿಸಿ

ಪಂಜ ಗ್ರಾಮ ಕೇಂದ್ರವಾಗಿದ್ದು ದೂರವಾಣಿ, ವಿದ್ಯುತ್ ಸೌಕರ್ಯ ಗ್ರಾಮದೊಳಗೆ ಹರಡಿವೆ. ಗುತ್ತಿಗಾರು, ಸುಬ್ರಹ್ಮಣ್ಯ, ಕಡಬ, ಬೆಳ್ಳಾರೆಗಳಿಗೆ ಸಂಪರ್ಕ ಒದಗಿಸುವ ಮುಖ್ಯ ಕೇಂದ್ರ ಪಂಜ. ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಚಿಕಿತ್ಸಾಲಯ, ವಲಯ ಅರಣ್ಯ ಕಛೇರಿ, ಗ್ರಾಮ ಕರಣಿಕರ ಕಛೇರಿ, ಉಪ ತಹಶೀಲ್ದಾರ್ ಕಛೇರಿಗಳು ಗ್ರಾಮದೊಳಗಿವೆ. ವ್ಯವಸಾಯ ಸೇವಾ ಸಹಕಾರಿ ಬ್ಯಾಂಕು, ವಾಣಿಜ್ಯ ಬ್ಯಾಂಕು, ಹಲವಾರು ಅಂಗಡಿ ಮುಂಗಟ್ಟುಗಳಿದ್ದು ಮುಖ್ಯ ವ್ಯಾಪಾರ ಕೇಂದ್ರವಾಗಿದೆ.[೩]

ದೈವರಾಧನೆಸಂಪಾದಿಸಿ

ಪೈಂದೋಡಿ ಸುಬ್ರಾಯ ದೇವಸ್ಥಾನ, ಕರಿಕ್ಕಳ ನಿಡ್ವಾಳ ಮಹಾವಿಷ್ಣು ದೇವಸ್ಥಾನ, ಚಿಂಗಾಣಿಗುಡ್ಡೆ, ಅಳ್ಪೆ ಉಳ್ಳಾಕುಳು ದೈವಸ್ಥಾನ, ನೆಕ್ಕಿಲ ಜುಮ್ಮಾ ಮಸೀದಿ ಗ್ರಾಮದೊಳಗಿನ ಪ್ರಮುಖ ಆರಾಧನಾ ಕೇಂದ್ರಗಳು.

ಉಲ್ಲೇಖಗಳುಸಂಪಾದಿಸಿ

  1. https://m.dailyhunt.in/news/india/kannada/
  2. http://www.onefivenine.com/india/villages/Dakshin-Kannad/Sulya/Panja
  3. ಸುದ್ದಿ ಮಾಹಿತಿ ಡಾ| ಯು.ಪಿ ಶಿವಾನಂದ,ಸಂಪದಕರು ವಷ೯-2003 ಪ್ರಕಾಶಕರು ಸುದ್ದಿ ಬಿಡುಗಡೆ ಸುಳ್ಯ. ಪುಟ ಸಂಖ್ಯೆ 666