ಕಿಂಗ್ ಫಿಶರ್ ರೆಡ್-ಇದನ್ನು ಈ ಮುಂಚೆ ಸಿಂಪ್ಲಿಫೈ ಡೆಕ್ಕನ್ ಅದಲ್ಲದೇ ಅದಕ್ಕೂ ಮೊದಲು ಏರ್ ಡೆಕ್ಕನ್ ಎಂಬ ಹೆಸರಿತ್ತು - ಇದೊಂದು ಕಡಿಮೆ ವೆಚ್ಚದ ವಿಮಾನಯಾನ ಸೌಕರ್ಯ ನೀಡುವ ಸಂಸ್ಥೆ. ಪ್ರಸ್ತುತ ಇದನ್ನು ಕಿಂಗ್ ಫಿಶರ್ ಏರ್ ಲೈನ್ಸ್ ನಿರ್ವಹಿಸುತ್ತದೆ. ಇದರ ಕೇಂದ್ರ ಕಚೇರಿಯು [] ಭಾರತದಮುಂಬಯಿನಲ್ಲಿದೆ.

Kingfisher Red
ಚಿತ್ರ:Kingfisher Red Logo.png
IATA
IT
ICAO
KFR
Callsign
KINGFISHER
ಸ್ಥಾಪನೆ 25 August 2003
(as Air Deccan)
Hubs Ahmedabad
Fleet size 21
Destinations
Company slogan The Choice is Simple
Parent company United Breweries Group
Headquarters ಮುಂಬೈ, India[]
Key people G. R. Gopinath, Founder
Vijay Mallya, Chairman
Website www.flykingfisher.com
ಕಿಂಗ್ ಫಿಶರ್ ವಿಮಾನದಲ್ಲಿ ತಿನಿಸುಗಳ ಪೂರೈಕೆಯ ಸೇವೆ

ಈ ವಿಮಾನ ಸಂಸ್ಥೆಯು ಪ್ರಯಾಣಿಕರಿಗೆ ಆಗಾಗ ಕಡಿಮೆ ವೆಚ್ಚದ ಉತ್ತಮ ಸೇವೆ ಫ್ರಿಕ್ವೆಂಟ್ ಫ್ಳೈಯರ್ ಮೈಲ್ಸ್ ನ್ನು ನೀಡುತ್ತದೆ.(ಇದನ್ನು ಕಿಂಗ್ ಮೈಲ್ಸ್ ಎನ್ನುತ್ತಾರೆ.)ಕಿಂಗ್ ಫಿಶರ್ ರೆಡ್ ಗಾಗಿ ಕಿಂಗ್ ಕ್ಲಬ್ ಲಾಯಲ್ಟಿ ಮೂಲಕ ಅದರ ಪ್ರಧಾನ ಸಂಸ್ಥೆ ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಟಿಕೆಟ್ ಗಳ ಮುಂಗಡ ಮಾಡಿಸುವ ವ್ಯವಸ್ಥೆ ಇದೆ. ವಿಮಾನಯಾನದಲ್ಲಿ ಬಹುತೇಕ ಓದುವ ಸಾಹಿತ್ಯ ಅತ್ಯಂತ ವಿರಳವಾಗಿರುತ್ತದೆ.ಮುಖ್ಯವಾಗಿ ಎಂದರೆ ಸಿನೆ ಬ್ಲಿಟ್ಜ್ ನ ವಿಶೇಷ ಸಂಚಿಕೆ, ಅದೂ ಕಿಂಗ್ ಫಿಶರ್ ರೆಡ್ ಗಾಗಿ ಪ್ರಕಟಿಸಲ್ಪಡುತ್ತದೆ.

ಇತಿಹಾಸ

ಬದಲಾಯಿಸಿ

ಈ ಮೊದಲು ಇದನ್ನು ಏರ್ ಡೆಕ್ಕನ್ ಎಂದು ಕರೆಯಲಾಗುತ್ತಿತ್ತು.ಇದನ್ನು ಡೆಕ್ಕನ್ ಏವಿಯೇಶನ್ ಕಂಪನಿ ನಡೆಸುತಿತ್ತು. ಈ ಸಂಸ್ಥೆಯನ್ನು ಕ್ಯಾಪ್ಟನ್ ಜಿ.ಆರ್ .ಗೋಪಿನಾಥ್ ಅವರು ಪ್ರಾರಂಭಿಸಿದರು.ಇದರ ಮೊದಲ ವಿಮಾನ ಪ್ರಯಾಣವು 2003,ಆಗಸ್ಟ್ 23 ರಂದು ಹೈದ್ರಾಬಾದ್ ನಿಂದ ವಿಜಯವಾಡಾದ ವರೆಗೆ [] ನಿಗದಿಯಾಗಿತ್ತು. ಇದು ಜನಸಾಮಾನ್ಯನ ವಿಮಾನಯಾನ ಸೌಲಭ್ಯ ಎಂದು ಜನಪ್ರಿಯವಾಗಿತ್ತು.ಅದರ ಸಂಸ್ಥೆಯ ಚಿನ್ಹೆಯಲ್ಲಿ ಎರಡು ಹಸ್ತಗಳು ಸೇರಿಸಿ ಪಕ್ಷಿಯೊಂದು ಹಾರುತ್ತಿರುವುದನ್ನು ಸಂಕೇತಿಸಲಾಗಿತ್ತು. ಈ ವಿಮಾನಯಾನದ ಏರ್ ಲೈನ್ ಕಂಪನಿಯ ಘೋಷಣಾ ಫಲಕವು "ಸಿಂಪ್ಲಿ-ಫ್ಲೈ" ಎಂದು ಜನಸಾಮಾನ್ಯನಿಗೂ ಈಗ ವಿಮಾನ ಪ್ರಯಾಣ ಸಾಧ್ಯವೆಂದು ಸಾರುತ್ತಿತ್ತು. "ಪ್ರತಿಯೊಬ್ಬ ಭಾರತೀಯನೂ ಜೀವನದಲ್ಲಿ ಒಂದು ಬಾರಿಯಾದರೂ ವಿಮಾನ ಪ್ರಯಾಣ ಮಾಡಲಿ"ಎಂಬ ಕ್ಯಾಪ್ಟನ್ ಗೋಪಿನಾಥ್ ಅವರ ಕನಸು ಸಾಕಾರಗೊಂಡಿತ್ತು. ಭಾರತದ ಎರಡನೆಯ ದರ್ಜೆಯ ನಗರಗಳಾದ ಹುಬ್ಬಳ್ಳಿ,ಮಂಗಳೂರ್,ಮಧುರೈ ಮತ್ತು ವಿಶಾಖಪಟ್ಟನಮ್ ಮತ್ತು ಬೆಂಗಳೂರು ಮತ್ತು ಚೆನ್ನೈ ನ ಮೆಟ್ರೊಪಾಲಿಟಿನ್ ಪ್ರದೇಶಗಳಲ್ಲಿ ಈ ಏರ್ ಡೆಕ್ಕನ್ ತನ್ನ ಮೊಅಲ ವಿಮಾನಯಾನವನ್ನು ಆರಂಭಿಸಿದೆ.


hi

ಡೆಕ್ಕನ್ 2006 ರ ಜನವರಿಯಲ್ಲಿ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ ನ್ನು ಸೆಕ್ಯುರಿಟೀಸ್ ಅಂಡ್ ಎಕ್ಸೇಂಜ್ ಬೋರ್ಡ್ ಆಫ್ ಇಂಡಿಯಾದೊಂದಿಗೆ ಶೇರು ಬಿಡುಗಡೆಗೆ ಸಾರ್ವಜನಿಕ ಅಹವಾಲು ಸಲ್ಲಿಸಿತು. ಡೆಕ್ಕನ್ ತನ್ನ ಪ್ರಾರಂಭಿಕ ಬಂಡವಾಳ ಹೂಡಿಕೆಗೆ ಶೇಕಡಾ 25 ರಷ್ಟನ್ನು ಆರಂಭಿಕ ಸಾರ್ವಜನಿಕ ಆವ್ಹಾನ(IPO) ದೊಂದಿಗೆ ಆ ವಲಯದ ಶೇರುಪೇಟೆಯಿಂದ ಸಂಗ್ರಹಿಸಲು ಯೋಜನೆ ರೂಪಿಸಿತು.ಇದಕ್ಕಾಗಿ ಮೇ 18 ರಂದು ಸಾರ್ವಜನಿಕವಾಗಿ ಆವ್ಹಾನ ನೀಡಲಾಯಿತು.ಆದರೂ ಅದು ತನ್ನ ಬಂಡವಾಳ ಪೂರೈಕೆಯನ್ನು ಪಾರುಗಾಣದೇ ಅವಧಿ ಮುಗಿಯುವ ಹಂತದಲ್ಲಿ ಶೇರು ಬೆಲೆಗಳ ಇಳಿಕೆಗೆ [] ಮುಂದಾಯಿತು.

ಚಿತ್ರ:Air deccan.png
ಏರ್ ಡೆಕ್ಕನ್ ಲೊಗೊ
ಚಿತ್ರ:Sim Deccan logo.jpg
ಸಿಂಪ್ಲಿ ಫ್ಲೈ ಡೆಕ್ಕನ್ ಲೊಗೊ (ಚಿನ್ಹೆ)

ಏರ್ ಡೆಕ್ಕನ್ 2007 ಫೆಬ್ರವರಿ 27 ರಂದು US-ಮೂಲದ ಏರ್ ಲೈನ್ಸ್ ರಿಜರ್ವೇಶನ್ಸ್ ಸೇವೆಗಳನ್ನು ರಾಡಿಕ್ಸ್ ಏರ್ ಎಂಟರ್ ಪ್ರೈಜಿಸ್ ರಿಜರ್ವೇಶನ್ ಸಿಸ್ಟ್ಯೆಮ್ ನಿಂದ ಪಡೆಯಲು ಆರಂಭಿಸಿತು.ಆಗ ಇದು ಗೋಏರ್ ನಂತರದ ದೇಶದಲ್ಲಿಯೇ ಎರಡನೆಯ ಆಂತರಿಕ ವಿಮಾನ ಸೇವೆಗೆ ಹೆಸರು [] ಮಾಡಿತು. ರಾಡಿಕ್ಸ್ ರಿಜರ್ವೇಶನ್ ಪದ್ದತಿಗೆ ವಾಲುವ ಮುಂಚೆ ಏ ರ್ ಡೆಕ್ಕನ್ ದೆಹಲಿ-ಮೂಲದ ಇಂಟರ್ ಗ್ಲೊಬ್ ಟೆಕ್ನಾಲಜೊಯೊಂದಿಗೆ ಈ ಸೌಕರ್ಯಕ್ಕಾಗಿ ಸಂಬಂಧ ಹೊಂದಿತ್ತು.

ಭಾರತೀಯ ವಿಮಾನಯಾನ ವಲಯದಲ್ಲಿ ನಿರೀಕ್ಷಿಸಿದಷ್ಟು ಪ್ರಗತಿ ಕಾಣಲಿಲ್ಲವೆಂಬ ಕೊರತೆಯೊಂದೇ ಅಲ್ಲದೇ ಇನ್ನಿತರ ಏರ್ ಲೈನ್ಸ್ ಗಳ ತೀವ್ರತರ ಪೈಪೋಟಿ ಏರ್ ಡೆಕ್ಕನ್ ಗೆ ಬಿಸಿ ತಾಕಿತು,ಇದು ಭಾರಿ ನಷ್ಟಕ್ಕೂ ಗುರಿ ಮಾಡಿತು. ನಂತರ ಆರಂಭದಲ್ಲಿ ಏರ್ ಲೈನ್ ನನ್ನು ನಿಭಾಯಿಸಲು ಕ್ಯಾಪ್ಟನ್ ಗೋಪಿನಾಥ ಹೊಸ ಬಂಡವಾಳಕ್ಕೆ ಪ್ರಯತ್ನಿಸುತ್ತಿದ್ದರು,ಆದರೆ ಕೊನೆಯಲ್ಲಿ ಅವರು ವಿಲೀನದ ಒತ್ತಡಕ್ಕೆ ಮಣಿಯಬೇಕಾಯಿತು. ಆಗ 2007 ರ ಡಿಸೆಂಬರ್ 19 ರಂದು ಏರ್ ಡೆಕ್ಕನ್ ಸಂಸ್ಥೆಯು ಕಿಂಗ್ ಫಿಶರ್ ಏರ್ ಲೈನ್ಸ್ ನೊಂದಿಗೆ ವಿಲೀನವಾಗುತ್ತದೆ ಎಂದು ಪ್ರಕಟಿಸಲಾಯಿತು. ಆದರೆ ಭಾರತೀಯ ನಾಗರಿಕ ವಿಮಾನಯಾನದ ನಿಯಂತ್ರಣಾ ನಿಯಮಗಳ ಪ್ರಕಾರ ಒಂದು ಸ್ಥಳೀಯ ವಿಮಾನ ಕಂಪನಿಯು ಕನಿಷ್ಟ ಐದು ವರ್ಷಗಳಾದರೂ ದೇಶದ ಆಂತರಿಕ ವಿಮಾನ ಸಾರಿಗೆಯಲ್ಲಿ ಅನುಭವ ಪಡೆದಿರಬೇಕೆಂಬ ನಿಯಮ ಜಾರಿಗೆ ತಂದಿತು.ಆದ್ದರಿಂದ ಕಿಂಗ್ ಫಿಶರ್ ಏರ್ ಲೈನ್ಸ್ ನೊಂದಿಗಿನ ವಿಲೀನಕ್ಕಿಂತ ಇದನ್ನು ಕಿಂಗ್ ಫಿಶರ್ ಏರ್ ಲೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಯಾಕೆಂದರೆ ಏರ್ ಡೆಕ್ಕನ್ ಇನ್ನುಳಿದ ಎರಡು ಕಂಪನಿಗಳಿಗಿಂತ ಹಳೆಯದಾಗಿದ್ದರಿಂದ,ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನಯಾನದ ಅವಕಾಶಕ್ಕೆ ಸಿಂಧುತ್ವ [][] ಪಡೆಯಿತು. ಈ ವಿಲೀನವು 2008 ರ ಏಪ್ರಿಲ್ ನಲ್ಲಿ ಅನುಷ್ಠಾನಕ್ಕೆ ಬಂತು.ಹೊಸ ಕಂಪನಿಗೆ ವಿಜಯ್ ಮಲ್ಯ ಚೇರ್ಮನ್ (ಮುಖ್ಯಸ್ಥ) ಮತ್ತು ಸಿಇಒ ಆದರೆ ಜಿ.ಅರ್ ಗೋಪಿನಾಥ್ ಇದರ ವೈಸ್ ಚೇರ್ಮನ್ ಆಗಿ ಕಾರ್ಯನಿರ್ವಹಣಾ ಜವಾಬ್ದಾರಿ ವಹಿಸಿದರು.

ವಿಲೀನದ ನಂತರ ಏರ್ ಡೆಕ್ಕನ್ ಸಾಬ್ರೆ ರಿಜರ್ವೇಶನ್ ವಿಧಾನಕ್ಕೆ ವರ್ಗಾಯಿಸಿಕೊಂಡಿತು.ಇದನ್ನು ಈಗಾಗಲೇ ಕಿಂಗ್ ಫಿಶರ್ ಏರ್ ಲೈನ್ಸ್ ಈ ಸೌಕರ್ಯ ಪಡಿಯುತ್ತಿತ್ತು.ಈ ಹಿಂದೆ ಅದು ರಾಡಿಕ್ಸ್ ನೊಂದಿಗೆ ಈ ಸಂಬಂಧ ವ್ಯವರಿಸುತ್ತಿತ್ತು.

ಗಮ್ಯಸ್ಥಾನಗಳು

ಬದಲಾಯಿಸಿ

ವಿಮಾನಶ್ರೇಣಿ

ಬದಲಾಯಿಸಿ

ಅಫಘಾತಗಳು ಮತ್ತು ಘಟನೆಗಳು

ಬದಲಾಯಿಸಿ
 
ಏರ್ ಡೆಕ್ಕನ್ ವಿಮಾನದಲ್ಲಿನ ಒಂದು ಸೂಚನಾ ಫಲಕ ಪ್ರಯಾಣಿಕರು ಮಕ್ಕಳ ಹಾಸಿಗೆಯನ್ನು ಹವಾಮಾನದ ವೈಪರಿತ್ಯ ಪರಿಗಣಿಸಿ ಅವುಗಳನ್ನು ಮಡಿಸಿಡಬೇಕು.(ಹಿಂದಿಯಲ್ಲಿ)

ಆದರೆ ಏರ್ ಡೆಕ್ಕನ್ ಪ್ರಾರಂಭದ ದಿನವೇ ಅಶುಭವನ್ನು ಕಾಣುವ ಪ್ರಸಂಗ ಒದಗಿತು,ಅದರ ಮೊದಲ ಪ್ರಯೋಗ 2003 ರ ಸೆಪ್ಟೈಂಬರ್ 24 ರಂದೇ ಹೈದ್ರಾಬಾದ್ ನಿಂದ ವಿಜಯವಾಡಾದವರೆಗೆ ಪಯಣಿಸುತ್ತಿದ್ದಾಗ ಅದು ರನ್ ವೇದಲ್ಲಿ ಬೆಂಕಿ ಹತ್ತಿಕೊಂಡು ಅಪಾಯದ ಸೂಚನೆ [][] ನೀಡಿತು. ಈ ವಿಮಾನದಲ್ಲಿ ಅತ್ಯಂತ ಗಣ್ಯರ ಗುಂಪೇ ಇತ್ತು,ಭಾರತೀಯ ಜನತಾ ಪಕ್ಷದ (ಬಿಜೆಪಿ) ಆಗಿನ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು,ಆಗಿನ ನಾಗರಿಕ ವಿಮಾನಯಾನದ ರಾಜ್ಯ ಸಚಿವ ರಾಜೀವ ಪ್ರತಾಪ್ ರೂಡಿ ಮತ್ತು ತೆಲಗು ದೇಶಂಪಕ್ಷದ ನಾಯಕ ಕೆ.ಯರ್ರಂ ನಾಯ್ಡು ಮೊದಲಾದವರಿದ್ದರು. ಇದು ಎಟಿಆರ್ 42 ವಿಮಾನವಾಗಿತ್ತು.

ಮತ್ತೆ 2004 ರ ಮಾರ್ಚ್ 29 ರಲ್ಲಿ ಇನ್ನೊಂದು ಏರ್ ಡೆಕ್ಕನ್ ವಿಮಾನವು ಗೋವಾದಿಂದ ಬೆಂಗಳೂರಿಗೆ ಬರುವಾಗ ಹಾರುವ ಸಮಯದಲ್ಲಿ ಕ್ಯಾಬಿನ್ ನಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಅದನ್ನು ಅರ್ಧಕ್ಕೆ ವಾಪಸು ಕಳಿಸಲಾಯಿತು.ಈ ವಿಮಾನ ಕೂಡಾ ATR 42 [] ಆಗಿತ್ತು.

ಆಗ 2006 ರ ಮಾರ್ಚ್ 11 ರಂದು ಕೋಯಿಮತ್ತೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಡೆಕ್ಕನ್ ವಿಮಾನವು ಎಚ್ ಎ ಎಲ್ ವಿಮಾನನಿಲ್ದಾಣದಲ್ಲಿ ರನ್ ವೇ ಮೇಲೆ ಅತ್ಯಂತ ಬಿರುಸಿನಿಂದ ಇಳಿದಾಗ ಅದು ತನ್ನ ನಿಯಂತ್ರಣ ಕಳೆದುಕೊಂಡು ಪಕ್ಕಕ್ಕೆ [೧೦] ವಾಲಿತು. ವಿಮಾನವು 44 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.(ಅದರಲ್ಲಿ 40 ಜನ ಪ್ರಯಾಣಿಕರು ಮತ್ತು 4 ಚಾಲಕ ಸಿಬ್ಬಂದಿ ಇತ್ತು) ಆದರೂ ಅಂತಹ ಪ್ರಾಣಹಾನಿಯ ಘಟನೆಗಳಾಗಲಿಲ್ಲ.ಆದರೆ ATR 72 ವಿಮಾನವು ದೊಡ್ಡ ಪ್ರಮಾಣದ ಹಾನಿಗೊಳಗಾಯಿತು.

ಪ್ರತಿಸ್ಪರ್ಧಿಗಳು

ಬದಲಾಯಿಸಿ

ಏರ್ ಡೆಕ್ಕನ್ ಈ ಬೆಳವಣಿಗೆಯ ವಿದ್ಯಮಾನವು ಸುಮಾರು ಅರ್ಧ ಡಜನ್ನಿಗಿಂತಲೂ ಅಧಿಕ ವಿಮಾನ ಕಂಪನಿಗಳು ಭಾರತದಲ್ಲಿ ಅಗ್ಗದರದ ವಿಮಾನಸಾರಿಗೆ ವಲಯಕ್ಕೆ ತಮ್ಮ ಪ್ರವೇಶ ಮಾಡಿದವು. ಸದ್ಯದ ಕಿಂಗ್ ಫಿಶರ್ ರೆಡ್ ಅವತಾರವು ತೀವ್ರ ಪೈಪೋಟಿ ನೀಡುತ್ತಿವೆ,ಉದಾಹರಣೆಗೆ ಸ್ಪೈಸ್ ಜೆಟ್ ,ಇಂಡಿಗೊ ಏರ್ ಲೈನ್ಸ್ ,ಜೆಟ್ ಲೈಟ್ ಅಂಡ್ ಗೋಏರ್ ಗಳು ಆಂತರಿಕ ಸಾರಿಗೆಯಲ್ಲಿ ಹೆಚ್ಚು ಸ್ಪರ್ಧೆ ನೀಡಿದವು. ಈ ಕಡಿಮೆ-ವೆಚ್ಚದ ವಿಮಾನ ಸಾರಿಗೆಯ ಬೆಳವಣಿಗೆಯಿಂದಾಗಿ ಇನ್ನುಳಿದವರು ಮುಖ್ಯವಾಹಿನಿಯಲ್ಲಿರುವ ವಿಮಾನಯಾನ ಕಂಪನಿಗಳು ಅನಿವಾರ್ಯವಾಗಿ ತಮ್ಮ ಪ್ರಯಾಣ ದರವನ್ನು ಕಡಿಮೆಗೊಳಿಸಿದವು.

 
ಏರ್ ಡೆಕ್ಕನ್ A320-200 ಕ್ಯಾಬಿನ್. ಎಲ್ಲಾ ಏರ್ ಡೆಕ್ಕನ್ ವಿಮಾನದಲ್ಲಿನ ಎಲ್ಲಾ ನೇರಳೆ ಬಣ್ಣದ ಆಸನಗಳನ್ನು ಕಿಂಗ್ ಫಿಶರ್ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದರ ಸಂಕೇತವಾಗಿ ಅವುಗಳನ್ನು ಕೆಂಪು ಬಣ್ಣಕ್ಕೆ ಬದಲಾಯಿಸಲಾಯಿತು.

ನ್ಯಾಶನಲ್ ಸ್ಟಾಕ್ ಎಕ್ಸೇಂಜ್ ಆಫ್ ಇಂಡಿಯಾಕ್ಕೆ ಏರ್ ಡೆಕ್ಕನ್ ನೀಡಿದ ವರದಿಯಲ್ಲಿ ಸುಮಾರು 15-ತಿಂಗಳ ಅವಧಿಯ 2005 ರ ಏಪ್ರಿಲ್ 1 ರಿಂದ 2006 ಜೂನ್ 30 ರ ಅವಧಿಯಲ್ಲಿ ಕಂಪನಿ ಸುಮಾರು 3.4 ಬಿಲಿಯನ್ ($74 ದಶಲಕ್ಷ) ನಷ್ಟವಾಗಿದೆ ಎಂದು ಟಿಪ್ಪಣಿ ಸಲ್ಲಿಸಿತ್ತು. ಮೂಲದಲ್ಲಿ ಈ ವಿಲೀನವು ಕೇವಲ ಸಮತೋಲನ ತರಬಹುದೇ ವಿನಹ ಅದರಿಂದ ಲಾಭವೇನೂ ಆಗಲಾರದೆಂದು ಎಲ್ಲಾ ವಲಯಗಳಲ್ಲಿ ವದಂತಿ ಇತ್ತು.ಸುಮಾರು 2008 ರ ವರೆಗೆ ಲಾಭ ಸಾಧ್ಯವಾಗದು ಏಕೆಂದರೆ ಇನ್ನಿತರ ವಿಮಾನ ಸೇವಾ ಕಂಪನಿಗಳ ತೀವ್ರ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಏರ್ ಡೆಕ್ಕನ್ ಈಗ ಉತ್ತಮ ಲಾಭದ ಪಥದಲ್ಲಿ ಸಾಗಿತು.ಅಕ್ಟೋಬರ್ -ಡಿಸೆಂಬರ್ 2006 ರ ಮೊದಲ ಕಾಲರ್ಧದ ಸಮಯದಲ್ಲಿ ಒಟ್ಟು ಲಾಭ 9.64 ಕೋಟಿಗಳು (US$ 2 ದಶಲಕ್ಷಕ್ಕಿಂತ ಕೊಂಚ ಹೆಚ್ಚು).[೧೧]

ಕಿಂಗ್ ಫಿಶರ್ ಏರ್ ಲೈನ್ಸ್ ನಿಂದ ಸ್ವಾಧೀನ

ಬದಲಾಯಿಸಿ

.ಯುನೈಟೆಡ್ ಬ್ರಿವರೀಸ್ ,ಸಮೂಹದ ಅಂಗ ಸಂಸ್ಥೆಯಾಗಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಏರ್ ಡೆಕ್ಕನ್ ನ ಮೂಲ ಸಂಸ್ಥೆ ಡೆಕ್ಕನ್ ಏವಿಯೇಶನ್ ನಲ್ಲಿನ ಶೇಕಡಾ 26 ರ ಪಾಲನ್ನು ಪಡೆದುಕೊಂಡಿತು. ಎರಡೂ ವಿಮಾನ ಪಡೆಯ ಒಟ್ಟು 71 ಏರ್ ಬಸ್ A320 ಮತ್ತು ATR ವಿಮಾನಗಳು 537 ಸಾರಿಗೆಯ ಜೊತೆಗೆ ಭಾರತದ 69 ನಗರಗಳಿಗೆ ಈ ಸೌಕರ್ಯ ಒದಗಿಸಲಿವೆ."ಕಿಂಗ್ ಫಿಶರ್ ಮೂಲಕ ಎರಡರಲ್ಲಿಯೂ ಪ್ರಯಾಣಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ." "ಮುಂಬರುವ ದಿನಗಳಲ್ಲಿ ಕಿಂಗ್ ಫಿಶರ್ ಕಾರ್ಪೊರೇಟ್ ಮತ್ತು ವಹಿವಾಟು ಸಂಚಾರಿ ವಾಯುಯಾನದ ಸೇವೆಯನ್ನು ಮುಂದುವರಿಸಲಿದೆ.ಆದರೆ ಏರ್ ಡೆಕ್ಕನ್ ತನ್ನ ಅಗ್ಗದರದ ಪ್ರಯಾಣ ಸೇವೆಯನ್ನು ಮುಂದುವರಿಸಲಿದ್ದು ಎರಡೂ ಅಂದರೆ ಕಿಂಗ್ ಫಿಶರ್ ಸೇರಿದಂತೆ ಸುಧಾರಿತ ವಿಮಾನಯಾನ ಸೇವೆ ಒದಗಿಸಲು ಮುಂದಾಗಲಿದೆ ಎಂದು ಅವರು ಹೇಳಿದರು. ನಿನ್ನೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ್ ಹೇಳುವಂತೆ "ಈ ಹಂತದಲ್ಲಿ" ಐಪಿವೊ ಪರಿಚಯಿಸುವ ಯಾವುದೇ ಆಲೋಚನೆಗಳಿಲ್ಲ.ಈ ಸ್ವಾಧೀನತೆಗೆ ಹಣ ನೀಡಿಕೆಯಲ್ಲಿ ಅಥವಾ ಬಂಡವಾಳ ತೊಡಗಿಸುವಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮರುನಾಮಕರಣ (ಪುನರುತ್ಥಾನ)

ಬದಲಾಯಿಸಿ

ನಂತರ 2007 ರ ಅಕ್ಟೋಬರ್ ನಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ನಿಂದ ಸ್ವಾಧೀನಪಡಿಸಿಕೊಂಡ ಏರ್ ಡೆಕ್ಕನ್ "ಸಿಂಪ್ಲಿ ಫ್ಲೈ ಡೆಕ್ಕನ್ "ಎಂಬ ಘೋಷಣೆಯಿಂದ "ದಿ ಚಾಯಿಸ್ ಈಸ್ ಸಿಂಪಲ್ "ಎಂದು ಬದಲಿಸಲಾಯಿತು. ಹಳೆಯ ಚಿನ್ಹೆಯನ್ನು ಕಿಂಗ್ ಫಿಶರ್ ಚಿನ್ಹೆ ಆಕ್ರಮಿಸಿ ಅದರ ಮೊದಲಿನ ಅಕ್ಷರ ಮಾಲಿಕೆಯನ್ನೇ ಸಿಂಪ್ಲಿ ಫ್ಲೈ ಮೇಲೆಯೂ ಉಳಿಸಲಾಯಿತು. ಏರ್ ಡೆಕ್ಕನ್ ನ ಹಳೆಯ ಹಳದಿ ಮತ್ತು ನೀಲಿ ಬಣ್ಣದ ಸಮವಸ್ತ್ರಗಳ ಬದಲಾಗಿ ಕಿಂಗ್ ಫಿಶರ್ ನ ಕೆಂಪು ಮತ್ತು ಬಿಳಿ ಸಮವಸ್ತ್ರಗಳು ನೌಕರರಿಗೆ ಎರಡೂ ಕಡೆಯ ನೌಕರರಂತೆ ಕಾಣುವ ವಾತಾವರಣ [೧೨] ಮೂಡಿಸಿತು. ವಿಮಾನ ನಿಲ್ದಾಣದಗಳಲ್ಲಿರುವ ಸಂಚಾರ ಸಾರಿಗೆ ತಪಾಸಣಾ-ವಿಕ್ಷಣಾ ಕೌಂಟರ್ ಗಳಲ್ಲಿ ಮತ್ತು ಚಾಲನಾ ಸಿಬ್ಬಂದಿಗೆ ಅದೇ ಕಿಂಗ್ ಫಿಶರ್ ನ ಕೆಂಪು ಮತ್ತು ಬಿಳಿ ಸಮವಸ್ತ್ರಗಳ ನೀತಿ ಸಂಹಿತೆಯನ್ನು ಅಳವಡಿಸಲಾಯಿತು. ಈ ಹೊಸರೂಪದ ಏರ್ ಲೈನ್ ಸಮಯ-ಸಮಯಕ್ಕೆ ಅಗತ್ಯಗಳನ್ನು ಪೂರೈಸುವುದಾಗಿ ಭರವಸೆ ನೀಡಿತು.ಒಂದು ವಿಶಾಲ ಕಾರ್ಯ ಜಾಲ ಮತ್ತು "ಸಂಚಾರದುದ್ದಕ್ಕೂ ಸಣ್ಣ ಮನರಂಜನೆ ನೀಡುವ ಭರವಸೆ ನೀಡಿತು." ಪ್ರಯಾಣಿಕರ ಹತ್ತಿಳಿಯುವ ತಪಾಸಣಾ ಕಾರ್ಯವನ್ನು ಹೊರ ಗುತ್ತಿಗೆ ಕೊಡದೇ ತಮ್ಮದೇ ಆದ ನೌಕರರಿಂದ ಅದನ್ನು ನಿಭಾಯಿಸಲು ನಿರ್ಧರಿಸಲಾಯಿತು."ಇದರಿಂದ ಕರ್ತವ್ಯ ಬದ್ದತೆ ಮತ್ತು ವಿತರಣಾ ಸೇವೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ" ಎಂದು ಮಲ್ಯ ಹೇಳಿದರು. ಈ ಹೊಸ ವಿಮಾನಯಾನವು ದಕ್ಷತೆ ಮೀರುತ್ತಿರುವ ಹಳೆಯದಾಗಿರುವ ATR 42 ಮತ್ತು A320 ವಿಮಾನಗಳನ್ನು ಹಂತಹಂತವಾಗಿ ಬದಲಾಯಿಸುವ ಬಗ್ಗೆಯೂ ಆತ ಪ್ರಕಟಿಸಿದ.ಇವುಗಳನ್ನು ಸಂಪೂರ್ಣವಾಗಿ ಹೊಸದವುಗಳ ಮೂಲಕ ಬದಲಾವಣೆಗೆ [೧೩] ಒಳಪಡಿಸಲಾಯಿತು. ಸಿಂಪ್ಲಿ ಫ್ಲೈ ವಿಮಾನದ ಸಂಚಾರದ ವೇಳಾಪಟ್ಟಿಯಲ್ಲಿ ಕೆಲಮಟ್ಟಿಗಿನ ಬದಲಾವಣೆ ತಂದು ಡೆಕ್ಕನ್ ಏರ್ ಲೈನ್ಸ್ ನ್ನು ಕಿಂಗ್ ಫಿಶರ್ ಏರ್ ಲೈನ್ಸ್ ಜೊತೆಗೆ ಸರಿಹೊಂದಿಸುವ ಪ್ರಯತ್ನ ನಡೆಯಿತು. ಏಜೆನ್ಸೀಗಳ ಪ್ರಕಾರ ಈ ಮರುನಾಮಕರಣದ ಪ್ರಕ್ರಿಯೆಯು ಸುಮಾರು 15 ಕೋಟಿ ರೂಪಾಯಿ ವೆಚ್ಚದ ಅಂದಾಜು ಪಡೆಯಿತು.(ಸುಮಾರು $3.8m)

ನಂತರ 2008 ರ ಆಗಷ್ಟ್ ನಲ್ಲಿ ಈ ಏರ್ ಲೈನ್ಸ್ ಕಿಂಗ್ ಫಿಶರ್ ರೆಡ್ ಆಗಿ ಮಾರ್ಪಾಡಾಗಿ ಮತ್ತೊಂದು ಬದಲಾವಣೆಗೆ ಒಳಗಾಯಿತು.ಅದು ಕಿಂಗ್ ಫಿಶರ್ ನ್ IATA ಕೋಡ್ IT ಎಂಬ ಹೆಸರಿನಲ್ಲಿ ತನ್ನ ಸಂಚಾರ [೧೪][೧೫] ಆರಂಭಿಸಿತು.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "ಆರ್ಕೈವ್ ನಕಲು". Archived from the original on 2014-06-24. Retrieved 2010-08-30. ಉಲ್ಲೇಖ ದೋಷ: Invalid <ref> tag; name "flykingfisher.com" defined multiple times with different content
  2. "Air Deccan plane catches fire after flag-off". The Hindu Business Line. 2003-09-25. Retrieved 2007-03-28.
  3. ಡೆಕ್ಕನ್ IPO ಮೂಲಕ ವಿಮಾನಯಾನ
  4. "ರಾಡಿಕ್ಸ್ ರಿಸ್ರ್ವೇಶನ್ ಪದ್ದತಿಗೆ ಏರ್ ಡೆಕ್ಕನ್ ವಲಸೆ". Archived from the original on 2009-01-08. Retrieved 2010-08-30.
  5. ಏರ್ ಡೆಕ್ಕನ್ ನಲ್ಲಿ ಕಿಂಗ್ ಫಿಶರ್ ವಿಲೀನ
  6. ಆಗಷ್ಟ 2008 ರಿಂದ ಡೆಕ್ಕನ್ ಅಂತಾರಾಷ್ಟ್ರೀಯ ವಿಮಾನಯಾನ
  7. ಫೈಯರ್ ಗ್ರೌಂಡ್ಸ್ ಏರ್ ಡೆಕ್ಕನ್
  8. "ದೊಡ್ಡ ಅಪಘಾತವೊಂದರಿಂದ ವಿಮಾನ ಪಾರು". Archived from the original on 2005-01-30. Retrieved 2010-08-30.
  9. "ಕಡಿಮೆ-ವೆಚ್ಚದ ವಿಮಾನಗಳು ಕಾರ್ಮೋಡದ ಸುಳಿಯಲ್ಲಿ". Archived from the original on 2014-06-21. Retrieved 2010-08-30.
  10. ಏರ್ ಡೆಕ್ಕನ್ ರನ್ ವೇದಿಂದ ಹೊರ ಜಾರಿದ್ದು
  11. "Deccan Aviation declares profit for Q2 FY07" (PDF) (Press release). Deccan Aviation. 2007-01-25. Archived from the original (PDF) on 2007-08-08. Retrieved 2007-03-16.
  12. "Air Deccan to undergo makeover" (Press release). Dance With Shadows. 2007-09-11. Archived from the original on 2008-05-12. Retrieved 2007-10-27.
  13. "Mallya touch: Deccan to fly red & white all the way". The Economic Times. 2007-09-04. Retrieved 2007-10-27.
  14. ಡೆಕ್ಕನ್ ನನ್ನು ಕಿಂಗ್ ಫಿಶರ್ ರೆಡ್ ಎಂದು ಪುನರ್ ನಾಮಕರಣ
  15. ಏರ್ ಡೆಕ್ಕನ್ ಈಗ ಕಿಂಗ್ ಫಿಶರ್ ರೆಡ್


ಬಾಹ್ಯ ಕೊಂಡಿಗಳು

ಬದಲಾಯಿಸಿ